For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಬಗ್ಗೆ ಈ 5 ಸಂಗತಿ ನಿಮಗೆ ತಿಳಿದಿರಲಿ..

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕ ಹತ್ತಿರವಾಗುತ್ತಿದೆ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದಲ್ಲಿ ದಂಡ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಅಗತ್ಯ.

|

2019-20 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕ ಹತ್ತಿರವಾಗುತ್ತಿದೆ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದಲ್ಲಿ ದಂಡ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಅಗತ್ಯ. ಪ್ರತಿಯೊಬ್ಬ ವ್ಯಕ್ತಿಯು ಗಳಿಸುವ ಆದಾಯದ ಮೇಲೆ ಭಾರತ ಸರಕಾರ ವಿಧಿಸುವ ತೆರಿಗೆಯೇ ಆದಾಯ ತೆರಿಗೆಯಾಗಿದೆ. 1961 ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಈ ತೆರಿಗೆಗಳನ್ನು ಆಕರಿಸಲಾಗುತ್ತದೆ. ಆದಾಯ ತೆರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ತೆರಿಗೆ ಪಾವತಿ ಮಿತಿಯೊಳಗೆ ಬರುವ ಆದಾಯ ಪಡೆಯುತ್ತಿರುವ ಎಲ್ಲ ವ್ಯಕ್ತಿಗಳೂ ಆದಾಯ ತೆರಿಗೆ ಪಾವತಿಸುವುದು ಕಡ್ಡಾಯ. ಹಾಗೆಯೇ ಎಲ್ಲ ಆದಾಯ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಮುನ್ನ ಈ ಕೆಳಗೆ ತಿಳಿಸಲಾದ ೫ ಪ್ರಮುಖ ಅಂಶಗಳು ನಿಮಗೆ ತಿಳಿದಿರಲಿ.

 

1. ಸಂಬಳದಿಂದ ಬರುವ ಆದಾಯ

1. ಸಂಬಳದಿಂದ ಬರುವ ಆದಾಯ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 17 ರಲ್ಲಿ ಸಂಬಳ ಎಂದರೆ ಏನು ಎಂಬುದನ್ನು ವಿವರಿಸಲಾಗಿದೆ. ಈ ವಿವರಣೆಯ ತೀರಾ ಆಳಕ್ಕೆ ಹೋಗದೆ ಸರಳವಾಗಿ ಹೇಳುವುದಾದರೆ, ಉದ್ಯೋಗಿಯೊಬ್ಬ ತನ್ನ ಕೆಲಸಕ್ಕೆ ಮಾಲೀಕ ಅಥವಾ ಕಂಪನಿಯ ಕಡೆಯಿಂದ ಪಡೆಯುವ ಹಣ, ಸೌಲಭ್ಯ ಇದನ್ನು ಸಂಬಳ ಎಂದು ಕರೆಯಲಾಗುತ್ತದೆ.

2. ಭತ್ಯೆಗಳು ಎಂದರೇನು?

2. ಭತ್ಯೆಗಳು ಎಂದರೇನು?

ಆದಾಯ ತೆರಿಗೆ ಇಲಾಖೆಯ ಪ್ರಕಾರ ಸಂಬಳವನ್ನು ಹೊರತುಪಡಿಸಿ, ಉದ್ಯೋಗಿಗೆ ಆತನ ನಿರ್ದಿಷ್ಟ ಖರ್ಚು ವೆಚ್ಚಕ್ಕಾಗಿ ಪಾವತಿಸುವ ನಿಯಮಿತ ಮೊತ್ತಗಳನ್ನು ಭತ್ಯೆಗಳು ಎಂದು ವಿವರಿಸಲಾಗಿದೆ. ತಿಂಡಿ ಖರ್ಚು, ಸಾರಿಗೆ ಖರ್ಚು, ಯುನಿಫಾರ್ಮ ಖರ್ಚು ಮುಂತಾದುವೆಲ್ಲ ಭತ್ಯೆಗಳಾಗಿವೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಭತ್ಯೆಗಳನ್ನು ಮೂರು ಪ್ರಕಾರದಲ್ಲಿ ವಿಂಗಡಿಸಲಾಗಿದೆ. ತೆರಿಗೆ ವಿಧಿಸಬಲ್ಲ ಭತ್ಯೆಗಳು, ತೆರಿಗೆ ರಹಿತ ಭತ್ಯೆಗಳು ಹಾಗೂ ಭಾಗಶಃ ತೆರಿಗೆ ಭತ್ಯೆಗಳು ಎಂದು ವಿಂಗಡಿಸಲಾಗಿದೆ.
ವ್ಯಕ್ತಿಯ ಕೆಲಸದಲ್ಲಿನ ಸ್ಥಾನದ ಆಧಾರದಲ್ಲಿ ಆತನಿಗೆ ಹಲವಾರು ಭತ್ಯೆಗಳು ದೊರಕುತ್ತವೆ. ಆದರೆ ಇವುಗಳ ಸ್ವರೂಪವನ್ನು ನೋಡಿಕೊಂಡು ಇವಕ್ಕೆ ತೆರಿಗೆ ಪಾವತಿಸಬೇಕೆ ಅಥವಾ ಬೇಡ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 10 (14) ಪ್ರಕಾರ ಯುನಿಫಾರ್ಮ್ ಭತ್ಯೆಯು ತೆರಿಗೆ ರಹಿತವಾಗಿದೆ.

