For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ 95 ಹೂಡಿಕೆ ಮಾಡಿ ರೂ. 1 ಕೋಟಿ ಗಳಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ..

ಹೆಚ್ಚು ಹಣ ಗಳಿಸುವುದು ಹಾಗೂ ಅದರ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಬಹುತೇಕ ಎಲ್ಲರ ಜೀವನದ ಗುರಿಯಾಗಿರುತ್ತದೆ. ಹಾಗೆಯೇ ಜೀವನದಲ್ಲಿ ಒಂದಿಲ್ಲೊಂದು ಬಾರಿ ಕೋಟಿ ರೂಪಾಯಿಗಳ ಮೊತ್ತದ ಒಡೆಯನಾಗುವುದು ಕೂಡ ಅನೇಕರ ಕನಸಾಗಿರುತ್ತದೆ.

|

ಹೆಚ್ಚು ಹಣ ಗಳಿಸುವುದು ಹಾಗೂ ಅದರ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಬಹುತೇಕ ಎಲ್ಲರ ಜೀವನದ ಗುರಿಯಾಗಿರುತ್ತದೆ. ಹಾಗೆಯೇ ಜೀವನದಲ್ಲಿ ಒಂದಿಲ್ಲೊಂದು ಬಾರಿ ಕೋಟಿ ರೂಪಾಯಿಗಳ ಮೊತ್ತದ ಒಡೆಯನಾಗುವುದು ಕೂಡ ಅನೇಕರ ಕನಸಾಗಿರುತ್ತದೆ. ಕೆಲ ಸುಲಭ ಹೂಡಿಕೆ ವಿಧಾನಗಳ ಮೂಲಕ ಕೋಟ್ಯಧೀಶರಾಗುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ..

ಸಿಪ್ ಹೂಡಿಕೆ (SIP)

ಸಿಪ್ ಹೂಡಿಕೆ (SIP)

ಮ್ಯೂಚುವಲ್ ಫಂಡ್ ಗಳಲ್ಲಿ ಯೋಜನಾಬದ್ಧವಾಗಿ ಹೂಡಿಕೆ ಮಾಡುವ ವಿಧಾನವನ್ನು ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ (Systematic Investment Plan) ಅಥವಾ ಸಂಕ್ಷಿಪ್ತವಾಗಿ ಸಿಪ್ ಎಂದು ಕರೆಯಲಾಗುತ್ತದೆ. ಇಕ್ವಿಟಿ ಆಧರಿತ ಹೂಡಿಕೆ ಯೋಜನೆಗಳಲ್ಲಿ ಸಿಪ್ ಅತ್ಯಂತ ಜನಪ್ರಿಯ ಯೋಜನೆಯಾಗಿ ಹೊರಹೊಮ್ಮಿದೆ. 10 ವರ್ಷ ಅಥವಾ ಅದಕ್ಕೂ ಮಿಗಿಲಾಗಿ ಅಂದರೆ ಸುಮಾರು 30 ವರ್ಷಗಳವರೆಗೆ ದೀರ್ಘಾವಧಿಯಲ್ಲಿ ಸಿಪ್ ಯೋಜನೆಗಳಲ್ಲಿ ಹೂಡಿಕೆ ಮಾಡಿದಲ್ಲಿ ಅತ್ಯುತ್ತಮ ಆದಾಯ ಪಡೆಯಬಹುದು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಆದರೆ ವ್ಯಕ್ತಿಯೋರ್ವ ತನ್ನ ದುಡಿಮೆಯ ಜೀವನದ ಆರಂಭದಲ್ಲಿಯೇ ಸಿಪ್ ಆರಂಭಿಸಿದರೆ ಮಾತ್ರ ಇದರ ಸಂಪೂರ್ಣ ಲಾಭ ಪಡೆಯಲು ಸಾಧ್ಯ. ಮ್ಯೂಚುವಲ್ ಫಂಡ್ ಆಧರಿತ ಸಿಪ್ ಯೋಜನೆಗಳಲ್ಲಿ 10 ರಿಂದ 15 ವರ್ಷಗಳವರೆಗೆ ಸತತವಾಗಿ ಹೂಡಿಕೆ ಮಾಡಿದಲ್ಲಿ ವಾರ್ಷಿಕ ಶೇ 12 ರಿಂದ 14 ಹಾಗೂ 30 ವರ್ಷಕ್ಕೂ ಹೆಚ್ಚು ಅವಧಿಗೆ ಹೂಡಿಕೆ ಮಾಡಿದಲ್ಲಿ ವಾರ್ಷಿಕ ಶೇ 12 ರಿಂದ 14 ರವರೆಗೆ, ಕೆಲ ಬಾರಿ ಶೇ 17 ರವರೆಗೂ ಪ್ರತಿಫಲ ಪಡೆಯಬಹುದು. ಕಳೆದ 4 ರಿಂದ 5 ವರ್ಷಗಳ ಶೇರು ಮಾರುಕಟ್ಟೆಗಳ ಟ್ರೆಂಡ್ ಅಧ್ಯಯನ ಮಾಡಿದ ಹೂಡಿಕೆ ತಜ್ಞರು ಈ ಅಂದಾಜುಗಳನ್ನು ತಿಳಿಸಿದ್ದಾರೆ.

