For Quick Alerts
ALLOW NOTIFICATIONS  
For Daily Alerts

ವೃತ್ತಿಜೀವನದಲ್ಲಿ ಯಶಸ್ವಿ ಕಂಡ ವ್ಯಕ್ತಿಗಳ 10 ಸಕ್ಸಸ್ ಫಾರ್ಮುಲಾ

ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಾಧಿಸಿದ ವ್ಯಕ್ತಿಗಳ ದೈನಂದಿನ ಬದುಕನ್ನು ಯಾವತ್ತಾದರೂ ಅವಲೋಕಿಸಿ ನೋಡಿ.

|

ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಾಧಿಸಿದ ವ್ಯಕ್ತಿಗಳ ದೈನಂದಿನ ಬದುಕನ್ನು ಯಾವತ್ತಾದರೂ ಅವಲೋಕಿಸಿ ನೋಡಿ. ಸಾಕಷ್ಟು ಕುತೂಹಲಕಾರಿ ಹಾಗೂ ಪ್ರೇರಣಾದಾಯಕ ಅಂಶಗಳು ನಿಮಗೆ ಕಾಣ ಸಿಗುತ್ತವೆ. ಕೆಲಸ ಸುಲಭವಾಗಿರಲಿ ಅಥವಾ ಒತ್ತಡದಿಂದ ಕೂಡಿರಲಿ ಅದನ್ನು ಸಮಚಿತ್ತದಿಂದ ಯಶಸ್ವಿಯಾಗಿ ಮುಗಿಸುವುದು ಇವರಿಗೆ ನೀರು ಕುಡಿದಷ್ಟೇ ಸುಲಭ. ಹಾಗಾದರೆ ಇಂಥ ಸಾಧಕರ ಜೀವನದಲ್ಲಿನ ಪ್ರಮುಖ ಲಕ್ಷಣಗಳು ಹಾಗೂ ಅವರ ಕೆಲಸದ ರೀತಿಯ ಬಗೆಗಿನ ಮುಖ್ಯ ಅಂಶಗಳನ್ನು ತಿಳಿದುಕೊಳ್ಳೋಣ.

 

ಸಾಧನೆ ಮಾಡಲು ಅಳವಡಿಸಿಕೊಳ್ಳಬೇಕಾದ 10 ಮುಖ್ಯ ಅಂಶಗಳು:

1. ದಿನಕ್ಕೆ 5 ಪ್ರಮುಖ ಅಂಶಗಳತ್ತ ಗಮನ

1. ದಿನಕ್ಕೆ 5 ಪ್ರಮುಖ ಅಂಶಗಳತ್ತ ಗಮನ

ಒಂದು ದಿನದಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ದೊಡ್ಡದಾಗಿ ಬೆಳೆದಿದ್ದರೆ ಮೊದಲು ಸಾಧ್ಯವಾದಷ್ಟೂ ಅನವಶ್ಯಕ ಕೆಲಸಗಳನ್ನು ಪಟ್ಟಿಯಿಂದ ತೆಗೆದು ಹಾಕಿ ಹಾಗೂ ಮೊದಲಿಗೆ ಕೆಲ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಯಾವತ್ತಿಗೂ ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ನಿಭಾಯಿಸಲು ಹೋಗಬೇಡಿ. ಒಂದು ಸಲಕ್ಕೆ ಒಂದು ಕೆಲಸದಲ್ಲಿ ಮಾತ್ರ ಗಮನಹರಿಸಿ. ದಿನ ಮುಗಿಯುತ್ತ ಬಂದಂತೆ ನಿಮ್ಮ ಉಲ್ಲಾಸ ಹಾಗೂ ಚೈತನ್ಯದ ಮಟ್ಟ ಕಡಿಮೆಯಾಗುತ್ತ ಬರುತ್ತವೆ. ಇನ್ನು ದಿನದಲ್ಲಿ ನೀವು ಪ್ರಮುಖವಾಗಿ ಗಮನಹರಿಸಬೇಕಾದ ಕೆಲಸಗಳ ಪಟ್ಟಿಯಲ್ಲಿ ೫ ಕ್ಕಿಂತ ಹೆಚ್ಚು ಕೆಲಸಗಳಿರದಂತೆ ನೋಡಿಕೊಳ್ಳಿ. ಎಷ್ಟು ಅನವಶ್ಯಕ ಕೆಲಸಗಳನ್ನು ನೀವು ಪಟ್ಟಿಯಿಂದ ದೂರ ಮಾಡುವಿರೋ ಅಷ್ಟೆ ಹೆಚ್ಚು ಪ್ರಮುಖ ವಿಷಯಗಳತ್ತ ಗಮನಹರಿಸಲು ನಿಮಗೆ ಸಾಧ್ಯವಾಗುತ್ತದೆ.

