For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ ಹಬ್ಬ: ನಿಮ್ಮ ಪ್ರೀತಿಯ ಸಹೋದರಿಗೆ ಈ ಅಮೂಲ್ಯ ಉಡುಗೊರೆ ನೀಡಿ..

ರಕ್ಷಾ ಬಂಧನ ಹಬ್ಬ ಸಹೋದರ ಮತ್ತು ಸಹೋದರಿಯ ನಡುವಿನ ಪವಿತ್ರ ಬಾಂಧವ್ಯದ ಪ್ರತೀಕ. ನಮ್ಮ ಸಂಸ್ಕೃತಿಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹುಮುಖ್ಯ ಪ್ರಾಧಾನ್ಯತೆ ಇದೆ.

|

ರಕ್ಷಾ ಬಂಧನ ಹಬ್ಬ ಸಹೋದರ ಮತ್ತು ಸಹೋದರಿಯ ನಡುವಿನ ಪವಿತ್ರ ಬಾಂಧವ್ಯದ ಪ್ರತೀಕ. ನಮ್ಮ ಸಂಸ್ಕೃತಿಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ಬಹುಮುಖ್ಯ ಪ್ರಾಧಾನ್ಯತೆ ಇದೆ. ರಕ್ಷಾ ಬಂಧನ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟಿ, ಅವನ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾಳೆ. ಇದು ಸಹೋದರಿಯು ತನ್ನ ಸಹೋದರನ ಮೇಲಿನ ಪ್ರೀತಿಯನ್ನು ಸಂಕೇತಿಸುತ್ತದೆ. ಇದಕ್ಕೆ ಪ್ರತಿಯಾಗಿ, ಸಹೋದರ ಎಂಥದ್ದೆ ಪರಿಸ್ಥಿತಿಯಲ್ಲಿ ಸಹೋದರಿಯನ್ನು ರಕ್ಷಿಸುವ ಭರವಸೆಯೊಂದಿಗೆ ವಿನಿಮಯವಾಗಿ ಉಡುಗೊರೆಯನ್ನು ನೀಡುತ್ತಾನೆ.
ರಕ್ಷಾ ಬಂಧನ ದಿನದಂದು ಸಹೋದರರು ಹಣ, ಒಡವೆ, ಬಟ್ಟೆ, ಮೊಬೈಲ್, ಬೆಲೆಬಾಳುವ ಉಡುಗೊರೆಗಳನ್ನು ತಮ್ಮ ಸಹೋದರಿಗೆ ನೀಡುತ್ತಾರೆ.
ಆದರೆ ಸಹೋದರಿಗೆ ಹಣಕಾಸಿನ ಉಡುಗೊರೆಯನ್ನು ಏಕೆ ಉಡುಗೊರೆಯಾಗಿ ನೀಡಬಾರದು? ಸಹೋದರಿಯ ಹಣಕಾಸು ಭದ್ರತೆ, ಸುರಕ್ಷತೆ, ಹಣಕಾಸು ಸ್ವಾತಂತ್ರ್ಯದ ಬಗ್ಗೆ ಏಕೆ ಯೋಚನೆ ಮಾಡಬಾರದು? ಸಹೋದರಿಯ ಮುಂದಿನ ಜೀವನ ಆರ್ಥಿಕವಾಗಿ ಸದೃಢವಾಗಿರಲಿ ಎಂಬ ಹೆಬ್ಬಯಕೆಯೊಂದಿಗೆ ಹಣಕಾಸು ಉಳಿತಾಯ ಯೋಜನೆ, ವಿಮೆ, ಸಿಪ್, ಮ್ಯೂಚುವಲ್ ಫಂಡ್ ಇಂತಹ ಹಣಕಾಸು ಗಿಪ್ಟ್ ಕಟ್ಟರೆ ಚೆಂದ ಅಲ್ಲವೆ?
ಹಾಗಿದ್ದರೆ ನಿಮ್ಮ ಪ್ರೀತಿಯ ಸಹೋದರಿಗೆ ಈ ರಕ್ಷಾ ಬಂಧನ ಹಬ್ಬಕ್ಕೆ ಉಡುಗೊರೆಯಾಗಿ ನೀಡಬಹುದಾದ ಆರ್ಥಿಕ ಉಡುಗೊರೆಗಳನ್ನು ನೋಡೋಣ.

 

ಸಹೋದರಿ ಹೆಸರಿನಲ್ಲಿ ಎಫ್ಡಿ ಇಡಿ

ಸಹೋದರಿ ಹೆಸರಿನಲ್ಲಿ ಎಫ್ಡಿ ಇಡಿ

ನಿಮ್ಮ ಸಹೋದರಿಗೆ ಏನೇನೋ ಉಡುಗೊರೆ ನೀಡುವ ಬದಲು, ಈ ರಕ್ಷಾ ಬಂಧನಕ್ಕೆ ನಗದು ಹಣ ನೀಡಿ, ಅವಳ ಹೆಸರಿನಲ್ಲಿ ಸ್ಥಿರ ಠೇವಣಿ ಮಾಡಬಹುದು. ಸ್ಥಿರ ಠೇವಣಿ ಅವಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ ಮತ್ತು ಹೂಡಿಕೆ ಮಾಡಿದ ಹಣದ ಮೇಲೆ ಯೋಗ್ಯವಾದ ಬಡ್ಡಿದರವನ್ನು ಲಭಿಸುತ್ತದೆ. ಸ್ಥಿರ ಠೇವಣಿ ದ್ರವ್ಯತೆಯನ್ನು ಸಹ ನೀಡುತ್ತದೆ (ಸಣ್ಣ ದಂಡದೊಂದಿಗೆ ಸ್ಥಿರ ಠೇವಣಿಯನ್ನು ಅಕಾಲಿಕವಾಗಿ ಹಿಂತೆಗೆಬಹುದು). ಅವಳು ಈ ಹಣವನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದು.

ಸಹೋದರಿಯ ಹೆಸರಿನಲ್ಲಿ ಸಿಪ್ ಪ್ರಾರಂಭಿಸಿ

ಸಹೋದರಿಯ ಹೆಸರಿನಲ್ಲಿ ಸಿಪ್ ಪ್ರಾರಂಭಿಸಿ

ಮ್ಯೂಚುವಲ್ ಫಂಡ್‌ನಲ್ಲಿನ ಸಿಪ್ ಯೋಜನೆಯನ್ನು ಈ ರಕ್ಷಾ ಬಂಧನಕ್ಕೆ ನೀವು ಪ್ರಸ್ತುತಪಡಿಸುವ ವಿಶಿಷ್ಟ ಉಡುಗೊರೆಗಳಲ್ಲಿ ಒಂದಾಗಿದೆ. ನಿಮ್ಮ ಸಹೋದರಿ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಕನಸು ಹೊಂದಿರಬಹುದು. ವಿದೇಶ ಪ್ರವಾಸಕ್ಕೆ ಹೋಗಬಹುದು ಅಥವಾ ಶಿಕ್ಷಣಕ್ಕಾಗಿ ಹಣ ಬೇಕಾಗಬಹುದು. ಅವಳ ಕನಸನ್ನು ನನಸಾಗಿಸಲು, ಹಣವನ್ನು ವ್ಯವಸ್ಥಿತ ರೀತಿಯಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಮ್ಯೂಚುವಲ್ ಫಂಡ್‌ನಲ್ಲಿರುವ ಸಿಪ್ ದೊಡ್ಡ ಕಾರ್ಪಸ್ ಅನ್ನು ವ್ಯವಸ್ಥಿತವಾಗಿ ನಿರ್ಮಿಸಲು ಸಹಾಯ ಮಾಡುತ್ತದೆ. ನೀವು ತಿಂಗಳಿಗೆ ರೂ. 500 ಅಥವಾ 1000 ಗಳಷ್ಟು ಕಡಿಮೆ ಮೊತ್ತದೊಂದಿಗೆ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಮ್ಯೂಚುವಲ್ ಫಂಡ್‌ನಲ್ಲಿ ನಿಮ್ಮ ಸಹೋದರಿಗೆ ಸಿಪ್ ಉಡುಗೊರೆಯಾಗಿ ನೀಡುವುದು ಈ ರಕ್ಷಾ ಬಂಧನವನ್ನು ಆಚರಿಸಲು ಉತ್ತಮ ಮಾರ್ಗವೆಂದು ನೀವು ಭಾವಿಸುವುದಿಲ್ಲವೇ?

ಆರೋಗ್ಯ ವಿಮೆ ಯೋಜನೆಯನ್ನು ಖರೀದಿಸಿ
 

ಆರೋಗ್ಯ ವಿಮೆ ಯೋಜನೆಯನ್ನು ಖರೀದಿಸಿ

ನಿಮ್ಮ ಪ್ರೀತಿಪಾತ್ರ ಸಹೋದರಿಯ ಹೆಸರಿನಲ್ಲಿ ಆರೋಗ್ಯ ವಿಮೆ ಯೋಜನೆಯನ್ನು ಖರೀದಿಸಬಹುದು. ಅವಳ ಹೆಸರಿನಲ್ಲಿ ಈಗಾಗಲೇ ವಿಮೆ ಇದ್ದರೆ ಆರೋಗ್ಯ ವಿಮಾ ಯೋಜನೆಯನ್ನು ಸಹ ನವೀಕರಿಸಬಹುದು. ನಿಮ್ಮ ಸಹೋದರಿಯ ಹೆಸರಿನಲ್ಲಿ ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸುವುದು ನೀವು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಮತ್ತು ನಿಮ್ಮ ಸಹೋದರಿಯ ಸಂಪೂರ್ಣ ಜೀವನವನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಇಂದು ಆಸ್ಪತ್ರೆಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ಸಾಕಷ್ಟು ರಕ್ಷಣೆಯೊಂದಿಗೆ ಆರೋಗ್ಯ ವಿಮಾ ಯೋಜನೆಯನ್ನು ಹೊಂದಿರುವುದು ನಿಮ್ಮ ಸಹೋದರಿಗೆ ಯಾವುದೇ ತೊಂದರೆಗಳಿಲ್ಲದೆ ಅಥವಾ ಸಮಯೋಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಚಿನ್ನದ ಉಡುಗೊರೆ

ಚಿನ್ನದ ಉಡುಗೊರೆ

ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಕಷ್ಟದ ಸ್ಥಿತಿಗಳಲ್ಲಿ ಚಿನ್ನವು ಯಾವಾಗಲೂ ಸಹಾಯಕ್ಕೆ ಬರುತ್ತದೆ. ಹೀಗಾಗಿ ಚಿನ್ನದ ಮೇಲೆ ಸಹೋದರಿಯ ಹೆಸರಲ್ಲಿ ಹೂಡಿಕೆ ಮಾಡುವುದರಿಂದ ಅವಳ ಭವಿಷ್ಯದ ಜೀವನಕ್ಕೆ ಆರ್ಥಿಕ ಸುಭದ್ರತೆ ನೀಡಬಹುದಾಗಿದೆ. ಪ್ರಸ್ತುತ ಚಿನ್ನದ ಮೇಲೆ ಹೂಡಿಕೆ ಮಾಡಲು ಅತ್ಯಂತ ಪ್ರಶಸ್ತವಾಗಿರುವ ಗೋಲ್ಡ್ ಇಟಿಎಫ್ ಅನ್ನು ಉಡುಗೊರೆಯಾಗಿ ನೀಡಬಹುದು. ಗೋಲ್ಡ್ ಇಟಿಎಫ್ ಇದು ಚಿನ್ನದ ಮೌಲ್ಯದ ಮೇಲೆ ಆಧರಿತವಾಗಿರುವ ಮುಕ್ತ ಫಂಡ್ ಆಗಿದೆ. ಒಂದು ಇಟಿಎಫ್‌ನ ಮೌಲ್ಯ ಒಂದು ಗ್ರಾಂ ಚಿನ್ನಕ್ಕೆ ಸಮನಾಗಿರುತ್ತದೆ. ಈ ಬಾರಿಯ ರಕ್ಷಾಬಂಧನದಂದು ಸಹೋದರಿಗೆ ಗೋಲ್ಡ್ ಇಟಿಎಫ್ ಉಡುಗೊರೆ ನೀಡಲು ಪ್ರಯತ್ನಿಸಿ.

ಈಕ್ವಿಟಿ

ಈಕ್ವಿಟಿ

ಈಕ್ವಿಟಿ ಅಂದರೆ ಕಂಪನಿಯ ಶೇರುಗಳನ್ನೇ ಗಿಫ್ಟ್ ಆಗಿ ಸಹೋದರಿಗೆ ನೀಡುವುದು ಮತ್ತೊಂದು ಪ್ರಮುಖ ಉಡುಗೊರೆ. ಶೇರು ಮಾರುಕಟ್ಟೆಯಲ್ಲಿ ಆರ್ಥಿಕ ರಿಸ್ಕ್ ಇದ್ದರೂ, ಅತ್ಯುತ್ತಮ ಕಂಪನಿಯ ಶೇರುಗಳನ್ನು ತಂಗಿಗೆ ನೀಡುವುದರಲ್ಲಿ ತಪ್ಪೇನೂ ಇಲ್ಲ. ದೀರ್ಘಾವಧಿಯಲ್ಲಿ ಈ ಶೇರುಗಳು ಉತ್ತಮ ಆದಾಯವನ್ನು ಗಳಿಸುವುದರಿಂದ ಇದು ಅಮೂಲ್ಯವಾದ ಉಡುಗೊರೆಯಾಗಿದೆ. ಈಗಾಗಲೇ ನಿಮ್ಮ ಡಿಮ್ಯಾಟ್ ಅಕೌಂಟಿನಲ್ಲಿರುವ ಶೇರುಗಳನ್ನು ಸಹೋದರಿಗೆ ವರ್ಗಾಯಿಸಬಹುದು ಅಥವಾ ಹೊಸ ಶೇರುಗಳನ್ನು ಕೊಳ್ಳಬಹುದು.

ಗಿಫ್ಟ್ ಕಾರ್ಡ್

ಗಿಫ್ಟ್ ಕಾರ್ಡ್

ನಿಮ್ಮ ಸಹೋದರಿಗೆ ನೀವು ನೀಡಬಹುದಾದ ಸರಳ ಉಡುಗೊರೆಗಳಲ್ಲಿ ಗಿಫ್ಟ್ ಕಾರ್ಡ್ ಒಂದು. ಇದು ರೂ. 500 ಗಳಿಂದ 50,000 ಮೌಲ್ಯದ ಗಿಫ್ಟ್ ಕಾರ್ಡ್ ಖರೀದಿಸಿ ಕೊಡಬಹುದು. ನಿಮ್ಮ ಸಹೋದರಿ ಶಾಪಿಂಗ್ ಮಾಡಲು ಇಷ್ಟಪಟ್ಟರೆ ಉಡುಗೊರೆ ಕಾರ್ಡ್ ನೀಡಿದರೆ ತುಂಬಾ ಸಂತೋಷವಾಗುತ್ತದೆ. ಈ ಕಾರ್ಡ್‌ಗಳು ಸಾಮಾನ್ಯವಾಗಿ ವೀಸಾ ಅಥವಾ ಮಾಸ್ಟರ್‌ಕಾರ್ಡ್‌ಗೆ ಸಂಯೋಜಿತವಾಗಿರುತ್ತವೆ.

ಬ್ಯಾಂಕ್ ಖಾತೆ ಮಾಡಿಸಿ

ಬ್ಯಾಂಕ್ ಖಾತೆ ಮಾಡಿಸಿ

ನಿಮ್ಮ ಸಹೋದರಿಯು ಇನ್ನೂ ಚಿಕ್ಕವಳಾಗಿದ್ದು, ಬ್ಯಾಂಕ್ ಖಾತೆ ಹೊಂದಿರದಿದ್ದರೆ ಅವಳಿಗೆ ಖಾತೆ ಮಾಡಿಸಿ ಕೊಡುವುದು ಉತ್ತಮ ರಕ್ಷಾಬಂಧನ ಉಡುಗೊರೆಯಾಗಿದೆ. ಈ ಅಕೌಂಟಿನಲ್ಲಿ ನೀವೇ ಆಗಾಗ ಹಣವನ್ನು ಹಾಕಬಹುದು. ಜೊತೆಗೆ ಸಹೋದರಿಗೆ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಜ್ಞಾನವನ್ನು ನೀಡಬಹುದು. ಇದು ಹಣಕಾಸು ನಿರ್ವಹಣೆಯನ್ನು ಸಹ ನಿಮ್ಮ ಸಹೋದರಿಗೆ ತಿಳಿಸಿಕೊಡಲು ಸಹಾಯವಾಗುತ್ತದೆ.

ಪಿಪಿಎಫ್

ಪಿಪಿಎಫ್

ಸಣ್ಣ ಉಳಿತಾಯ ಯೋಜನೆಗಳಲ್ಲಿ ಉತ್ತಮ ರಿಟರ್ನ್ ನೀಡಬಲ್ಲ ಯೋಜನೆಗಳಲ್ಲಿ ಪಿಪಿಎಫ್ ಉತ್ತಮ ಆಯ್ಕೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಸಹೋದರಿಯ ಭವಿಷ್ಯಕ್ಕೆ ಉತ್ತಮ. ಪಿಪಿಎಫ್ ತೆರಿಗೆ ಮುಕ್ತವಾಗಿರುವುದರಿಂದ ಹೆಚ್ಚು ಪ್ರಯೋಜನಕಾರಿ. ಇಲ್ಲಿ ಹೂಡಿಕೆ ಮತ್ತು ಬಡ್ಡಿ ಎರಡು ತೆರಿಗೆ ರಹಿತವಾಗಿರುವುದರಿಂದ ಹೂಡಿಕೆದಾರರಿಗೆ ಹೆಚ್ಚು ಉಪಯೋಗಕಾರಿ.

ಕೊನೆ ಮಾತು

ಕೊನೆ ಮಾತು

ನಾವು ಈ ಲೇಖನದ ಮೂಲಕ ಕೆಲ ರಕ್ಷಾ ಬಂಧನ ಉಡುಗೊರೆಯ ಇಎಲ ಐಡಿಯಾಗಳನ್ನು ನಿಮ್ಮೊಂದಿಗೆ ಹಂಚಿದ್ದೇವೆ. ಇವುಗಳ ಹೊರತಾಗಿ ವಿಶಿಷ್ಟವಾದ ರಕ್ಷಾ ಬಂಧನದ ಐಡಿಯಾಗಳು ನಿಮಗೆ ಗೊತ್ತಿದ್ದರೆ ಕಮೆಂಟ್ ಮೂಲಕ ತಿಳಿಸಿ.

Read more about: money savings investments
English summary

Raksha Bandhan: Best Financial Gifts For Your Sister

Raksha Bandhan is a day to celebrate the sacred relationship between a brother and a sister.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X