ಸಣ್ಣ, ಮಧ್ಯಮ ವರ್ಗದ ಹೂಡಿಕೆದಾರರ ಬೆಸ್ಟ್ ಆಯ್ಕೆ ಸಿಪ್

ಸಣ್ಣ, ಮಧ್ಯಮ ವರ್ಗದ ಹೂಡಿಕೆದಾರರ ಬೆಸ್ಟ್ ಆಯ್ಕೆ ಸಿಪ್

ಇಂದಿನ ನವಯುವಕರು ಹಾಗೂ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಆಧರಿತ ಸಿಪ್ ಯೋಜನೆಗಳು ಅತಿ ಆಕರ್ಷಕವಾಗಿವೆ. ಮ್ಯೂಚುವಲ್ ಫಂಡ್ಗಳಲ್ಲಿ ಸಿಪ್ ಮೂಲಕ ದೀರ್ಘಾವಧಿ ಹೂಡಿಕೆ ಮಾಡಿದಲ್ಲಿ ಅತ್ಯುತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ ತೆರಿಗೆ ಸಲಹಾ ನಿಪುಣರು. ದೀರ್ಘಾವಧಿ ಅಂದರೆ 15 ವರ್ಷಕ್ಕೂ ಹೆಚ್ಚು ಅವಧಿಗೆ ಸಿಪ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಕಳೆದ ನಂತರವೂ ಶೇ 12 ರಷ್ಟು ಉತ್ತಮ ಲಾಭ ಪಡೆಯಬಹುದಾಗಿದೆ. ತಜ್ಞರ ಪ್ರಕಾರ ಸಿಪ್ನಲ್ಲಿ ಅತಿ ಕನಿಷ್ಠ ಎಂದರೆ ಶೇ 12 ರಷ್ಟು ಪ್ರತಿಫಲವನ್ನು ನಿರೀಕ್ಷಿಸಬಹುದಾಗಿದೆ. ಮಾರುಕಟ್ಟೆ ಸ್ಥಿತಿಗತಿಗಳನ್ನು ಆಧರಿಸಿ ಶೇ 15 ರಷ್ಟು ಆದಾಯ ಬರಬಹುದಾದರೂ ತೆರಿಗೆ ಕಳೆದ ನಂತರ ಶೇ 12 ರಷ್ಟು ಆದಾಯಕ್ಕೆ ಮೋಸವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಮ್ಯೂಚುವಲ್ ಫಂಡ್ಗಳಲ್ಲಿ 10 ರಿಂದ 15 ವರ್ಷಗಳವರೆಗೆ ಹೂಡಿಕೆ ಮಾಡಿದಲ್ಲಿ ತೆರಿಗೆ ಕಳೆದು ಶೇ 12 ರಿಂದ 14 ರಷ್ಟು ಪ್ರತಿಫಲ ಪಡೆಯಬಹುದು. ವ್ಯಕ್ತಿಯೋರ್ವ ತನ್ನ ದುಡಿಮೆಯ ಆರಂಭಿಕ ಅವಧಿಯಲ್ಲಿಯೇ ಹೂಡಿಕೆ ಆರಂಭಿಸಿದ್ದಲ್ಲಿ, ಸಾಧ್ಯವಾದರೆ ಅದನ್ನು ಎಷ್ಟು ಅವಧಿಗೆ ಸಾಧ್ಯವೋ ಅಷ್ಟು ಮುಂದುವರೆಸುವುದು ಸೂಕ್ತ. 30 ಅಥವಾ ಅದಕ್ಕೂ ಹೆಚ್ಚು ವರ್ಷ ಅವಧಿಗೆ ಇಂಥ ವ್ಯಕ್ತಿಗಳು ಹೂಡಿಕೆ ಮುಂದುವರಿಸುವುದು ಉತ್ತಮ ಎಂದು ಮುಂಬೈನ ಸೆಬಿ ನೋಂದಾಯಿತ ಮಾರುಕಟ್ಟೆ ವಿಶ್ಲೇಷಕ ಜಿತೇಂದ್ರ ಸೋಲಂಕಿ ಹೇಳುತ್ತಾರೆ.

