For Quick Alerts
ALLOW NOTIFICATIONS  
For Daily Alerts

ಎಫ್ಡಿ ಮೇಲೆ ಹೆಚ್ಚಿನ ಬಡ್ಡಿದರ ಒದಗಿಸುವ ಟಾಪ್ 5 ಬ್ಯಾಂಕ್

ನಮ್ಮ ದೇಶದಲ್ಲಿ ಹೆಚ್ಚ್ಇನ ಜನರು ತಮ್ಮ ಹಣವನ್ನು ಸ್ಥಿರ ಠೇವಣಿಗಳಲ್ಲಿ (ಎಫ್ಡಿ) ಹೂಡಿಕೆ ಮಾಡುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಈಕ್ವಿಟಿಗಳಿಗಿಂತ ಬ್ಯಾಮಕ್ ಎಫ್ಡಿ ಗಳನ್ನು ಪರಿಗಣಿಸುತ್ತಾರೆ.

|

ನಮ್ಮ ದೇಶದಲ್ಲಿ ಹೆಚ್ಚಿನ ಜನರು ತಮ್ಮ ಹಣವನ್ನು ಸ್ಥಿರ ಠೇವಣಿಗಳಲ್ಲಿ (ಎಫ್ಡಿ) ಹೂಡಿಕೆ ಮಾಡುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಈಕ್ವಿಟಿಗಳಿಗಿಂತ ಬ್ಯಾಂಕ್ ಎಫ್ಡಿ ಗಳನ್ನು ಪರಿಗಣಿಸುತ್ತಾರೆ.
ಕಳೆದ ಒಂದು ವರ್ಷದಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಸಾಕಷ್ಟು ಕುಸಿದಿವೆ. ದೇಶದ ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಲು ಆರ್ಬಿಐ ಮುಂದಾಗಬಹುದು. ತಮ್ಮ ಎಫ್ಡಿ ಗಳ ಮೇಲೆ ಹೆಚ್ಚು ಬಡ್ಡಿದರಗಳನ್ನು ಒದಗಿಸುವ ಕೆಲವು ಬ್ಯಾಂಕುಗಳ ವಿವರ ಇಲ್ಲಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್

ಐಡಿಎಫ್‌ಸಿ ಫಸ್ಟ್ ಬ್ಯಾಂಕ್

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಒಂದು ವರ್ಷದ ಠೇವಣಿಗೆ ಶೇ. 8 ರಷ್ಟು ಬಡ್ಡಿದರವನ್ನು ನೀಡುತ್ತದೆ. ಅದಾಗ್ಯೂ, 1 ವರ್ಷ 1 ದಿನದ ಠೇವಣಿಯಿಂದ 2 ವರ್ಷಗಳ ಠೇವಣಿ ಮೇಲೂ ಕೂಡ ಶೇಕಡಾ 8 ರಷ್ಟು ಬಡ್ಡಿದರವನ್ನು ನೀಡುತ್ತದೆ. ದೇಶದ ಯಾವುದೇ ವಾಣಿಜ್ಯ ಬ್ಯಾಂಕ್ ಇಷ್ಟು ಹೆಚ್ಚಿನ ಠೇವಣಿ ದರವನ್ನು ನೀಡುವುದಿಲ್ಲ. 'ಹಿರಿಯ ನಾಗರಿಕರು ಮೇಲೆ ತಿಳಿಸಿದ ಅವಧಿಗೆ ಶೇಕಡಾ 8.50 ರಷ್ಟು ಬಡ್ಡಿದರ ಪಡೆಯುತ್ತಾರೆ. ಆದ್ದರಿಂದ, ನಿಮ್ಮ ಆದಾಯವು ತೆರಿಗೆಯ ಮಿತಿಗಿಂತ ಹೆಚ್ಚಿಲ್ಲದಿದ್ದರೆ ನೀವು ಫಾರ್ಮ್ 15 ಜಿ ಅಥವಾ 15 ಹೆಚ್ ಅನ್ನು ಸಲ್ಲಿಸುವುದು ಉತ್ತಮ.

ಸೂರ್ಯೋದಯ ಬ್ಯಾಂಕ್

ಸೂರ್ಯೋದಯ ಬ್ಯಾಂಕ್

ಇದೊಂದು ಸಣ್ಣ ಹಣಕಾಸು ಬ್ಯಾಂಕ್ ಆಗಿದ್ದು, ಸಾಕಷ್ಟು ಯೋಗ್ಯ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕಿನಲ್ಲಿ 2-3 ವರ್ಷಗಳ ಠೇವಣಿ ಶೇಕಡಾ 8.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಒಂದು ವರ್ಷ 6 ತಿಂಗಳಿಂದ 2 ವರ್ಷದ ಠೇವಣಿ ಮೇಲೆ .8.50 ರಷ್ಟು ಬಡ್ಡಿದರವನ್ನು ಪಡೆಯಬಹುದು. ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಬಡ್ಡಿದರಗಳು ಕುಸಿಯುತ್ತಿರುವುದರಿಂದ, ಹೂಡಿಕೆದಾರರು ಹೂಡಿಕೆ ಮಾಡಲು ಸ್ವಲ್ಪ ದೀರ್ಘಾವಧಿ ಆಯ್ಕೆ ಮಾಡಬಹುದು. ಸಣ್ಣ ಹಣಕಾಸು ಬ್ಯಾಂಕುಗಳನ್ನು ಸಹ ಆರ್‌ಬಿಐ ನಿಯಂತ್ರಿಸುತ್ತಿರುವುದರಿಂದ ಹೂಡಿಕೆಗೆ ಸುರಕ್ಷಿತವೆಂದು ಪರಿಗಣಿಸಬಹುದು.

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
 

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಠೇವಣಿಗಳ 24 ತಿಂಗಳಿನಿಂದ 36 ತಿಂಗಳವರೆಗೆ ಅವಧಿ ಮೇಲೆ ಶೇಕಡಾ 9 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದೇ ಅವಧಿಗೆ ಹಿರಿಯ ನಾಗರಿಕರು ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿದರ ಅಂದರೆ ಶೇಕಡಾ 9.50 ಕ್ಕೆ ಪಡೆಯುತ್ತಾರೆ. 21 ತಿಂಗಳು 1 ದಿನದಿಂದ 24 ತಿಂಗಳ ಠೇವಣಿ ಮೇಲೆ ಶೇ .8.75 ರಷ್ಟು ಬಡ್ಡಿದರವನ್ನು ಪಡೆಯಬಹುದು. ಆರ್ಥಿಕ ಬೆಳವಣಿಗೆ ನಿಧಾನಗೊಂಡಿರುವುದರಿಂದ ಬಡ್ಡಿದರಗಳಲ್ಲಿ ಮತ್ತಷ್ಟು ಕುಸಿತವನ್ನು ಕಾಣುವ ಸಾಧ್ಯತೆಯಿದೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಬಹಳ ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುತ್ತದೆ. 1 ವರ್ಷದ ಠೇವಣಿಗಳ ಮೇಲೆ ಶೇಕಡಾ 8.50 ರಷ್ಟು ಬಡ್ಡಿದರವನ್ನು ಪಡೆಯಬಹುದು. 1 ವರ್ಷದಿಂದ 2 ವರ್ಷದ ಠೇವಣಿ ಮೇಲೆ ಶೇಕಡಾ 8.60 ರಷ್ಟು ಬಡ್ಡಿದರ ಒದಗಿಸುತ್ತದೆ. ಮೊದಲೇ ಸೂಚಿಸಿದಂತೆ ಬಡ್ಡಿದರಗಳು ಕುಸಿಯುತ್ತಿರುವುದರಿಂದ ಹೂಡಿಕೆದಾರರು ದೀರ್ಘಾವಧಿಯನ್ನು ಆಯ್ಕೆ ಮಾಡಬಹುದು.

 

 

ಉಜ್ಜಿವನ್

ಉಜ್ಜಿವನ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 735 ದಿನಗಳ ಠೇವಣಿಗಳ ಮೇಲೆ ಶೇಕಡಾ 8.15 ರಷ್ಟು ಬಡ್ಡಿದರವನ್ನು ನೀಡುತ್ತದೆ. ಮೇಲೆ ತಿಳಿಸಿದ ಎಫ್ಡಿ ಗಳಿಗೆ ಹೋಲಿಸಿದರೆ ಇದು ಬಡ್ಡಿದರದ ದೃಷ್ಟಿಯಿಂದ ಉತ್ತಮವಲ್ಲ. ಆದಾಗ್ಯೂ, 1 ರಿಂದ 2 ವರ್ಷದ ಠೇವಣಿ ಮೇಲೆ ಶೇಕಡಾ 8.10 ರಷ್ಟು ಬಡ್ಡಿದರವನ್ನು ನೀಡುತ್ತದೆ.

English summary

5 Bank FDs With High Interest Rates

Interest rates on fixed deposits (FDs) have fallen a great deal in the last 1-year. As growth slows considerably,.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X