For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಮಾಸಿಕ ಪ್ಲಾನ್: ತಿಂಗಳಿಗೆ 5,700 ಅಥವಾ ಐದು ವರ್ಷಕ್ಕೆ 3.4 ಲಕ್ಷ ಗಳಿಸಿ..

ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಬೇಕೆನ್ನುವವರಿಗೆ ಇಲ್ಲೊಂದು ಬೆಸ್ಟ್ ಪ್ಲಾನ್ ಇದೆ. ಅಂಚೆ ಕಚೇರಿ ಮಾಸಿಕ ಆದಾಯ ಖಾತೆಯನ್ನು ತೆರೆದು ಉತ್ತಮ ಆದಾಯ ಗಳಿಕೆಗೆ ಮುನ್ನುಡಿ ಹಾಕಬಹುದು.

|

ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಬೇಕೆನ್ನುವವರಿಗೆ ಇಲ್ಲೊಂದು ಬೆಸ್ಟ್ ಪ್ಲಾನ್ ಇದೆ. ಅಂಚೆ ಕಚೇರಿ ಮಾಸಿಕ ಆದಾಯ ಖಾತೆಯನ್ನು ತೆರೆದು ಉತ್ತಮ ಆದಾಯ ಗಳಿಕೆಗೆ ಮುನ್ನುಡಿ ಹಾಕಬಹುದು. ಅದಕ್ಕೆ ಇಲ್ಲೊಂದು ಉತ್ತಮ ಯೋಜನೆಯನ್ನು ವಿವರಿಸಲಾಗಿದೆ.

 

ಪ್ರತಿ ತಿಂಗಳು 5,700 ಗಳಿಸಿ

ಪ್ರತಿ ತಿಂಗಳು 5,700 ಗಳಿಸಿ

ನೀವು ಪೋಸ್ಟ್ ಆಫಿಸ್ ನಲ್ಲಿ ಮಾಸಿಕ ಆದಾಯ ಯೋಜನೆ (MIS) ಜಂಟಿ ತೆರೆಯುವ ಮೂಲಕ ರೂ. 9 ಲಕ್ಷ ಠೇವಣಿ ಇಟ್ಟು, ಐದು ವರ್ಷಗಳ ಮಟ್ಟಿಗೆ ಪ್ರತಿ ತಿಂಗಳು ರೂ. 5,700 ವರೆಗೆ ಗಳಿಸಬಹುದಾಗಿದೆ. ಈ ಮಾಸಿಕ ಆದಾಯ ಯೋಜನೆ (MIS) ಖಾತೆಯನ್ನು ಏಕಕಾಲದಲ್ಲಿ ಇಬ್ಬರು ಅಥವಾ ಮೂವರು ವಯಸ್ಕರು ತೆರೆಯಬಹುದಾಗಿದೆ. ಗರಿಷ್ಠ ಹೂಡಿಕೆ ಮಿತಿಯು ರೂ. 9 ಲಕ್ಷಗಳಾಗಿದೆ. ಜಂಟಿ ಖಾತೆದಾರರ ಪ್ರತಿಯೊಂದು ಖಾತೆಯಲ್ಲಿಯೂ ಸಮನಾದ ಪಾಲು ಇರಬೇಕಾಗುತ್ತದೆ.
ಜಂಟಿ ಖಾತೆದಾರರ ಗರಿಷ್ಠ ಮಿತಿ ರೂ. 9 ಲಕ್ಷಗಳಾದರೆ ವೈಯಕ್ತಿಕ ಖಾತೆಯ ಮಿತಿಯನ್ನು ರೂ. 4.5 ಲಕ್ಷಗಳಿಗೆ ನಿಗದಿ ಮಾಡಲಾಗಿದೆ.

ಬಡ್ಡಿ ರೂಪದಲ್ಲಿ 3,42,000 ಗಳಿಸಿ

ಬಡ್ಡಿ ರೂಪದಲ್ಲಿ 3,42,000 ಗಳಿಸಿ

ಮಾಸಿಕ ಆದಾಯ ಯೋಜನೆ (MIS) ಖಾತೆಯು ಐದು ವರ್ಷಗಳ ಅವಧಿ ನಂತರ ಮೆಚುರಿಟಿ ಆಗಲಿದೆ. ಪ್ರತಿ ತಿಂಗಳು ವಾರ್ಷಿಕ ಶೇಕಡಾ 7.6 ದರದಲ್ಲಿ ಬಡ್ಡಿ ಪಾವತಿ ಮಾಡಲಾಗುತ್ತದೆ. ಇದೆ ದರದಲ್ಲಿ ರೂ. 9 ಲಕ್ಷ ಹೂಡಿಕೆ ಮೇಲೆ ಬಡ್ಡಿ ರೂಪದಲ್ಲಿ ರೂ. 3,42,000 (ಪ್ರತಿ ತಿಂಗಳು 5,700) ಗಳಿಸಬಹುದಾಗಿದೆ. ಹತ್ತು ವರ್ಷ ಆದವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಬಹುದಾಗಿದೆ.

ಸಿಂಗಲ್ MIS ಖಾತೆ (ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಲೆಕ್ಕಾಚಾರ, ಬಡ್ಡಿದರ)
 

ಸಿಂಗಲ್ MIS ಖಾತೆ (ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಲೆಕ್ಕಾಚಾರ, ಬಡ್ಡಿದರ)

ಸಿಂಗಲ್ ಎಂಐಎಸ್ ಖಾತೆಯಲ್ಲಿನ ಠೇವಣಿ ಮಿತಿ ರೂ. 4.5 ಲಕ್ಷಗಳಾಗಿದ್ದು, ಐದು ವರ್ಷಗಳಲ್ಲಿ ಈ ಖಾತೆಯು ಒಟ್ಟು ರೂ. 1,71,000 ಅಥವಾ ತಿಂಗಳಿಗೆ ರೂ. 2850 ಬಡ್ಡಿದರ ಗಳಿಸುತ್ತದೆ.
ಮೈನರ್ ಹೆಸರಿನಲ್ಲಿ ಎಂಐಎಸ್ ಖಾತೆಯನ್ನು ಸಹ ತೆರೆಯಬಹುದು. 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು. ಎಂಐಎಸ್ ಠೇವಣಿ ಮೇಲಿನ ಬಡ್ಡಿಯನ್ನು ಆಟೋ ಕ್ರೆಡಿಟ್ ಮೂಲಕ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗೆ ಹಾಕಬಹುದು.

English summary

Post Office Monthly Income Scheme: Earn Rs 3.4 lakh in 5 years or Rs 5700 per month

You can ensure a monthly in-hand cash flow of Rs 5700 for five years by opening a joint Post Office Monthly Income Scheme (MIS) account and depositing Rs 9,00,000.
Story first published: Friday, October 18, 2019, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X