ಡಿಜಿಟಲ್ ಯುಗದಲ್ಲಿ ದಿನದಿಂದ ದಿನಕ್ಕೆ ಉದ್ಯೋಗ ಭದ್ರತೆ ಕಡಿಮೆಯಾಗುತ್ತಾ ಸಾಗಿದೆ. ಇದರ ಪರಿಣಾಮಣದಿಂದ ಪ್ರತಿದಿನ ನವೋದ್ಯಮಿಗಳು ಹುಟ್ಟಿಕೊಳ್ಳುತ್ತಿದ್ದು, ಅವರು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಗಳ ಉಗಮದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಡಿಜಿಟಲ್ ಯುಗದಲ್ಲಿ ದಿನದಿಂದ ದಿನಕ್ಕೆ ಉದ್ಯೋಗ ಭದ್ರತೆ ಕಡಿಮೆಯಾಗುತ್ತಾ ಸಾಗಿದೆ. ಇದರ ಪರಿಣಾಮಣದಿಂದ ಪ್ರತಿದಿನ ನವೋದ್ಯಮಿಗಳು ಹುಟ್ಟಿಕೊಳ್ಳುತ್ತಿದ್ದು, ಅವರು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಗಳ ಉಗಮದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಹೀಗಾಗಿ ಜಗತ್ತಿನಲ್ಲಿ ಸ್ಟಾರ್ಟ್‌ಅಪ್ ಗಳ ಭರಾಟೆ ಜೋರಾಗಿದೆ. ಆದರೆ ಜನ್ಮತಾಳುವ ಎಲ್ಲ ಸ್ಟಾರ್ಟ್‌ಅಪ್ ಗಳೂ ಯಶಸ್ವಿ ಆಗುತ್ತವೆ ಅಂತ ಹೇಳಲಾಗದು. ಆದರೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆಗೆ ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸ್ಟಾರ್ಟ್‌ಅಪ್ ಗಳು ಆರಂಭವಾಗುತ್ತಲೇ ಇರುವುದನ್ನು ನಾವೆಲ್ಲ ನೋಡಿದ್ದೇವೆ. ಸ್ಟಾರ್ಟ್ ಅಪ್ ಅನ್ನು ನೀವು ಎಷ್ಟು ವಿಶಿಷ್ಟವಾಗಿ ಜಾರಿಗೆ ತರುತ್ತೀರಿ ಎಂಬುದರ ಮೇಲೆ ಅದರ ಯಶಸ್ಸು ನಿರ್ಧರಿತವಾಗುತ್ತದೆ. ಇಂದಿನ ಸ್ಟಾರ್ಟ್ ಅಪ್ ಜಮಾನಾದಲ್ಲಿ ನೀವೂ ಸಹ ನಿಮ್ಮದೇ ವ್ಯವಹಾರ ಆರಂಭಿಸಬಹುದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉತ್ಸಾಹಿ ಯುವಕರು ಈ ಕೆಳಗೆ ವಿವರಿಸಲಾದ ಪ್ರಮುಖ ಸ್ಟಾರ್ಟ್ ಅಪ್ ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಯಶಸ್ವಿಯಾಗಬಹುದು.
ಲಾಂಡ್ರಿ ಸೇವೆ
ಇತ್ತೀಚಿನ ದಿನಗಳಲ್ಲಿ ಇ-ಲಾಂಡ್ರಿ ಸರ್ವಿಸ್ ಬಹು ಜನಪ್ರಿಯವಾಗತೊಡಗಿವೆ. ಎಲ್ಲವೂ ಆನ್ಲೈನ್ ಆಗುವಾಗ ಲಾಂಡ್ರಿ ಸರ್ವಿಸ್ ಸಹ ಹಿಂದೆ ಬಿದ್ದಿಲ್ಲ. ಜನದಟ್ಟಣೆಯ ದೇಶವಾಗಿರುವ ಭಾರತದಲ್ಲಿ ಲಾಂಡ್ರಿ ಸೇವೆಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ.
