For Quick Alerts
ALLOW NOTIFICATIONS  
For Daily Alerts

ಎಷ್ಟೇ ದುಡಿದರೂ ನಿಮ್ಮ ಬಳಿ ಹಣ ನಿಲ್ಲುತ್ತಿಲ್ಲವೆ? ಲಕ್ಷ್ಮೀ ನೆಲೆಸಲು ಹೀಗೆ ಮಾಡಿ..

ನಮ್ಮಲ್ಲಿ ಸಾಕಷ್ಟು ಜನರು ಲಕ್ಷ ಲಕ್ಷ ದುಡಿಯುತ್ತಿರುತ್ತಾರೆ. ಆದರೆ ಅವರ ಬಳಿ ಹಣ ಮಾತ್ರ ನಿಲ್ಲುವುದಿಲ್ಲ. ಎಷ್ಟೇ ದುಡಿದರೂ ಕೈಸೇರುವ ಹಣ ಖರ್ಚಾಗುತ್ತಲೇ ಇರುತ್ತದೆ. ಮತ್ತೆ ತಿಂಗಳ ಕೊನೆಗೆ ಖಾಲಿ ಕೈಯಲ್ಲಿರುತ್ತಾರೆ.

|

ನಮ್ಮಲ್ಲಿ ಸಾಕಷ್ಟು ಜನರು ಲಕ್ಷ ಲಕ್ಷ ದುಡಿಯುತ್ತಿರುತ್ತಾರೆ. ಆದರೆ ಅವರ ಬಳಿ ಹಣ ಮಾತ್ರ ನಿಲ್ಲುವುದಿಲ್ಲ. ಎಷ್ಟೇ ದುಡಿದರೂ ಕೈಸೇರುವ ಹಣ ಖರ್ಚಾಗುತ್ತಲೇ ಇರುತ್ತದೆ. ಮತ್ತೆ ತಿಂಗಳ ಕೊನೆಗೆ ಖಾಲಿ ಕೈಯಲ್ಲಿರುತ್ತಾರೆ. ಎಷ್ಟೋ ಜನರು ಇಂತಹ ಮಾತುಗಳನ್ನು ಹೇಳುವುದನ್ನು ಕೇಳಿರುತ್ತಿರಿ.
ಹಣಕಾಸು ವೃದ್ಧಿಗೆ ವಾಸ್ತುಶಾಸ್ತ್ರದಲ್ಲಿ ಹಲವಾರು ಉಪಾಯಗಳು, ಪರಿಹಾರ ಮಾರ್ಗಗಳು ಹೇಳಲಾಗಿದೆ.
ನೀವು ಮಾಡುವ ಎಷ್ಟೋ ಕೆಲಸಗಳು ನಿಮಗೆ ತಿಳಿಯದೆ ಸಮಸ್ಯೆ ತಂದೊಡ್ಡುತ್ತವೆ. ವಾಸ್ತು ಶಾಸ್ತ್ರದ ಅರಿವಿರದ ವ್ಯಕ್ತಿಗಳಿಗೆ ಅವರು ಮಾಡುವ ಈ ಕೆಲಸಗಳು ವಾಸ್ತು ದೋಷಕ್ಕೆ ಕಾರಣವಾಗುತ್ತವೆ ಎಂಬುದರ ಅರಿವಿರುವುದಿಲ್ಲ. ಹಗಲು-ರಾತ್ರಿ ದುಡಿದರೂ ಹಣ ಸಾಕಾಗುತ್ತಿಲ್ಲ ಎಂಬ ಕೊರಗು ಮಾತ್ರ ಕಾಡುತ್ತಿರುತ್ತದೆ.

ಪೊರಕೆ

ಪೊರಕೆ

ಪೊರಕೆಯನ್ನು ಲಕ್ಷ್ಮೀ ಎನ್ನುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇದ್ದೆ ಇರುತ್ತದಲ್ಲವೆ? ಮನೆಯಲ್ಲಿ ಎಲ್ಲೆಂದರಲ್ಲಿ ಪೊರಕೆ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು. ಕಪಾಟಿನ ಹಿಂದೆ ಅಥವಾ ಬೆಲೆ ಬಾಳುವ ವಸ್ತುಗಳ ಹಿಂದೆ ಅಥವಾ ಪಕ್ಕದಲ್ಲಿ ಪೊರಕೆಯನ್ನು ಇಡಬಾರದು.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಗಾಳಿ ಬೆಳಕು ಸಾಕಷ್ಟಿರಬೇಕು. ನಮ್ಮಲ್ಲಿ ಅನೇಕರು ಅಡುಗೆ ಮನೆಯಲ್ಲಿ ಮಾತ್ರೆಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾತ್ರೆ ಇಡುವುದು ಶುಭವಲ್ಲ. ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಲು ಕಾರಣವಾಗಿ, ಹಣ ಖರ್ಚಾಗಲು ಕಾರಣವಾಗುತ್ತದೆ.

