ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸುವುದು ಹೊಸ ಟ್ರೆಂಡ್. ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಆದಾಯಕ್ಕಾಗಿ ಜನರು ಯೋಜಿಸುತ್ತಿರುತ್ತಾರೆ.
ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸುವುದು ಹೊಸ ಟ್ರೆಂಡ್. ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಆದಾಯಕ್ಕಾಗಿ ಜನರು ಯೋಜಿಸುತ್ತಿರುತ್ತಾರೆ. ನೀವು ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬಿಸಿನೆಸ್ ಬಗ್ಗೆ ಆಲೋಚಿಸುತ್ತಿದ್ದರೆ ಈ ಐಡಿಯಾ ಬೆಸ್ಟ್. ಕಡಿಮೆ ಬಂಡವಾಳದಲ್ಲಿ ಕೈ ತುಂಬಾ ಹಣ ಗಳಿಸಲು ಬಯಸಿದ್ದರೆ ಮೊಲ ಸಾಕಾಣಿಕೆ (Rabbit Farming) ಆರಂಭಿಸಿ.
4 ಲಕ್ಷ ಬಂಡವಾಳ
ಮೊಲ ಸಾಕಾಣಿಕೆ ವ್ಯವಹಾರವನ್ನು ಯುನಿಟ್ಗಳಾಗಿ ವಿಂಗಡಿಸಲಾಗಿದೆ. ಒಂದು ಯೂನಿಟ್ ನಲ್ಲಿ ಏಳು ಹೆಣ್ಣು ಮತ್ತು ಮೂರು ಗಂಡು ಮೊಲಗಳನ್ನು ಇಟ್ಟುಕೊಳ್ಳಬೇಕು. ಕೃಷಿಗಾಗಿ ಆರಂಭಿಕ ಹಂತದ 10 ಯೂನಿಟ್ಗಳನ್ನು ಇಡಲಾಗಿದೆ ಎಂದು ಭಾವಿಸಿದರೆ, ಇದರ ಬೆಲೆ ಸುಮಾರು 4 ಲಕ್ಷದಿಂದ 4.50 ಲಕ್ಷ ರೂಪಾಯಿಗಳು ಆಗಬಹುದು. ಇದರಲ್ಲಿ ಶೆಡ್ ಗಾಗಿ ಸರಿಸುಮಾರು 1 ರಿಂದ 1.50 ಲಕ್ಷ, ಮೇವು ಮತ್ತು ಪಂಜರಗಳಿಗಾಗಿ 1-1.25 ಲಕ್ಷ, ಹೀಗೆ ಸುಮಾರು ಎರಡು ಲಕ್ಷ ಖರ್ಚು ಬರುತ್ತದೆ.
ವಾರ್ಷಿಕ 8 ಲಕ್ಷದವರೆಗೆ ಗಳಿಕೆ
ಸುಮಾರು 4 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೊಲ ಸಾಕಾಣಿಕೆ ಕೃಷಿ ಆರಂಭಿಸಬಹುದು. ಮಾರುಕಟ್ಟೆಯಲ್ಲಿ ಮೊಲದ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಜೊತೆಗೆ ಒಳ್ಳೆಯ ಬೆಲೆಯಿದೆ. ಹಾಗಾಗಿ ಮೊಲ ಸಾಕಣಿಕಾ ಕೃಷಿ ಬಹಳ ಉತ್ತಮ ಆಯ್ಕೆಯಾಗಬಲ್ಲದು. ಈ ಬಿಸಿನೆಸ್ ನಲ್ಲಿ ವಾರ್ಷಿಕ 8 ಲಕ್ಷದವರೆಗೆ ಆದಾಯ ಗಳಿಸಬಹುದು. ಮೊಲದ ಮಾಂಸ ಹಾಗೂ ಕೂದಲಿಗೆ ಹೆಚ್ಚಿನ ಬೇಡಿಕೆಯಿದೆ.