ಟೀ-ಶರ್ಟ್ ಪ್ರಿಂಟಿಂಗ್
ಹೊಸ ಶೈಲಿಯ ಬಟ್ಟೆಗಳನ್ನು ತೊಡುವತ್ತ ಯುವ ಸಮುದಾಯ ಆಕರ್ಷಿತವಾಗುತ್ತಿದೆ. ಟೀ-ಶರ್ಟ್ ಪ್ರಿಂಟಿಂಗ್ ವ್ಯವಹಾರ ಬಹು ಜನಪ್ರಿಯತೆ ಪಡೆಯುತ್ತಿದೆ. ದೇಶದಲ್ಲಿರುವ ಬಹುತೇಕ ಎಲ್ಲ ದೊಡ್ಡ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಕಂಪನಿ ಹೆಸರಿನ ಪ್ರಿಂಟ್ ಇರುವ ಟೀ-ಶರ್ಟ್ ಗಳ ಅವಶ್ಯಕತೆ ಇರುತ್ತದೆ. ಕಂಪನಿಗಳಿಗೆ ಬೇಕಾದ ಹಾಗೆ ವೈವಿಧ್ಯಮಯವಾಗಿ ಟೀ-ಶರ್ಟ್ ಪ್ರಿಂಟ್ ಮಾಡಿಕೊಡುವುದು ಲಾಭದಾಯಕ ಉದ್ಯಮವಾಗಿದೆ.
ಡೇ ಕೇರ್
ಡೇ ಕೇರ್ ಎಂಬುದು ಹೆಸರೇ ಸೂಚಿಸುವಂತೆ ದಿನದ ಅವಧಿಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಾಗಿದೆ. ಇಂದು ಬಹುತೇಕ ಸುಶಿಕ್ಷಿತ ಮಹಿಳೆಯರು ಉದ್ಯೋಗಸ್ಥರಾಗಿದ್ದು, ಮಕ್ಕಳನ್ನೂ ನೋಡಿಕೊಂಡು ಕೆಲಸಕ್ಕೆ ಹೋಗುವುದು ಅವರಿಗೆ ಹೊರೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾಳಜಿ ಪೂರ್ವಕವಾಗಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ಆರಂಭಿಸಿ ಯಶಸ್ವಿ ಉದ್ಯಮಿಯಾಗಬಹುದು.
ಸಾಕು ಪ್ರಾಣಿಗಳ ಬಟ್ಟೆ ಹಾಗೂ ಇನ್ನಿತರ ವಸ್ತುಗಳು
ಪ್ರಸ್ತುತ ಭಾರತದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆಯ ಮಾರುಕಟ್ಟೆ ಸುಮಾರು ೮೦೦ ಕೋಟಿ ರೂಪಾಯಿಗಳಷ್ಟಾಗಿದೆ. ಕೆಲವರು ಪ್ರತಿತಿಂಗಳು ಸುಮಾರು ೧೦ ಸಾವಿರ ರೂಪಾಯಿಗಳವರೆಗೆ ತಮ್ಮ ಸಾಕು ಪ್ರಾಣಿಗಳಿಗಾಗಿ ಖರ್ಚು ಮಾಡುತ್ತಿದ್ದಾರೆ. ಈ ಕ್ಷೇತ್ರ ಮತ್ತಷ್ಟು ವಿಸ್ತಾರವಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಸಾಕು ಪ್ರಾಣಿಗಳಿಗೆ ಬೇಕಾದ ವಸ್ತುಗಳ ಮಾರಾಟ ಅಥವಾ ಅವುಗಳ ಆರೈಕೆಯ ಬಗ್ಗೆ ಸ್ಟಾರ್ಟ್‌ಅಪ್ ಆರಂಭಿಸುವುದು ಲಾಭದಾಯಕವಾಗಬಹುದು.
