ಅಗರಬತ್ತಿ ಬಿಸಿನೆಸ್ ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿರುವುದರಿಂದ ಯಾವುದೇ ಒಬ್ಬ ವ್ಯಕ್ತಿಯೂ ಅಗರಬತ್ತಿ-ಧೂಪದ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಭಾರತದಲ್ಲಿ ಅಗರಬತ್ತಿ, ಧೂಪಗಳಿಗೆ ಅತಿಹೆಚ್ಚು ಬೇಡಿಕೆ ಇದೆ.
ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಪೂಜೆ-ಪುರಸ್ಕಾರ, ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಧೂಪ, ಅಗರಬತ್ತಿಯನ್ನು ಬಳಸುತ್ತಾರೆ. ಎಲ್ಲರೂ ದೇವರ ಪೂಜೆಗೆ ಅಗತ್ಯವಾಗಿ ಅಗರಬತ್ತಿ, ಧೂಪ ಹಚ್ಚುತ್ತಾರೆ. ಮನೆ ಪರಿಸರವನ್ನು ಪವಿತ್ರಗೊಳಿಸಲು ಧೂಪದ್ರವ್ಯ ಸ್ಥಾನ ಪಡೆದಿದೆ.
ಅಗರಬತ್ತಿ ಬಿಸಿನೆಸ್ ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿರುವುದರಿಂದ ಯಾವುದೇ ಒಬ್ಬ ವ್ಯಕ್ತಿಯೂ ಅಗರಬತ್ತಿ-ಧೂಪದ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಭಾರತದಲ್ಲಿ ಅಗರಬತ್ತಿ, ಧೂಪಗಳಿಗೆ ಅತಿಹೆಚ್ಚು ಬೇಡಿಕೆ ಇರುವುದರಿಂದ ಭಾರೀ ಯಶಸ್ಸನ್ನು ಹೊಂದಬಹುದು. ಇದರ ಮಾರಾಟ ಕೂಡ ಸುಲಭ.
ಬಿಸಿನೆಸ್ ಬಜೆಟ್
ಭಾರತದಲ್ಲಿ ಅಗರಬತ್ತಿ ತಯಾರಿಕೆ ಯಂತ್ರದ ಬೆಲೆ ರೂ. 35,000 ರಿಂದ 175,000 ವರೆಗೆ ಇರುತ್ತದೆ. ಈ ಯಂತ್ರದ ಮೂಕ ನೀವು 1 ನಿಮಿಷದಲ್ಲಿ 150 ರಿಂದ 200 ಅಗರಬತ್ತಿಗಳನ್ನು ತಯಾರಿಸಬಹುದು. ಅಗರಬತ್ತಿ ವ್ಯವಹಾರವನ್ನು ಹೇಗೆ ಪ್ರಾರಂಭಿಸಬಹುದು ಮತ್ತು ನೀವು ಎಷ್ಟು ಪ್ರಯೋಜನ ಪಡೆಯುತ್ತೀರಿ ಎಂಬುದನ್ನು ತಿಳಿಯೋಣ ಬನ್ನಿ. ಮಶಿನ್ ಮೂಲಕ ಬಿಸಿನೆಸ್ ಆರಂಭಿಸಿದರೆ ನಿಮಗೆ 3-5 ಲಕ್ಷದವರೆಗೆ ಖರ್ಚು ಬರಬಹುದು. ಇದು ನೀವು ಖರೀದಿ ಮಾಡುವ ಮಶಿನ್, ಕಚ್ಚಾ ವಸ್ತುಗಳು ಹಾಗೂ ಬಾಡಿಗೆ, ಕೆಲಸಗಾರರ ಸಂಬಳವನ್ನು ಆಧರಿಸಿರುತ್ತದೆ.