2. ಶೇ. 20 ಎಲ್ಲದರಲ್ಲೂ ತೊಡಗಿಸಿಕೊಳ್ಳುವಿಕೆ
 

2. ಶೇ. 20 ಎಲ್ಲದರಲ್ಲೂ ತೊಡಗಿಸಿಕೊಳ್ಳುವಿಕೆ

ಹೊಸದೊಂದು ಪ್ರೊಜೆಕ್ಟ್ ಜವಾಬ್ದಾರಿ ನಿಮ್ಮ ಹೆಗಲಿಗೇರಿದಾಗ 80-20 ರೂಲ್ ಅನುಸರಿಸಿ. ಅಂದರೆ ಯಾವುದೇ ಪ್ರೊಜೆಕ್ಟ್‌ನ ಪ್ರಮುಖ ಶೇ.20 ಭಾಗದ ಮೇಲೆ ಗಮನ ಕೇಂದ್ರೀಕರಿಸಿ, ಅಷ್ಟೇ ಸಮಯ ನೀಡಿ ಕೆಲಸ ಮಾಡಿದಲ್ಲಿ ಇನ್ನುಳಿದ ಶೇ.80 ರಷ್ಟು ಕೆಲಸ ತಾನಾಗಿಯೇ ಆಗುತ್ತದೆ. ಪ್ರೊಜೆಕ್ಟ್‌ನ ಆ ಶೇ.20 ಮುಖ್ಯ ಭಾಗದ ಮೇಲೆ ಗುರಿ ಇಟ್ಟು ಇನ್ನುಳಿದ ಭಾಗವನ್ನು ಬಿಟ್ಟುಬಿಡಿ ಅಥವಾ ಮರೆತುಬಿಡಿ, ಅಥವಾ ಬೇರೊಬ್ಬರಿಗೆ ವಹಿಸಿ ಅಥವಾ ಅದನ್ನು ಸ್ವಯಂಚಾಲಿತವಾಗಿ ಆಗುವಂತೆ ಮಾಡಿ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಒಂದು ಕೆಲಸವನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಕೆಳಗಿನ ತಂಡಕ್ಕೆ ವರ್ಗಾಯಿಸಿ ಅದರಲ್ಲಿನ ಸದಸ್ಯರಿಗೆ ಸೂಕ್ತ ತರಬೇತಿ ನೀಡಿ ಉತ್ಸಾಹ ತುಂಬಿದಲ್ಲಿ ನಿಮ್ಮ ಕೆಲಸ ಬಹುತೇಕ ಮುಗಿದಂತೆ. ಇದು ಒಟ್ಟು ಪ್ರೊಜೆಕ್ಟ್‌ನ ಶೇ.20 ರಷ್ಟು ಮಾತ್ರ ಕೆಲಸ. ಇನ್ನುಳಿದ ಶೇ.80 ರಷ್ಟು ಕೆಲಸ ನಿಮ್ಮ ಹಸ್ತಕ್ಷೇಪವಿಲ್ಲದೆ ಮುಗಿದುಹೋಗುತ್ತದೆ.

3. ದಿನದಾರಂಭ ನಿಮ್ಮಿಂದಲೇ ಆಗಲಿ

3. ದಿನದಾರಂಭ ನಿಮ್ಮಿಂದಲೇ ಆಗಲಿ

ಅತ್ಯಂತ ಯಶಸ್ವಿ ಹಾಗೂ ಸಾಧಕ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ದಿನವನ್ನು ತಮಗಾಗಿ ಸಮಯ ಮೀಸಲಿಟ್ಟು ಆರಂಭಿಸುತ್ತಾರೆ. ಅಂದರೆ ಬೆಳಗಿನ ಉಲ್ಲಾಸಕರ ವಾತಾವರಣದಲ್ಲಿ ತನಗಾಗಿ ಒಂದಿಷ್ಟು ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಓದುವುದು ಹಾಗೂ ತನಗಿಷ್ಟವಾದ ತಿಂಡಿಯನ್ನು ಸೇವಿಸಿ ಇಡೀ ದಿನದ ಕೆಲಸಕ್ಕೆ ಬೇಕಾದ ಪ್ರೇರಣೆ ಹಾಗೂ ಶಕ್ತಿಯನ್ನು ಅವರು ಒಟ್ಟುಗೂಡಿಸಿಕೊಳ್ಳುತ್ತಾರೆ. ಇದರಿಂದ ಎಂಥ ಒತ್ತಡದ ಕೆಲಸವಾದರೂ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.

