ದೇಶದ ಪ್ರಮುಖ ಬ್ಯಾಂಕುಗಳು ಹಾಗು ಪೋಸ್ಟ್ ಆಫೀಸ್ ತನ್ನ ಠೇವಣಿಗಳ ಮೇಲೆ ನೀಡುವ ಬಡ್ಡಿದರ ತಿಳಿದುಕೊಳ್ಳಲು ಹೆಚ್ಚಿನ ಗ್ರಾಹಕರು ಬಯಸುತ್ತಾರೆ.
ದೇಶದ ಪ್ರಮುಖ ಬ್ಯಾಂಕುಗಳು ಹಾಗು ಪೋಸ್ಟ್ ಆಫೀಸ್ ತನ್ನ ಠೇವಣಿಗಳ ಮೇಲೆ ನೀಡುವ ಬಡ್ಡಿದರ ತಿಳಿದುಕೊಳ್ಳಲು ಹೆಚ್ಚಿನ ಗ್ರಾಹಕರು ಬಯಸುತ್ತಾರೆ. ವಿವಿಧ ಠೇವಣಿಗಳ ಮೇಲಿನ ವಿವಿಧ ಅವಧಿಯ ಹೂಡಿಕೆಗಳ ಮೇಲೆನ ಬಡ್ಡಿದರವನ್ನು ಕಾಲಕಾಲಕ್ಕೆ ಪರಿಷ್ಕರಿಸಲ್ಪಡುತ್ತದೆ. ಮರುಕಳಿಸುವ ಠೇವಣಿ (ಆರ್‌ಡಿ) ಖಾತೆಗೆ ಹಾಗು ಸ್ಥಿರ ಠೇವಣಿ (ಎಫ್‌ಡಿ) ವಿವರಿಸುವ ಉತ್ತಮ ಮಾರ್ಗವೆಂದರೆ ಇವೆರಡೂ ಒಂದಕ್ಕೊಂದು ಹೋಲುತ್ತವೆ. ಆದರೆ ಸ್ವಲ್ಪ ವ್ಯತ್ಯಾಸವಿದೆ. ಸ್ಥಿರ ಆದಾಯ ಬಯಸುವವರು ಆರ್‌ಡಿ ಮತ್ತು ಎಫ್‌ಡಿ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದಾಗ್ಯೂ, ಇವೆರಡರ ನಡುವಿನ ವ್ಯತ್ಯಾಸವೆಂದರೆ ಆರ್‌ಡಿಯ ಸಂದರ್ಭದಲ್ಲಿ, ಹೂಡಿಕೆಗಾಗಿ ನಿಮಗೆ ಯಾವುದೇ ದೊಡ್ಡ ಮೊತ್ತದ ಅಗತ್ಯವಿಲ್ಲ. ಈ ಖಾತೆಗಳಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಕಂತುಗಳಲ್ಲಿ ಹೂಡಿಕೆ ಮಾಡಬಹುದು. ಜೊತೆಗೆ ಎಫ್‌ಡಿಗಳಂತೆ ಬಡ್ಡಿದರಗಳನ್ನು ಗಳಿಸಬಹುದು. ನೀವು ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು, ಆರ್ಡಿ ಮೇಲೆ ಗರಿಷ್ಠ ಬಡ್ಡಿದರ ಒದಗಿಸುವ ಬ್ಯಾಂಕುಗಳನ್ನು ಹೋಲಿಸಿ ನೋಡಬೇಕು.
ಆರ್‌ಡಿ ವಿಶೇಷ
ಆರ್‌ಡಿಗಳಲ್ಲಿ, ನೀವು ನಿಗದಿತ ಸಮಯಕ್ಕೆ ನಿರ್ದಿಷ್ಟ ಬಡ್ಡಿದರವನ್ನು ಗಳಿಸುತ್ತೀರಿ. ನೀವು ಆರ್‌ಡಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದಾಗ ಅವಧಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿ ಆರ್‌ಡಿ ಯೋಜನೆಯ ಅವಧಿಯನ್ನು 5 ವರ್ಷ ಎಂದು ನಿಗದಿಪಡಿಸಲಾಗಿದೆ. ಆದಾಗ್ಯೂ, ವಾಣಿಜ್ಯ ಬ್ಯಾಂಕುಗಳು ಆರ್‌ಡಿ ಅವಧಿ 1 ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ಇರುತ್ತದೆ.
ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಆರ್‌ಡಿಯಲ್ಲಿ ಠೇವಣಿ ಇಡಬೇಕಾಗುತ್ತದೆ. ಆರ್‌ಡಿ ಮೇಲಿನ ಬಡ್ಡಿದರಗಳು ಅವಧಿಯಾದ್ಯಂತ ಒಂದೇ ಆಗಿರುತ್ತವೆ.
ಮರುಕಳಿಸುವ ಠೇವಣಿ ಯೋಜನೆಯನ್ನು ಪೋಸ್ಟ್ ಆಫೀಸ್ , ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಂತಹ ಕೆಲವು ಪ್ರಮುಖ ಬ್ಯಾಂಕುಗಳೊಂದಿಗೆ ಹೋಲಿಸಿ ನೋಡೋಣ ಬನ್ನಿ..
ಅಂಚೆ ಕಚೇರಿ
ಪ್ರಸ್ತುತ, ಒಂದು 5 ವರ್ಷಗಳ ಅವಧಿ ಆರ್ಡಿ (ರಿಕರಿಂಗ್ ಡಿಪಾಸಿಟ್)ಯೋಜನೆ ಇದೆ. ಇದು ಗ್ರಾಹಕರಿಗೆ ತಿಂಗಳಿಗೆ ಕೇವಲ ರೂ. 10 ಹೂಡಿಕೆ ಮಾಡಲು ಮತ್ತು ಶೇ. 7.20 ಬಡ್ಡಿದರಗಳನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಇಂಡಿಯಾ ಪೋಸ್ಟ್ ಒದಗಿಸುತ್ತದೆ.
ಎಸ್‌ಬಿಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡುವ ಆರ್‌ಡಿ ಮೇಲಿನ ಬಡ್ಡಿದರಗಳು ಟರ್ಮ್ ಠೇವಣಿಗಳಲ್ಲಿ ನೀಡಲ್ಪಟ್ಟಂತೆಯೇ ಇರುತ್ತವೆ. ಎಸ್‌ಬಿಐನಲ್ಲಿ, ಐದು ವರ್ಷ ಅಥವಾ ಹೆಚ್ಚಿನ ಮರುಕಳಿಸುವ ಠೇವಣಿ ಮೇಲೆ ಶೇ. 6.25 ಬಡ್ಡಿ ಗಳಿಸಲು ಅವಕಾಶವಿರುತ್ತದೆ. ಹಿರಿಯ ನಾಗರಿಕರಿಗೆ ಶೇ. 6.75ರಷ್ಟಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ, ಜುಲೈ 22, 2019 ರಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ಆಯ್ಕೆ ಮಾಡಿದ ಆರ್‌ಡಿ ಮೇಲೇ ಶೇ. 7.25 ಬಡ್ಡಿದರವನ್ನು ಗಳಿಸಬಹುದು. ಹಿರಿಯ ನಾಗರಿಕ ಮತ್ತು ಅನಿವಾಸಿ ಭಾರತೀಯರು ಕ್ರಮವಾಗಿ ಶೇ. 7.50 ಮತ್ತು ಶೇ. 7 ಬಡ್ಡಿದರ ಗಳಿಸಬಹುದು.
ಐಸಿಐಸಿಐ ಬ್ಯಾಂಕ್
ಈ ಬ್ಯಾಂಕ್ ಐವಿಶ್ (iWish) ಎಂದು ಕರೆಯಲ್ಪಡುವ ಮರುಕಳಿಸುವ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. ಐಸಿಐಸಿಐ ಬ್ಯಾಂಕಿನಲ್ಲಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಆರ್ಡಿ ಠೇವಣಿ ಮೇಲೆ ಶೇ. 7ರಷ್ಟು ಬಡ್ಡಿಯನ್ನು ಗಳಿಸಬಹುದು. ಹಿರಿಯ ನಾಗರಿಕರಿಗೆ ಶೇ. 7.50ರಷ್ಟು ಬಡ್ಡಿದರ ಲಭ್ಯವಿರುತ್ತದೆ.


Click it and Unblock the Notifications