ದಿನಕ್ಕೆ ರೂ. 95 ಹೂಡಿಕೆ ಮ್ಯಾಜಿಕ್!

ದಿನಕ್ಕೆ ರೂ. 95 ಹೂಡಿಕೆ ಮ್ಯಾಜಿಕ್!

30 ವರ್ಷಗಳವರೆಗೆ ಮ್ಯೂಚುವಲ್ ಫಂಡ್ ಆಧರಿತ ಸಿಪ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತ ಬಂದಲ್ಲಿ ಓರ್ವ ವ್ಯಕ್ತಿ ಎಷ್ಟು ಮೊತ್ತ ಸಂಗ್ರಹಿಸಬಹುದು ಎಂಬ ಬಗ್ಗೆ ಟ್ರಾನ್ಸೆಂಟ್ ಕನ್ಸಲ್ಟಂಟ್ ಸಂಸ್ಥೆಯ ವೆಲ್ಥ್ ಮ್ಯಾನೇಜಮೆಂಟ್ ಡೈರೆಕ್ಟರ್ ಕಾರ್ತಿಕ್ ಝವೇರಿ ಹೇಳುವುದು ಹೀಗೆ-
30 ವರ್ಷಗಳವರೆಗೆ ಸಿಪ್ನಲ್ಲಿ ಸತತವಾಗಿ ಹೂಡಿಕೆ ಮಾಡಿದಲ್ಲಿ ಹಾಗೂ ಹೂಡಿಕೆಯ ಕೊನೆಯ 4 ರಿಂದ 5 ವರ್ಷ ಮಾರುಕಟ್ಟೆಗಳು ಉತ್ತಮವಾಗಿದ್ದಲ್ಲಿ ವಾರ್ಷಿಕ ಶೇ 14 ರಿಂದ 16 ಅಥವಾ 17 ರವರೆಗೆ ಪ್ರತಿಫಲಗಳನ್ನು ನಿರೀಕ್ಷಿಸಬಹುದು. ಆದಾಗ್ಯೂ ಅನ್ವಯವಾಗುವ ತೆರಿಗೆಗಳನ್ನು ಗಣನೆಗೆ ತೆಗೆದುಕೊಂಡಲ್ಲಿ 30 ವರ್ಷಗಳ ನಿರಂತರ ಹೂಡಿಕೆಗೆ ಅತಿ ಕಡಿಮೆ ಎಂದರೂ ಶೇ 12 ರಷ್ಟು ಪ್ರತಿಫಲ ನಿರೀಕ್ಷಿಸಬಹುದು.
ಈ ಇಬ್ಬರೂ ಮಾರುಕಟ್ಟೆ ತಜ್ಞರ ಅಭಿಪ್ರಾಯಗಳನ್ನು ಕ್ರೋಢೀಕರಿಸಿದಲ್ಲಿ ಸಿಗುವ ಅಂಕಿ ಅಂಶಗಳು ಅತ್ಯಂತ ಆಶಾದಾಯಕವಾಗಿವೆ.

