For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಟ್ಯಾಕ್ಸ್ ಸೇವಿಂಗ್ ಸ್ಕೀಮ್ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಎಸ್ಬಿಐ ನೀಡುವ ಅನೇಕ ಯೋಜನೆಗಳಲ್ಲಿ ತೆರಿಗೆ ಉಳಿತಾಯ ಯೋಜನೆ ಕೂಡ ಒಂದು.

|

ದೇಶದ ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಎಸ್ಬಿಐ ನೀಡುವ ಅನೇಕ ಯೋಜನೆಗಳಲ್ಲಿ ತೆರಿಗೆ ಉಳಿತಾಯ ಯೋಜನೆ ಕೂಡ ಒಂದು. ಇದೊಂದು ರೀತಿಯ ಸ್ಥಿರ ಠೇವಣಿ ಅಥವಾ ಟರ್ಮ್ ಠೇವಣಿಯಾಗಿದೆ. ನಿವಾಸಿ ಭಾರತೀಯ ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ ಎಂದು ಎಸ್‌ಬಿಐ ವೆಬ್ಸೈಟ್ sbi.co.in. ನಲ್ಲಿ ತಿಳಿಸಿದ್ದಾರೆ.
ಎಸ್‌ಬಿಐ ತೆರಿಗೆ ಉಳಿತಾಯ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ:

ಮೊತ್ತ

ಮೊತ್ತ

ಒಬ್ಬ ವ್ಯಕ್ತಿಯು ಕನಿಷ್ಠ ರೂ. 1,000 ಹಾಗು ಗರಿಷ್ಠ ಠೇವಣಿ ಒಂದು ವರ್ಷದಲ್ಲಿ ರೂ. 1,50,000 ವರೆಗೆ ಠೇವಣಿ ಇಡಬಹುದು.

ಅವಧಿ

ಅವಧಿ

ಎಸ್ಬಿಐ ಉಳಿತಾಯ ಯೋಜನೆ 2006ರ ಕನಿಷ್ಠ ಅವಧಿ ಐದು ವರ್ಷಗಳಾಗಿದ್ದು, ಗರಿಷ್ಠ 10 ವರ್ಷಗಳ ಅವಧಿ ಹೊಂದಿದೆ.

ಬಡ್ಡಿದರ

ಬಡ್ಡಿದರ

ಈ ಯೋಜನೆಗೆ ಬಡ್ಡಿದರವು ಸ್ಥಿರ ಠೇವಣಿಗಳಂತೆಯೇ ಇರುತ್ತದೆ. ಎಸ್ಬಿಐ ಟರ್ಮ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಇದೇ ಆಗಸ್ಟ್ 26 ರಿಂದ ಜಾರಿಗೆ ತಂದಿದೆ. ಚಿಲ್ಲರೆ ಠೇವಣಿಗಳಿಗೆ ಬಡ್ಡಿದರಗಳು ರೂ. 2 ಕೋಟಿಗಿಂತ ಕಡಿಮೆ ಹೂಡಿಕೆ ಮೇಲೆ ಶೇ. 6.25 ಮತ್ತು ಹಿರಿಯ ನಾಗರಿಕರಿಗೆ ಶೇ. 6.75 ರಷ್ಟಿದ್ದು, ಇದರ ಮೆಚುರಿಟಿ ಅವಧಿ 5 ರಿಂದ 10 ವರ್ಷಗಳಾಗಿದೆ.

ಅಕಾಲಿಕ ಹಿಂತೆಗೆದುಕೊಳ್ಳುವಿಕೆ

ಅಕಾಲಿಕ ಹಿಂತೆಗೆದುಕೊಳ್ಳುವಿಕೆ

ಎಸ್‌ಬಿಐನ ವೆಬ್ಸೈಟ್‌ನ ಪ್ರಕಾರ, ಹೂಡಿಕೆದಾರರು ಖಾತೆ ತೆರೆದ ದಿನಾಂಕದಿಂದ ಐದು ವರ್ಷಗಳ ಅವಧಿ ಮುಗಿಯುವ ಮೊದಲು ಠೇವಣಿಯನ್ನು ಹಿಂಪಡೆಯಲು ಆಗುವುದಿಲ್ಲ.

ಇತರ ಸೌಲಭ್ಯಗಳು

ಇತರ ಸೌಲಭ್ಯಗಳು

ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷವರೆಗಿನ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ. ನಾಮನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಆದಾಗ್ಯೂ, ಗ್ರಾಹಕರು ಸಾಲವನ್ನು ಪಡೆಯಲು ಅಥವಾ ಬೇರೆ ಯಾವುದೇ ಆಸ್ತಿ ಭದ್ರತೆಗಾಗಿ ಠೇವಣಿ ಖಾತೆಯನ್ನು ಬಳಸಲಾಗುವುದಿಲ್ಲ

Read more about: sbi banking savings money investments
English summary

SBI Tax Savings Scheme:Must know these things

SBI or State Bank of India, the country's largest lender, offers a number of saving schemes under its personal banking portfolio.
Story first published: Wednesday, September 4, 2019, 11:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X