ಅಗರಬತ್ತಿ ತಯಾರಿಸುವಿಕೆ
ಅಗರಬತ್ತಿಯನ್ನು ತಯಾರಿಸಲು ಹಲವು ರೀತಿಯ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಮಿಕ್ಸರ್ ಯಂತ್ರ, ಡ್ರೈಯರ್ ಯಂತ್ರ ಮತ್ತು ಮುಖ್ಯ ಉತ್ಪಾದನಾ ಯಂತ್ರಗಳು ಒಳಗೊಂಡಿವೆ. ಮಿಶ್ರಣ ಯಂತ್ರವು ಕಚ್ಛಾ ವಸ್ತು ಪೇಸ್ಟ್ ಮಾಡಲು ಮತ್ತು ಮುಖ್ಯ ಉತ್ಪಾದನಾ ಯಂತ್ರವನ್ನು ಬಿದಿರಿನ ಮೇಲೆ ಅಂಟು ಹಚ್ಚುವ ಕೆಲಸ ಮಾಡುತ್ತದೆ. ಅಟೋಮೆಟಿಕ್ ಅಗರಬತ್ತಿ ಮಶಿನ್ ಕೂಡ ಲಭ್ಯವಿದ್ದು, ಬಜೆಟ್ ಮೇಲೆ ನೀವು ಮಶಿನ್ ಖರೀದಿ ಮಾಡಬಹುದು. ಬಜೆಟ್ ಗೆ ಅನುಸಾರವಾಗಿ ಯಂತ್ರ ಪೂರೈಕೆದಾರರೊಂದಿಗೆ ವ್ಯವಹರಿಸಿ ಯಂತ್ರಗಳನ್ನು ಆಯ್ಕೆ ಮಾಡಿ ಮಶಿನ್ ಇನಸ್ಟಾಲೇಶನ್ ಮಾಡಿ. ಬಿಸಿನೆಸ್ ಆರಂಭಿಸುವ ಮುನ್ನ ಯಂತ್ರಗಳ ಬಳಕೆ ಮಾಡಲು ತರಬೇತಿ ಪಡೆಯುವುದು ಅಗತ್ಯವಾಗಿದೆ.
ಯಂತ್ರಗಳ ವೆಚ್ಚ
ಭಾರತದಲ್ಲಿ ಅಗರಬತ್ತಿ ತಯಾರು ಮಾಡುವ ಮಶಿನ್ ಬೆಲೆ ರೂ. 35,000 ರಿಂದ 175,000 ವರೆಗಿನ ಮೊತ್ತದ ಯಂತ್ರಗಳನ್ನು ಖರೀದಿಸಬಹುದು. ಇದಕ್ಕಿಂತ ಕಡಿಮೆ ವೆಚ್ಚದ ಯಂತ್ರದ ಮೂಲಕ ಉತ್ಪಾದನೆ ಕಡಿಮೆಯಾಗುತ್ತದೆ. ಅದರಿಂದ ನೀವು ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ನನ್ನ ಸಲಹೆಯು ನೀವು ಅಟೋಮೆಟಿಕ್ (ಸ್ವಯಂಚಾಲಿತ) ಯಂತ್ರದೊಂದಿಗೆ ಬಿಸಿನೆಸ್ ಆರಂಭಿಸಿದರೆ ಅಗರಬತ್ತಿ ಉತ್ಪಾದನೆ ವೇಗವಾಗಿರುತ್ತದೆ. ಅಲ್ಲದೇ ಲಾಭ ಕೂಡ ಹೆಚ್ಚಿರುತ್ತದೆ. ಸ್ವಯಂಚಾಲಿತ ಯಂತ್ರದ ಬೆಲೆ ರೂ. 90000 ರಿಂದ 175,000 ನಡುವೆ ಇದೆ.