ಮನೆ ಸ್ವಚ್ಛತೆ ಸೇವೆ
ಮನೆ ಹಾಗೂ ಆಫೀಸುಗಳಲ್ಲಿ ಕಸ ಗುಡಿಸಲು, ಮನೆಯಲ್ಲಿ ಅಡುಗೆ ಮಾಡಲು ಮುಂತಾದ ಕೆಲಸಗಳಿಗೆ ಬಹುತೇಕರು ಮನೆಗೆಲಸದವರನ್ನು ಅವಲಂಬಿಸಿದ್ದಾರೆ. ಆದರೆ ತಮ್ಮ ಮನೆಗೆಲಸದವಳು ತಾವು ಹೇಳಿದಂತೆ ಕೆಲಸ ಮಾಡುವುದಿಲ್ಲ ಎಂಬುದು ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ಕ್ಷೇತ್ರದಲ್ಲಿ ನುರಿತ ಒಳ್ಳೆಯ ಕೆಲಸಗಾರರನ್ನು ತಯಾರು ಮಾಡಿ, ಅವಶ್ಯಕತೆ ಇರುವೆಡೆ ಗಂಟೆಗಳ ಲೆಕ್ಕದ ಆಧಾರದಲ್ಲಿ ಕಳಿಸಲು ವ್ಯವಸ್ಥೆ ಮಾಡಬಹುದು. ಇದಕ್ಕಾಗಿ ಆನ್‌ಲೈನ್ ಸೇರಿದಂತೆ ಇನ್ನಿತರ ಮಾರ್ಗಗಳ ಮೂಲಕ ನೆಟ್ ವರ್ಕ್ ಹೆಣೆಯಬಹುದು. ಕರ್ನಾಟಕದಲ್ಲಿ ಆರಂಭಿಸಬಹುದಾದ ಟಾಪ್ 10 ಲಾಭದಾಯಕ ಬಿಸಿನೆಸ್ ಐಡಿಯಾ
ಕಾರ್ಯಾಗಾರಗಳ ನಿರ್ವಹಣೆ
ಪ್ರತಿವರ್ಷ ಸಾವಿರಾರು ಸಂಖ್ಯೆಯ ಜನ ಕಾರ್ಯಾಗಾರ, ಮೀಟಿಂಗ್, ತರಬೇತಿ ಶಿಬಿರ ಮುಂತಾದುವುಗಳಿಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ. ಇನ್ನು ಕೆಲ ಸಂದರ್ಭಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಇಂಥ ಕಾರ್ಯಾಗಾರಗಳಿಗೆ ಕಳುಹಿಸುತ್ತವೆ. ವ್ಯವಹಾರ ನಿರ್ವಹಣೆಯಿಂದ ಹಿಡಿದು ಸಾಮಾನ್ಯ ಗಣಿತ ಜ್ಞಾನದ ಬಗ್ಗೆ ತಿಳಿಸಲು ಕಂಪನಿಗಳು ಸಾಕಷ್ಟು ಹಣ ವ್ಯಯಿಸುತ್ತವೆ. ಸಂವಹನ ಕಲೆ, ಮಾರಾಟ ನಿರ್ವಹಣೆ, ಮನೆಯಲ್ಲಿ ಸಂಗಾತಿಯೊಂದಿಗೆ ಹೊಂದಾಣಿಕೆ, ಮಕ್ಕಳೊಂದಿಗೆ ಒಡನಾಟ, ಹಣದ ಹೂಡಿಕೆ ಹೀಗೆ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಒಂದು ಕ್ಷೇತ್ರ ಸ್ಟಾರ್ಟ್ ಅಪ್ ಗಳಿಗೆ ಹೇಳಿ ಮಾಡಿಸಿದಂತಿದೆ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ.
ಯೋಗ ಹಾಗೂ ಸಂಬಂಧಿತ ಚಟುವಟಿಕೆಗಳು
ಇಂದಿನ ಒತ್ತಡದ ಜೀವನದಲ್ಲಿ ಯೋಗ ಹಾಗೂ ಇನ್ನಿತರ ತಾಳ್ಮೆಯ ವಿಧಾನಗಳು ಉದ್ಯಮಿಗಳು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಎಲ್ಲರಿಗೂ ಅವಶ್ಯಕವಾಗಿವೆ. ಹೆಲ್ಥ ಕ್ಲಬ್ ಗಳು, ಜಿಮ್ ಗಳು, ಯೋಗ ತರಬೇತಿ ಶಿಬಿರಗಳು ಹೀಗೆ ಎಲ್ಲೆಡೆ ನುರಿತ ಯೋಗ ತರಬೇತಿದಾರರ ಅವಶ್ಯಕತೆ ಇದೆ. ಇಂಥ ಸಂದರ್ಭದಲ್ಲಿ ನಮ್ಮ ಸುತ್ತ ಮುತ್ತಲಿನವರನ್ನು ಯೋಗ ಹಾಗೂ ಇತರ ಸಂಬಂಧಿತ ಚಟುವಟಿಕೆಗಳತ್ತ ಸೆಳೆಯುವುದು ಅತಿ ಅಗತ್ಯವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿದ್ದು, ಸರಿಯಾದ ಯೋಜನೆಯ ಮೂಲಕ ಜನರನ್ನು ತರಬೇತಿ ಶಿಬಿರಗಳತ್ತ ಸೆಳೆಯುವುದು ಅವಶ್ಯವಾಗಿದೆ. ಈ ವಲಯದ ಬಗ್ಗೆ ಗಮನ ಹರಿಸಿದರೆ ಒಳ್ಳೆಯ ಸ್ಟಾರ್ಟ್‌ಅಪ್ ಆರಂಭಿಸುವುದು ಕಷ್ಟವೇನಲ್ಲ.
