ಪೋಸ್ಟ್ ಆಫೀಸ್ ಯೋಜನೆಯಲ್ಲಿ ರೂ. 5000, 10,000, 1 ಲಕ್ಷ ಡಬಲ್ ಮಾಡುವುದು ಹೇಗೆ?

ಹೂಡಿಕೆ ಮಾಡುವ ಹಣ ಅಲ್ಪಾವಧಿಯಲ್ಲಿ ಡಬಲ್ ಮಾಡಬೇಕೆಂಬ ಬಯಕೆ ಹೆಚ್ಚಿನ ಹೂಡಿಕೆದಾರರಲ್ಲಿ ಇರುತ್ತದೆ. ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ ಹೂಡಿಕೆ ಲೆಕ್ಕಾಚಾರದ ಪ್ರಕಾರ ಅಲ್ಪಾವಧಿಯಲ್ಲಿ ಹಣ ಡಬಲ್ ಮಾಡಲು ಅವಕಾಶ ಕಲ್ಪಿಸುತ್ತದೆ.

ಹೂಡಿಕೆ ಮಾಡುವ ಹಣ ಅಲ್ಪಾವಧಿಯಲ್ಲಿ ಡಬಲ್ ಮಾಡಬೇಕೆಂಬ ಬಯಕೆ ಹೆಚ್ಚಿನ ಹೂಡಿಕೆದಾರರಲ್ಲಿ ಇರುತ್ತದೆ. ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ ಹೂಡಿಕೆ ಲೆಕ್ಕಾಚಾರದ ಪ್ರಕಾರ ಅಲ್ಪಾವಧಿಯಲ್ಲಿ ಹಣ ಡಬಲ್ ಮಾಡಲು ಅವಕಾಶ ಕಲ್ಪಿಸುತ್ತದೆ.
ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಲು ಬಯಸುವಿರಾ? ಪ್ರಸ್ತುತ ಅಂಚೆ ಕಚೇರಿಗಿಂತ ನಿಮ್ಮ ಹೂಡಿಕೆ ಮೊತ್ತವನ್ನು ದ್ವಿಗುಣಗೊಳಿಸಲು ಖಾತರಿಪಡಿಸುವ ದೊಡ್ಡ ಹಣಕಾಸು ಸಂಸ್ಥೆ ಇನ್ನೊಂದಿಲ್ಲ. ಬ್ಯಾಂಕ್ ಸ್ಥಿರ ಠೇವಣಿಗಳು ಇದಕ್ಕೆ ಪರ್ಯಾಯವಾಗಿ ಆಯ್ಕೆಗಳಲ್ಲಿ ಒಂದಾಗಿ ಕಾಣಬಹುದು. ಇದು ಆದಾಯದ ಮೇಲೆ ಒಂದು ರೀತಿಯ ಖಾತರಿಯೊಂದಿಗೆ ಬರುತ್ತದೆ. ಪೋಸ್ಟ್ ಆಫೀಸ್ ಗೆ ಹೋಲಿಸಿದರೆ ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ನೀಡುವ ಬಡ್ಡಿದರ ಕಡಿಮೆ. ಬನ್ನಿ ನೋಡೋಣ..

