ಕೇವಲ 2 ಲಕ್ಷ ಬಂಡವಾಳದಲ್ಲಿ ಈ 5 ಬಿಸಿನೆಸ್ ಆರಂಭಿಸಿ ಲಕ್ಷ ಲಕ್ಷ ಆದಾಯ ಗಳಿಸಿ..

ಪ್ರತಿಯೊಬ್ಬರೂ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಾರೆ. ಆದರೆ ಬಂಡವಾಳದ ಕೊರತೆಯಿಂದಾಗಿ ಸ್ವಂತ ಉದ್ಯಮದ ಕನಸನ್ನು ಅರ್ಧಕ್ಕೆ ಕೈಬಿಡುತ್ತಾರೆ.

ಪ್ರತಿಯೊಬ್ಬರೂ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಾರೆ. ಆದರೆ ಬಂಡವಾಳದ ಕೊರತೆಯಿಂದಾಗಿ ಸ್ವಂತ ಉದ್ಯಮದ ಕನಸನ್ನು ಅರ್ಧಕ್ಕೆ ಕೈಬಿಡುತ್ತಾರೆ. ಯಾವ ತರದ ವ್ಯವಹಾರವನ್ನು ಪ್ರಾರಂಭಿಸಬೇಕು, ಯಾವುದನ್ನು ಕಡಿಮೆ ಬಂಡವಾಳದಲ್ಲಿ ನಡೆಸಬಹುದು ಎಂಬುದನ್ನು ಕೂಡ ತಿಳಿಯಲು ಹೋಗುವುದಿಲ್ಲ. ಕಡಿಮೆ ಬಂಡವಾಳದಲ್ಲಿ ಉದ್ಯಮ ಮಾಡಬಹುದು ಎಂದು ನಿಮಗೆ ಗೊತ್ತಾದರೆ, ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದಾದ ಬಿಸಿನೆಸ್ ಯಾವುದೆಂದು ತಿಳಿದುಕೊಳ್ಳಲು ಬಯಸುವಿರಿ. ನಾವು ಕೂಡ ಇಲ್ಲಿ ಅಂತಹ 5 ಪ್ರಮುಖ ಉದ್ಯಮಗಳ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ಈ ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಬಳಿ ರೂ. 2 ಲಕ್ಷದವರೆಗೆ ಬಂಡವಾಳ ಇದ್ದರೆ ಸಾಕು. ಹಾಗಿದ್ದರೆ ಬನ್ನಿ ನೋಡೋಣ..

ಆಯುರ್ವೇದ ಘಟಕ

ಆಯುರ್ವೇದ ಘಟಕ

ನಿಮಗೆ ಆಯುರ್ವೇದದಲ್ಲಿ ಆಸಕ್ತಿ ಇದ್ದು, ಕ್ಯಾಪ್ಸುಲ್ ತಯಾರಿಕೆಯ ಘಟಕವನ್ನು ಪ್ರಾರಂಭಿಸಲು ಬಯಸುವಿರಾದರೆ, ನೀವು ಆಯುರ್ವೇದ ಘಟಕವನ್ನು ಸುಮಾರು 1.10 ಲಕ್ಷ ರೂಪಾಯಿ ಬಂಡವಾಳದಲ್ಲಿ ಪ್ರಾರಂಭಿಸಬಹುದು. ಈ ಪ್ರಾಜೆಕ್ಟ್ ನ ಒಟ್ಟು ವೆಚ್ಚ 4.47 ಲಕ್ಷ ರೂಪಾಯಿಗಳವರೆಗೆ ಆಗಬಹುದು. ಈ ವೆಚ್ಚದಿಂದ ನೀವು 20 ಲಕ್ಷ ಕ್ಯಾಪ್ಸುಲ್ ಗಳನ್ನು ತಯಾರಿಸಬಹುದು.
ಯೋಜನೆಯ ವೆಚ್ಚ: ಶೆಡ್ ಶುಲ್ಕ, ಉಪಕರಣಗಳು ಮತ್ತು ಒಂದು ತಿಂಗಳ ಕೆಲಸದ ಬಂಡವಾಳವನ್ನು ಒಳಗೊಂಡಿವೆ. ಈ ಯೋಜನೆಯ ವರದಿಯನ್ನು ಆಧರಿಸಿ ಪ್ರಧಾನಿ ಉದ್ಯೋಗ ಯೋಜನೆಯಡಿ ಸಾಲ ಪಡೆಯಬಹುದು.