ಆಟೋ ರಿಕ್ಷಾ ಸರ್ವಿಸ್
ಚಿಕ್ಕ ನಗರಗಳಲ್ಲಿ ಆಟೋ ರಿಕ್ಷಾಗಳೇ ಜನರ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಆದರೆ ಕೆಲ ಸಂದರ್ಭಗಳಲ್ಲಿ ಮನೆಯ ಹತ್ತಿರ ಆಟೋ ಸಿಗದೆ ಪರದಾಡುವಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆಟೋ ರಿಕ್ಷಾ ಸರ್ವಿಸ್ ಸಿಗುವಂತೆ ವ್ಯವಸ್ಥೆ ಮಾಡುವುದು ಒಂದು ಲಾಭದಾಯಕ ವ್ಯವಹಾರವಾಗಬಹುದು. ಅದರಲ್ಲೂ ೨ ಹಾಗೂ ೩ನೇ ಹಂತದ ನಗರಗಳಲ್ಲಿ ಈ ಸರ್ವಿಸ್ ಗೆ ಹೆಚ್ಚು ಬೇಡಿಕೆ ಇದೆ.
ಮಹಿಳೆಯರ ಸುರಕ್ಷತೆ
ಮಹಿಳೆಯರ ಸುರಕ್ಷತೆಗೆ ಅನುಕೂಲವಾಗುವಂತಹ ಆಪ್ ಹಾಗೂ ವೆಬ್ ಸೈಟ್ ಗಳನ್ನು ರೂಪಿಸುವುದು ಹಾಗೂ ಅವರ ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡುವುದು ಇಂದು ಅತಿ ಅವಶ್ಯಕವಾಗಿದೆ. ಇದನ್ನು ಕೇವಲ ಹಣ ಗಳಿಸುವ ಉದ್ದೇಶದಿಂದ ನೋಡಬೇಕಿಲ್ಲ. ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ನೀವು ಯಶಸ್ವಿಯಾದಲ್ಲಿ ಹಣವೇ ನಿಮ್ಮನ್ನು ಬೆನ್ನತ್ತಿ ಬರುತ್ತದೆ. ಪ್ರತಿದಿನ ಮಹಿಳೆಯರು ಎದುರಿಸುವ ಸಮಸ್ಯೆ ಹಾಗೂ ಸುರಕ್ಷತೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವಂತೆ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯ.
ವೈಯಕ್ತಿಕ ಶಾಪಿಂಗ್
ಸೌಂದರ್ಯವಂತರಾಗಿ ಕಾಣಲು ಏನು ಮಾಡಬೇಕು, ಯಾವ ರೀತಿಯ ವೇಷ ಭೂಷಣ ತೊಡಬೇಕು ಎಂಬ ಬಗ್ಗೆ ಅನೇಕರಿಗೆ ಗೊಂದಲವಿರುತ್ತದೆ. ಇಂಥವರಿಗೆ ಫ್ಯಾಷನ್ ವೃತ್ತಿಪರರು ಸೂಕ್ತ ಮಾರ್ಗದರ್ಶನ ಮಾಡಬಲ್ಲರು. ಕೆಲ ಹಂತದ ಚರ್ಚೆ ಹಾಗೂ ಲಿಖಿತ ಮಾಹಿತಿಯ ಮೇರೆಗೆ ಈ ಫ್ಯಾಷನ್ ತಜ್ಞರು, ಯಾವ ರೀತಿಯ ಬಟ್ಟೆ ಹಾಗೂ ಇನ್ನಿತರ ವೈಯಕ್ತಿಕ ಸೌಂದರ್ಯ ಆಧಾರಿತ ವಸ್ತುಗಳನ್ನು ಖರೀದಿಸಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸ್ಟಾರ್ಟ್‌ಅಪ್ ಅವಕಾಶಗಳಿವೆ.