ಶಾಚಾಲಯ, ಸ್ನಾನಗೃಹ

ಶಾಚಾಲಯ, ಸ್ನಾನಗೃಹ

ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ಸ್ವಚ್ಛವಾಗಿಡಬೇಕು. ಜೊತೆಗೆ ಶೌಚಾಲಯ, ಸ್ನಾನಗೃಹದ ಬಾಗಿಲುಗಳನ್ನು ಅನವಶ್ಯಕವಾಗಿ ತೆರೆದಿಡಬಾರದು. ಇದು ಹಣ ಖರ್ಚಾಗಲು ಕಾರಣವಾಗುತ್ತದೆ.

ಕಂಡಕಂಡಲ್ಲಿ ಚಿತ್ರ ಬೇಡ
 

ಕಂಡಕಂಡಲ್ಲಿ ಚಿತ್ರ ಬೇಡ

ಪೆನ್ಸಿಲ್, ಪೆನ್, ಮಾರ್ಕರ್ ನಿಂದ ಮನೆಯ ಗೋಡೆ ಅಥವಾ ಖುರ್ಚಿ ಮೇಲೆ ಯಾವುದೇ ಚಿತ್ರ ಬಿಡಿಸದಂತೆ ನೋಡಿಕೊಳ್ಳಿ. ಇದರಿಂದ ಖರ್ಚು ಹೆಚ್ಚಾಗುತ್ತಲ್ಲದೇ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಸ ಸಂಗ್ರಹ

ಕಸ ಸಂಗ್ರಹ

ನಿಮ್ಮ ಮನೆ ಅಥವಾ ಅಂಗಡಿಯ ಉತ್ತರ-ಪೂರ್ವ ದಿಕ್ಕಿನಲ್ಲಿ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಇದರಿಂದ ವಿಷ್ಣು ಹಾಗೂ ಲಕ್ಷ್ಮಿ ಕೋಪಿಸಿಕೊಳ್ಳುತ್ತಾರೆ.

ಧನ ನಷ್ಟಕ್ಕೆ ನಾಂದಿ

ಧನ ನಷ್ಟಕ್ಕೆ ನಾಂದಿ

ನೀವು ಮಲಗುವ ಬೆಡ್ ರೂಂನಲ್ಲಿ ದೇವರ ಮೂರ್ತಿಯಿಟ್ಟು ಪೂಜೆ ಮಾಡಬೇಡಿ. ಇದು ಅಶಾಂತಿ, ಆರ್ಥಿಕ ದುಃಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗಬಹುದು.
ಮನೆಯಲ್ಲಿ ಮುಳ್ಳಿನ, ಹಾಲು ಬರುವಂತಹ ವಿಷದ ಗಿಡವನ್ನು ನೆಡಬಾರದು. ಇದು ಧನ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

 

 

ಹರಿದ/ಹಾಳಾದ ಪರ್ಸ್

ಹರಿದ/ಹಾಳಾದ ಪರ್ಸ್

ಪ್ರತಿಯೊಬ್ಬರ ಬಳಿಯಿರುವ ಪರ್ಸ್ ಇದ್ದೇ ಇರುತ್ತದೆ. ನಿಮ್ಮ ಬಳಿಯಿರುವ ಪರ್ಸ್ ಹರಿದು ಹೋಗಿದ್ದರೆ ಅಥವಾ ಹಳೆಯದಾಗಿದೆಯೆ ಬದಲಾಯಿಸಿ. ನೀವು ಹಣ ಇಡುವ ಪರ್ಸ್ ಒಳ್ಳೆಯ ಸ್ಥಿತಿಯಲ್ಲಿರಬೇಕು. ತುಕ್ಕು ಹಿಡಿದಿರಬಾರದು, ಮುರಿದು ಹೋಗಿರಬಾರದು. ಪರ್ಸ್ ನಲ್ಲಿ, ಲಾಕರ್ ನಲ್ಲಿ ಲಕ್ಷ್ಮೀ ಫೋಟೋ ಹಾಗೂ ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನಿಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ.

ಹರಿದ, ಹಳೆಯ ಹಾಳಾದ ಬಟ್ಟೆ

ಹರಿದ, ಹಳೆಯ ಹಾಳಾದ ಬಟ್ಟೆ

ಹರಿದ,ಹಳೆಯ ಅಥವಾ ಹಾಳಾದ ಬಟ್ಟೆಗಳು ಎಲ್ಲರ ಮನೆಯೊಳಗೆ ಇರುವುದು ಸಾಮಾನ್ಯ. ಒಂದು ವೇಳೆ ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಮೂಟೆ ಕಟ್ಟಿ ಮನೆಯಲ್ಲಿ ಇಟ್ಟಿದ್ದರೆ ಇದು ಶುಭ ಸಂಕೇತವಲ್ಲ. ವಾಸ್ತುಶಾಸ್ತ್ರದ ಪ್ರಕಾರ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

<strong>ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!</strong>ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

Read more about: money savings finance news
English summary

How to avoid Poverty and money loss

How to avoid Poverty and money loss given many solutions here.
Story first published: Wednesday, September 18, 2019, 11:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X