For Quick Alerts
ALLOW NOTIFICATIONS  
For Daily Alerts

ದಂಪತಿಗಳು ಪಾಲಿಸಬೇಕಾದ ದಶ ಸೂತ್ರಗಳು!

|

ನಮ್ಮ ದೇಶದಲ್ಲಿ ಮದುವೆ ವಿಶಿಷ್ಟ ಸ್ಥಾನ ಪಡೆದಿದ್ದು, ವಿವಾಹದ ನಂತರ ನವ ದಂಪತಿಗಳು ಹೊಸ ಜೀವನವನ್ನು ಪ್ರಾರಂಭಿಸಿದಂತೆ. ನವಜೋಡಿ ಜೀವನದಲ್ಲಿ ಎಲ್ಲವನ್ನೂ ಹೊಸದಾಗಿ, ಭಿನ್ನವಾಗಿ ಪ್ರಾರಂಭಿಸಬೇಕಾಗಿರುವ ಕಾಲಘಟ್ಟ! ಇದರಲ್ಲಿ ಆರ್ಥಿಕ ನಿರ್ವಹಣೆ ಪ್ರಮುಖವಾದ ಸವಾಲು. ವಿವಾಹದ ಬಳಿಕ ಖರ್ಚುಗಳು ಹಾಗೂ ಜವಾಬ್ದಾರಿಗಳೂ ಹೆಚ್ಚುತ್ತವೆ. ಹಾಗಾಗಿ ನವವಿವಾಹಿತರು ವಿವಾಹದ ಬಳಿಕ ಮುಂದಿನ ಜೀವನಕ್ಕಾಗಿ ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಹಲವು ಸಲಹೆಗಳನ್ನು ನೀಡಲಾಗಿದೆ.

 

ಖರ್ಚುವೆಚ್ಚಗಳ ಬಗ್ಗೆ ಜಂಟಿ ಸಮಾಲೋಚನೆ

ಖರ್ಚುವೆಚ್ಚಗಳ ಬಗ್ಗೆ ಜಂಟಿ ಸಮಾಲೋಚನೆ

ಆದಾಯ ಮತ್ತು ಖರ್ಚುಗಳ ಬಗ್ಗೆ ಜೀವನ ಸಂಗಾತಿಯೊಂದಿಗೆ ಮುಕ್ತವಾಗಿ ಹಾಗೂ ಯಾವುದೇ ಮುಚ್ಚುಮರೆಯಿಲ್ಲದೇ ಸಮಾಲೋಚನೆ ಮಾಡಿ. ನಿಮ್ಮ ಆದಾಯ ಹಾಗೂ ಖರ್ಚಿನ ನಿರ್ವಹಣೆಯ ಬಗ್ಗೆ ನಿಮ್ಮ ಸಂಗಾತಿ ತಿಳಿದಿರಬೇಕು ಹಾಗೂ ನಿಮ್ಮಲ್ಲಿ ಇರುವ ಆಸ್ತಿ, ವಸ್ತುಗಳ ಬಗ್ಗೆ ತಿಳಿದಿರಬೇಕು. ಅಲ್ಲದೇ ನೀವು ಹೂಡುವ ಅಥವಾ ಹೂಡಲಿರುವ ಹೂಡಿಕೆಗಳಿಗೂ ನಿಮ್ಮ ಜೀವನಸಂಗಾತಿಯನ್ನೇ ನಾಮನಿರ್ದೇಶಿಸಬೇಕು.

ಖರ್ಚು ಮಿತವಾಗಿರಲಿ

ಖರ್ಚು ಮಿತವಾಗಿರಲಿ

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತು ಎಲ್ಲರೂ ಅನುಸರಿಸಬೇಕು. ಮದುವೆಯ ಬಳಿಕ ಹೆಚ್ಚಿನ ನವವಿವಾಹಿತರು ಯಾವುದೋ ಹುಮ್ಮಸ್ಸಿನಲ್ಲಿ ದುಬಾರಿ ಬೆಲೆಯ ಕಾರು, ಎಲೆಕ್ಟ್ರಾನಿಕ್ ಉಪಕರಣ ಮೊದಲಾದವುಗಳನ್ನು ಖರೀದಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇವುಗಳ ಖರ್ಚನ್ನು ಭರಿಸಲಾಗದೇ ಜೀವನದ ಅಗತ್ಯದ ಖರ್ಚನ್ನೇ ಮೊಟಕುಗೊಳಿಸಬೇಕಾಗಿ ಬಂದು ವೇದನೆ ಅನುಭವಿಸಬೇಕಾಗುತ್ತದೆ. ಹಾಗಾಗಿ ನಿಮಗೆ ಅವಶ್ಯವಿರುವಷ್ಟೇ, ನಿಮ್ಮ ಆರ್ಥಿಕ ಸಾಮರ್ಥ್ಯ ಅನುಸರಿಸಿ. ನೆನಪಿರಲಿ, ದಂಪತಿಗಳ ಅನ್ಯೋನ್ಯತೆಯೇ ಈ ಜಗತ್ತಿನ ಅತ್ಯಂತ ದುಬಾರಿ ವಸ್ತುವಾಗಿದ್ದು, ಜಗತ್ತಿಯ ಯಾವುದೇ ವಸ್ತು ಇದಕ್ಕೆ ಸಮನಲ್ಲ!

ತುರ್ತು ಪರಿಸ್ಥಿತಿ ನಿಧಿ ಇರಲಿ
 

ತುರ್ತು ಪರಿಸ್ಥಿತಿ ನಿಧಿ ಇರಲಿ

ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಸಣ್ಣ ಪ್ರಮಾಣದಲ್ಲಿ ತುರ್ತು ಪರಿಸ್ಥಿತಿಗಾಗಿ ನಿಧಿಯೊಂದನ್ನು ಸ್ಥಾಪಿಸಿ. ಸಾಮಾನ್ಯವಾಗಿ, ಈ ನಿಧಿ ನಿಮ್ಮ ಆರು ತಿಂಗಳ ಸಾಮಾನ್ಯ ಮನೆ ಖರ್ಚುಗಳನ್ನು ಭರಿಸುವಷ್ಟಿದ್ದರೆ ಉತ್ತಮ.

 

 

ಆರ್ಥಿಕ ಯೋಜನೆ ತಯಾರಿಸಿ

ಆರ್ಥಿಕ ಯೋಜನೆ ತಯಾರಿಸಿ

ನಿಮ್ಮ ಆದಾಯ-ಖರ್ಚುಗಳನ್ನೆಲ್ಲಾ ಪರಿಗಣಿಸಿ ಆರ್ಥಿಕ ಯೋಜನೆಯೊಂದನ್ನು ಸಿದ್ದಪಡಿಸಿ. ಇದರಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಆರ್ಥಿಕ ಗುರಿಗಳಿರಲಿ ಹಾಗೂ ಇವುಗಳನ್ನು ಸಾಧಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಮಾರ್ಗಗಳನ್ನು ನಿಯೋಜಿಸಿ.

ನಿವೃತ್ತಿ ಯೋಜನೆ ಮರೆಯದಿರಿ

ನಿವೃತ್ತಿ ಯೋಜನೆ ಮರೆಯದಿರಿ

ನಿವೃತ್ತಿಯ ಬಳಿಕ ನಿಮ್ಮದೇ ನಿಧಿಯನ್ನು ಅವಲಂಬಿಸಿ ಜೀವನ ಮುಂದುವರೆಸಲು ಸಾಧ್ಯವಾಗುವಂತೆ ನಿವೃತ್ತಿಗಾಗಿ ಯೋಜನೆಯೊಂದನ್ನು ಪ್ರಾರಂಭಿಸಿ. ಆರ್ಥಿಕ ತಜ್ಞರ ಪ್ರಕಾರ ಪ್ರತಿ ತಿಂಗಳೂ ಒಟ್ಟು ಆದಾಯದ ಕನಿಷ್ಟ ಶೇಕಡಾ 20ರಷ್ಟು ಮೊತ್ತವನ್ನು ನಿವೃತ್ತಿಗಾಗಿ ಮೀಸಲಿರಿಸಿ.

ಹೂಡಿಕೆಯಲ್ಲಿ ಹಣ ತೊಡಗಿಸಿ

ಹೂಡಿಕೆಯಲ್ಲಿ ಹಣ ತೊಡಗಿಸಿ

ಉತ್ತಮ ಉಳಿತಾಯ ಯೋಜನೆಗಳಾದ ಪಿಪಿಎಫ್, ಪೋಸ್ಟ್ ಆಫೀಸ್, ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ನಿಯಮಿತವಾಗಿ ಹೂಡಿಕೆಯನ್ನು ಹೂಡಲು ಪ್ರಾರಂಭಿಸಿ.

 

 

ಜೀವ ವಿಮೆ ಖರೀದಿಸಿ

ಜೀವ ವಿಮೆ ಖರೀದಿಸಿ

ಉತ್ತಮವಾದ ಜೀವ ವಿಮಾ ಯೋಜನೆಯೊಂದನ್ನು ಕಡ್ಡಾಯವಾಗಿ ಖರೀದಿಸಿ. ಜಿವವಿಮೆ ಎಷ್ಟಿರಬೇಕು ಎಂದರೆ ಇದು ನಿಮ್ಮ ಆದಾಯವನ್ನು ಭರಿಸುವಂತಿರಬೇಕು. ಇದಕ್ಕಾಗಿ ಅತ್ಯುತ್ತಮ ಆಯ್ಕೆಯೆಂದರೆ ಅವಧಿ ವಿಮೆ (term plan).

ಆರೋಗ್ಯ ವಿಮೆ ಖರೀದಿಸಿ

ಆರೋಗ್ಯ ವಿಮೆ ಖರೀದಿಸಿ

ಪ್ರತಿಯೊಂದು ಕುಟುಂಬಕ್ಕೆ ಉತ್ತಮವಾದ ಆರೋಗ್ಯ ವಿಮೆ ಕಡ್ಡಾಯವಾಗಿದೆ. ನಿಮ್ಮ ವೈದ್ಯಕೀಯ ಅಗತ್ಯತೆಯನ್ನು ಆಧರಿಸಿ ನಿಮಗೆ ಸೂಕ್ತವಾಗುವ ವೈದ್ಯಕೀಯ ವಿಮೆಯನ್ನು ಖರೀದಿಸಿ. ಈ ವಿಮೆ ನಿಮ್ಮ ಉದ್ಯೋಗದಾತ ಸಂಸ್ಥೆ ಒದಗಿಸಿದ ವಿಮೆಗಿಂತಲೂ ಭಿನ್ನ ಹಾಗೂ ಇದಕ್ಕೂ ಹೆಚ್ಚಿನ ಸೌಲಭ್ಯ ನೀಡುವಂತಿರಬೇಕು.

 

 

ಸಾಲಮುಕ್ತರಾಗಿ

ಸಾಲಮುಕ್ತರಾಗಿ

ಸಾಲ ಕೊಳ್ಳಲು ಬೇಕಾದಷ್ಟು ಕಾರಣಗಳಿರುತ್ತವೆ. ಆದರೆ ಎಲ್ಲಿಯವರೆಗೆ ಜೀವ/ಮಾನ ಹೋಗುವಷ್ಟು ಅನಿವಾರ್ಯತೆ ಇರುವುದಿಲ್ಲವೋ ಅಲ್ಲಿಯವರೆಗೂ ಸಾಲ ಮಾಡದೇ ಇರುವುದು ಜಾಣರ ಲಕ್ಷಣ. ಸಾಮಾನ್ಯವಾಗಿ ನಮ್ಮ ಅಕ್ಕಪಕ್ಕದವರ ಖರ್ಚನ್ನು ನೋಡಿ ನಾವೂ ಹಿಂದೆ ಬೀಳಬಾರದೆಂದೇ ನಮ್ಮಲ್ಲಿ ಹೆಚ್ಚಿನವರು ಸಾಲ ಮಾಡಿಯಾದರೂ ಒಬ್ಬಟ್ಟು ತಿನ್ನುವ ಸಂಧಿಗ್ಧತೆಗೆ ಒಳಗಾಗುತ್ತಾರೆ. ಉದಾಹರಣೆಗೆ ವಿದೇಶ ಪ್ರವಾಸ, ಕ್ಲಬ್ ಒಂದರಲ್ಲಿ ಸದಸ್ಯತ್ವ ಇತ್ಯಾದಿ.
ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಇದನ್ನು ಸಮಯೋಚಿತವಾಗಿ ಬಳಸಿ ಹಾಗೂ ಎಲ್ಲಾ ಪಾವತಿಗಳನ್ನು ಕಡೆಯ ದಿನಾಂಕಕ್ಕೂ ಮುನ್ನವೇ ಪಾವತಿಸಿಬಿಡಿ.

 

 

ಮನೆ ಖರೀದಿಸಿ

ಮನೆ ಖರೀದಿಸಿ

ನೀವು ಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ನಿಮ್ಮದೇ ಸ್ವಂತ ಮನೆಯನ್ನು ಹೊಂದುವತ್ತ ಖಂಡಿತವಾಗಿಯೂ ಯೋಜನೆಯೊಂದನ್ನು ಹಮ್ಮಿಕೊಳ್ಳಬೇಕು. ಆದರೆ ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು ಹಾಗೂ ಇದಕ್ಕಾಗಿ ಮನೆ ಸಾಲವನ್ನು ಪಡೆಯುವುದಾದರೆ ಇದರ ಪ್ರತಿ ತಿಂಗಳ ಕಂತು ನಿಮ್ಮ ಒಟ್ಟು ಆದಾಯದ ಶೇಕಡಾ 35ಕ್ಕೆ ಮೀರಬಾರದು.
ಒಂದು ವೇಳೆ ದಂಪತಿಗಳಿಬ್ಬರೂ ಉದ್ಯೋಗಸ್ಥರಾಗಿದ್ದರೆ ಜಂಟಿ ಹೆಸರಿನಲ್ಲಿ ಮನೆಸಾಲವನ್ನು ಪಡೆಯಬೇಕು ಹಾಗೂ ಈ ಮೂಲಕ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯಬಹುದು.

Read more about: savings investments money
English summary

Tips to married couple for good financial life

Getting married means entering to new life. Everything will be new including financial life. Married couple sometime get confused when they come across financial jargons. In order to help them we are herewith 9 Tips for married couple for good financial life.
Story first published: Saturday, October 26, 2019, 10:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X