ಅಗರಬತ್ತಿ ಕಚ್ಛಾ ಸಾಮಗ್ರಿಗಳ ಸರಬರಾಜು
ಯಂತ್ರ ಇನಸ್ಟಾಲ್ ಮಾಡಿದ ನಂತರ, ಕಚ್ಚಾ ವಸ್ತುಗಳ ಪೂರೈಕೆಗಾಗಿ ಮಾರುಕಟ್ಟೆಯ ಉತ್ತಮ ಸರಬರಾಜುದಾರರನ್ನು ಸಂಪರ್ಕಿಸಿ. ಉತ್ತಮ ಪೂರೈಕೆದಾರರ ಪಟ್ಟಿ ಪಡೆಯಲು ಈಗಾಗಲೇ ಅಗರಬತ್ತಿ ಉದ್ಯಮದಲ್ಲಿ ವ್ಯವಹಾರ ಹೊಂದಿರುವ ಜನರಿಂದ ನೀವು ಸಹಾಯ ಪಡೆಯಬಹುದು. ಕಚ್ಚಾ ಸಾಮಗ್ರಿಗಳನ್ನು ಯಾವಾಗಲೂ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಖರೀದಿಸಿ, ಏಕೆಂದರೆ ಅದರ ಕೆಲ ಭಾಗ ತ್ಯಾಜ್ಯಕ್ಕೆ ಹೋಗುತ್ತದೆ.
ಅಗರಬತ್ತಿ ತಯಾರಿಸುವ ಪದಾರ್ಥಗಳು
ಅಗರಬತ್ತಿ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ ಗಮ್ ಪುಡಿ, ಇದ್ದಿಲು ಪುಡಿ, ಬಿದಿರು, ನರ್ಗಿಸ್ ಪುಡಿ, ಸುಗಂಧ ತೈಲಗಳು, ನೀರು, ಸೆಂಟ್, ಹೂವಿನ ದಳಗಳು, ಶ್ರೀಗಂಧದ ಮರ, ಜೆಲಾಟಿನ್ ಕಾಗದ, ಶಾ ಧೂಳು, ಪ್ಯಾಕಿಂಗ್ ಸಾಮಗ್ರಿಗಳು ಇತ್ಯಾದಿ.
ಪ್ಯಾಕಿಂಗ್ & ಮಾರ್ಕೆಟಿಂಗ್
ನಿಮ್ಮ ಉತ್ಪನ್ನವು ನಿಮ್ಮ ವಿನ್ಯಾಸದ ಪ್ಯಾಕಿಂಗ್ ನಲ್ಲಿ ಮಾರಾಟವಾಗುತ್ತದೆ. ಪ್ಯಾಕಿಂಗ್ ಮಾಡಲು ಪ್ಯಾಕೇಜಿಂಗ್ ತಜ್ಞರನ್ನು ಸಂಪರ್ಕಿಸಿ, ನಿಮ್ಮ ಪ್ಯಾಕೇಜಿಂಗ್ ವಿನ್ಯಾಸವನ್ನು ಆಕರ್ಷಕವಾಗಿ ಮಾಡಿ. ಪ್ಯಾಕೇಜಿಂಗ್ ಮೂಲಕ ಜನರ ಧಾರ್ಮಿಕತಾ ಭಾವವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಅಗರಬತ್ತಿ ಮಾರಾಟಕ್ಕಾಗಿ ಟಿವಿ, ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಬಹುದು. ಇದಲ್ಲದೆ, ಕಂಪನಿಯ ಆನ್ಲೈನ್ ವೆಬ್ಸೈಟ್ ತಯಾರಿಸಿ ನಿಮ್ಮ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿ.