ಸಂತಾನೋತ್ಪತ್ತಿ
ಗಂಡು ಮತ್ತು ಹೆಣ್ಣು ಮೊಲಗಳು ಸುಮಾರು 6 ತಿಂಗಳ ನಂತರ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತವೆ. ಒಂದು ಹೆಣ್ಣು ಮೊಲವು ಒಮ್ಮೆ 6 ರಿಂದ 7 ಮರಿಗಳಿಗೆ ಜನ್ಮ ನೀಡುತ್ತದೆ. ಹೆಣ್ಣು ಮೊಲದ ಗರ್ಭಧಾರಣೆಯ ಅವಧಿ 30 ದಿನಗಳು ಮತ್ತು ಮುಂದಿನ 45 ದಿನಗಳಲ್ಲಿ ಮೊಲ ಸುಮಾರು 2 ಕೆಜಿ ತೂಕದ ನಂತರ ಮಾರಾಟ ಮಾಡಲು ಸಿದ್ಧವಾಗುತ್ತದೆ. ಹೆಣ್ಣು ಮೊಲವು ಮಕ್ಕಳಿಗೆ ವರ್ಷಕ್ಕೆ ಕನಿಷ್ಠ 7 ಬಾರಿ ನೀಡುತ್ತದೆ.
ಗಳಿಕೆ ಹೇಗೆ?
ಹತ್ತು ಯೂನಿಟ್ ಮೂಲಕ ತಯಾರಾದ ಮೊಲದ ಮರಿಗಳನ್ನು ೪೫ ದಿನಗಳ ನಂತರ ಮಾರಾಟ ಮಾಡಿದರೆ ಸುಮಾರು ೨ ಲಕ್ಷದವರೆಗೆ ಆದಾಯ ಬರುತ್ತದೆ. ಇದಕ್ಕಾಗಿ 6 ತಿಂಗಳು ಕಾಯುವ ಅಗತ್ಯವಿಲ್ಲ. ಮೊಲಗಳನ್ನು ಫಾರ್ಮ್ ಬ್ರೀಡಿಂಗ್, ಮಾಂಸ ಮತ್ತು ಉಣ್ಣೆ ವ್ಯಾಪಾರಕ್ಕಾಗಿ ಮಾರಲಾಗುತ್ತದೆ.
ಆದರೆ ಮರಣ, ಕಾಯಿಲೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು, ಏಳರ ಬದಲಾಗಿ ಸರಾಸರಿ 5 ಗರ್ಭಧಾರಣೆಯ ಅವಧಿಯನ್ನು ಪರಿಗಣಿಸಿ ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿಗಳ ಮೊಲಗಳನ್ನು ಮಾರಾಟ ಮಾಡಬಹುದು. ಇದರಲ್ಲಿ ಆಹಾರದ ವೆಚ್ಚವು 2 ರಿಂದ 3 ಲಕ್ಷವರೆಗೆ ಇರುವುದರಿಂದ 7 ಲಕ್ಷ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಬಹುದು. ವರ್ಷದ ಆರಂಭದಲ್ಲಿ ಒಟ್ಟು 4.50 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೂ ಸಹ 3 ಲಕ್ಷ ರೂಪಾಯಿಗಳ ಆದಾಯವಿದೆ.
ಫ್ರಾಂಚೈಸಿಗಳೊಂದಿಗೆ ವ್ಯವಹಾರ
ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದಿದ್ದರೆ ದೊಡ್ಡ ದೊಡ್ಡ ಫಾರ್ಮ್ ಗಳಿಂದ ಫ್ರಾಂಚೈಸಿಗಳನ್ನು ತೆಗೆದುಕೊಳ್ಳುವ ಅವಕಾಶವಿದೆ. ಈ ಮೂಲಕ ಮೊಲ ಸಂತಾನೋತ್ಪತ್ತಿಯಿಂದ ಹಿಡಿದು ಮಾರ್ಕೆಟಿಂಗ್‌ವರೆಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುವುದು.
Read more: Business Ideas


Click it and Unblock the Notifications