ಮನೆಯನ್ನು ಖರೀದಿ ಮಾಡುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯವಾದ ನಿರ್ಧಾರವಾಗಿದೆ. ಅದು ಕೂಡಾ ನಾವು ಮೊದಲ ಬಾರಿಗೆ ಮನೆಯನ್ನು ಖರೀದಿ ಮಾಡುವುದಾದರೆ, ಮನೆಯನ್ನು ಖರೀದಿಸುವುದು ವ್ಯಕ್ತಿಯ ಜೀವನದಲ್ಲಿ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಹೊಸ ಮನೆಯನ್ನು ಖರೀದಿ ಮಾಡಲು ನೀವು ಬಯಸುತ್ತೀರಾ, ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ರಿಯಲ್ ಎಸ್ಟೇಟ್ ತಜ್ಞರು ನೀಡಿರುವ ಟಿಪ್ಸ್‌ಗಳು ಇಲ್ಲಿದೆ ವಿವರ.
ಪ್ರಸ್ತುತ ಆಸ್ತಿಗಳ ಮೌಲ್ಯವು ಹೆಚ್ಚಳವಾಗುತ್ತಿದೆ. ವಸತಿ ಮತ್ತು ವಾಣಿಜ್ಯ ಸೇರಿದಂತೆ ಹಲವಾರು ವಿಭಾಗಗಳಾದ್ಯಂತ ರಿಯಲ್ ಎಸ್ಟೇಟ್ ಬೇಡಿಕೆಯೂ ಹೆಚ್ಚುತ್ತಿದೆ. ಪ್ರಾಪರ್ಟಿ ಫಸ್ಟ್‌ನ ಸಂಸ್ಥಾಪಕ ಮತ್ತು ಸಿಇಒ ಭವೇಶ್ ಕೊಠಾರಿ, ಮೊದಲ ಬಾರಿಗೆ ಮನೆ ಖರೀದಿ ಮಾಡುವವರು ಆಸ್ತಿಯನ್ನು ಖರೀದಿಸುವಾಗ ಏನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುವುದನ್ನು ವಿವರಿಸಿದ್ದಾರೆ, ಇಲ್ಲಿದೆ ವಿವರ ಮುಂದೆ ಓದಿ...

ನಿಮ್ಮ ಉದ್ದೇಶ ಮತ್ತು ಆದ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಿ
ನಾವು ಮುಖ್ಯವಾಗಿ ನಮಗೆ ಎಂತಹ ಮನೆ ಬೇಕು, ಯಾವ ಪ್ರದೇಶದಲ್ಲಿ ಮನೆ ಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ಮೂಲ ಮಾಹಿತಿಯನ್ನು ನಾವು ತಿಳಿದುಕೊಂಡರೆ ನಾವು ಸುಲಭವಾಗಿ ಯಾವ ಆಸ್ತಿ ಬೇಕು ಎಂದು ನಿರ್ಧಾರ ಮಾಡಬಹುದು. ಉದಾಹರಣೆಗೆ, ಖರೀದಿದಾರನು ದೊಡ್ಡ ಜಾಗವನ್ನು ಹುಡುಕುತ್ತಿದ್ದರೆ, ಬಜೆಟ್ ಕಡಿಮೆ ಇದ್ದರೆ, ಕಡಿಮೆ ಬೆಲೆಯ ಉತ್ತಮ ವ್ಯವಹಾರವನ್ನು ಬಯಸಿದರೆ, ಹೆಸರಾಂತ ಡೆವಲಪರ್‌ಗಳಿಂದ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿ ಮಾಡುವುದು ಸೂಕ್ತವಾಗಿದೆ.
ಓರ್ವ ವ್ಯಕ್ತಿಯು ಬಯಸುವ ಆಸ್ತಿಯು ಯಾವಾಗಲೂ ಬಜೆಟ್‌ಗಿಂತ ಶೇಕಡ 20-30 ರಷ್ಟು ಹೆಚ್ಚಾಗಿರುತ್ತದೆ. ಆದ್ದರಿಂದ, ಲಭ್ಯವಿರುವ ಹೋಮ್ ಲೋನ್ ಅನ್ನು ಬಳಸುವುದು ಸೂಕ್ತವಾಗಿದೆ. ಅಂದರೆ ಗೃಹ ಸಾಲ ಪಡೆಯುವುದು ಉತ್ತಮವಾಗಿದೆ. ಮನೆಯು ನಿಮ್ಮ ಬಜೆಟ್‌ಗಿಂತ ಶೇಕಡ 20-30 ರಷ್ಟು ಹೆಚ್ಚಳ ಬೆಲೆಯನ್ನು ಹೊಂದಿದ್ದರೂ ಕೂಡಾ ಆ ಆಸ್ತಿಯನ್ನು ನೀವು ಖರೀದಿ ಮಾಡಬಹುದು. ಅದಕ್ಕಾಗಿ ಗೃಹ ಸಾಲವನ್ನು ಪಡೆಯಬಹುದು.
ತೆರಿಗೆ ಉಳಿತಾಯದಿಂದ, ರೆಡಿ-ಟು-ಮೂವ್-ಇನ್ ಆಸ್ತಿ ಉತ್ತಮ ಆಯ್ಕೆಯಾಗಿದೆ. ಆಕ್ಯುಪೆನ್ಸಿ ಪ್ರಮಾಣಪತ್ರದ (OC) ಅಂತಿಮ ಸ್ವಾಧೀನ ಮತ್ತು ಹಸ್ತಾಂತರದವರೆಗೆ ನಿರ್ಮಾಣ ಹಂತದಲ್ಲಿರುವ ಆಸ್ತಿಗಾಗಿ ಗೃಹ ಸಾಲಗಳಿಗೆ ಪಾವತಿಸಿದ ಬಡ್ಡಿಯ ಮೇಲೆ ಖರೀದಿದಾರರು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಲಾಗುವುದಿಲ್ಲ.
ಬಿಲ್ಡರ್ ಬಗ್ಗೆ ಸಂಶೋಧನೆ
ಎರಡನೆಯ ಪ್ರಮುಖ ಅಂಶವೆಂದರೆ ಬಿಲ್ಡರ್ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡುವುದು ಆಗಿದೆ. ಬಿಲ್ಡರ್ ಈ ಹಿಂದೆ ಎಷ್ಟು ಪ್ರಾಜೆಕ್ಟ್‌ಗಳನ್ನು ವಿತರಿಸಿದ್ದಾರೆ, ಬಿಲ್ಡರ್ ಹೆಸರಿನಲ್ಲಿ ಯಾವುದೇ ವಿವಾದಿತ ಪ್ರಾಜೆಕ್ಟ್‌ಗಳು ಇದೆಯೇ, ಇತ್ಯಾದಿಗಳ ಹಿನ್ನೆಲೆ ಪರಿಶೀಲನೆ ಮಾಡುವುದು ಯಾವಾಗಲೂ ಉತ್ತಮ. ಪ್ರಸ್ತುತ ಖರೀದಿದಾರರಿಗೆ ಬಿಲ್ಡರ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವುದು RERA ಮೂಲಕ ಸುಲಭವಾಗಿದೆ.
ಬಿಲ್ಡರ್ ಬಗ್ಗೆ ಸಂಶೋಧನೆ ಮಾಡುವುದು ಮಾತ್ರವಲ್ಲದೆ, ಆಸ್ತಿಯ ಬಗ್ಗೆ ಎಲ್ಲಾ ಸೂಕ್ಷ್ಮ ಅಂಶಗಳ ಬಗ್ಗೆ ವಿಚಾರಿಸುವುದು ಮತ್ತು ತಿಳಿಯುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ಇದರಿಂದಾಗಿ ವಹಿವಾಟು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಉತ್ತಮ ಬೆಲೆಗೆ ಆ ಡೆವಲಪರ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮನೆಯನ್ನು ನೀವು ಪಡೆಯಬಹುದು.
ನಿಯಮಗಳ ಅನುಸರಣೆಯನ್ನು ಪರಿಶೀಲಿಸಿ
ಮೂರನೆಯದಾಗಿ, ಹೊಸ ಮನೆ ಖರೀದಿ ಮಾಡುವವರು ನಿಯಮಗಳ ಅನುಸರಣೆಯನ್ನು ಸರಿಯಾಗಿ ಮಾಡಲಾಗಿದೆಯೇ ಎಂದು ಪರಿಶೀಲನೆ ಮಾಡಿ. ಆಸ್ತಿಯನ್ನು ನಿಯಮಕ್ಕೆ ಅನುಸಾರವಾಗಿ ನಿರ್ಮಾಣ ಮಾಡಲಾಗುತ್ತದೆಯೇ?, ಅಗತ್ಯ ಪ್ರಮಾಣಪತ್ರಗಳು ಇದೆಯೇ ಎಂದು ನೋಡಿಕೊಳ್ಳಿ. ನಿಯಮಗಳ ಅನುಸರಣೆಯನ್ನು ಪರಿಶೀಲಿಸಿದರೆ ಉತ್ತಮ.


Click it and Unblock the Notifications