ಎಚ್ಚರ! ಹಣಕಾಸು ವಿಷಯದಲ್ಲಿ ಎಡವುವುದು ಸಹಜ. ನೀವು ಈ ರೀತಿ ಮಾಡುತ್ತಿದ್ದರೆ ಈಗಲೇ ನಿಲ್ಲಿಸಿ. ಪರ್ಸನಲ್ ಫೈನಾನ್ಸ್ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ.ಒಂದುವೇಳೆ ಸಮಯ ನಿಮ್ಮ ಕೈ ಮೀರಿದರೆ, ನಿಮ್ಮ ಭವಿಷ್ಯಕ್ಕೆ ಹಾನಿ ಖಚಿತ. ಹೌದು, ಹಣಕಾಸಿನ ಬಗ್ಗೆ ಜ್ಞಾನದ ಅಂತರ ಅಥವಾ ಶಿಸ್ತಿನ ಕೊರತೆಯಿಂದಾಗಿ, ಬಜೆಟ್, ಉಳಿತಾಯ ಮತ್ತು ಹೂಡಿಕೆ ಇತ್ಯಾದಿಗಳಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದು ಸಾಮಾನ್ಯವಾಗಿದೆ. ಆದರೆ ಈ ತಪ್ಪುಗಳನ್ನು ನೀವು ಮಾಡಬೇಡಿ. ನೀವು ಹಣಕಾಸು ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..

ಬಜೆಟ್ ಯೋಜನೆ ಬಗ್ಗೆ ಅರಿವು ಇಲ್ಲದಿರುವುದು
ನೀವು ಯಾವುದೇ ವೈಯಕ್ತಿಕ ಹಣಕಾಸು ನಿರ್ವಹಣೆ ಮಾಡಬೇಕಾದರೆ ಮೊದಲಿಗೆ ಬಜೆಟ್ ಲೆಕ್ಕಚಾರ ಮಾಡುವುದು ಬಹುಮುಖ್ಯ. ಬಜೆಟ್‌ನ ಪೂರ್ವ ತಯಾರಿ ಇಲ್ಲದೇ ವ್ಯವಹಾರ ಮಾಡಿದ್ದರೆ ನಿಮ್ಮಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಸರಿಯಾದ ಬಜೆಟ್ ಇಲ್ಲದೆ ಹೆಚ್ಚು ದುಂದುವೆಚ್ಚ ಮಾಡುವುದು ಮತ್ತು ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ ಎಂಬುದರ ಬಗ್ಗೆ ಗಮನವನ್ನು ಅರಿಸದೇ ಸುಮ್ಮನೆ ಇದ್ದುಬಿಡುವಂತಹ ತಪ್ಪುಗಳನ್ನು ಮಾಡಬೇಡಿ. ನಿಮ್ಮಗೆ ಅಗತ್ಯವಿರುವ ವಿವರವಾದ ಬಜೆಟ್ ಅನ್ನು ರಚಿಸುವುದರಿಂದ ಬಾಡಿಗೆ, ದಿನಸಿ ಮತ್ತು ಉಳಿತಾಯದಂತಹ ಅಗತ್ಯ ವಸ್ತುಗಳಿಗೆ ಹಣವನ್ನು ಹಂಚಿಕೆ ಮಾಡಲು ನಿಮಗೆ ಸಹಾಯವಾಗುತ್ತದೆ. ನೀವು ಅತಿಯಾಗಿ ಎಲ್ಲಿ ಖರ್ಚು ಮಾಡುತ್ತಿದ್ದೇವೆ ಎಂಬುವುದನ್ನು ತಿಳಿಯಲು ಅವಕಾಶ ಸಿಗುತ್ತದೆ. ನಿಮ್ಮ ಬಜೆಟ್ ಅನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ನಿಮ್ಮ ಹಣಕಾಸಿನ ಗುರಿಗಳೊಂದಿಗೆ ನೀವು ಸರಿಯಾದ ಹಾದಿಯಲ್ಲಿ ತಲುಪುವುದಕ್ಕೆ ಬಜೆಟ್ ಪ್ಲಾನ್ ಮಾಡುವುದು ತುಂಬಾನೇ ಮುಖ್ಯ.
ತುರ್ತು ಉಳಿತಾದ ಬಗ್ಗೆ ನಿರ್ಲಕ್ಷ್ಯ
ಅನೇಕ ಜನರು ತುರ್ತು ನಿಧಿಯ ಮಹತ್ವವನ್ನು ಮರೆತುಬಿಡುತ್ತಾರೆ. ವೈದ್ಯಕೀಯ ಬಿಲ್‌ಗಳು ಅಥವಾ ಕಾರು ರಿಪೇರಿಯಂತಹ ಅನಿರೀಕ್ಷಿತ ವೆಚ್ಚಗಳು ಯಾವುದೇ ಸಮಯದಲ್ಲಿ ನಿಮ್ಮಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಬಹುದು. ಅಂತಹ ಸಂದರ್ಭಗಳಲ್ಲಿ ನಿಮ್ಮ ಬಳಿ ತುರ್ತು ನಿಧಿ ಇದ್ದರೆ ನಿಮ್ಮಗೆ ಸಹಾಯಕ್ಕೆ ಬರುತ್ತದೆ. ನೀವು ಸುಲಭವಾಗಿ ಪ್ರವೇಶಿಸಬಹುದಾದ ಖಾತೆಯಲ್ಲಿ ಕನಿಷ್ಠ ಮೂರರಿಂದ ಆರು ತಿಂಗಳ ಜೀವನ ವೆಚ್ಚವನ್ನು ಉಳಿಸುವ ಗುರಿಯನ್ನು ಹೊಂದಿರಿ.ಈ ರೀತಿಯಾಗಿ ನೀವು ತುರ್ತು ಪರಿಸ್ಥಿತಿಗಳು ಬಂದಾಗ ಹೆಚ್ಚಿನ ಬಡ್ಡಿದರದ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಸಾಲವನ್ನು ತಗೆದುಕೊಳ್ಳವುದನ್ನು ತಪ್ಪಿಸಬಹುದು.
ಕ್ರೆಡಿಟ್ ಕಾರ್ಡ್‌ಗಳ ಮೇಲೆ ಅತಿಯಾದ ಅವಲಂಬನೆ
ನೀವೇನಾದರೂ ಅತಿ ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ನಿಮ್ಮನ್ನು ಸಾಲದ ದವಡೆಗೆ ಸಿಲುಕಿಸಿಬಿಡುತ್ತದೆ. ಆದರಿಂದ ನೀವು ಕ್ರೆಡಿಟ್ ಕಾರ್ಡ್‌ಗಳನ್ನು ಬಹಳ ಜವಾಬ್ದಾರಿಯಿಂದ ನಿರ್ವಹಣೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಬಳಕೆ ಮಿತಿ ಮೀರಿದ್ದರೆ ದೊಡ್ಡ ಸಾಲದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ನೀವು ತಗೆದುಕೊಂಡ ಹಣವನ್ನು ಸಾಧ್ಯವಾದರೆ,ಪ್ರತಿ ತಿಂಗಳು ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸುವ ಮೂಲಕ ಕ್ರೆಡಿಟ್ ಕಾರ್ಡ್‌ಗಳನ್ನು ಬುದ್ಧಿವಂತಿಕೆಯಿಂದ ಬಳಕೆ ಮಾಡಿಕೊಳ್ಳವುದು ತುಂಬಾನೇ ಮುಖ್ಯವಾಗುತ್ತದೆ.
ನಿಮ್ಮ ಅನಗತ್ಯ ಖರ್ಚುಗಳಿಗೆ ಅತಿ ಹೆಚ್ಚಾಗಿ ಬಳಸುವುದನ್ನು ಕಡಿಮೆ ಮಾಡಿಕೊಳ್ಳಿ.ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದರಿಂದ ಉತ್ತಮ ಕ್ರೆಡಿಟ್ ಸ್ಕೋರ್‌ಗಳು ಮತ್ತು ಕಡಿಮೆ ಬಡ್ಡಿ ಪಾವತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ನಿವೃತ್ತಿ ಯೋಜನೆಯನ್ನು ನಿರ್ಲಕ್ಷಿಸುವುದು
ನೀವು ವೃತ್ತಿಜೀವನದ ಆರಂಭದಲ್ಲಿ ಮಾಡುವ ದೊಡ್ಡ ತಪ್ಪು ನಿವೃತ್ತಿ ಯೋಜನೆಯನ್ನು ನಿರ್ಲಕ್ಷಿಸುವುದು. ನಿಮ್ಮ ಜೀವನದಲ್ಲಿ ಉಳಿತಾಯವನ್ನು ತಡವಾಗಿ ಪ್ರಾರಂಭಿಸುವುದರಿಂದ ಚಕ್ರಬಡ್ಡಿ ಬೆಳವಣಿಗೆ ಕಡಿಮೆಯಾಗುತ್ತದೆ. ನಿಮ್ಮ ಒಂದು ಸಣ್ಣ ಮೊತ್ತವು ಸಹ ನಿವೃತ್ತಿಯ ವೇಳೆಗೆ ಹೆಚ್ಚಿನ ಆದಾಯವನ್ನು ಒದಗಿಸುತ್ತದೆ. ಕೆಲಸದ ವರ್ಷಗಳಲ್ಲಿ ನೀವು ಉಳಿಸುವಂತಹ ಮೊತ್ತವು ಆರ್ಥಿಕವಾಗಿ ಸುರಕ್ಷಿತನ್ನು ನೀಡುತ್ತದೆ.
ಖರ್ಚುಗಳನ್ನು ಟ್ರ್ಯಾಕ್ ಮಾಡುವಲ್ಲಿ ನೀವು ವಿಫಲ
ನೀವು ಬಳಕೆ ಮಾಡಿಕೊಳ್ಳವಂತಹ ಖರ್ಚುಗಳನ್ನು ನಿಯಮಿತವಾಗಿ ಗಮನಹರಿಸಬೇಕು.ಇಲ್ಲವಾದ್ದರೆ ನಿಮ್ಮ ಉಳಿತಾಯಕ್ಕಿಂತ ಖರ್ಚುಗಳೇ ಹೆಚ್ಚಾಗುತ್ತದೆ.ಖರ್ಚುಗಳ ವಿಚಾರದಲ್ಲಿ ನೀವು ವಿಫಲವಾದ್ದರೆ ನಿಮ್ಮ ಉಳಿತಾಯ ಮಾಡಬೇಕಾಗದ ಹಣ ಕೂಡ ವ್ಯರ್ಥವಾಗಿ ಹೋಗುತ್ತದೆ. ನಿತ್ಯ ಖರ್ಚಿನ ಟ್ರ್ಯಾಕ್ ಬಗ್ಗೆ ನಿಮಗೆ ಅರಿವಿಲ್ಲದಂತೆ ಮಾಡುತ್ತದೆ. ನಿಮ್ಮ ಭವಿಷ್ಯಕ್ಕೆ ಹಾನಿ ಸಹ ಉಂಟಾಗುತ್ತದೆ. ಹಣಕಾಸು ತುರ್ತು ಎದುರಾದಾಗ ಉಳಿತಾಯದ ಹಣಕಾಸಿನ ಹೊಂದಾಣಿಕೆಯನ್ನು ಮಾಡಲು ಸಹಾಯಕವಾಗುತ್ತದೆ. ನೀವು ಇದಕ್ಕಾಗಿ ಉಳಿತಾಯವನ್ನು ಟ್ರ್ಯಾಕ್ ಮಾಡುವಂತಹ ಅಪ್ಲಿಕೇಶನ್‌ಗಳು ಅಥವಾ ಸ್ಪ್ರೆಡ್‌ಶೀಟ್‌ಗಳೊಂದಿಗೆ ಸ್ಥಿರವಾಗಿ ಟ್ರ್ಯಾಕ್ ಮಾಡುವುದರಿಂದ ಮಂದಿನ ಭವಿಷ್ಯದ ಖರೀದಿಗೆ ಬೇಕಾದ ಹಣಕಾಸು ಮತ್ತು ಹೂಡಿಕೆಗಳ ಕುರಿತು ನಿರ್ಧಾರವನ್ನು ತಗೆದುಕೊಳ್ಳಲು ಸಹಾಯಕವಾಗುತ್ತದೆ.
ನೀವು ಯಾವುದೇ ನಿರ್ಧಾರವನ್ನು ತಗದುಕೊಳ್ಳವ ಮನ್ನ ಎಚ್ಚರದಿಂದ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಹೋಗಿ ಇಲ್ಲವಾದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.


Click it and Unblock the Notifications