4. ದೊಡ್ಡ ಕೆಲಸ ಮೊದಲು

4. ದೊಡ್ಡ ಕೆಲಸ ಮೊದಲು

ದಿನದ ಆರಂಭದಲ್ಲಿ ಆದಷ್ಟೂ ದೊಡ್ಡ ಕೆಲಸಗಳ ಬಗ್ಗೆಯೇ ಗಮನಹರಿಸಿ. ದಿನ ಕಳೆದಂತೆ ಎದುರಾಗುವ ಗಮನ ಬೇರೆಡೆ ಸೆಳೆಯುವ ಹಲವಾರು ಅಂಶಗಳು ಬರುವ ಮುನ್ನವೇ ಕ್ಲಿಷ್ಟಕರವಾದ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು. ಬೆಳಗಿನ ಜಾವದಲ್ಲಿ ಏಕಾಗ್ರತೆ ಹಾಗೂ ಉಲ್ಲಾಸ ಹೆಚ್ಚಾಗಿರುವುದರಿಂದ ಕಷ್ಟಕರವಾದ ಕೆಲಸಗಳು ಸಹ ಬೇಗನೆ ಮುಗಿದುಹೋಗುತ್ತವೆ. ಇದರಿಂದ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿ ಇನ್ನಷ್ಟು ಕೆಲಸಗಳನ್ನು ಉತ್ತಮವಾಗಿ ಮಾಡಲು ಪ್ರೇರಣೆ ಸಿಗುತ್ತದೆ.

5. ಏಕಾಗ್ರತೆ ಭಂಗದ ವಸ್ತುಗಳನ್ನು ದೂರವಿಡಿ

5. ಏಕಾಗ್ರತೆ ಭಂಗದ ವಸ್ತುಗಳನ್ನು ದೂರವಿಡಿ

ಕೆಲಸ ಮಾಡುವಾಗ ನಿಮ್ಮ ಕೆಲಸದ ಏಕಾಗ್ರತೆಗೆ ಭಂಗ ತರಬಲ್ಲ ಎಲ್ಲ ವಸ್ತುಗಳನ್ನು, ಅಂಶಗಳನ್ನು ದೂರವಿಡಿ. ಫೋನ್ ರಿಂಗ್ ಆಗುವುದು, ಯಾವುದೋ ಮೆಸೇಜ್ ಬಂದ ನೊಟಿಫಿಕೇಶನ್ ಬೀಪ್ ಹೀಗೆ ಎಲ್ಲ ವಸ್ತುಗಳನ್ನು ದೂರವಿಡಿ. ಅಲ್ಲದೆ ಮಧ್ಯೆ ಮಧ್ಯೆ ಬೇರೆ ವಿಚಾರಗಳು ಮನದಲ್ಲಿ ಮೂಡಿ ಬರುತ್ತವೆ. ಆದರೆ ಇವುಗಳ ಬಗ್ಗೆ ಜಾಸ್ತಿ ಗಮನ ಕೊಡುವುದು ಬೇಡ. ಆ ವಿಚಾರದ ಬಗ್ಗೆ ಚಿಕ್ಕ ಕಾಗದದಲ್ಲಿ ಬರೆದಿಟ್ಟು ಅದರ ಬಗ್ಗೆ ನಂತರ ವಿಚಾರ ಮಾಡಿದರಾಯಿತು. ಹಾಗೆಯೇ ಹೊರಗಿನ ಜನತೆ ನಿಮ್ಮನ್ನು ರೀಚ್ ಆಗುವ ಪ್ರಮುಖ ಮಾರ್ಗಗಳನ್ನು ಸಹ ಬಂದ್ ಮಾಡಿ. ಒಟ್ಟಾರೆಯಾಗಿ ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾದಷ್ಟೂ ಉತ್ಪಾದಕತೆ ಹೆಚ್ಚಾಗುತ್ತದೆ.