 

3. ಪೆನ್ಷನ್ ಆದಾಯಕ್ಕೆ ತೆರಿಗೆ ಪಾವತಿಸಬೇಕೆ?
 

3. ಪೆನ್ಷನ್ ಆದಾಯಕ್ಕೆ ತೆರಿಗೆ ಪಾವತಿಸಬೇಕೆ?

ಹೌದು. ಪೆನ್ಷನ್ ಆದಾಯಕ್ಕೂ ತೆರಿಗೆ ಪಾವತಿಸಬೇಕು. ಆದಾಗ್ಯೂ ಆದಾಯ ತೆರಿಗೆ ನಿಯಮಗಳ ಪ್ರಕಾರ ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ ನಿಂದ ಪಡೆಯುವ ಪೆನ್ಷನ್ ಮಾತ್ರ ತೆರಿಗೆಯಿಂದ ಮುಕ್ತವಾಗಿದೆ.

4. ಸಂಬಳದ ಹಿಂಬಾಕಿಗಳಿಗೆ ತೆರಿಗೆ ಅನ್ವಯಿಸುತ್ತದೆಯೆ?

4. ಸಂಬಳದ ಹಿಂಬಾಕಿಗಳಿಗೆ ತೆರಿಗೆ ಅನ್ವಯಿಸುತ್ತದೆಯೆ?

ಆದಾಯ ತೆರಿಗೆ ಇಲಾಖೆ ನಿಯಮಾವಳಿಗಳ ಪ್ರಕಾರ ಸಂಬಳದ ಹಿಂಬಾಕಿಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಆದಾಗ್ಯೂ ಹಿಂದಿನ ವರ್ಷಗಳ ಹಿಂಬಾಕಿಗೆ ಕಡಿಮೆ ತೆರಿಗೆ ವಿಧಿಸುವ ಹಾಗೆ ಸೌಲಭ್ಯ ಪಡೆಯಲು ಸಾಧ್ಯ. ಇದನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89 ರಿಲೀಫ್ ಎಂದು ಕರೆಯಲಾಗುತ್ತದೆ.

5. ರಜೆ ನಗದೀಕರಣ ಮೊತ್ತಕ್ಕೆ ತೆರಿಗೆ ಪಾವತಿಸುವಿಕೆ

5. ರಜೆ ನಗದೀಕರಣ ಮೊತ್ತಕ್ಕೆ ತೆರಿಗೆ ಪಾವತಿಸುವಿಕೆ

ಇನ್ನೂ ಸೇವೆಯಲ್ಲಿರುವಾಗಲೇ ರಜೆ ನಗದೀಕರಣ ಪಡೆದರೆ ಆ ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಸರಕಾರಿ ನೌಕರನಾಗಿದ್ದಲ್ಲಿ ನಿವೃತ್ತಿ ನಂತರ ಪಡೆಯುವ ರಜೆ ನಗದೀಕರಣ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇನ್ನು ಖಾಸಗಿ ನೌಕರನಾಗಿದ್ದಲ್ಲಿ ಕೆಲವು ಷರತ್ತುಗಳನ್ನು ಆಧರಿಸಿ ರಜೆ ನಗದೀಕರಣ ಮೊತ್ತದ ಮೇಲಿನ ತೆರಿಗೆಯನ್ನು ನಿರ್ಧರಿಸಲಾಗುತ್ತದೆ.

English summary

Five things you should know about Income Tax

The deadline for filing Income Tax Return (ITR) is approaching fast. If you are a salaried employee, you would have to file the income tax return (ITR) before the deadline to avoid penalty. Income tax is basically a tax levied by the Government of India on the income of every person.
Story first published: Wednesday, June 12, 2019, 11:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X