ಟೊಮೆಟೊ ಸಾಸ್ ಘಟಕ

ಟೊಮೆಟೊ ಸಾಸ್ ಘಟಕ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಾಜೆಕ್ಟ್ ಪ್ರೊಫೈಲ್ ಪ್ರಕಾರ, ನೀವು ಟೊಮೆಟೊ ಸಾಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಯಸಿದರೆ ನಿಮ್ಮ ಬಳಿ ಸುಮಾರು 1.95 ಲಕ್ಷ ಬಂಡವಾಳ ಇದ್ದರೆ ಸಾಕು. ನೀವು ರೂ. 1.50 ಲಕ್ಷ ವಹಿವಾಟು ಸಾಲ ಮತ್ತು ಸುಮಾರು 4.36 ಲಕ್ಷ ರೂಪಾಯಿ ವರ್ಕಿಂಗ್ ಕ್ಯಾಪಿಟಲ್ ಸಾಲವನ್ನು ತೆಗೆದುಕೊಳ್ಳಬಹುದು. ವರದಿಯ ಪ್ರಕಾರ, ನೀವು ವರ್ಷಕ್ಕೆ ಸುಮಾರು 30 ಸಾವಿರ ಕಿಲೋಗ್ರಾಂಗಳಷ್ಟು ಟೊಮೆಟೊ ಸಾಸ್ ತಯಾರಿಸಬಹುದು.
ಇದರಲ್ಲಿ ವಾರ್ಷಿಕ ಉತ್ಪಾದನಾ ವೆಚ್ಚವಾಗಿ ನಿಮಗೆ ಅಂದಾಜು ರೂ. 24.37 ಲಕ್ಷ ತಗಲಬಹುದು. ಆದರೆ ನೀವು ಈ 30 ಸಾವಿರ ಕೆಜಿ ಸಾಸ್ ಅನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ. 95 ದರದಲ್ಲಿ ಮಾರಾಟ ಮಾಡಿದರೆ ನಿಮ್ಮ ವಾರ್ಷಿಕ ವಹಿವಾಟು ರೂ. 28.50 ಲಕ್ಷ. ಅಂದರೆ, ನೀವು ಸುಮಾರು 4.12 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿರುತ್ತೀರಿ.

ಅಕ್ಕಿ ಮತ್ತು ಸಾಂಬಾರ ಪೌಡರ್ ಘಟಕ

ಅಕ್ಕಿ ಮತ್ತು ಸಾಂಬಾರ ಪೌಡರ್ ಘಟಕ

ನೀವು ಅಕ್ಕಿ ಮತ್ತು ಸಾಂಬಾರ ಪೌಡರ್ ಉತ್ಪಾದನಾ ಘಟಕವನ್ನು ಆರಂಭಿಸಲು ಬಯಸಿದರೆ, ನೀವು ಸುಮಾರು ರೂ. 6.55 ಲಕ್ಷ ಯೋಜನಾ ವೆಚ್ಚದಲ್ಲಿ ಈ ಘಟಕವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮ್ಮ ಬಳಿ ಅಂದಾಜು ರೂ. 1.66 ಲಕ್ಷ ಬಂಡವಾಳ ಹೊಂದಿರಬೇಕಾಗುತ್ತದೆ. ಆದರೆ ನೀವು ರೂ. 3.32 ಲಕ್ಷ ಟರ್ಮ್ ಸಾಲ ಮತ್ತು 1.66 ಲಕ್ಷ ರೂಪಾಯಿಗಳ ವರ್ಕಿಂಗ್ ಕ್ಯಾಪಿಟಲ್ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುದ್ರಾ ಯೋಜನೆಯಡಿ ನೀವು ಯಾವುದೇ ಬ್ಯಾಂಕ್‌ನಿಂದ ಈ ಸಾಲವನ್ನು ಪಡೆಯಬಹುದು.

ಅಗರಬತ್ತಿ ತಯಾರಿಕೆ

ಅಗರಬತ್ತಿ ತಯಾರಿಕೆ

ಅಗರಬತ್ತಿ ಬಿಸಿನೆಸ್ ಸುಮಾರು 2 ಲಕ್ಷ ಬಂಡವಾಳದಲ್ಲಿ ನಡೆಸಬಹುದಾಗಿರುವುದರಿಂದ ಯಾವುದೇ ಒಬ್ಬ ವ್ಯಕ್ತಿಯೂ ಅಗರಬತ್ತಿ-ಧೂಪದ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಭಾರತದಲ್ಲಿ ಅಗರಬತ್ತಿ, ಧೂಪಗಳಿಗೆ ಅತಿಹೆಚ್ಚು ಬೇಡಿಕೆ ಇರುವುದರಿಂದ ಭಾರೀ ಯಶಸ್ಸನ್ನು ಹೊಂದಬಹುದು. ಇದರ ಮಾರಾಟ ಕೂಡ ಸುಲಭ.ಬಿಸಿನೆಸ್ ಬಜೆಟ್ ಭಾರತದಲ್ಲಿ ಅಗರಬತ್ತಿ ತಯಾರಿಕೆ ಯಂತ್ರದ ಬೆಲೆ ರೂ. 35,000 ರಿಂದ 175,000 ವರೆಗೆ ಇರುತ್ತದೆ. ಈ ಯಂತ್ರದ ಮೂಕ ನೀವು 1 ನಿಮಿಷದಲ್ಲಿ 150 ರಿಂದ 200 ಅಗರಬತ್ತಿಗಳನ್ನು ತಯಾರಿಸಬಹುದು. ಅಗರಬತ್ತಿ ವ್ಯವಹಾರವನ್ನು ಹೇಗೆ ಪ್ರಾರಂಭಿಸಬಹುದು.
ಯಂತ್ರಗಳ ವೆಚ್ಚ
ಭಾರತದಲ್ಲಿ ಅಗರಬತ್ತಿ ತಯಾರು ಮಾಡುವ ಮಶಿನ್ ಬೆಲೆ ರೂ. 35,000 ರಿಂದ 175,000 ವರೆಗಿನ ಮೊತ್ತದ ಯಂತ್ರಗಳನ್ನು ಖರೀದಿಸಬಹುದು. ಇದಕ್ಕಿಂತ ಕಡಿಮೆ ವೆಚ್ಚದ ಯಂತ್ರದ ಮೂಲಕ ಉತ್ಪಾದನೆ ಕಡಿಮೆಯಾಗುತ್ತದೆ. ಅದರಿಂದ ನೀವು ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ನನ್ನ ಸಲಹೆಯು ನೀವು ಅಟೋಮೆಟಿಕ್ (ಸ್ವಯಂಚಾಲಿತ) ಯಂತ್ರದೊಂದಿಗೆ ಬಿಸಿನೆಸ್ ಆರಂಭಿಸಿದರೆ ಅಗರಬತ್ತಿ ಉತ್ಪಾದನೆ ವೇಗವಾಗಿರುತ್ತದೆ. ಅಲ್ಲದೇ ಲಾಭ ಕೂಡ ಹೆಚ್ಚಿರುತ್ತದೆ. ಸ್ವಯಂಚಾಲಿತ ಯಂತ್ರದ ಬೆಲೆ ರೂ. 90000 ರಿಂದ 175,000 ನಡುವೆ ಇದೆ. 