ಕೆವಿಪಿ ಯೋಜನೆಯಲ್ಲಿ ಡಬಲ್

ಕೆವಿಪಿ ಯೋಜನೆಯಲ್ಲಿ ಡಬಲ್

ಪೋಸ್ಟ್ ಆಫೀಸ್‌ ಒದಗಿಸುವ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆಯಲ್ಲಿ ರೂ. 5000 ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ನೀವು ಪ್ರಸ್ತುತ 7.6 ಶೇಕಡಾ ಬಡ್ಡಿದರದಲ್ಲಿ 113 ತಿಂಗಳಲ್ಲಿ (9 ವರ್ಷ ಮತ್ತು 5 ತಿಂಗಳು) ರೂ. 10,000 ಮೊತ್ತ ಪಡೆಯುತ್ತಿರಿ.
ನೀವು ಅದೇ 5000 ಮೊತ್ತವನ್ನು ಎಸ್‌ಬಿಐ ಸ್ಥಿರ ಠೇವಣಿಯಲ್ಲಿ (ಎಫ್ಡಿ) ಹೂಡಿಕೆ ಮಾಡಿದರೆ 113 ತಿಂಗಳಲ್ಲಿ ಕೇವಲ ರೂ. 8965 ಆಗುತ್ತದೆ. ಎಸ್‌ಬಿಐನ ಆನ್‌ಲೈನ್ ಮೆಚುರಿಟಿ ವ್ಯಾಲ್ಯೂ ಕ್ಯಾಲ್ಕುಲೇಟರ್ ಪ್ರಕಾರ ಎಸ್‌ಬಿಐನಲ್ಲಿ ಇದೇ ಅವಧಿಯಲ್ಲಿ ರೂ. 10,000 ಮೊತ್ತ ಹೂಡಿದರೆ ರೂ. 17,931 ಮತ್ತು ರೂ. 1 ಲಕ್ಷ ಮೊತ್ತ ರೂ. 1,79,318 ಆಗುತ್ತದೆ.
ಎಸ್‌ಬಿಐ ಪ್ರಸ್ತುತ 5-10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇಕಡಾ 6.25 ಬಡ್ಡಿಯನ್ನು ನೀಡುತ್ತಿದೆ.

ಎಸ್ಬಿಐ, ಎಚ್‌ಡಿಎಫ್ಸಿ ಗಿಂತ ಪೋಸ್ಟ್ ಆಫೀಸ್ ಬೆಸ್ಟ್

ಎಸ್ಬಿಐ, ಎಚ್‌ಡಿಎಫ್ಸಿ ಗಿಂತ ಪೋಸ್ಟ್ ಆಫೀಸ್ ಬೆಸ್ಟ್

ಎಚ್‌ಡಿಎಫ್‌ಸಿ ಸ್ಥಿರ ಠೇವಣಿಯಲ್ಲಿ ರೂ. 5000 ಮೊತ್ತ 113 ತಿಂಗಳಲ್ಲಿ ರೂ. 9526 ಆದರೆ, ರೂ. 10,000 ಮೊತ್ತ ರೂ. 19,049 ಮತ್ತು ಅದೇ ಅವಧಿಯಲ್ಲಿ ಒಂದು ಒಂದು ಲಕ್ಷ ಮೊತ್ತವು ರೂ. 190,490 ಆಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿ ಕ್ಯಾಲ್ಕುಲೇಟರ್ ತಿಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತುತ ಎಫ್ಡಿ ಠೇವಣಿಗಳಿಗೆ ಶೇ. 6.9 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಲಿಸಿದರೆ, ಪೋಸ್ಟ್ ಆಫೀಸ್‌ನ ಕೆವಿಪಿ ಶೇಕಡಾ 7.6 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ.

ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ವೈಶಿಷ್ಟ್ಯಗಳು

ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ವೈಶಿಷ್ಟ್ಯಗಳು

ನೀವು ಕನಿಷ್ಟ ರೂ. 1000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕೆವಿಪಿಯಲ್ಲಿ ಜಮಾ ಮಾಡಬಹುದು. ಕೆವಿಪಿಯಲ್ಲಿನ ಹೂಡಿಕೆಗೆ ಮಿತಿಯಿಲ್ಲ. ನಿಮಗಾಗಿ ಅಥವಾ ಅಪ್ರಾಪ್ತ ವಯಸ್ಕನ ಪರವಾಗಿ ಯಾವುದೇ ವಿಭಾಗೀಯ ಅಂಚೆ ಕಚೇರಿಯಿಂದ ಕೆವಿಪಿ ಪ್ರಮಾಣಪತ್ರಗಳನ್ನು ಖರೀದಿಸಬಹುದು. ಇಬ್ಬರು ವಯಸ್ಕರು ಸಹ ಜಂಟಿಯಾಗಿ ಕೆವಿಪಿ ಯೋಜನೆ ಖರೀದಿಸಬಹುದು. ಕೆವಿಪಿಯಲ್ಲಿ ನಾಮನಿರ್ದೇಶನ ಸೌಲಭ್ಯ ಕೂಡ ಇರುತ್ತದೆ. ಇದನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಮತ್ತು ಒಂದು ಅಂಚೆ ಕಚೇರಿಯಿಂದ ಇನ್ನೊಬ್ಬರಿಗೆ ವರ್ಗಾಯಿಸಬಹುದು. ನೀವು ಕೆವಿಪಿ ಪ್ರಮಾಣಪತ್ರಗಳನ್ನು ವಿತರಿಸಿದ ದಿನಾಂಕದಿಂದ 2.5 ವರ್ಷಗಳ ನಂತರ ಎನ್‌ಕ್ಯಾಶ್ ಮಾಡಬಹುದು.

ಇತರೆ ಯೋಜನೆಗಳು

ಇತರೆ ಯೋಜನೆಗಳು

ಅಂಚೆ ಕಚೇರಿ ಇತರ ಹೂಡಿಕೆದಾರರಿಗೆ ಆರೋಗ್ಯಕರ ಬಡ್ಡಿದರಗಳೊಂದಿಗೆ ಟರ್ಮ್ ಡಿಪಾಸಿಟ್, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯ ಯೋಜನೆ ಮುಂತಾದ ಇತರ ಯೋಜನೆಗಳನ್ನು ಉತ್ತಮ ರಿಟರ್ನ್ ನೊಂದಿಗೆ ಒದಗಿಸುತ್ತದೆ.

 

 

ಅತಿಹೆಚ್ಚು ಬಡ್ಡಿದರ ನೀಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ

ಅತಿಹೆಚ್ಚು ಬಡ್ಡಿದರ ನೀಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ

ಡಬಲ್ ಹಣ ಮಾಡಬಹುದಾದ ಯೋಜನೆಗಳ ಜೊತೆಗೆ ಅತಿಹೆಚ್ಚು ಬಡ್ಡಿದರ ನೀಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ವಿವರ ಇಲ್ಲಿದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ
ಈ ಮಾಸಿಕ ಆದಾಯ ಯೋಜನೆಯಲ್ಲಿ ೧೫೦೦ ರೂಪಾಯಿ ಅಥವಾ ಅದರ ದ್ವಿಗುಣಗಳಲ್ಲಿ ಹೂಡಿಕೆ ಮಾಡಬಹುದು. ಏಕ ವ್ಯಕ್ತಿಯ ಹೆಸರಿನ ಖಾತೆಯಲ್ಲಿ ಗರಿಷ್ಠ ೪.೫ ಲಕ್ಷ ರೂಪಾಯಿ ಹಾಗೂ ಜಂಟಿ ಖಾತೆಯಲ್ಲಿ ಗರಿಷ್ಠ ೯ ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಬಡ್ಡಿ ದರ ಈ ಖಾತೆಯಲ್ಲಿ ವಾರ್ಷಿಕ ಶೇ. ೭.೫ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಬಡ್ಡಿಯನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಹೂಡಿದ ಮೊತ್ತವನ್ನು ಒಂದು ವರ್ಷದ ನಂತರ ಹಾಗೂ ೩ ವರ್ಷಗಳ ಮೊದಲು ಹೂಡಿಕೆಯ ಶೇ. ೨ ರಷ್ಟು ಡಿಸ್ಕೌಂಟ್ ನೊಂದಿಗೆ ಹಾಗೂ ೩ ವರ್ಷಗಳ ನಂತರ ಶೇ. ೧ರಷ್ಟು ಡಿಸ್ಕೌಂಟ್ ನೊಂದಿಗೆ ಅವಧಿಗೆ ಮುನ್ನ ಹಿಂಪಡೆಯಬಹುದು. (ಹೂಡಿಕೆಯ ಮೊತ್ತದಲ್ಲಿ ಹಣದ ಕಡಿತವೇ ಡಿಸ್ಕೌಂಟ್ ಆಗಿದೆ.)