ಅಗರಬತ್ತಿ ಮಾಡಲು ಸಮಯ
ನೀವು ಬಳಸುವ ಯಂತ್ರಗಲ ಪ್ರಕಾರ, ಅಗರಬತ್ತಿ ತಯಾರಿಸುವ ಸಮಯ ವಿಭಿನ್ನವಾಗಿರಬಹುದು. ನೀವು ಅಟೋಮೆಟಿಕ್ ಯಂತ್ರವನ್ನು ಬಳಸುತ್ತಿದ್ದರೆ, ನಂತರ ನೀವು 1 ನಿಮಿಷದಲ್ಲಿ 150 ರಿಂದ 200 ಅಗರಬತ್ತಿಗಳನ್ನು ತಯಾರಿಸಬಹುದು. ಒಂದು ವೇಳೆ ನಿಮ್ಮ ಕೈಯಲ್ಲಿ ಉತ್ಪಾದಿಸುತ್ತಿದ್ದರೆ ಅದು ತೆಗೆದುಕೊಳ್ಳುವ ಸಮಯ ನಿಮ್ಮ ಅಥವಾ ನೌಕರರ ಕೆಲಸದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ಅಗರಬತ್ತಿ ಬಿಸಿನೆಸ್ ಆರಂಭಿಸಲು ತಗಲುವ ವೆಚ್ಚ
ಅಗರಬತ್ತಿ ವ್ಯಾಪಾರವನ್ನು ಮನೆಯಲ್ಲಿ ತಯಾರಿಸಲು ಬಯಸಿದ್ದರೆ ಕೇವಲ ರೂ. 13,000 ವೆಚ್ಚದಲ್ಲಿ ಆರಂಭಿಸಬಹುದು. ಆದರೆ ನೀವು ಅಗರಬತ್ತಿ ವ್ಯವಹಾರವನ್ನು ಮಶೀನ್ ಗಳ ಮೂಲಕ ಆರಂಭಿಸಲು ಬಯಸಿದರೆ ಸುಮಾರು 5 ಲಕ್ಷದವರೆಗೆ ವೆಚ್ಚವಾಗುತ್ತದೆ. ಬೇಕಾಗುವ ಕಚ್ಚಾ ವಸ್ತುಗಳು ಮತ್ತು ಅಂದಾಜು ವೆ್ಚ್ಚವನ್ನು ಇಲ್ಲಿ ವಿವರಿಸಲಾಗಿದೆ.
ಚಾರ್ಕೋಲ್ ಡಸ್ಟ್ 1 ಕೆ.ಜಿ. 13 ರೂಪಾಯಿ,
ಜಿಗಾತ್ ಪುಡಿ 1 ಕೆ.ಜಿ. 60
ಬಿಳಿ ಚಿಪ್ಸ್ ಪುಡಿ 1 ಕೆಜಿ 22 ರೂಪಾಯಿ
ಗಂಧದ ಪುಡಿ 1 ಕೆಜಿ 35 ರೂಪಾಯಿ
ಬಿದಿರು ಸ್ಟಿಕ್ 1 ಕೆಜಿ 116 ರೂಪಾಯಿ
ಸುಗಂಧ 1 ತುಂಡು 400 ರೂಪಾಯಿ
1 ಲೀಟರ್ ಅದ್ದು 135 ರೂಪಾಯಿ
ಪೇಪರ್ ಬಾಕ್ಸ್ 1 ಡಜನ್ 75 ರೂಪಾಯಿ
ಸುತ್ತುವ ಕಾಗದ 1 ಪ್ಯಾಕೆಟ್ 35 ರೂಪಾಯಿ ಮತ್ತು ಕುಪ್ಪಮ್ ಡಸ್ಟ್ 1 ಕಿಲೋ 85 ರೂಪಾಯಿ.
ಪ್ರತಿ ತಿಂಗಳ ಗಳಿಕೆ
ಅಟೋಮೆಟಿಕ್ ಯಂತ್ರದ ಮೂಲಕ ಪ್ರತಿ ದಿನಕ್ಕೆ 100 ಕಿ.ಗ್ರಾಂ ಅಗರಬತ್ತಿ ಉತ್ಪಾದಿಸಬಹುದು. ವರ್ಷಕ್ಕೆ ನೀವು 30 ಲಕ್ಷದಷ್ಟು ಬಿಸಿನೆಸ್ ಮಾಡುತತ್ತಿರಿ ಎಂದಾದರೆ ಶೇ. 10ರಷ್ಟು ಲಾಭದ ಜೊತೆ 3 ಲಕ್ಷ ರೂಪಾಯಿ ಗಳಿಕೆ ಮಾಡಬಹುದು. ಅಂದರೆ ಪ್ರತಿ ತಿಂಗಳು ರೂ. 25 ಸಾವಿರ ಆದಾಯ ಗಳಿಸಬಹುದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications