For Quick Alerts
ALLOW NOTIFICATIONS  
For Daily Alerts

1 ಕೋಟಿ ಟಾರ್ಗೆಟ್? ಪ್ರತಿದಿನ 362 ರೂಪಾಯಿ 365 ದಿನ ಹೂಡಿಕೆ ಮಾಡಿ, ಇಲ್ಲಿದೆ ಸಂಪೂರ್ಣ ವಿವರ

|

ಜೀವನದಲ್ಲಿ ಭಾರೀ ಶ್ರೀಮಂತನಾಗಬೇಕು, ಕೋಟಿ ಕೋಟಿ ಹಣ ಸಂಪಾದಿಸಬೇಕು ಎಂಬ ಮನುಷ್ಯನ ಹಪಾಹಪಿಗೆ ಎಂದೂ ಕೊನೆಯಿಲ್ಲ! ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ ಅನ್ನೋ ಹಾಗೆ ಹೆಂಗಾದ್ರೂ ಸರಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕಪ್ಪಾ ಅನ್ನೋ ಹುಚ್ರು ಇದ್ದಾರೆ! ಆದರೆ short cut will cut you short ಅನ್ನುವಂತೆ ಕೋಟ್ಯಾಧಿಪತಿಯಾಗಲು ಯಾವುದೇ ಅಡ್ಡ ದಾರಿಗಳಿಲ್ಲ ಎಂಬುದನ್ನು ಮರೀಬಾರದು. ಹಾಗಿದ್ದರೆ ಏನು ಮಾಡಬೇಕು, ಹೇಗೆ ಕೋಟ್ಯಾಧಿಪತಿ ಆಗಬೇಕು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಇಲ್ಲೊಂದು ಹಣ ಮಾಡುವ ವಿಧಾನ ನೀಡಲಾಗಿದೆ ಬನ್ನಿ ತಿಳಿಯೋಣ..

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೂಲಕ ಕೋಟ್ಯಾಧಿಪತಿ ಆಗುವುದು ಹೇಗೆ?
 

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೂಲಕ ಕೋಟ್ಯಾಧಿಪತಿ ಆಗುವುದು ಹೇಗೆ?

ಪಿಪಿಎಫ್ ಮೂಲಕ ಕೋಟಿ ಗಳಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿದೆ? ಈ ಹಣಕಾಸಿನ ಗುರಿಯನ್ನು ಸಾಧಿಸಲು, ನಿಮಗೆ ಸಾಕಷ್ಟು ತಾಳ್ಮೆ ಮತ್ತು ಪ್ರಸ್ತುತ ಬಡ್ಡಿದರದಲ್ಲಿ 25 ವರ್ಷಗಳವರೆಗೆ ವರ್ಷಕ್ಕೆ ಕನಿಷ್ಠ ರೂ. 1,32,000 ಹೂಡಿಕೆ ಮಾಡಬೇಕು. ಈ ವಾರ್ಷಿಕ ಹೂಡಿಕೆಯ ಮೊತ್ತವನ್ನು ಸಂಗ್ರಹಿಸಲು, ನೀವು ದಿನಕ್ಕೆ ಕನಿಷ್ಠ ರೂ. 362 ರಂತೆ (1,32,000/365 = 361.64) ಉಳಿತಾಯ ಮಾಡಬೇಕಾಗುತ್ತದೆ. ಪ್ರಸ್ತುತ, ಪಿಪಿಎಫ್ ಶೇಕಡಾ 7.9 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. ಈ ಬಡ್ಡಿಯನ್ನು ಸರ್ಕಾರ ತ್ರೈಮಾಸಿಕವಾಗಿ ಪರಿಷ್ಕರಿಸುತ್ತದೆ.

ಈ ಲೆಕ್ಕಾಚಾರವು ಪಿಪಿಎಫ್‌ನಲ್ಲಿ ವರ್ಷಕ್ಕೆ ರೂ. 1,32,000 ನ್ನು 15 ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ, ಹೂಡಿಕೆಯ ಅವಧಿಯಲ್ಲಿ ಬಡ್ಡಿದರವು ಶೇಕಡಾ 7.9 ರಷ್ಟು ಉಳಿದರೆ ನೀವು ಸುಮಾರು 38 ಲಕ್ಷ ರೂ. ಗಳಿಸಬಹುದು.

ಪಿಪಿಎಫ್: 1 ಕೋಟಿ ತಲುಪುವುದು ಹೇಗೆ?

ಪಿಪಿಎಫ್: 1 ಕೋಟಿ ತಲುಪುವುದು ಹೇಗೆ?

ಪಿಪಿಎಫ್‌ಗೆ ಹದಿನೈದು ವರ್ಷಗಳು ಕಡ್ಡಾಯವಾಗಿ ಲಾಕ್-ಇನ್ ಅವಧಿಯಾಗಿರುತ್ತದೆ. ಆದಾಗ್ಯೂ, ನಿಯಮಗಳು ತಲಾ ಐದು ವರ್ಷಗಳ ಬ್ಲಾಕ್ ಗಳಲ್ಲಿ ಖಾತೆಯನ್ನು ಮತ್ತಷ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಪಿಪಿಎಫ್ ಖಾತೆಯನ್ನು ಮುಕ್ತಾಯಗೊಂಡ ದಿನಾಂಕದ ಒಂದು ವರ್ಷದೊಳಗೆ ವಿಸ್ತರಿಸಬಹುದು. ಫಾರ್ಮ್-ಎಚ್‌ ಮೂಲಕ ಖಾತೆಯ ವಿಸ್ತರಣೆಗೆ ನೀವು ಅರ್ಜಿ ಸಲ್ಲಿಸಬೇಕು. ಐದು ವರ್ಷಗಳು ಪೂರ್ಣಗೊಂಡ ನಂತರ, ನೀವು ಮತ್ತೊಮ್ಮೆ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದು.

ಚಂದಾದಾರಿಕೆ ವಿಸ್ತರಣೆ

ಚಂದಾದಾರಿಕೆ ವಿಸ್ತರಣೆ

ಪಿಪಿಎಫ್ ಚಂದಾದಾರರು, ಆರಂಭಿಕ ಚಂದಾದಾರಿಕೆಯನ್ನು ಮಾಡಿದ ವರ್ಷದ ಅಂತ್ಯದಿಂದ 15 ವರ್ಷಗಳ ಅವಧಿ ಮುಗಿದರೂ, ಅದರ ನಂತರ ಒಂದು ವರ್ಷದ ಅವಧಿ ಮುಗಿಯುವ ಮೊದಲು, ಫಾರ್ಮ್ H ಅಥವಾ ಅದಕ್ಕೆ ಹತ್ತಿರದ ಒಂದು ಆಯ್ಕೆಯನ್ನು ಅನುಸರಿಸಬೇಕು. ಸಾಧ್ಯವಾದಷ್ಟು, ಚಂದಾದಾರಿಕೆಯ ಮಿತಿಗಳ ಪ್ರಕಾರ ಇನ್ನೂ 5 ವರ್ಷಗಳ ಅವಧಿಗೆ ಚಂದಾದಾರರಾಗುವುದನ್ನು ಮುಂದುವರಿಸಬಹುದು ಎಂದು ಪಿಪಿಎಫ್ ನಿಯಮ 1968 ಹೇಳುತ್ತದೆ.

ರೂ. 1 ಕೋಟಿ ಮೊತ್ತ ಗಳಿಕೆ?
 

ರೂ. 1 ಕೋಟಿ ಮೊತ್ತ ಗಳಿಕೆ?

ಉದಾಹರಣೆಗೆ ನೀವು (ಸೆಪ್ಟೆಂಬರ್ 23, 2019) ಪಿಪಿಎಫ್ ಖಾತೆಯನ್ನು ತೆರೆದರೆ, ಅದು ಮಾರ್ಚ್ 31, 2034 ರಂದು ಪ್ರಬುದ್ಧವಾಗಿರುತ್ತದೆ. ಏಪ್ರಿಲ್ 01, 2033 ಮತ್ತು ಮಾರ್ಚ್ 31, 2014 ರ ನಡುವೆ ವಿಸ್ತರಣೆಗೆ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವಿರುತ್ತದೆ.

ಪಿಪಿಎಫ್ ಖಾತೆಯ ವಿಸ್ತರಣೆಯ ಅರ್ಜಿಯನ್ನು ಮೊದಲು ಚಂದಾದಾರರ ದೃಢೀಕರಣಕ್ಕಾಗಿ ಅಂಚೆ ಕಚೇರಿ ಅಥವಾ ಬ್ಯಾಂಕುಗಳು ವಿನಂತಿಯನ್ನು ಮುಂದುವರಿಸುವ ಮೊದಲು ಪರಿಶೀಲಿಸಲಾಗುತ್ತದೆ.

ಚಂದಾದಾರರು ಸುಮಾರು ರೂ. 38 ಲಕ್ಷಗಳ ಒಟ್ಟು ಮೊತ್ತವನ್ನು ಹಿಂತೆಗೆದುಕೊಳ್ಳದಿದ್ದರೆ ಮತ್ತು ಇನ್ನೂ 10 ವರ್ಷಗಳವರೆಗೆ 1,32,000 ರೂ.ಗಳ ಹೂಡಿಕೆಯನ್ನು ಮುಂದುವರಿಸಿದ್ದರೆ, ನಿಮ್ಮ ಒಟ್ಟು ಮೊತ್ತವು ಪ್ರಸ್ತುತ ಬಡ್ಡಿದರದಲ್ಲಿ ರೂ. 1 ಕೋಟಿ ದಾಟುತ್ತದೆ.

ಠೇವಣಿ ಇಲ್ಲದೆ ಪಿಪಿಎಫ್ ವಿಸ್ತರಣೆ

ಠೇವಣಿ ಇಲ್ಲದೆ ಪಿಪಿಎಫ್ ವಿಸ್ತರಣೆ

ಪಿಪಿಎಫ್ ನಿಯಮಗಳ ಪ್ರಕಾರ, ಹೆಚ್ಚಿನ ಠೇವಣಿ ಇಲ್ಲದೆ ಖಾತೆಯನ್ನು ಮುಕ್ತಾಯ ಅವಧಿ ಮೀರಿದರೂ ವಿಸ್ತರಿಸಬಹುದು. ಅಂತಹ ಖಾತೆಗಳು ಬಡ್ಡಿಯನ್ನು ಗಳಿಸುತ್ತಲೇ ಇರುತ್ತವೆ. ಅಲ್ಲದೆ, ಠೇವಣಿದಾರರಿಗೆ ಹಣಕಾಸಿನ ವರ್ಷದಲ್ಲಿ ಮೊತ್ತವನ್ನು ಯಾವುದೇ ನಿರ್ಬಂಧವಿಲ್ಲದೆ ಹಿಂಪಡೆಯಲು ಅನುಮತಿಸಲಾಗಿದೆ.

ಒಂದು ವೇಳೆ ಫಾರ್ಮ್-ಎಚ್ ಮೂಲಕ ಠೇವಣಿಯೊಂದಿಗೆ ಖಾತೆಯನ್ನು ವಿಸ್ತರಿಸಲಾಗಿದ್ದರೆ, ಪಿಪಿಎಫ್ ನಿಯಮಗಳು ಖಾತೆಯ ವಿಸ್ತರಣೆಯ ಸಮಯದಲ್ಲಿ ಗರಿಷ್ಠ 60 ಪ್ರತಿಶತದಷ್ಟು ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ. ಐದು ವರ್ಷಗಳ ಪ್ರತಿ ವಿಸ್ತರಣೆಯ ಪ್ರಾರಂಭದಲ್ಲಿ ಈ ಮಿತಿ ಅನ್ವಯವಾಗುತ್ತಲೇ ಇರುತ್ತದೆ.

Read more about: ppf investment savings money
English summary

Target Rs 1 crore? You need Rs 362 for 365 days, Complete details here..

ಜೀವನದಲ್ಲಿ ಭಾರೀ ಶ್ರೀಮಂತನಾಗಬೇಕು, ಕೋಟಿ ಕೋಟಿ ಹಣ ಸಂಪಾದಿಸಬೇಕು ಎಂಬ ಮನುಷ್ಯನ ಹಪಾಹಪಿಗೆ ಎಂದೂ ಕೊನೆಯಿಲ್ಲ! ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ ಅನ್ನೋ ಹಾಗೆ ಹೆಂಗಾದ್ರೂ ಸರಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕಪ್ಪಾ ಅನ್ನೋ ಹುಚ್ರು ಇದ್ದಾರೆ! ಆದರೆ short cut will cut you short ಅನ್ನುವಂತೆ ಕೋಟ್ಯಾಧಿಪತಿಯಾಗಲು ಯಾವುದೇ ಅಡ್ಡ ದಾರಿಗಳಿಲ್ಲ ಎಂಬುದನ್ನು ಮರೀಬಾರದು. ಹಾಗಿದ್ದರೆ ಏನು ಮಾಡಬೇಕು, ಹೇಗೆ ಕೋಟ್ಯಾಧಿಪತಿ ಆಗಬೇಕು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಇಲ್ಲೊಂದು ಹಣ ಮಾಡುವ ವಿಧಾನ ನೀಡಲಾಗಿದೆ ಬನ್ನಿ ತಿಳಿಯೋಣ..
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more