ಬಾಳೆಕಾಯಿ ಚಿಪ್ಸ್ ತಯಾರಿಕೆ

ಬಾಳೆಕಾಯಿ ಚಿಪ್ಸ್ ತಯಾರಿಕೆ

ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ತಿಂಗಳಿಗೆ ಲಕ್ಷದವರೆಗೆ ಸಂಪಾದನೆ ಮಾಡಲು ಬಯಸುವವರು ಬಾಳೆಕಾಯಿ ಚಿಪ್ಸ್ ವ್ಯಾಪಾರ ಶುರು ಮಾಡಬಹುದು. ಚಿಪ್ಸ್, ಸ್ಪೈಸಿ ಮಸಾಲೆ ಪದಾರ್ಥಗಳನ್ನು ತಿನ್ನುವವರ ಸಂಖ್ಯೆ ಹೇರಳವಾಗಿದೆ. ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೂ ಒಳ್ಳೆಯದು. ಸಣ್ಣ ಪ್ರಮಾಣದಲ್ಲಿ ಬಾಳೆ ಕಾಯಿ ಚಿಪ್ಸ್ ಉದ್ಯಮ ಆರಂಭಿಸಲು ಬಯಸುತ್ತಿರಾದರೆ ಹೆಚ್ಚು ಉಪಕರಣಗಳ ಅಗತ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಕೈ ಹಾಕುವವರು ಬಾಳೆ ಕಾಯಿ ತೊಳೆಯುವ ಯಂತ್ರ, ಸಿಪ್ಪೆ ತೆಗೆಯುವ ಯಂತ್ರ, ಕತ್ತರಿಸುವ ಯಂತ್ರ, ಬೇಯಿಸುವ ಯಂತ್ರ ಹಾಗೂ ಮಸಾಲೆ ಮಿಶ್ರಣ ಮಾಡುವ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. ಈ ಯಂತ್ರಗಳನ್ನು ನೀವು https://www.indiamart.com/ ಅಥವಾ https://india.alibaba.com/index.html ನಲ್ಲಿ ಖರೀದಿ ಮಾಡಬಹುದು.
ಅಗತ್ಯ ಸಾಮಾಗ್ರಿಗಳು, ಬಂಡವಾಳ
ಬಾಳೆಕಾಯಿ, ಎಣ್ಣೆ, ಉಪ್ಪು, ಫ್ಲೇವರ್ & ಸ್ಪೈಸಸ್, ಪ್ಯಾಕೇಜಿಂಗ್ ಮೆಟೀರಿಯಲ್ ಇತ್ಯಾದಿ ಕಚ್ಚಾ ಸಾಮಾಗ್ರಗಳು ಬೇಕಾಗುತ್ತವೆ. ಬಾಳೆ ಕಾಯಿ ಚಿಪ್ಸ್ ಉದ್ಯಮ ಆರಂಭಿಸಲು ಸ್ವಲ್ಪ ಜಾಗದ ಅಗತ್ಯವಿರುತ್ತದೆ. ನೀವು 50 ಕೆ.ಜಿ. ಚಿಪ್ಸ್ ತಯಾರಿಸಲು ಬಯಸಿದರೆ 120 ಕೆ.ಜಿ. ಬಾಳೆಕಾಯಿ ಬೇಕಾಗುತ್ತದೆ. ಇದು ರೂ. 1000 ವರೆಗೆ ಖರೀದಿಸಬಹುದು. ಇದಕ್ಕೆ 12 ರಿಂದ 15 ಲೀಟರ್ ಎಣ್ಣೆ ಬೇಕು. ಪ್ರತಿ ಲೀಟರ್ ಗೆ ರೂ. 70 ರಂತೆ ಲೆಕ್ಕ ಮಾಡಿದರೆ ರೂ. 1050 ಖರ್ಚು ಬರುತ್ತದೆ. ಚಿಪ್ಸ್ ಯಂತ್ರಗಳ ಖರೀದಿಗೆ ರೂ. 28 ಸಾವಿರದಿಂದ 50 ಸಾವಿರವರೆಗೆ ಖರ್ಚು ಬರಬಹುದು. ಚಿಪ್ಸ್ ಬೇಯಿಸುವ ಯಂತ್ರಕ್ಕೆ 1 ತಾಸಿಗೆ 10 -11 ಲೀಟರ್ ಡಿಸೇಲ್ ಹಾಕಬೇಕಾಗುತ್ತದೆ. ಇದಕ್ಕಾಗಿ ಸರಾಸರಿ ಒಂದು ಸಾವಿರ ರೂಪಾಯಿ ಬೇಕಾಗುತ್ತದೆ. ಉಪ್ಪು ಮಸಾಲೆಗೆ ರೂ. 150 ರೂಪಾಯಿ ಖರ್ಚಾಗುತ್ತದೆ. 50 ಕೆ.ಜಿ. ಚಿಪ್ಸ್ ಸರಾಸರಿ 3200-3500 ರೂಪಾಯಿಗೆ ಸಿದ್ಧವಾಗುತ್ತದೆ. ಪ್ಯಾಕಿಂಗ್ ವೆಚ್ಚ ಸೇರಿ ನಿಮಗೆ ಒಂದು ಕೆ.ಜಿ. ಪ್ಯಾಕೆಟ್ ಚಿಪ್ಸ್ ಗೆ 70 ರೂಪಾಯಿ ಖರ್ಚಾಗಬಹುದು. ಅದನ್ನು ನೀವು 90-100 ರೂಪಾಯಿಗೆ ಮಾರಾಟ ಮಾಡಬಹುದು.

ಸಾಲ ಪಡೆಯಲು ಅವಕಾಶ

ಸಾಲ ಪಡೆಯಲು ಅವಕಾಶ

ವಿಶೇಷವೆಂದರೆ, ನಾವು ಇಲ್ಲಿ ಹೇಳಿರುವ ಉದ್ಯಮವನ್ನು ಪ್ರಾರಂಭಿಸಲು ನಿಮ್ಮ ಬಳಿ ಸಾಕಷ್ಟು ಬಂಡವಾಳ ಇಲ್ಲದೇ ಹೋದರೆ ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದು. ಜೊತೆಗೆ ಸರ್ಕಾರದ ಇತರೆ ಯೋಜನೆಗಳಿಂದ ಸಾಲ ಪಡೆಯಬಹುದು. ನಿಮ್ಮ ಬಳಿ 2 ಲಕ್ಷ ಬಂಡವಾಳ ಇದ್ದರೆ, ನೀವು ಮುದ್ರಾ ಯೋಜನೆಯಡಿ ಸಾಲ ಪಡೆದು ಈ ಉದ್ಯಮಗಳನ್ನು ಪ್ರಾರಂಭಿಸಬಹುದು. ಈ ವ್ಯವಹಾರಗಳಿಗೆ ಉತ್ಮವಾದ ಪ್ರಾಜೆಕ್ಟ್ ನ್ನು ತಯಾರಿಸಿ ಮುನ್ನಡೆಯಿರಿ.
ನಿಮ್ಮ ಬಳಿ ಇನ್ನೂ ಹೆಚ್ಚಿನ ಬಿಸಿನೆಸ್ ಐಡಿಯಾಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. ಇನ್ನೊಬ್ಬರಿಗೆ ಉಪಯುಕ್ತವಾಗಲಿ..

Read more: Business Ideas

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+