6. ಚಿಕ್ಕ ಅವಧಿಗಳಲ್ಲಿ ಕೆಲಸ ಮಾಡಿ

6. ಚಿಕ್ಕ ಅವಧಿಗಳಲ್ಲಿ ಕೆಲಸ ಮಾಡಿ

ದಕ್ಷತೆಯಿಂದ ಕೆಲಸ ಮಾಡುವವರು ಯಾವತ್ತೂ ದೊಡ್ಡ ದೊಡ್ಡ ಪ್ರೊಜೆಕ್ಟ್‌ಗಳನ್ನು ನಿಭಾಯಿಸಲು ಹಿಂಜರಿಯುವುದಿಲ್ಲ. ಅವರು ದೊಡ್ಡ ಕೆಲಸಗಳನ್ನು ಚಿಕ್ಕ ಚಿಕ್ಕ ವಿಭಾಗಗಳಾಗಿ ವಿಭಾಗಿಸಿ ಕೆಲಸವನ್ನು ಹಗುರಾಗಿಸಿಕೊಳ್ಳುತ್ತಾರೆ. ಒಂದು ಬಾರಿಗೆ 25 ನಿಮಿಷದಷ್ಟು ಕೆಲಸ ಮಾಡಿ ಮತ್ತೆ ಒಂಚೂರ ಬ್ರೇಕ್ ನೀಡುವುದು ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವುದರಿಂದ ಕೆಲಸ ಎಷ್ಟೇ ಕ್ಲಿಷ್ಟಕರವಾಗಿದ್ದರೂ, ಉತ್ಸಾಹದ ಮಟ್ಟ ಕಡಿಮೆ ಇದ್ದರೂ ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

7. ಬಿಡುವು ತೆಗೆದುಕೊಳ್ಳಿ

7. ಬಿಡುವು ತೆಗೆದುಕೊಳ್ಳಿ

ಕೆಲಸದ ಮಧ್ಯೆ ಆಗಾಗ ದೊಡ್ಡ ಬಿಡುವು ತೆಗೆದುಕೊಳ್ಳುವುದು ಅಗತ್ಯ. ಹೀಗೆ ಮಾಡುವುದರಿಂದ ಕೆಲಸದ ಏಕತಾನತೆ ಕಡಿಮೆಯಾಗುತ್ತದೆ. ಅಲ್ಲದೆ ಆಗ ಸಿಗುವ ಸಮಯದಲ್ಲಿ ಕೆಲಸ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಹೊಸ ಐಡಿಯಾಗಳು ಹೊಳೆಯುತ್ತವೆ. ಹೀಗಾಗಿ ನಿಯಮಿತವಾಗಿ ಅಥವಾ ಅನಿಯಮಿತವಾಗಿ ಬ್ರೇಕ್ ಪಡೆದುಕೊಳ್ಳಿ. ಕೆಲಸ ಮಾಡುವಾಗ 5 ನಿಮಿಷ ಎದ್ದು ಆಫೀಸಿನ ಕಾರಿಡಾರ್‌ವರೆಗೂ ನಡೆಯಿರಿ. ಒಂದು ಕಪ್ ಕಾಫಿ ಹೀರಿ ಮತ್ತೆ ರಿಚಾರ್ಜ್ ಆಗಿ ಕೆಲಸಕ್ಕೆ ಕುಳಿತುಕೊಳ್ಳಿ.

