For Quick Alerts
ALLOW NOTIFICATIONS  
For Daily Alerts

1 ಲಕ್ಷ ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು 40-50 ಸಾವಿರ ಆದಾಯ ಗಳಿಸಿ

ಪ್ರಸ್ತುತ ಉದ್ಯೋಗ ಭದ್ರತೆ ಕಾಡುತ್ತಿರುವ ಸಂದರ್ಭದಲ್ಲಿ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹುವಾಗಿ ಕಾಡುತ್ತಿದೆ.

|

ಪ್ರಸ್ತುತ ಉದ್ಯೋಗ ಭದ್ರತೆ ಕಾಡುತ್ತಿರುವ ಸಂದರ್ಭದಲ್ಲಿ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿಯೇ ದೇಶದ ಆರ್ಥಿಕತೆ ಅತಿ ಕೆಟ್ಟ್ ಸ್ಥಿತಿಯಲ್ಲಿದೆ.
ಉನ್ನತ ಶಿಕ್ಷಣ ಪಡೆದವರು ಹೊಟ್ಟೆ ಪಾಡಿಗಾಗಿ ಕಡಿಮೆ ವಿದ್ಯಾರ್ಹತೆಯ ಹೊಂದಿರುವ ನೌಕರಿ ಮಾಡುತ್ತಿದ್ದಾರೆ. ಒಂದು ಉತ್ತಮ ನೌಕರಿ ಪಡೆದುಕೊಳ್ಳುವುದು ತುಂಬಾ ಕಷ್ಟವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಸ್ವಂತ ವ್ಯವಹಾರ ಮಾಡಲು ಬಯಸುವವರಿಗೆ ಸಾಕಷ್ಟು ಮಾರ್ಗಗಳಿವೆ.

ಬಿಸಿನೆಸ್ - ಬಂಡವಾಳ

ಬಿಸಿನೆಸ್ - ಬಂಡವಾಳ

ಬಿಸಿನೆಸ್ ಅಥವಾ ಸ್ವಂತ ಉದ್ಯಮದ ಬಗ್ಗೆ ವಿಚಾರ ಮಾಡಿದಾಗ ತಕ್ಷಣ ತಲೆಗೆ ಬರುವ ವಿಚಾರ ಬಂಡವಾಳ. ಬಿಸಿನೆಸ್ ಮಾಡಲು ಬಂಡವಾಳ ಬೇಕೆ ಬೇಕು. ಆದರೆ ತುಂಬಾ ಬಂಡವಾಳ ಬೇಕು ಅಂತೆನಿಲ್ಲ ಕಡಿಮೆ ಬಂಡವಾಳದಲ್ಲೂ ಉದ್ಯಮ ನಡೆಸಿ ಕೈ ತುಂಬಾ ಆದಾಯ ಗಳಿಸಬಹುದು. ಕಡಿಮೆ ಬಂಡವಾಳದಲ್ಲಿಯೇ ಹೆಚ್ಚು ಹಣ ಗಳಿಸುವ ವ್ಯವಹಾರಗಳು ಕೂಡ ಸಾಕಷ್ಟಿವೆ.

ಯಾವ ಬಿಸಿನೆಸ್ ಆರಂಭಿಸಬಹುದು?

ಯಾವ ಬಿಸಿನೆಸ್ ಆರಂಭಿಸಬಹುದು?

ಬಿಸಿನೆಸ್ ಮಾಡಲು ಬಂಡವಾಳದ ಜೊತೆಗೆ ಉತ್ತಮವಾದ ಪ್ರಾಜೆಕ್ಟ್ ಪ್ಲಾನ್ ಕೂಡ ಬೇಕು. ಅದನ್ನು ನಡೆಸುವ ಉತ್ತಮ ನಾಯಕತ್ವ ಕೂಡ ಬೇಕು. ಕೇವಲ 1 ಲಕ್ಷ ಬಂಡವಾಳ ಹೂಡಿಕೆ ಮಾಡಿ ವ್ಯವಹಾರ ಶುರು ಮಾಡಬಹುದು. ಕೆಲ ಬಿಸಿನೆಸ್ ಗಾಗಿ ಸರ್ಕಾರ ಕೂಡ ಸಹಾಯಧನ ನೀಡುತ್ತವೆ.

ಬೇಕರಿ ಉದ್ಯಮ

ಬೇಕರಿ ಉದ್ಯಮ

ಬೇಕರಿ ತಿನಿಸುಗಳೆಂದರೆ ಜನರಿಗೆ ಪಂಚಪ್ರಾಣ. ಬಿಸ್ಕತ್ತು, ವಿವಿಧ ಕೇಕ್, ಚಿಪ್ಸ್, ಬ್ರೆಡ್ ತಯಾರಿಸಿ ಕೈತುಂಬಾ ಲಾಭ ಗಳಿಸಬಹುದು. ಬೇಕರಿ ವಸ್ತುಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ.
ಬೇಕರಿ ಉತ್ಪನ್ನಗಳಿಗಾಗಿ ಹಿಟ್ಟು, ಮೈದಾ, ಸಕ್ಕರೆ, ಹಾಲು, ಬಣ್ಣ, ತುಪ್ಪ, ಉಪ್ಪು ಹೀಗೆ ಹಲವಾರು ಸ್ತುಗಳು ಬೇಕಾಗುತ್ತವೆ. ಜೊತೆಗೆ ಕಟ್ಟಡದ ಬಾಡಿಗೆ, ದೂರವಾಣಿ, ಉದ್ಯೋಗಿಗಳ ಸಂಬಳ, ಪ್ಯಾಕಿಂಗ್ ಸೇರಿದಂತೆ ನಿಮ್ಮ ಸಾಮರ್ಥಯಕ್ಕೆ ಅನುಗುಣವಾಗಿ ರೂ. 1.86 ಲಕ್ಷ ಅಂದಾಜು ಬಂಡವಾಳ ಬೇಕಾಗುತ್ತದೆ. ಯಂತ್ರೋಪಕರಣಗಳಿಗಾಗಿ 2-3 ಲಕ್ಷದವರೆಗೆ ಖರ್ಚಾಗುತ್ತದೆ.

ಪ್ರತಿ ತಿಂಗಳ ಲಾಭ

ಪ್ರತಿ ತಿಂಗಳ ಲಾಭ

ಕಟ್ಟಡದ ಬಾಡಿಗೆ, ತೆರಿಗೆ, ಕಾರ್ಮಿಕರ ಸಂಬಳ ಸೇರಿದಂತೆ ಎಲ್ಲ ಖರ್ಚು ಕಳೆದರೂ ಪ್ರತಿ ತಿಂಗಳು 40-50 ಸಾವಿರದವರೆಗೆ ಲಾಭ ಪಡೆಯಬಹುದಾಗಿದೆ. ನಿಮ್ಮ ಏರಿಯಾ ಹಾಗು ನಿಮ್ಮ ಉತ್ಪನ್ನಗಳಿಗೆ ಅನುಗುಣವಾಗಿ ಆದಾಯದ ಪ್ರಮಾಣದಲ್ಲಿ ಬದಲಾವಣೆಯಾಗುತ್ತದೆ.

ಸಾಲ ಸೌಲಭ್ಯ

ಸಾಲ ಸೌಲಭ್ಯ

ಬೇರೆ ಬೇರೆ ಬ್ಯಾಂಕುಗಳ ಮೂಲಕ ಬಿಸಿನೆಸ್ ಲೋನ್ ಪಡೆಯಬಹುದು. ಬ್ಯಾಂಕುಗಳು ಟರ್ಮ್ ಲೋನ್ ರೂಪದಲ್ಲಿ ರೂ. 2.97 ಲಕ್ಷ ಹಾಗೂ ಕಾರ್ಮಿಕರ ಸಾಲವಾಗಿ 1.49 ಲಕ್ಷ ರೂಪಾಯಿ ನೀಡುತ್ತದೆ. ಮುದ್ರಾ ಯೋಜನೆಯಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ಹೆಸರು, ವಿಳಾಸ, ವ್ಯಾಪಾರ, ಸಾಲದ ಹಣ ಸೇರಿದಂತೆ ಎಲ್ಲ ವಿಷಯಗಳು ಒಳಗೊಂಡ ಪ್ರಾಜೆಕ್ಟ್ ಪ್ಲಾನ್ ಸಿದ್ದಪಡಿಸಬೇಕು. ಐದು ವರ್ಷದಲ್ಲಿ ನೀವು ಸಾಲ ತೀರಿಸಬಹುದು.

ಚಾಕೋಲೇಟ್ ಬಿಸಿನೆಸ್

ಚಾಕೋಲೇಟ್ ಬಿಸಿನೆಸ್

ಮಕ್ಕಳಿಂದ ಹಿಡಿದು ವೃದ್ದರವರೆಗೆ ಚಾಕೋಲೇಟ್ ಪ್ರಿಯರಿದ್ದಾರೆ. ನಿಮಗೂ ಕೂಡ ಚಾಕೋಲೆಟ್ ಇಷ್ಟವಾಗಿದ್ದರೆ ಇದನ್ನು ವ್ಯಾಪಾರವಾಗಿ ಆರಂಭಿಸಬಹುದು. ನೀವು ಮನೆಯಲ್ಲೇ ಕುಳಿತು ಚಾಕೋಲೇಟ್ ತಯಾರಿಸಿ ಕೈತುಂಬ ಆದಾಯ ಗಳಿಕೆ ಮಾಡಬಹುದು.

ಕಡಿಮೆ ಬಂಡವಾಳ ಸಾಕು

ಕಡಿಮೆ ಬಂಡವಾಳ ಸಾಕು

ಚಾಕೋಲೇಟ್ ವ್ಯಾಪಾರ ಆರಂಭಿಸಿರುವ ಒಬ್ಬರ ಅನುಭವದ ಪ್ರಕಾರ, 8-10 ಸಾವಿರ ರೂಪಾಯಿಯಲ್ಲಿ ಚಾಕೋಲೇಟ್ ಬಿಸಿನೆಸ್ ಆರಂಭಿಸಬಹುದು. ನಿಮ್ಮ ಬಳಿ ಮೈಕ್ರೋವೇವ್ ಇಲ್ಲ ಎಂದಾದರೆ ನಿಮ್ಮ ಬಂಡವಾಳದ ಮೊತ್ತ 15 ಸಾವಿರದವರೆಗೆ ಆಗಬಹುದು. ಆರಂಭದಲ್ಲಿ ಚಿಕ್ಕದಾಗಿಯೇ ಆರಂಭಿಸಿ ತದನಂತರದಲ್ಲಿ ಇದಕ್ಕೆ ಬೆಕಾಗಬಹುದಾದ ಉಪಕರಣಗಳನ್ನು ಖರಿದಿಸಬಹುದು.

ಚಾಕೋಲೇಟ್ ಆದಾಯ ಗಳಿಕೆ

ಚಾಕೋಲೇಟ್ ಆದಾಯ ಗಳಿಕೆ

ಸಣ್ಣ ಪ್ರಮಾಣದಲ್ಲಿ ಆರಂಬಿಸಿರುವ ಬಿಸಿನೆಸ್ ಮೂಲಕ ಎರಡು ಮೂರು ತಿಂಗಳಿನಲ್ಲಿ ರೂ. 30-35 ಸಾವಿರ ಆದಾಯ ಗಳಿಕೆ ಮಾಡಬಹುದಾಗಿದೆ. ನಿಮ್ಮ ಚಾಕೋಲೇಟ್ ರುಚಿ ಹಾಗೂ ಪರಿಮಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ನೀವು ಗದ್ದಂತೆ! ಎರಡು ಮೂರು ವರ್ಷಕ್ಕೆ ವಾರ್ಷಿಕ ವಹಿವಾಟು ರೂ. 12-15 ಲಕ್ಷ ಮಾಡಬಹುದು.

ಮಾರ್ಕೆಟಿಂಗ್ ಮಾಡೋದು ಹೇಗೆ?

ಮಾರ್ಕೆಟಿಂಗ್ ಮಾಡೋದು ಹೇಗೆ?

ನೀವು ತಯಾರಿಸಿರುವ ಬೇಕರಿ ಹಾಗು ಚಾಕೋಲೇಟ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಕೂಡ ಒಂದು ಕಲೆ. ನೀವು ತಯಾರಿರಿಸಿರುವ ಬೇಕರಿ ಹಾಗು ಚಾಕೋಲೆಟ್ ಮಾರಾಟಕ್ಕಾಗಿ ಉತ್ತಮ ಸ್ಟ್ರಾಟಜಿ ತಯಾರಿಸಿ. ಚಾಕೋಲೆಟ್ ಪ್ಯಾಕೇಜಿಂಗ್ ತುಂಬಾ ಮುಖ್ಯ. ಪ್ಯಾಕಿಂಗ್ ಹಾಗು ಕ್ವಾಲಿಟಿ ಚೆನ್ನಾಗಿದ್ದರೆ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಬಹುದು.
- ನೀವು ತಯಾರಿಸಿದ ಚಾಕೋಲೇಟ್ ಗಳನ್ನು ಆನ್ಲೈನ್ ಮೂಲಕ, ಚಿಲ್ಲರೆ ಅಂಗಡಿಗಳಲ್ಲಿ, ಬೇಕರಿಗಳಲ್ಲಿ ಮಾರಾಟ ಮಾಡಬಹುದು.
- ಫೇಸ್ಬುಕ್, ಟ್ವೀಟರ್, ವಾಟ್ಸಅಪ್ ಗಳ ಸಹಾಯ ಪಡೆಯಬಹುದಾಗಿದೆ. ಚಾಕೋಲೇಟ್ ತಯಾರಿಸಲು ಅತಿ ಮುಖ್ಯ ಪ್ಯಾಕಿಂಗ್.

 

 

ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

English summary

Start Bakery business with 1 lakh, Earn every month 40-50 thousand

you can Start Bakery business with 1 lakh investment and Earn every month 40-50 thousand
Story first published: Saturday, October 12, 2019, 10:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X