ಟರ್ಮ್ ಇನ್ಶುರೆನ್ಸ್ ಪಾಲಿಸಿಗಳು, ಎಂಡೋಮೆಂಟ್ ಪ್ಲಾನ್ ಮತ್ತು ಪಿಂಚಣಿ ಯೋಜನೆಗಳನ್ನು ಒದಗಿಸುವ ಭಾರತದ ಜೀವ ವಿಮಾ ನಿಗಮವು (ಎಲ್ಐಸಿ) ಮನಿ ಬ್ಯಾಕ್ ಇನ್ಸೂರೆನ್ಸ್ ಪಾಲಿಸಿಗಳನ್ನು ಕೂಡ ನೀಡುತ್ತದೆ.
ಭಾರತೀಯ ಜೀವ ವಿಮಾ ನಿಗಮ ಸರ್ಕಾರಿ ಸ್ವಾಮ್ಯದ ವಿಸ್ವಾಸಾರ್ಹ ಸಂಸ್ಥೆಯಾಗಿದೆ. ಟರ್ಮ್ ಇನ್ಶುರೆನ್ಸ್ ಪಾಲಿಸಿಗಳು, ಎಂಡೋಮೆಂಟ್ ಪ್ಲಾನ್ ಮತ್ತು ಪಿಂಚಣಿ ಯೋಜನೆಗಳನ್ನು ಒದಗಿಸುವ ಭಾರತದ ಜೀವ ವಿಮಾ ನಿಗಮವು (ಎಲ್ಐಸಿ) ಮನಿ ಬ್ಯಾಕ್ ಇನ್ಸೂರೆನ್ಸ್ ಪಾಲಿಸಿಗಳನ್ನು ಕೂಡ ನೀಡುತ್ತದೆ.
ಎಲ್ಐಸಿ ನ್ಯೂ ಮನಿ ಬ್ಯಾಕ್ ಪಾಲಿಸಿ -20 ವರ್ಷ, ಈ ಯೋಜನೆಯನ್ನು ದೇಶದ ಅತಿದೊಡ್ಡ ಜೀವ ವಿಮೆದಾರ ಸಂಸ್ಥೆ ಎಲ್ಐಸಿ ಮಾರಾಟ ಮಾಡುವ ಮನಿ ಬ್ಯಾಕ್ ಯೋಜನೆಗಳಲ್ಲಿ ಒಂದಾಗಿದೆ. ಇದು ಯೋಜನೆಯ ಅವಧಿಯುದ್ದಕ್ಕೂ ಸಾವಿನ ವಿರುದ್ಧ ರಕ್ಷಣೆ ನೀಡುತ್ತದೆ.
ತೆರಿಗೆ ಪ್ರಯೋಜನ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಎಲ್ಐಸಿಯ ನ್ಯೂ ಮನಿ ಬ್ಯಾಕ್ ಪಾಲಿಸಿ-20 ವರ್ಷ ಯೋಜನೆಯಲ್ಲಿ ಪಾವತಿಸಲ್ಪಡುವ ಪ್ರೀಮಿಯಂ ಆದಾಯ ತೆರಿಗೆ ಪ್ರಯೋಜನಗಳಿಗೆ ಅರ್ಹತೆ ಪಡೆಯುತ್ತದೆ.
ಎಲ್ಐಸಿ ಪಾಲಿಸಿ
ನ್ಯೂ ಮನಿ ಬ್ಯಾಕ್ ಪಾಲಿಸಿ -20 ವರ್ಷಗಳಲ್ಲಿ ಎಲ್‌ಐಸಿ ನೀಡುವ ಪ್ರೀಮಿಯಂ, ಸಮ್ ಅಸ್ಯೂರ್ಡ್, ಮನಿ ಬ್ಯಾಕ್ ಮತ್ತು ಇತರ ಪ್ರಯೋಜನಗಳ ವಿವರ ಇಲ್ಲಿದೆ.
- 13 ವರ್ಷ ಮತ್ತು 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಎಲ್ಐಸಿ ನ್ಯೂ ಮನಿ ಬ್ಯಾಕ್ ಪ್ಲಾನ್ (ಮಿನಿಮಮ್ ಸಮ್ ಅಸ್ಯೂರ್ಡ್ ಮೊತ್ತ ರೂ. 1 ಲಕ್ಷ) ಖರೀದಿಸಬಹುದು. ಹಾಗು ಸಮ್ ಅಷೂರ್ಡ್ ಗೆ ಗರಿಷ್ಠ ಮಿತಿ ಇಲ್ಲ.
- ಎಲ್ಐಸಿ ನ್ಯೂ ಮನಿ ಬ್ಯಾಕ್ ಪ್ಲಾನ್ -20 ವರ್ಷ ಖರೀದಿಸಲು ಆಯ್ಕೆ ಮಾಡಿಕೊಂಡವರು ಪ್ರೀಮಿಯಂ ಅನ್ನು 15 ವರ್ಷಗಳಿಗೆ ಪಾವತಿಸಬೇಕು. ಪಾಲಿಸಿಯ ಮೆಚುರಿಟಿ ಅವಧಿಯು 20 ವರ್ಷಗಳು. ಮೆಚುರಿಟಿಯ ಗರಿಷ್ಠ ವಯಸ್ಸು 70 ವರ್ಷಗಳು.
- ಎಲ್‌ಐಸಿ ಪಾಲಿಸಿಯ ಮುಕ್ತಾಯದ ನಂತರ, ವ್ಯಕ್ತಿಯು ಬದುಕಿದ್ದರೆ, ಮೂಲ ಮೊತ್ತದ 40 ಪ್ರತಿಶತದಷ್ಟು ಬೋನಸ್‌ಗಳು ಮತ್ತು ಅಂತಿಮ ಹೆಚ್ಚುವರಿ ಬೋನಸ್‌ಗಳು ಯಾವುದಾದರೂ ಇದ್ದರೆ ಅದನ್ನು ಪಾಲಿಸಿದಾರರಿಗೆ ಪಾವತಿಸಲಾಗುವುದು.
- ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸತ್ತರೆ ಮತ್ತು ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ಮೂಲ ಮೊತ್ತದ 125 ಪ್ರತಿಶತದಷ್ಟು ಅಥವಾ ವಾರ್ಷಿಕ ಪ್ರೀಮಿಯಂನ 10 ಪಟ್ಟು ಮೊತ್ತ ಪಡೆಯುತ್ತಾರೆ.
ಪ್ರೀಮಿಯಂ ದರ ಪಾವತಿ
ಮಾದರಿ ಪ್ರೀಮಿಯಂ ದರಗಳನ್ನು 1,000 ಬೇಸಿಕ್ ಸಮ್ ಅಸ್ಯೂರ್ಡ್ ನೊಂದಿಗೆ ಕೆಳಗೆ ನೀಡಲಾಗಿದೆ.
ಪ್ರೀಮಿಯಂಗಳನ್ನು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಕಂತುಗಳಲ್ಲಿ ನಿಯಮಿತವಾಗಿ ಪಾವತಿಸಬಹುದು. ಗ್ರೇಸ್ ಅವಧಿಯೊಳಗೆ ಪ್ರೀಮಿಯಂಗಳನ್ನು ಪಾವತಿಸದಿದ್ದರೆ ಪಾಲಿಸಿಯು ಲ್ಯಾಪ್ಸ್ ಆಗುತ್ತದೆ.


Click it and Unblock the Notifications