 

5 ವರ್ಷಗಳ ಅಂಚೆ ಕಚೇರಿ ಆರ್ಡಿ ಸ್ಕೀಮ್

5 ವರ್ಷಗಳ ಅಂಚೆ ಕಚೇರಿ ಆರ್ಡಿ ಸ್ಕೀಮ್

ತಿಂಗಳಿಗೆ ಕನಿಷ್ಠ ೧೦ ರೂಪಾಯಿ ಅಥವಾ ೫ ರೂಪಾಯಿಯ ದ್ವಿಗುಣಗಳಲ್ಲಿ ಯಾವುದೇ ಮೊತ್ತವನ್ನು ಪಾವತಿಸುವ ಮೂಲಕ ರೆಕರಿಂಗ್ ಡಿಪಾಸಿಟ್ ಖಾತೆ ಆರಂಭಿಸಬಹುದು. ಈ ಖಾತೆಗೆ ಜಮೆ ಮಾಡಬಹುದಾದ ಮೊತ್ತಕ್ಕೆ ಗರಿಷ್ಠ ಮಿತಿಯನ್ನು ವಿಧಿಸಲಾಗಿಲ್ಲ. ಮಾಸಿಕವಾಗಿ ೧೦ ರೂಪಾಯಿ ಪಾವತಿಸುವ ಖಾತೆಯು ಪಕ್ವತಾ ದಿನಾಂಕದಂದು ೭೧೭.೪೩ ರೂಪಾಯಿಗಳನ್ನು ನಿಮಗೆ ನೀಡುತ್ತದೆ. ಪ್ರತಿ ಬಾರಿ ಒಂದು ವರ್ಷದಂತೆ ಮತ್ತೆ ೫ ವರ್ಷಗಳವರೆಗೆ ಖಾತೆಯನ್ನು ವಿಸ್ತರಿಸುವ ಅವಕಾಶವಿದೆ. ಬಡ್ಡಿ ದರ ಈ ಖಾತೆಗೆ ವಾರ್ಷಿಕ ಶೇ. 6.9 ಬಡ್ಡಿ ದರ ನಿಗದಿಪಡಿಸಲಾಗಿದೆ. ಕ್ಯಾಲೆಂಡರ್ ತಿಂಗಳಿನ ೧೫ನೇ ತಾರೀಕಿನವರೆಗೆ ತೆರೆಯಲಾದ ಆರ್ ಡಿ ಖಾತೆಯಲ್ಲಿ ಆಯಾ ತಿಂಗಳಿನ ೧೫ ನೇ ತಾರೀಕಿನವರೆಗೆ ಹಾಗೂ ೧೬ರ ನಂತರ ತೆರೆಯಲಾದ ಖಾತೆಯಲ್ಲಿ ಆಯಾ ತಿಂಗಳಿನ ಕೊನೆಯ ದಿನಾಂಕದವರೆಗೆ ಮಾಸಿಕ ಕಂತು ಪಾವತಿಸಬಹುದು. ನಿಗದಿತ ದಿನಾಂಕದೊಳಗೆ ಕಂತು ಕಟ್ಟದಿದ್ದಲ್ಲಿ ಪ್ರತಿ ೫ ರೂಪಾಯಿಗೆ ೫ ಪೈಸೆ ದಂಡ ಶುಲ್ಕ ವಿಧಿಸಲಾಗುತ್ತದೆ. ಸತತವಾಗಿ ೪ ಬಾರಿ ಕಂತು ತಪ್ಪಿಸಿದಲ್ಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೂ ಎರಡು ತಿಂಗಳ ಒಳಗಾಗಿ ಖಾತೆಯನ್ನು ಪುನಾರಂಭಿಸಬಹುದು. ಒಂದು ವೇಳೆ ಎರಡು ತಿಂಗಳೊಳಗಾಗಿ ಖಾತೆಯನ್ನು ನವೀಕರಣಗೊಳಿಸದಿದ್ದಲ್ಲಿ ನಂತರ ಖಾತೆಗೆ ಯಾವುದೇ ಕಂತು ಪಾವತಿಸಲು ಸಾಧ್ಯವಿಲ್ಲ.

ಪಿಪಿಎಫ್ ಖಾತೆ

ಪಿಪಿಎಫ್ ಖಾತೆ

೧೫ ವರ್ಷ ಕಾಲಾವಧಿಗೆ ಈ ಖಾತೆಯಲ್ಲಿ ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಕನಿಷ್ಠ ೫೦೦ ರೂಪಾಯಿ ಹಾಗೂ ಗರಿಷ್ಠ ೧.೫ ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಏಕ ಗಂಟಿನಲ್ಲಿ ಅಥವಾ ೧೨ ಕಂತುಗಳ ರೂಪದಲ್ಲಿ ಹಣವನ್ನು ಪಾವತಿಸಲು ಅವಕಾಶವಿದೆ. ಈ ಯೋಜನೆಯ ಪಕ್ವತಾ ಅವಧಿ ೧೫ ವರ್ಷಗಳಾಗಿದೆ. ಪಕ್ವತಾ ಅವಧಿ ನಂತರದ ಒಂದು ವರ್ಷದೊಳಗೆ ಯೋಜನೆಯನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ೧೫ ವರ್ಷಗಳ ಮುಂಚೆ ಈ ಖಾತೆಯನ್ನು ಮುಕ್ತಾಯಗೊಳಿಸುವ ಅವಕಾಶವಿಲ್ಲ. ಈ ಯೋಜನೆಯಲ್ಲಿ ತೊಡಗಿಸುವ ಮೊತ್ತವು ಆದಾಯ ತೆರಿಗೆ ಕಾಯ್ದೆ ೮೦ ಸಿ ಪ್ರಕಾರ ವಿನಾಯಿತಿಗೆ ಒಳಪಟ್ಟಿರುತ್ತದೆ. ಬಡ್ಡಿ ದರ ಈ ಯೋಜನೆಯಲ್ಲಿ ವಾರ್ಷಿಕ ಶೇ. ೭.೬ರಷ್ಟು ಬಡ್ಡಿ ದರ (ವಾರ್ಷಿಕವಾಗಿ ಸೇರ್ಪಡೆ) ನಿಗದಿಪಡಿಸಲಾಗಿದೆ. ಬಡ್ಡಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆ

ತಮ್ಮ ಹೆಣ್ಣು ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬಹುದು. ಪ್ರತಿ ಆರ್ಥಿಕ ವರ್ಷದಲ್ಲಿ ಈ ಖಾತೆಗೆ ಕನಿಷ್ಠ 1000 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿ ಜಮಾ ಮಾಡಬಹುದು. ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆದಾರರ 18ನೇ ವಯಸ್ಸಿನಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ. 50ರಷ್ಟನ್ನು ಹಿಂಪಡೆಯಲು ಅವಕಾಶವಿದೆ. ಹೆಣ್ಣು ಮಗುವಿಗೆ 21 ವರ್ಷವಾದ ನಂತರ ಖಾತೆ ಮುಕ್ತಾಯಗೊಳಿಸಬಹುದು.
ಬಡ್ಡಿ ದರ ಇದರಲ್ಲಿ ವಾರ್ಷಿಕ 8.5 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+