ಪೋಸ್ಟ್ ಆಫೀಸ್ ಮತ್ತು ವಿವಿಧ ಬ್ಯಾಂಕುಗಳ ಬಡ್ಡಿದರ ಎಷ್ಟಿದೆ? ಇಲ್ಲಿದೆ ಪಟ್ಟಿ..

ನಮ್ಮಲ್ಲಿ ಕೆಲವರು ಗರಿಷ್ಠ ಮಟ್ಟದ ಬಡ್ಡಿದರ ಪಡೆಯಲು ಇಷ್ಟಪಟ್ಟರೆ, ಇನ್ನು ಕೆಲವರು ಸುರಕ್ಷಿತ, ನಿಯಮಿತ ಬಡ್ಡಿದರ ಪಡೆಯಲು ಇಷ್ಟಪಡುತ್ತಾರೆ. ಹೆಚ್ಚಿನ ಬಡ್ಡಿದರಕ್ಕಾಗಿ ಮ್ಯೂಚುವಲ್ ಫಂಡ್, ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ನಮ್ಮಲ್ಲಿ ಕೆಲವರು ಗರಿಷ್ಠ ಮಟ್ಟದ ಬಡ್ಡಿದರ ಪಡೆಯಲು ಇಷ್ಟಪಟ್ಟರೆ, ಇನ್ನು ಕೆಲವರು ಸುರಕ್ಷಿತ, ನಿಯಮಿತ ಬಡ್ಡಿದರ ಪಡೆಯಲು ಇಷ್ಟಪಡುತ್ತಾರೆ. ಹೆಚ್ಚಿನ ಬಡ್ಡಿದರಕ್ಕಾಗಿ ಮ್ಯೂಚುವಲ್ ಫಂಡ್, ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಅಲ್ಲಿ ರಿಸ್ಕ್ ಜಾಸ್ತಿ, ರಿಟರ್ನ್ ಜಾಸ್ತಿ, ಅದರಂತೆ ನಷ್ಟ ಕೂಡ ಜಾಸ್ತಿ. ರಿಸ್ಕ್ ಇಷ್ಟಪಡದ ಹೂಡಿಕೆದಾರರು ಸುರಕ್ಷಿತವಾಗಿ ಆದಾಯ ಸಿಗುವ ಸ್ಥಿರ ಠೇವಣಿಗಳಲ್ಲಿ (ಎಫ್ಡಿ) ಹೂಡಿಕೆ ಮಾಡುತ್ತಾರೆ.
ಹಾಗಿದ್ದರೆ ಎಫ್ಡಿ ಮೇಲೆ ಹೆಚ್ಚು ಬಡ್ಡಿದರ ಯಾವ ಬ್ಯಾಂಕುಗಳಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅಂಚೆ ಕಚೇರಿ ಸ್ಥಿರ ಠೇವಣಿ (ಎಫ್ಡಿ) ಮತ್ತು ವಿವಿಧ ಬ್ಯಾಂಕುಗಳ ಎಫ್ಡಿಗಳ ಮೇಲೆ ಎಷ್ಟು ಬಡ್ಡಿ ಲಭ್ಯವಿದೆ ನೋಡೋಣ ಬನ್ನಿ..

ಪೋಸ್ಟ್ ಆಫೀಸ್

ಪೋಸ್ಟ್ ಆಫೀಸ್

ಅಂಚೆ ಕಚೇರಿ ಉಳಿತಾಯ ಯೋಜನೆ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ (ಕನಿಷ್ಠ ರೂ. 200, ಗರಿಷ್ಠ ಮಿತಿ ನಿಗದಿ ಪಡಿಸಿಲ್ಲ) 1 ವರ್ಷ, 2 ವರ್ಷ, 3 ವರ್ಷ ಅವಧಿಗೆ ಶೇ. 7ರಷ್ಟು, 5 ವರ್ಷಗಳ ಅವಧಿಗೆ ಶೇ. 7.8 ರಷ್ಟು ಬಡ್ಡಿದರ ನೀಡಲಾಗುವುದು. ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲೆ ಶೇ. 4 ರಷ್ಟು ಹಾಗು ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ ಮೇಲೆ ಶೇ. 7.3 ಬಡ್ಡಿದರ ಸಿಗುತ್ತದೆ.

ಎಸ್ಬಿಐ

ಎಸ್ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಲ್ಲಿ ರೂ. 2 ಕೋಟಿಗಿಂತ ಕಡಿಮೆ ಮೊತ್ತದ ಎಫ್ಡಿ ಇಟ್ಟರೆ 1 ರಿಂದ 2 ವರ್ಷ, 2 ರಿಂದ 3 ವರ್ಷ, 3 ರಿಂದ 5 ವರ್ಷಗಳವಧಿಗೆ ಸಾಮಾನ್ಯ ವರ್ಗದವರಿಗೆ ಶೇ. 6.80 ಬಡ್ಡಿದರ ಲಭ್ಯ. ಹಿರಿಯ ನಾಗರಿಕರಿಗೆ ಶೇ. 7.30 ರಷ್ಟು ಬಡ್ಡಿದರ ಸಿಗುತ್ತದೆ.
ಜೊತೆಗೆ 5-10 ವರ್ಷಗಳ ಅವಧಿಗೆ ಸಾಮಾನ್ಯ ವರ್ಗಕ್ಕೆ ಶೇ. 6.85 ಹಾಗು ಹಿರಿಯ ನಾಗರಿಕರಿಗೆ ಶೇ. 7.35 ರಷ್ಟು ಬಡ್ಡಿ ಲಭ್ಯವಿದೆ.

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ 1 ರಿಂದ 2 ವರ್ಷದ ಅವಧಿಗೆ ಸಾಮಾನ್ಯ ವರ್ಗಕ್ಕೆ ಶೇ. 7.50 ರಷ್ಟು ಹಾಗು ಹಿರಿಯ ನಾಗರಿಕರಿಗೆ ಶೇ. 7.80 ರಷ್ಟು ಬಡ್ಡಿ ಲಭ್ಯವಿದೆ.
2 ರಿಂದ 3 ವರ್ಷಗಳವಧಿಗೆ ಸಾಮಾನ್ಯ ವರ್ಗಕ್ಕೆ ಶೇ. 7.40, ಹಾಗು ಹಿರಿಯ ನಾಗರಿಕರಿಗೆ ಶೇ. 7.90 ರಷ್ಟು ಬಡ್ಡಿ ಸಿಗುತ್ತದೆ. ಅದೇ ರೀತಿ 3 ರಿಂದ 5 ವರ್ಷಕ್ಕೆ ಶೇ. 7.25, ಶೇ. 7.75 ರಷ್ಟು ಹಾಗು 5 ರಿಂದ 8 ವರ್ಷದ ಎಫ್ಡಿ ಮೇಲೆ ಸಾಮಾನ್ಯ ವರ್ಗಕ್ಕೆ ಶೇ. 6.5ರಷ್ಟು, ಹಿರಿಯ ನಾಗರಿಕರಿಗೆ ಶೇ. 7 ರಷ್ಟು ಬಡ್ಡಿ ನೀಡಲಾಗುತ್ತದೆ.

ಐಸಿಐಸಿಐ

ಐಸಿಐಸಿಐ

ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಐಸಿಐಸಿಐ ಸಾಮಾನ್ಯ ವರ್ಗ ಮತ್ತು ಹಿರಿಯ ನಾಗರಿಕರಿಗೆ ಈ ಕೆಳಗಿನಂತೆ ಅವಧಿಯಂತೆ ಬಡ್ಡಿದರ ಒದಗಿಸುತ್ತದೆ.

61-184 ದಿನಗಳ ಅವಧಿಗೆ ಸಾಮಾನ್ಯ ವರ್ಗ ಶೇ. 6.25, ಹಿರಿಯ ನಾಗರಿಕರಿಗೆ ಶೆ. 6.75 ರಷ್ಟು ಬಡ್ಡಿದರ
185-289 ದಿನಗಳ ಅವಧಿಗೆ ಸಾಮಾನ್ಯ ವರ್ಗ ಶೇ. 6.50, ಹಿರಿಯ ನಾಗರಿಕರಿಗೆ ಶೆ. 7.00 ರಷ್ಟು ಬಡ್ಡಿದರ
290-364 ದಿನಗಳ ಅವಧಿಗೆ ಸಾಮಾನ್ಯ ವರ್ಗ ಶೇ. 6.75, ಹಿರಿಯ ನಾಗರಿಕರಿಗೆ ಶೆ. 7.25 ರಷ್ಟು ಬಡ್ಡಿದರ
390-2 ವರ್ಷಗಳ ಅವಧಿಗೆ ಸಾಮಾನ್ಯ ವರ್ಗ ಶೇ. 7.10, ಹಿರಿಯ ನಾಗರಿಕರಿಗೆ ಶೆ. 7.60 ರಷ್ಟು ಬಡ್ಡಿದರ
2-3 ವರ್ಷಗಳ ಅವಧಿಗೆ ಸಾಮಾನ್ಯ ವರ್ಗ ಶೇ. 7.50, ಹಿರಿಯ ನಾಗರಿಕರಿಗೆ ಶೆ. 8 ರಷ್ಟು ಬಡ್ಡಿದರ
3-5 ವರ್ಷಗಳ ಅವಧಿಗೆ ಸಾಮಾನ್ಯ ವರ್ಗ ಶೇ. 7.25, ಹಿರಿಯ ನಾಗರಿಕರಿಗೆ ಶೆ. 7.75 ರಷ್ಟು ಬಡ್ಡಿದರ
5-10 ವರ್ಷಗಳ ಅವಧಿಗೆ ಸಾಮಾನ್ಯ ವರ್ಗ ಶೇ. 7, ಹಿರಿಯ ನಾಗರಿಕರಿಗೆ ಶೆ. 7.50 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ನಲ್ಲಿ ಎಫ್ಡಿ ಇಡುವ ಗ್ರಾಹಕರು ರೂ. 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿ ಮೇಲೆ ಒಂದು ವರ್ಷ ಅವಧಿಗೆ ಸಾಮಾನ್ಯ ವರ್ಗದವರು ಶೇ. 6.75ರಷ್ಟು ಹಾಗು ಹಿರಿಯ ನಾಗರಿಕರು ಶೇ. 7.25 ರಷ್ಟು ಬಡ್ಡಿದರ ಪಡೆಯುತ್ತಾರೆ.
1-2 ವರ್ಷ, 2 - 3 ವರ್ಷ ಅವಧಿಗೆ ಸಾಮಾನ್ಯ ವರ್ಗಕ್ಕೆ ಶೇ. 6.60 ರಷ್ಟು, ಹಿರಿಯ ನಾಗರಿಕರಿಗೆ ಶೇ. 7.10 ರಷ್ಟು ಬಡ್ಡಿದರ ಲಭ್ಯವಿದೆ. 3-5 ವರ್ಷದ ಅವಧಿಗೆ ಸಾಮಾನ್ಯ ವರ್ಗದವರಿಗೆ ಶೇ. 6 ರಷ್ಟು ಹಾಗು ಹಿರಿಯ ನಾಗರಿಕರಿಗೆ ಶೇ. 6.60 ರಷ್ಟು ಬಡ್ಡಿ ಸಿಗಲಿದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+