ತಿಂಗಳಿಗೆ ರೂ. 2,833 ಹೂಡಿಕೆ

ತಿಂಗಳಿಗೆ ರೂ. 2,833 ಹೂಡಿಕೆ

ವ್ಯಕ್ತಿಯೋರ್ವ 30 ವರ್ಷಗಳವರೆಗೆ ಸಿಪ್ ನಲ್ಲಿ ಪ್ರತಿತಿಂಗಳು ನಿರಂತರವಾಗಿ 2833 ರೂ. ಅಂದರೆ ದಿನಕ್ಕೆ ಸುಮಾರು 95 ರೂಪಾಯಿ ಹೂಡಿಕೆ ಮಾಡುತ್ತ ಬಂದಲ್ಲಿ ಆತನ ಒಟ್ಟು ಮೂಲ ಹೂಡಿಕೆ ರೂ. 10,19,880 ಆಗಿರುತ್ತದೆ. ಇದನ್ನು ಆಧರಿಸಿ ಬಡ್ಡಿಯ ಮೇಲೆ ಶೇ. 12 ರಷ್ಟು ತೆರಿಗೆ ಪರಿಗಣಿಸಿದಲ್ಲಿ ಎಸ್ಬಿಐ ಮ್ಯೂಚುವಲ್ ಫಂಡ್ ಸಿಪ್ ಕ್ಯಾಲ್ಕುಲೇಟರ್ ಪ್ರಕಾರ ಹೂಡಿಕೆದಾರನಿಗೆ ಕನಿಷ್ಠ ರೂ. 1,00,00,245 ಮೆಚುರಿಟಿ ಮೊತ್ತ ಸಿಗುತ್ತದೆ.
ಅಂದರೆ ತಿಂಗಳಿಗೆ ರೂ. 2,833 ಅಥವಾ ದಿನಕ್ಕೆ ಸುಮಾರು 95 ರೂಪಾಯಿ (ನಿಖರವಾಗಿ 94.433) ಗಳಷ್ಟು ಮೊತ್ತವನ್ನು 30 ವರ್ಷಗಳವರೆಗೆ ನಿರಂತರವಾಗಿ ಮ್ಯೂಚುವಲ್ ಫಂಡ್ ಸಿಪ್ ನಲ್ಲಿ ಹೂಡಿಕೆ ಮಾಡಿದಲ್ಲಿ ಹೂಡಿಕೆದಾರ ಕೋಟ್ಯಧೀಶನಾಗುವ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ.

ಪ್ರತಿದಿನ 66 ಹೂಡಿಕೆ ಮಾಡಿ ಕೋಟ್ಯಾಧಿಪತಿ?

ಪ್ರತಿದಿನ 66 ಹೂಡಿಕೆ ಮಾಡಿ ಕೋಟ್ಯಾಧಿಪತಿ?

ಇನ್ನೊಂದು ವಿವರಣೆ ಮೂಲಕ ನೋಡುವುದದರೆ, ಹೂಡಿಕೆದಾರರು ತಿಂಗಳಿಗೆ 2000 ಅಂದರೆ ಪ್ರತಿದಿನದ ಲೆಕ್ಕದಲ್ಲಿ ರೂ. 66 ಹೂಡಿಕೆ ಮಾಡುತ್ತಾ ಹೋದರೆ 30 ವರ್ಷಗಳ ಅವಧಿಗೆ ಹೂಡಿಕೆ ಮೊತ್ತ ರೂ. 7.2 ಲಕ್ಷ ಆಗುತ್ತದೆ. ಆದರೆ ಇಪ್ಪತ್ತು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಶೇ. 12-14ರ ಬಡ್ಡಿದರದಂತೆ ಆದಾಯ ಸಿಗುತ್ತದೆ. ಎಸ್ಬಿಐ ಮ್ಯೂಚುವಲ್ ಫಂಡ್ ಸಿಪ್ ಕ್ಯಾಲ್ಕುಲೇಟರ್ ಪ್ರಕಾರ ಶೆ. 14ರ ಬಡ್ಡಿದರದಂತೆ ಹೂಡಿಕೆದಾರ ರೂ. 1,11,14,111.26 (1.11 ಕೋಟಿ) ಪಡೆಯುತ್ತಾನೆ. ಅಂದರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ ಸಿಪ್ ನಲ್ಲಿ ಪ್ರತಿತಿಂಗಳು 2000 ಹೂಡಿಕೆ ಮಾಡುತ್ತಾ ಹೋದರೆ ಮೂವತ್ತು ವರ್ಷಗಳ ಅವಧಿಗೆ ಕೋಟ್ಯಾಧಿಪತಿಯಾಗುತ್ತಾನೆ.
10-15 ವರ್ಷಗಳ ಕಾಲ ನಿರಂತರವಾಗಿ ಮ್ಯೂಚುವಲ್ ಫಂಡ್ ಸಿಪ್ ಮೇಲೆ ಹೂಡಿಕೆ ಮಾಡಿದರೆ ಶೇ. 12 ರಿಂದ 14 ರವರೆಗೆ ರಿಟರ್ನ್ ಪಡೆಯಬಹುದು. ಮ್ಯೂಚುವಲ್ ಫಂಡ್ ಸಿಪ್ ಹೂಡಿಕೆ ಯಾವಾಗಲೂ ಉತ್ತಮ ಆಯ್ಕೆಯಾಗಿದ್ದು, 30 ವರ್ಷಗಳವರೆಗಿನ SIP ಹೂಡಿಕೆ ಮೇಲೆ ಶೇ. 14-16 ರವರೆಗೆ ಆದಾಯ ಗಳಿಸಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

English summary

Invest Rs 95 per day and become a crorepati

Mutual Fund SIP (Systematic Investment Plan) is one of the most preferred choices among investors who believe in equity-linked investments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X