8. ಆದಷ್ಟೂ ಅಟೊಮೇಶನ್ ಅಳವಡಿಸಿಕೊಳ್ಳಿ

8. ಆದಷ್ಟೂ ಅಟೊಮೇಶನ್ ಅಳವಡಿಸಿಕೊಳ್ಳಿ

ಜೀವನದಲ್ಲಿ ಆದಷ್ಟೂ ಹೆಚ್ಚು ಯಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಚಿಕ್ಕ ಚಿಕ್ಕ ದೈನಂದಿನ ವಿಷಯಗಳ ಬಗ್ಗೆ ನೀವೇ ತಲೆಕೆಡಿಸಿಕೊಳ್ಳುವುದು ಬೇಡ. ಬಿಲ್‌ಗಳನ್ನು ಪಾವತಿಸುವುದು, ದೈನಂದಿನ ಚಿಕ್ಕ ಕೆಲಸಗಳನ್ನು ನಿಭಾಯಿಸುವುದು, ಮೀಟಿಂಗ್ ನಡೆಸುವುದು ಮುಂತಾದುವುಗಳನ್ನು ಬೇರೆಯವರಿಗೆ ವಹಿಸಿಬಿಡಿ. ನಿಮ್ಮ ಶಕ್ತಿ ಹಾಗೂ ಸಾಮರ್ಥ್ಯಗಳು ಸದುಪಯೋಗವಾಗುವಂತೆ ಮಾಡಿದಲ್ಲಿ ಉತ್ಪಾದಕತೆ ಸಹಜವಾಗಿಯೇ ಹೆಚ್ಚಾಗುತ್ತದೆ.

9. ಸಂವಹನ ಅವಧಿ ಕಡಿಮೆ ಮಾಡಿ

9. ಸಂವಹನ ಅವಧಿ ಕಡಿಮೆ ಮಾಡಿ

ವೃತ್ತಿಪರರು ತಮ್ಮ ಸಹೋದ್ಯೋಗಿಗಳೊಂದಿಗೆ, ಬೇರೆ ಕಂಪನಿಗಳೊಂದಿಗೆ ಆಗಾಗ ಸಂವಹನ ನಡೆಸುವುದು ಅನಿವಾರ್ಯ. ಆದರೆ ಉದ್ದುದ್ದ ಇಮೇಲ್ ಬರೆಯುತ್ತ ಅಥವಾ ಫೋನ್‌ನಲ್ಲಿ ಸಿಕ್ಕಾಪಟ್ಟೆ ಮಾತಾಡುತ್ತಿದ್ದರೆ ಬಹಳ ಸಮಯ ಅನುತ್ಪಾದಕವಾಗಿ ಹಾಳಾಗುತ್ತದೆ. ಕಾರ್ಯಕ್ಕೆ ಸಂಬಂಧಿಸಿದಂತೆ ಸಂವಹನ ಕೆಲಸಗಳನ್ನು ದಿನಕ್ಕೆರಡು ಬಾರಿಗೆ ಸೀಮಿತಗೊಳಿಸಿಕೊಳ್ಳಿ. ಎಲ್ಲ ಮೀಟಿಂಗ್‌ಗಳನ್ನು ಒಂದೇ ಬಾರಿಗೆ ಮುಗಿಸಿಕೊಳ್ಳಿ ಹಾಗೂ ಹೆಚ್ಚೆಂದರೆ ಎರಡು ಬಾರಿ ಇಮೇಲ್ ಬರೆಯಲು ಸಮಯ ವ್ಯಯಿಸಿ.

10. ಚೈತನ್ಯ, ಉಲ್ಲಾಸಗಳನ್ನು ಇಮ್ಮಡಿಸಿಕೊಳ್ಳಿ

10. ಚೈತನ್ಯ, ಉಲ್ಲಾಸಗಳನ್ನು ಇಮ್ಮಡಿಸಿಕೊಳ್ಳಿ

ಸಮಯ ನಿರ್ವಹಣೆಗಿಂತಲೂ ದೇಹ ಹಾಗೂ ಮಾನಸಿಕ ಶಕ್ತಿಯ ನಿರ್ವಹಣೆ ಅತಿ ಪ್ರಮುಖವಾಗಿದೆ. ನಿದ್ರೆ, ಆಹಾರ ಹಾಗೂ ವ್ಯಾಯಾಮಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಶಕ್ತಿ ಹಾಗೂ ಸಾಮರ್ಥ್ಯಗಳ ಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಶಕ್ತಿಯನ್ನು ಹಾಳು ಮಾಡಬಹುದಾದ ಯಾವುದೇ ಹವ್ಯಾಸವಿದ್ದರೂ ಅದರಿಂದ ದೂರವಿರಿ. ಸಾಕಷ್ಟು ನಿದ್ರೆ, ಉತ್ತಮ ಆಹಾರ ಹಾಗೂ ವ್ಯಾಯಾಮಗಳಿಂದ ಒಟ್ಟಾರೆಯಾಗಿ ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

Read more about: money finance news savings
English summary

The 10 habits of highly productive people

If you find it useful and satisfying to tick off tasks from a list, then add a couple of rules to your process.
Story first published: Thursday, May 23, 2019, 12:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X