ಹೊರಾಂಗಣ ಜಾಹೀರಾತು
ಡಿಜಿಟಲ್ ಮಾರ್ಕೆಟಿಂಗ್ ವಿಧಾನ ಅತಿ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿಯಾಗಿದೆ. ಆದರೂ ಹೋರ್ಡಿಂಗ್ಸ್, ಬಸ್ ಶೆಲ್ಟರ್ ಗಳು ಹಾಗೂ ಇನ್ನಿತರ ಕಡೆ ಹೊರಾಂಗಣ ಜಾಹೀರಾತುಗಳು ತಮ್ಮ ಬೇಡಿಕೆ ಕಳೆದುಕೊಂಡಿಲ್ಲ. ಈ ವಲಯ ಸಹ ಬುದ್ಧಿವಂತ ಉತ್ಸಾಹಿಗಳಿಗೆ ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ.
ಪರ್ಯಾಯ ಮಾರ್ಗಗಳ ಮೂಲಕ ಮಿತವ್ಯಯದ ಇಂಧನ ಉತ್ಪಾದನೆ
ಪರ್ಯಾಯ ಮಾರ್ಗಗಳ ಮೂಲಕ ಇಂಧನ ಉತ್ಪಾದನೆ ಇಂದಿನ ದಿನಮಾನಗಳಲ್ಲಿ ಅತಿ ಅಗತ್ಯವಾಗಿದೆ. ಸೋಲಾರ್, ಗಾಳಿ ಯಂತ್ರ ಹಾಗೂ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಘಟಕಗಳು ಭಾರಿ ಬೇಡಿಕೆಯಲ್ಲಿವೆ. ಬೆಳೆಯುತ್ತಿರುವ ನಮ್ಮ ದೇಶದಲ್ಲಿ ಇವುಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.
ಹಳೆಯ ಪುಸ್ತಕಗಳ ಮಾರಾಟ
ಇಂದಿಗೂ ಭಾರತದಲ್ಲಿ ಹೈಸ್ಕೂಲ್ ನಂತರದ ಶಿಕ್ಷಣ ಬಹಳಷ್ಟು ಜನರಿಗೆ ಮರೀಚಿಕೆಯಾಗಿದೆ. ಶಿಕ್ಷಣದ ಶುಲ್ಕ ಅಥವಾ ಕಲಿಕೆಗೆ ಬೇಕಾಗುವ ಪುಸ್ತಕಗಳಿಗೆ ಹಣ ಹೊಂದಿಸಲಾಗದೆ ಅನೇಕರು ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಒಬ್ಬರು ಓದಿ ಬಿಟ್ಟ ಪಠ್ಯ ಪುಸ್ತಕಗಳ ಮಾರಾಟ ಸಾಕಷ್ಟು ಲಾಭದಾಯಕ ವ್ಯಾಪಾರ ಆಗಬಹುದಾಗಿದೆ. ಇದೊಂದು ದೀರ್ಘಕಾಲದ ವ್ಯವಹಾರವಾಗಿದೆ.
ಉದ್ಯೋಗಿಗಳ ತರಬೇತಿ
ಕಂಪನಿಗಳಲ್ಲಿ ನಡೆಯುವ ಉದ್ಯೋಗಿಗಳ ತರಬೇತಿ ಕಾರ್ಯಾಗಾರಗಳು ಎಷ್ಟೋ ಬಾರಿ ತೀರಾ ಗೊಂದಲಕಾರಿ ಹಾಗೂ ನಿರುಪಯೋಗಿಯಾಗಿರುತ್ತವೆ. ಏಕೆಂದರೆ ಬಹುತೇಕ ತರಬೇತಿಗಳು ಕಂಪನಿ ಏನು ಬಯಸುತ್ತವೆಯೋ ಆ ಜ್ಞಾನವನ್ನೇ ನೀಡುವುದಿಲ್ಲ. ಈ ಸಮಸ್ಯೆ ನಿವಾರಿಸಿ ಕಂಪನಿಗಳಿಗೆ ಬೇಕಾದ ಹಾಗೆ ಉದ್ಯೋಗಿಗಳಿಗೆ ತರಬೇತಿ ನೀಡಲು ಉತ್ಸಾಹಿ ಯುವಪಡೆ ಮುಂದೆ ಬರಬಹುದು.
ಹಿರಿಯ ನಾಗರಿಕರ ಸೇವೆ
ವರದಿಗಳ ಪ್ರಕಾರ, ೨೦೨೧ರ ವೇಳೆಗೆ ವೃದ್ಧರ ಜನಸಂಖ್ಯೆ ೧೪೩ ಮಿಲಿಯನ್ ಆಗಲಿದೆ. ಆದರೆ ಮನೆಯಲ್ಲಿರುವ ಗಂಡ-ಹೆಂಡತಿ ಇಬ್ಬರೂ ಕೆಲಸ ಮಾಡುವ ಈ ಯುಗದಲ್ಲಿ ವಯೋವೃದ್ಧರ ಸರಿಯಾದ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ವಯೋವೃದ್ಧರ ಆರೈಕೆಗಾಗಿ ವಿಶೇಷ ಸೇವೆಗಳನ್ನು ಆರಂಭಿಸಬಹುದು.
ಆರೋಗ್ಯ ವಿಮಾ ಸಲಹಾಗಾರ
ಬಹಳಷ್ಟು ಕಂಪನಿಗಳು ಪೂರ್ಣಾವಧಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಷ್ಟು ಆರ್ಥಿಕ ಸಬಲತೆ ಹೊಂದಿರುವುದಿಲ್ಲ. ಅದರಲ್ಲೂ ಅತಿ ಸಂಕೀರ್ಣತೆಯ ಆರೋಗ್ಯ ವಿಮೆ ಕ್ಷೇತ್ರದಲ್ಲಿ ಪರಿಣಿತರನ್ನು ನೇಮಕ ಮಾಡಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿಯೇ ಬಹುತೇಕ ಆರೋಗ್ಯ ವಿಮಾ ಕಂಪನಿಗಳು ತಮ್ಮ ಸೇವೆಗಳನ್ನು ಗ್ರಾಹಕರಿಗೆ ವಿವರಿಸಲು ಹೊರಗುತ್ತಿಗೆ ಏಜೆನ್ಸಿ ಮೊರೆ ಹೋಗುತ್ತವೆ. ಈ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದರೆ ಸ್ಟಾರ್ಟ್‌ಅಪ್ ಆರಂಭಿಸಲು ಸಾಧ್ಯ.
ಗೃಹ ಸುರಕ್ಷತೆಗೆ ಆಪ್
ಸ್ಮಾರ್ಟ್ಫೋನ್ ನೊಂದಿಗೆ ಮನೆಯ ಸುರಕ್ಷತೆ ಜೋಡಿಸುವುದು ಹೊಸ ಟ್ರೆಂಡ್. ಇದಕ್ಕಾಗಿ ಹಲವಾರು ಆಪ್ ಗಳು ತಯಾರಾಗಿವೆ. ಮನೆಯಿಂದ ದೂರವಿರುವಾಗ ಸ್ಮಾರ್ಟ್ ಫೋನ್ ಮೂಲಕ ಮನೆಯ ಸುರಕ್ಷತೆ ನಿರ್ವಹಿಸುವುದು ಈ ಆಪ್ ಗಳ ವೈಶಿಷ್ಟ್ಯವಾಗಿದೆ. ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಯಾರೇ ಒಳ ಹೋಗಲು ಯತ್ನಿಸಿದರೂ ಕ್ಷಣಾರ್ಧದಲ್ಲಿ ಆ ಮಾಹಿತಿ ಸಂಬಂಧಿತ ಸ್ಮಾರ್ಟ್ ಫೋನ್ ಗೆ ರವಾನೆಯಾಗುತ್ತದೆ. ಈ ಕ್ಷೇತ್ರದಲ್ಲಿ ಸಹ ಸಾಕಷ್ಟು ಅವಕಾಶಗಳಿವೆ.
ರಿವರ್ಸ್ ಲಾಜಿಸ್ಟಿಕ್ಸ್
ಖ್ಯಾತ ಇ-ಕಾಮರ್ಸ್ ಕಂಪನಿಗಳಿಗೆ ಗ್ರಾಹಕರು ತಾವು ಆರ್ಡರ್ ಮಾಡಿದ ವಸ್ತುವನ್ನು ತಿರಸ್ಕರಿಸಿ ಮರಳಿಸುವುದು ಬಹುದೊಡ್ಡ ಸವಾಲಾಗಿದೆ. ರಿವರ್ಸ್ ಲಾಜಿಸ್ಟಿಕ್ಸ್ ಎಂದು ಕರೆಯುವ ಈ ಪ್ರಕ್ರಿಯೆಯಿಂದ ಕಂಪನಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ಆದರೆ ಸೂಕ್ತವಾಗಿ ನಿಭಾಯಿಸಿದಲ್ಲಿ ರಿವರ್ಸ್ ಲಾಜಿಸ್ಟಿಕ್ಸ್‌ನ ಖರ್ಚನ್ನು ಶೇ.೨೫ ರಷ್ಟು ಅಂದರೆ ವಸ್ತುವಿನ ಉತ್ಪಾದನಾ ವೆಚ್ಚದ ಶೇ.೧೦ ರಷ್ಟು ಕಡಿಮೆ ಮಾಡಬಹುದಾಗಿದೆ. ಇಂಥ ಒಂದು ಸ್ಟಾರ್ಟ್‌ಅಪ್ ಇ-ಕಾಮರ್ಸ್ ಕಂಪನಿಗಳಿಗೆ ವರದಾನವಾಗಬಹುದು.
ಶಿಕ್ಷಣ ಸೇವೆಗಳು
ಮಕ್ಕಳ ಕಲಿಕೆಯ ಎಲ್ಲ ಹಂತಗಳಲ್ಲಿ ಜನ ಇತ್ತೀಚೆಗೆ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಶೈಕ್ಷಣಿಕ, ಸಾಮಾನ್ಯ ಕಂಪ್ಯೂಟರ್ ಬಳಕೆ, ಅಥ್ಲೆಟಿಕ್ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಕಲಿಕೆಗೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಸೂಕ್ತವಾದ ಶಿಕ್ಷಕರನ್ನು ಹುಡುಕುವುದೇ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಬೇಡಿಕೆ ಇರುವ ಶಿಕ್ಷಕರನ್ನು ಗುರುತಿಸಿ, ಅವರ ಮಾಹಿತಿಯನ್ನು ಅವಶ್ಯಕತೆ ಇರುವವರಿಗೆ ನೀಡಬಹುದು. ಇದು ಆಫ್ ಲೈನ್ ಅಥವಾ ಆನ್ ಲೈನ್ ಮೂಲಕ ಆಗಬಹುದು.
ಕಾಪಿ ರೈಟರ್
ವೆಬ್ಸೈಟ್ ಹೊಂದಿರುವವರಿಗೆ ಪ್ರತಿ ದಿನ ಅಥವಾ ದಿನದ ಆಯಾ ಸಂದರ್ಭದಲ್ಲಿ ಹೊಸ ಕಂಟೆಂಟ್ ಅಪ್ ಲೋಡ್ ಮಾಡುವ ಅನಿವಾರ್ಯತೆ ಇರುತ್ತದೆ. ಸರ್ಚ್ ಎಂಜಿನ್ ಗಳು ಹೊಸ ಹಾಗೂ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತವೆ. ಆದರೆ ಕಂಪನಿಗಳು ದಿನವಿಡೀ ಸರ್ಚ್ ಎಂಜಿನ್ ಗಳಿಗೆ ಬೇಕಾದ ಹಾಗೆ ಮಾಹಿತಿಯನ್ನು ಅಪ್ ಲೋಡ್ ಮಾಡುತ್ತ ಇರುವುದು ಸಾಧ್ಯವಾಗದ ಮಾತು. ಇಂಥ ಕಂಪನಿಗಳಿಗೆ ಬೇಕಾದ ಸೂಕ್ತ ಕಂಟೆಂಟ್ ಅನ್ನು ಕಡಿಮೆ ವೆಚ್ಚದಲ್ಲಿ, ನಿಯಮಿತವಾಗಿ ಕೊಡುವುದು ಒಂದು ಪ್ರಮುಖ ವ್ಯವಹಾರವಾಗಿದೆ. ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಾಪಿ ರೈಟರ್ ಕೆಲಸದ ಬಗ್ಗೆ ಸ್ಟಾರ್ಟ್‌ಅಪ್ ಆರಂಭಿಸಬಹುದು.
More From GoodReturns

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications