ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ 10 ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಸ್ವಂತ ಉದ್ಯಮ, ಸ್ಟಾರ್ಟ್ಅಪ್ ಆರಂಭಿಸಬೇಕು ಎಂಬ ಕನಸು ಕಾಣುವ ಜನರು ಹೆಚ್ಚಿದ್ದಾರೆ. ಅನೇಕ ಜನರು ಸ್ವಂತ ಮ್ಯಾನ್ಯುಪ್ಯಾಕ್ಚರಿಂಗ್ ಉದ್ಯಮವನ್ನು ಪ್ರಾರಂಭಿಸಲು ಉತ್ಸುಕರಾಗಿರುತ್ತಾರೆ.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಸ್ವಂತ ಉದ್ಯಮ, ಸ್ಟಾರ್ಟ್ಅಪ್ ಆರಂಭಿಸಬೇಕು ಎಂಬ ಕನಸು ಕಾಣುವ ಜನರು ಹೆಚ್ಚಿದ್ದಾರೆ. ಅನೇಕ ಜನರು ಸ್ವಂತ ಮ್ಯಾನ್ಯುಪ್ಯಾಕ್ಚರಿಂಗ್ ಉದ್ಯಮವನ್ನು ಪ್ರಾರಂಭಿಸಲು ಉತ್ಸುಕರಾಗಿರುತ್ತಾರೆ. ಅವರಲ್ಲೊಬ್ಬರು ನೀವಾಗಿದ್ದರೆ ಸಂತೋಷದ ವಿಷಯ. ನೀವು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಕೆಲ ಉದ್ಯಮಗಳ ಬಗ್ಗೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಸಣ್ಣ ತಯಾರಿಕಾ ಘಟಕವನ್ನು ಮನೆ ಅಥವಾ ಪುಟ್ಟ ಬಾಡಿಗೆ ಸ್ಥಳದಲ್ಲಿಯೇ ಪ್ರಾರಂಭಿಸಬಹುದು. ಒಂದು ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಉಪಕರಣ ಅಥವಾ ಉತ್ಪಾದನಾ ಯಂತ್ರಗಳ ವೆಚ್ಚ ತುಂಬಾ ಕಡಿಮೆ. ಇಂತಹ ಉದ್ಯಮಗಳು ಉತ್ತಮ ಆದಾಯವನ್ನು ನೀಡುತ್ತದೆಂದು ಹೇಳಲಾಗುತ್ತದೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ ಪ್ರಮುಖ ತಯಾರಿಕಾ ಉದ್ಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ..

ಐಸ್ ಕ್ರೀಂ ತಯಾರಿಕೆ

ಐಸ್ ಕ್ರೀಂ ತಯಾರಿಕೆ

ಐಸ್ ಕ್ರೀಂ ವಿವಿಧ ರುಚಿ,ಬಣ್ಣ ಮತ್ತು ರೂಪಗಳಲ್ಲಿ ದೊರೆಯುತ್ತದೆ.ಈ ವ್ಯಾಪಾರವನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದ ವ್ಯಾಪಾರಕ್ಕಾಗಿ,ನೀವು ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಸ್ಮಾರ್ಟ್ ಫೋನ್ ಬಿಡಿಭಾಗಗಳ ತಯಾರಿಕೆ

ಸ್ಮಾರ್ಟ್ ಫೋನ್ ಬಿಡಿಭಾಗಗಳ ತಯಾರಿಕೆ

ಮೊಬೈಲ್ ಫೋನ್ ಬಿಡಿಭಾಗಗಳಾದ ಇಯರ್ ಫೋನ್ಸ್,ಬ್ಲೂಟೂತ್ ಸಾಧನ,ಕೇಸಿಂಗ್,ಬ್ಯಾಟರಿ,ಬ್ಯಾಟರಿ ಚಾರ್ಜರ್ ಗಳು ಮತ್ತು ಪವರ್ ಬ್ಯಾಂಕುಗಳಿಗೆ ದೊಡ್ಡ ಮಾರುಕಟ್ಟೆ ಇದೆ.ನೀವು ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಉತ್ಪಾದಿಸಬಹುದಾದರೆ ಅದನ್ನು ರಫ್ತು ಕೂಡ ಮಾಡಬಹುದು.

ಕ್ಯಾಂಡಿ ತಯಾರಿಕೆ

ಕ್ಯಾಂಡಿ ತಯಾರಿಕೆ

ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡಬಹುದು.

ಬಿಸ್ಕತ್ತು ತಯಾರಿಕೆ

ಬಿಸ್ಕತ್ತು ತಯಾರಿಕೆ

ಬಿಸ್ಕತ್ತು ಇನ್ನೊಂದು ಲಾಭದಾಯಕ ಉದ್ಯಮವಾಗಿದೆ.ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸಬಹುದು.

ಜವಳಿ ಉತ್ಪಾದಕ

ಜವಳಿ ಉತ್ಪಾದಕ

ಪ್ರಮುಖ ಉತ್ಪಾದನಾ ವ್ಯಾಪಾರಗಳಲ್ಲಿ ಜವಳಿ ಉತ್ಪಾದನೆ ಯಶಸ್ವಿ ವ್ಯಾಪಾರವಾಗಿದೆ. ನೀವು ಕಚ್ಚಾ ಬಟ್ಟೆ ಅಥವಾ ಇತರೆ ಜವಳಿ ಉತ್ಪನ್ನಗಳನ್ನು ವ್ಯಕ್ತಿ ಅಥವಾ ಉದ್ಯಮಕ್ಕೆ ಮಾರಾಟ ಮಾಡಲು ಉತ್ಪಾದಿಸಬಹುದು. ಇದು ಹೆಚ್ಚು ಬಂಡವಾಳ ಬೇಡುವ ವ್ಯಾಪಾರ. ಈ ಉದ್ಯಮಕ್ಕೆ ಸಾಕಷ್ಟು ಸ್ಥಳಾವಕಾಶ ಮತ್ತು ಯಂತ್ರಗಳು ಬೇಕಾಗುತ್ತದೆ. ಇದರೊಂದಿಗೆ, ಈ ವ್ಯಾಪಾರವನ್ನು ಆರಂಭಿಸುವ ಮುನ್ನ ನೀವು ಮಾರುಕಟ್ಟೆಯನ್ನು ಸರಿಯಾಗಿ ಅಂದಾಜಿಸಿ ಮುನ್ನಡೆಯಬೇಕು.

ಕಾಗದ ತಯಾರಿಕೆ

ಕಾಗದ ತಯಾರಿಕೆ

ಕಾಗದ ತಯಾರಿಕೆ ಇನ್ನೊಂದು ಉದ್ಯಮವಾಗಿದೆ. ಕಾಗದಗಳು ಮತ್ತು ಸ್ಟೇಷನರಿ ವಸ್ತುಗಳು ಶಿಕ್ಷಣ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಯಾವಾಗಲೂ ಬೇಡಿಕೆಯಲ್ಲಿರುತ್ತದೆ.ಕಾಗದ ತಯಾರಿಕಾ ಉದ್ಯಮವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ.

ಪೀಠೋಪಕರಣಗಳ ತಯಾರಿಕೆ

ಪೀಠೋಪಕರಣಗಳ ತಯಾರಿಕೆ

ಪೀಠೋಪಕರಣಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದವೆ.ಕಚೇರಿ,ಮನೆ,ಶಾಲೆ ಅಥವಾ ಯಾವುದೇ ಉದ್ಯಮಕ್ಕೆ ಕುರ್ಚಿ,ಮೇಜು,ಕಬೋರ್ಡ್, ಹಾಸಿಗೆ,ವಾರ್ಡ್ ರೋಬ್ ಮುಂತಾದ ಪೀಠೋಪಕರಣಗಳ ಅಗತ್ಯವಿರುತ್ತದೆ.ನೀವು ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸಲು ಬಯಸುವವರಾದರೆ,ಪೀಠೋಪಕರಣಗಳ ತಯಾರಿಕಾ ವ್ಯಾಪಾರವು ನಿಮಗೆ ಹೇಳಿ ಮಾಡಿಸಿದ್ದು.ಈ ವ್ಯಾಪಾರವನ್ನು ಆರಂಭಿಸಲು ಕುಶಲ ಕೆಲಸಗಾರರು ಬೇಕಾಗುತ್ತಾರೆ.

ಆಭರಣ ತಯಾರಿಕೆ

ಆಭರಣ ತಯಾರಿಕೆ

ಆಭರಣ ತಯಾರಿಕೆಯು ಅಧಿಕ ಬಂಡವಾಳದ ಉದ್ಯಮವಾಗಿದೆ.ಈ ವ್ಯಾಪಾರಕ್ಕೆ ಆಭರಣಗಳ ನಮೂನೆಯ ಆಧಾರದ ಮೇಲೆ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ.ನೀವು ಚಿನ್ನ ಅಥವಾ ವಜ್ರದ ಆಭರಣಗಳನ್ನು ತಯಾರಿಸಲು ಹೊರಟಿದ್ದರೆ,ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಆಟಿಕೆ ತಯಾರಿಕೆ

ಆಟಿಕೆ ತಯಾರಿಕೆ

ಆಟಿಕೆ ತಯಾರಿಕೆ ಉದ್ಯಮ ಒಂದು ಲಾಭದಾಯಕ ಬಿಸಿನೆಸ್ ಆಗಿದೆ. ವಿವಿಧ ರೂಪ, ಗಾತ್ರ ಮತ್ತು ಬಣ್ಣಗಳಲ್ಲಿ ಆಟಿಕೆಗಳಿರುತ್ತವೆ. ಆಟಿಕೆಗಳೂ ಸಹ ಸ್ವಭಾವದಲ್ಲಿ ಗ್ರಾಹಕೀಯವಾಗಿವೆ.ನೀವು ಈ ವ್ಯಾಪಾರವನ್ನು ಕಡಿಮೆ ಮಟ್ಟದಲ್ಲಿ ಆರಂಭಿಸಿ,ನಂತರದ ಹಂತಗಳಲ್ಲಿ ವಿಸ್ತರಿಸಬಹುದು.

ಮೇಕಪ್ ಉತ್ಪನ್ನಗಳ ಉತ್ಪಾದನೆ

ಮೇಕಪ್ ಉತ್ಪನ್ನಗಳ ಉತ್ಪಾದನೆ

ಮಹಿಳೆಯರು ಮೇಕಪ್ ಪ್ರಿಯರು. ಅವರು ಪ್ರತಿ ಸಂದರ್ಭದಲ್ಲೂ ಮೇಕಪ್ ಗಾಗಿ ಬಹಳ ಹಣ ಖರ್ಚು ಮಾಡುತ್ತಾರೆ.ಇದರಿಂದ ಸ್ಪೂರ್ತಿ ಪಡೆದು ಮೇಕಪ್ ಉತ್ಪನ್ನಗಳ ಉತ್ಪಾದನೆಯ ಉದ್ಯಮವನ್ನು ಆರಂಭಿಸುವ ಬಗ್ಗೆ ನೀವು ಯೋಚಿಸಬಹುದು.

ಕೊನೆ ಮಾತು

ಕೊನೆ ಮಾತು

ಇಲ್ಲಿವಿವರಿಸಲಾಗಿರುವ ಪ್ರಮುಖ ಉತ್ಪಾದನಾ ಉದ್ಯಮಗಳು ನಿಮಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸ್ಪೂರ್ತಿಯಾಗುತ್ತವೆ ಎಂದು ಆಶಿಸುತ್ತೇನೆ. ನಿಮ್ಮ ಸ್ವಂತ ಸಣ್ಣ ಉತ್ಪಾದನಾ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ನಿಮ್ಮ ಕೌಶಲ, ಅನುಭವ ಮತ್ತು ತಿಳುವಳಿಕೆಯ ಆಧಾರದ ಮೇಲೆ ವಿಶ್ಲೇಷಿಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಅಥವಾ ನಿಮ್ಮ ಬಳಿ ಬೆಸ್ಟ್ ಬಿಸಿನೆಸ್ ಐಡಿಯಾಗಳಿದ್ದರೆ ಕಾಮೆಂಟ್ ವಿಭಾಗದಲ್ಲಿ ನಮಗೆ ಬರೆಯಿರಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+