ಸೋಲಿನಲ್ಲಿ ಗೆಲುವಿದೆ! ನೀವು ಮಾಡುವ ಉದ್ಯೋಗ/ಬಿಸಿನೆಸ್ ನಲ್ಲಿ ಯಶಸ್ವಿಯಾಗಬೇಕೆ?

ಉದ್ಯೋಗ, ಬಿಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತೇನೆ ಎನ್ನುವ ಆಶಾವಾದಿಗಳಿಗೆ ಪೂರಕವಾಗಿರುವ ಸೂಕ್ತ ವಾತಾವರಣವಿದೆ. ನಮ್ಮ ಯುವ ಪೀಡಿ, ಹಣಕಾಸು ವ್ಯವಸ್ಥೆ, ಕೆಲಸ ಮಾಡುವ ಕೌಶಲ್ಯ, ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ವಾತಾವರಣ ಇದೆ.

ಉದ್ಯೋಗ, ಬಿಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತೇನೆ ಎನ್ನುವ ಆಶಾವಾದಿಗಳಿಗೆ ಪೂರಕವಾಗಿರುವ ಸೂಕ್ತ ವಾತಾವರಣವಿದೆ. ನಮ್ಮ ಯುವ ಪೀಡಿ, ಹಣಕಾಸು ವ್ಯವಸ್ಥೆ, ಕೆಲಸ ಮಾಡುವ ಕೌಶಲ್ಯ, ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ವಾತಾವರಣ ಇದೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಪ್ರಯತ್ನ ಪಡಲೇಬೇಕು. ಉದ್ಯಮದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಇಟ್ಟ ಗುರಿ ತಪ್ಪುವುದಿಲ್ಲ. ಕುತೂಹಲಕಾರಿಯಾದ ಈ ನಿಯಮಗಳು ಯಾವುವು. ಇವುಗಳನ್ನು ಅರಿತು ಮುನ್ನಡೆದರೆ ಎಂತಹ ಕಠಿಣ ಪರಿಸ್ಥಿತಿಯಿಂದಲೂ ಹೊರಬರಲು ಸಾಧ್ಯವೆಂದರೆ ಇದು ಬರಿ ಹೇಳಿಕೆಯ ಮಾತಲ್ಲ. ವಿಶ್ವದ್ಯಾದ್ಯಂತ ಹಲವಾರು ಗಣ್ಯ ಉದ್ಯಮಿಗಳು ಇವುಗಳನ್ನು ಪ್ರಯತ್ನಿಸಿ ಪರಿಶೀಲಿಸಿದ್ದಾರೆ. ಈಗ ನಾವೂ ಇವನ್ನು ಅರಿತು ನಮ್ಮ ಉದ್ಯಮದ ಪ್ರಯಾಣದಲ್ಲಿ ನಮ್ಮ ಜೊತೆಗಾರವನ್ನಾಗಿಸಿಕೊಳ್ಳೋಣ, ನಮ್ಮ ಕನಸುಗಳನ್ನು ನನಸಾಗುವುದರ ಎಡೆಗೆ ಧೈರ್ಯದಿಂದ ಸಾಗೋಣ.

ಬಿಸಿನೆಸ್ ಐಡಿಯಾ, ಪರಿಶ್ರಮ

ಬಿಸಿನೆಸ್ ಐಡಿಯಾ, ಪರಿಶ್ರಮ

ಇಂದಿನ ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೇಡಿಕೆ ಇದೆ ಅನ್ನುವುದನ್ನು ಅರಿತುಕೊಳ್ಳಬೇಕು. ಇದು ಹೊಸ ಉದ್ಯಮಿ ಮಾಡಬೇಕಾದ ಮೊದಲ ಕೆಲಸ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವುದನ್ನು ಅಥವಾ ಜನರಿಗೆ ಬೇಡಿಕೆ ಇಲ್ಲದಿರುವುದನ್ನು ಉದ್ಯಮಿ ತನ್ನ ಪರಿಶ್ರಮದ ಬುಡ ಮಾಡಿಕೊಂಡರೆ ಮೊದಲನೇ ಹೆಜ್ಜೆಯಿಂದಲೇ ಸೋಲನ್ನು ಹಿಂಬಾಲಿಸಿದಂತೆ. ಜನಕ್ಕೆ ಯಾವ ಸರಕು ಅಥವಾ ಸೇವೆ ಅಗತ್ಯವಾಗಿ ಬೇಕು ಅದರ ಸುತ್ತ ನಮ್ಮ ಪರಿಶ್ರಮವನ್ನು ನಾವು ಹರಿಬಿಡಬೇಕು. ಇದು ಒಂದೇ ಏಟಿಗೆ ಕೈಗೆ ಸಿಗುವ ವಸ್ತು ಅಲ್ಲ. ಸುಮಾರು ಪರಿಶ್ರಮ ಪಡಬೇಕಾಗುತ್ತದೆ. ಏಕೆಂದರೆ ನಾವು ಜನರಿಗೆ ಕೊಡಲು ಇಚ್ಚಿಸುವುದು ಒಂದಾದರೆ ಜನರಿಗೆ ನಿಜವಾಗಿಯೂ ಬೇಕಾಗಿರುವುದು ಬೇರೆಯದೇ ಆಗಿರುತ್ತದೆ. ಇದನ್ನು ಹಿಡಿತಕ್ಕೆ ತಂದು ಒಂದು ಹಂತಕ್ಕೆ ತರಲು ನವ ಉದ್ಯಮಿ ಬಹು ಸಾಹಸ ಪಡಲೇಬೇಕು ಹಾಗು ಇದಕ್ಕೆ ಎಷ್ಟು ಆದ್ಯತೆ ಮತ್ತು ಸಮಯ ಕೊಡಬೇಕೋ ಅಷ್ಟು ಕೊಡಲೇಬೇಕಾಗುತ್ತದೆ. ಬೇರೆ ದಾರಿಯೇ ಇಲ್ಲ. ಇದನ್ನು ಮಾಡಿದ ನಂತರವೇ ಮುಂದಿನ ಮಾತು.

ನಿರಂತರ ಪರಿಶ್ರಮ

ನಿರಂತರ ಪರಿಶ್ರಮ

ನಮ್ಮ ಧ್ಯೆಯೆ ಯಾವುದು ಅನ್ನುವುದು ಖಚಿತ ಆದ ಮೇಲೆ ನಾವು ಗುರಿ ಸಾಧಿಸುವ ಸಲುವಾಗಿ ಬದ್ಧರಾಗಿ ಕೆಲಸ ಮಾಡಬೇಕು. ನಿರಂತರ ಪರಿಶ್ರಮದಿಂದ ಮಾತ್ರ ನಾವು ಮುಂದೆ ಸಾಗಬಹುದು. ಏನೆ ಬಂದರು ಎದುರಿಸಿ ಕೈ ಹಿಡಿದ ಕೆಲಸ ಮಾಡೇ ತೀರುತ್ತೇನೆ ಅನ್ನುವ ಒಂದು ಮೊಂಡುತನ ಇರಬೇಕು. ಹೀಗಿದ್ದರೆ ಮಾತ್ರ ಮೊದಲಲ್ಲಿ ಎದಿರಾಗುವ ಸೋಲುಗಳು ನಿರಾಶೆಗಳನ್ನು ದಾಟಿ ಮುಂದೆ ಹೋಗಲು ಸಾಧ್ಯ. ಇದು ಇಲ್ಲದಿದ್ದಲ್ಲಿ ಇಷ್ಟೇ ಇದು ಎಂದು ಸೋಲು ಅಪ್ಪುವವರ ಪೈಕಿಗೆ ಸೇರುವುದಕ್ಕೆ ಎದುರುಬಂದು ನಿಂತಂತೆ ಇರುತ್ತದೆ. ಬಹಳ ಬೇಗ ನಿರಾಶೆಗಳಿಗೆ ಗುರಿಯಾಗುತ್ತೇವೆ. ಈ ಹಂತ ದಾಟಿದ ಮೇಲೆ ಮುಂದಿನ ನಿಯಮಗಳು ದಿನನಿತ್ಯ ಕೆಲಸದಲ್ಲಿ ತೊಡಗುವಾಗ ಅರಿವುವಿಟ್ಟುಕೊಳ್ಳಬೇಕಾದವು.

ಟೀಮ್ ಆಯ್ಕೆ

ಟೀಮ್ ಆಯ್ಕೆ

ಮನುಷ್ಯ ತಾನೊಬ್ಬನೇ ಸಾಧಿಸುವುದನ್ನು ಬೇರೆಯವರೊಡನೆ ಒಡಗೂಡಿ ಬಹಳ ಬೇಗ ಮತ್ತು ಸುಲಭವಾಗಿ ಸಾಧಿಸಬಹುದು. ಇದಕ್ಕೆ ಟೀಮ್ ವರ್ಕ್ ಅಥವಾ ತಂಡ ಕಟ್ಟಿಕೊಂಡು ದುಡಿಯುವುದು ಅನ್ನಬಹುದು. ಒಂದು ಒಳ್ಳೆಯ ತಂಡ ಕಟ್ಟಿಕೊಂಡು ಎಲ್ಲರೂ ಜೊತೆಯಾಗಿ ಹಾಕಿದ ಗುರಿಗೆ ತಕ್ಕಂತೆ ಶ್ರಮಪಟ್ಟು ಒಟ್ಟಿಗೆ ದುಡಿದರೆ ಕೆಲಕಾಲದಲ್ಲಿಯೇ ಗುರಿಯನ್ನು ಸಾಧಿಸಬಹದು.ಇದು ಜಾಣತನದ ಕೆಲಸ. ಇದರಿಂದ ಬಹು ಉಪಯೋಗಗಳಿವೆ. ಉದಾಹರಣೆಗೆ ಪಡಬೇಕಾದ ಶ್ರಮ, ಬೇಕಾಗುವ ಸಮಯ ಎಲ್ಲವು ಕಡಿಮೆಯೇ.ಮತ್ತು ತಂಡದಲ್ಲಿ ಎಲ್ಲರ ವಿಭಿನ್ನ ಯೋಚನೆಗಳು ಹಲವಾರು ಪರಿಹಾರಗಳು ಇವು ಉನ್ನತ ಉದ್ಯಮಕ್ಕೆ ಬೇಕೇ ಬೇಕು. ಹೀಗಾಗಿ ಉದ್ಯಮಿ ತನ್ನ ಗುರಿಗೆ ತಕ್ಕಂತೆ ನಡಿಯುವ ನುಡಿಯುವ ತಂಡವನ್ನು ಕಟ್ಟುವುದು ಅನಿವಾರ್ಯ.

ತಂಡ ಕಟ್ಟಿ ಹುರಿದುಂಬಿಸುವುದು

ತಂಡ ಕಟ್ಟಿ ಹುರಿದುಂಬಿಸುವುದು

ತಂಡ ಕಟ್ಟಿದಲ್ಲಿಗೆ ಮುಗಿಯಲಿಲ್ಲ. ದಿನ ಮಾಡಬೇಕಾದ ಕೆಲಸಕ್ಕೆ ಗುರಿಮುಟ್ಟುವ ಸಾಹಸಕ್ಕೆ ಹುರಿದುಂಬಿಸುವುದು ಅತ್ಯಗತ್ಯ. ದಾರಿ ದೀಪದಂತೆ ಹೋಗುತ್ತಿರುವ ದಿಕ್ಕು ನೌಕೆಯ ನಾವಿಕನಂತೆ ಸರಿಯಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಉದ್ಯಮಿಯದ್ದು. ಇದಿಲ್ಲದೆ ತಂಡ ಬೇಗ ದಿಕ್ಕುತಪ್ಪಿದಂತಾಗುತ್ತ. ಶ್ರೇಷ್ಠ ಉದ್ಯಮಿ ತನ್ನ ತಂಡಕ್ಕೆ ಎಂದಿಗೂ ಹುರಿದುಂಬಿಸುವುದು ಬಿಡುವುದಿಲ್ಲ ಮತ್ತು ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಮರೆಯುವುದಿಲ್ಲ.

ಪ್ರಶಂಸೆ

ಪ್ರಶಂಸೆ

ಇದಕ್ಕೆ ಒಡಗೂಡಿಯೇ ಇರುವ ನಿಯಮ ತಂಡದವರಿಗೆ ಮಾಡಿದ ಕೆಲಸಕ್ಕೆ ಶಭಾಷ್ ಹೇಳುವುದು, ತಪ್ಪಾಗಿದ್ದರೂ ಮಾಡಿದ ಪ್ರಯತ್ನ ಒಳ್ಳೆಯದು. ಹೇಗೆ ಮುಂದೆ ತಪ್ಪಾಗದಂತೆ ನೋಡಿಕೊಳ್ಳಬೇಕು ಅನ್ನುವ ದಾರಿ ತೋರಿಸಬೇಕು. ಇವೆಲ್ಲವೂ ಒಳ್ಳೆ ನಾಯಕನ ಲಕ್ಷಣಗಳು. ಇವಿಲ್ಲದೆ ತಂಡ ಬೇಗ ಬುಡ ಸಮೇತ ಕುಸಿದು ಹೋಗುತ್ತದೆ.

ಗ್ರಾಹಕರು ಮುಖ್ಯ

ಗ್ರಾಹಕರು ಮುಖ್ಯ

ಉದ್ಯಮ ನಡೆಸುತ್ತ ಸಾಗುವಾಗ ಗ್ರಾಹಕ ಬಹು ಮುಖ್ಯ ಅನ್ನುವುದು ನೆನಪು ಇಟ್ಟುಕೊಳ್ಳಬೇಕು. ಮಾಡುತ್ತಿರುವುದೆಲ್ಲ ಗ್ರಾಹಕನ ಸೇವೆಗಾಗಿ ಎಂಬುದನ್ನು ಮರಿಬಾರದು. ನಮ್ಮ ಸರಕು ಹಾಗು ಸೇವೆ ಗ್ರಾಹಕರಿಗೆ ಮೆಚ್ಚುಗೆ ಇದೆಯೋ ಇಲ್ಲವೋ ತಿಳಿದುಕೊಳ್ಳಲೇ ಬೇಕು ತಪ್ಪಿದ್ದರೆ ತಿದ್ದು ಕೊಳ್ಳಲೇಬೇಕು. ಗ್ರಾಹಕನ ಬೇಕು ಬೇಡಗಳನ್ನೂ ಚನ್ನಾಗಿ ಅರಿತುಕೊಳ್ಳುವುದು ಶ್ರೇಷ್ಠ ಉದ್ಯಮಿಯ ಒಳಗುಣ. ಗ್ರಾಹಕನನ್ನ ಮನದಲ್ಲಿಟ್ಟುಕೊಂಡು ತಯಾರಿಸಿದ ಸರಕು ಹಾಗು ಸೇವೆ ಎಂದಿಗೂ ಅಸಫಲ ಆಗುವುದಿಲ್ಲ. ಇನ್ನೊಂದು ಯಶಸ್ಸಿನ ಗುಟ್ಟು ಏನೆಂದರೆ ಗ್ರಾಹಕನ ಬದಲಾಗುವ ರುಚಿಗಳನ್ನು ಕೂಡ ಒಬ್ಬ ಶ್ರೇಷ್ಠ ಉದ್ಯಮಿ ಮನದಟ್ಟು ಮಾಡಿಕೊಂಡಿರುತ್ತಾನೆ.

ಗ್ರಾಹಕರ ಅಗತ್ಯವಿರುವ ಸೇವೆ ಒದಗಿಸಿ

ಗ್ರಾಹಕರ ಅಗತ್ಯವಿರುವ ಸೇವೆ ಒದಗಿಸಿ

ಒಬ್ಬ ಗ್ರಾಹಕನ ಆಪೇಕ್ಷೆಗಿಂತ ಹೆಚ್ಚು ಸಮಾಧಾನ ತರುವಂತ ಸರಕು ಅಥವಾ ಸೇವೆ ಕೊಟ್ಟರೆ ಆ ಗ್ರಾಹಕ ತಾನು ಸೇವಿಸುವುದಲ್ಲದೆ ತನಗೆ ಗೊತ್ತಿರುವವರಿಗೆಲ್ಲರಿಗೂ ಪ್ರಚಾರ ಮಾಡುತ್ತಾನೆ. ಇದರಿಂದ ಉದ್ಯಮಿಗೆ ಖರ್ಚಿಲ್ಲದೆ ಶ್ರೇಷ್ಟ ಮಟ್ಟದ ವ್ಯಯಕ್ತಿಕ ಪ್ರಚಾರ ಸಿಗುತ್ತದೆ.ಇದರ ಮೌಲ್ಯ ತೂಕ ಮಾಡಲು ಅಸಾಧ್ಯ. ಇದನ್ನು ಗಳಿಸುವ ಸಲುವಾಗಿ ಉದ್ಯಮಿ ಸದಾ ಪರಿಶ್ರಮಿಸಬೇಕು.

ಖರ್ಚಿನ ಮೇಲೆ ನಿಯಂತ್ರಣವಿರಲಿ

ಖರ್ಚಿನ ಮೇಲೆ ನಿಯಂತ್ರಣವಿರಲಿ

ಒಬ್ಬ ಶ್ರೇಷ್ಠ ಉದ್ಯಮಿ ಪಾಲಿಸಲೇಬೇಕಾದ ಇನ್ನೊಂದು ನಿಯಮವೇನೆಂದರೆ ಖರ್ಚುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಇಲ್ಲವಾದರೆ ಗಳಿಸುವುದೆಲ್ಲವನ್ನು ಧಾರೆ ಎರೆದು ದಾನ ಮಾಡಿದ ಹಾಗೆ ಆಗುತ್ತದೆ.ಲಾಭ ಮಾಡುವುದು ಉದ್ಯಮದ ಒಂದು ಗುರಿ. ಇದರಿಂದ ಉದ್ಯಮಿಗೆ ತನ್ನ ತಂಡಕ್ಕೆ ಎಲ್ಲರಿಗೂ ಒಂದು ಸಾಧನೆ ಮಾಡಿದ ಹಾಗೆ ಅನಿಸುತ್ತದೆ.ಲಾಭ ಇಲ್ಲದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಂದಂತೆ ಭಾಸವಾಗುತ್ತದೆ ಹಾಗು ನಿರಾಶೆಗೆ ದಾರಿ
ಯಾಗುತ್ತದೆ. ಇದು ಬಹಳ ಅಪಾಯಕಾರಿ ಹಾಗು ಉದ್ಯಮಕ್ಕೆ ಮತ್ತು ತಂಡದ ಬೆಳವಣಿಗೆಗೆ ಒಂದು ಮಾರಕ ಹೊಡೆತವಾಗುತ್ತದೆ.

ಲಾಭ ಹಂಚಿಕೆ

ಲಾಭ ಹಂಚಿಕೆ

ಮತ್ತೆ ಉದ್ಯಮಿ ತನ್ನ ಲಾಭದಲ್ಲಿ ತನ್ನ ತಂಡದೊಡನೆ ಸರಿಯಾದ ಹಂಚುವಿಕೆ ಮಾಡಬೇಕು. ಇಲ್ಲದಲ್ಲಿ ತಂಡಕ್ಕೆ ಬೇರೆಯವರ ಬೆಳೆವಣಿಗೆಗೆ ದುಡಿದಂತೆ ತಮಗೆ ಏನು ದಕ್ಕದಂತೆ ಭಾಸವಾಗುತ್ತದೆ.

ಬ್ರಾಂಡ್

ಬ್ರಾಂಡ್

ಉದ್ಯಮಿ ಮಾಡುವ ಎಲ್ಲ ಕೆಲಸಗಳು ವೈಯಕ್ತಿಕ ಬ್ರಾಂಡ್ ಇಮೇಜ್ಅನ್ನು ಬೆಳೆಸುವಂತೆ ಇರಬೇಕು. ಇದು ಕೊನೆಯ ಆದರೆ ಬಹು ಮುಖ್ಯವಾದ ನಿಯಮ. ಸರಕು ಅಥವಾ ಸೇವೆಗಳಿಗೆ ಬೇಡಿಕೆ ಇರಬೇಕಾದರೆ ಗ್ರಾಹಕರ ಮನದಲ್ಲಿ ಇವುಗಳಿಂದ ತನ್ನ ಬ್ರಾಂಡ್ ಹೆಚ್ಚುತ್ತದೆ ಅನ್ನುವ ಒಂದು ಭಾವನೆ ಬರಬೇಕು. ಆಗಲೇ ಉದ್ಯಮಿಯ ಸರಕು ಹಾಗು ಸೇವೆಗೆ ಕಾಲ ಮೀರಿದರೂ ಬೇಡಿಕೆಯಿರುತ್ತದೆ.
ಈ ಎಲ್ಲ ನಿಯಮಗಳನ್ನು ಮನವರಿಕೆಮಾಡಿಕೊಂಡು ನಿಮ್ಮ ಸ್ವಉದ್ಯಮದ ದಾರಿಯಲ್ಲಿ ಸಾಗಿ ನೀವೆಲ್ಲರೂ ಯಶಸ್ವಿಯಾಗುತ್ತೀರೆಂದು ಆಶಿಸುತ್ತೇವೆ. ನಿಮಗೆ ಇನ್ನೂ ಉದ್ಯಮದ ಕುರಿತು ಹೆಚ್ಚು ಪ್ರಶ್ನೆಗಳಿದ್ದರೆ ಕಾಮೆಂಟ್ಸ್ ಸೆಕ್ಷನ್ ಅಲ್ಲಿ ಬರೆಯಿರಿ.

 

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+