ನಮ್ಮ ಭವಿಷ್ಯ ಸುರಕ್ಷಿತವಾಗಿರಬೇಕಾದರೆ ನಾವು ಹಣಕಾಸು ಉಳಿತಾಯ ಮಾಡಿಕೊಳ್ಳುವುದು ಅತೀ ಮುಖ್ಯ. ಅದಕ್ಕಾಗಿ ನೀವು ಈಗಿನ ಖರ್ಚನ್ನು ನಿಭಾಯಿಸುವುದು ಕೂಡಾ ಮುಖ್ಯ. ಹಲವಾರು ಮಂದಿ ಒಳ್ಳೆಯ ಉದ್ಯೋಗವನ್ನು ಹೊಂದಿರುತ್ತಾರೆ, ಆದರೆ ತಮ್ಮ ಹಣಕಾಸನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಅವರಲ್ಲಿ ಯಾವುದೇ ರೀತಿಯಾದ ಮಾಹಿತಿ ಇರುವುದಿಲ್ಲ.
ಒಂದು ವೇಳೆ ನಿಮ್ಮ ಸಂಬಳದಲ್ಲಿ ಹೆಚ್ಚಳವಾಯಿತು ಎಂದು ಕೊಳ್ಳಿ. ಅಥವಾ ನಿಮಗೆ ಈ ಕೊರೊನಾ ಸಂದರ್ಭದಲ್ಲಿ ಮಾಡಲಾಗಿದ್ದ ಕಡಿತವನ್ನು ಮರು ಪಾವತಿ ಮಾಡಲಾಗಿದೆ ಎಂದು ಭಾವಿಸಿ. ಈ ಸಂದರ್ಭದಲ್ಲಿ ನೀವು ಹೆಚ್ಚುವರಿ ಹಣವನ್ನು ಉಳಿಸುವ ಬಗ್ಗೆ ಯೋಚನೆ ಮಾಡುವುದು ಅತೀ ಮುಖ್ಯು. ಆ ಹಣವನ್ನು ನೀವು ಎಲ್ಲಿ ಸುರಕ್ಷಿತವಾಗಿ ಇರಿಸುವುದು ಎಂಬುವುದು ಈ ಸಂದರ್ಭದಲ್ಲಿ ನಿಮಗೆ ಮೂಡುವ ಪ್ರಶ್ನೆಯಾಗಿದೆ.
ಅನೇಕ ಮಂದಿಗೆ ತಮ್ಮಲ್ಲಿ ಅಧಿಕ ಹಣವಿದ್ದ ಸಂದರ್ಭದಲ್ಲಿ ಅದನ್ನು ಎಲ್ಲಿ ಸುರಕ್ಷಿತವಾಗಿ ಇರಿಸುವುದು ಎಂಬುವುದು ತಿಳಿದಿಲ್ಲ. ಈ ಸಂದರ್ಭದಲ್ಲಿ ಪೈಸೆಯನ್ನು ಹೂಡಿಕೆ ಮಾಡಿ ಕೋಟ್ಯಾಧೀಶರಾದವರ ಬಗ್ಗೆಯೂ ಒಮ್ಮೆ ನೆನಪಿಸಿಕೊಳ್ಳವುದು ಒಳಿತು. ಈ ಜನರು ತಮ್ಮ ಹಣವನ್ನು ವ್ಯರ್ಥ ಮಾಡದೆ, ಉಳಿತಾಯ ಮಾಡಿಕೊಂಡು ಬಂದು ಈಗ ಕೋಟ್ಯಾಧೀಶರು ಆಗಿದ್ದಾರೆ. ಆದರೆ ನಿಮ್ಮಿಂದ ಈ ಬಯಕೆಗಳನ್ನು ಬದಿಗೊತ್ತಿ ಭವಿಷ್ಯದಲ್ಲಿ ಜೀವನವನ್ನು ಸುಗಮಗೊಳಿಸಲು ಸಾಧ್ಯವೇ?, ನಿಮ್ಮ ಭವಿಷ್ಯದ ಸುರಕ್ಷತೆಗೆ ಇಲ್ಲಿದೆ ಹಣಕಾಸು ಸಲಹೆ, ಮುಂದೆ ಓದಿ.
ಟರ್ಮ್ ಇನ್ಶುರೆನ್ಸ್ ಖರೀದಿ ಮಾಡಿ
ನಿಮ್ಮ ಕೈಯಲ್ಲಿ ಹಣವಿದ್ದರೆ, ನೀವು ಯಾವುದೇ ವಿಮೆಯನ್ನು ಖರೀದಿ ಮಾಡದಿದ್ದರೆ, ಈಗಲೇ ಹೋಗಿ ಟರ್ಮ್ ಇನ್ಶುರೆನ್ಸ್ ಅನ್ನು ಖರೀದಿ ಮಾಡಿ. ಈ ಕೊರೊನಾ ವೈರಸ್ ಸೋಂಕು ನಮಗೆ ಜೀವನದಲ್ಲಿ ಹಲವಾರು ಮೌಲ್ಯಗಳನ್ನು ಕಲಿಸಿದೆ ಅದರಲ್ಲಿ ಮುಖ್ಯವಾದುದು, ನಮ್ಮ ಜೀವನ ಅತೀ ಪ್ರಾಮುಖ್ಯವೆಂಬುವುದು. ನೀವು ಜೀವನವನ್ನು ಕಳೆದುಕೊಳ್ಳುವ ಯಾವುದೇ ಅವಕಾಶ ಇಲ್ಲದಂತೆ ಜೀವನವನ್ನು ಸುರಕ್ಷಿತಗೊಳಿಸುವುದು ಮುಖ್ಯ. ಹಾಗೆಯೇ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಸುವುದು ಮುಖ್ಯ. ನೀವು ಅದಕ್ಕಾಗಿ ಉತ್ತಮವಾದ ವಿಮೆಯನ್ನು ಖರೀದಿ ಮಾಡಿ. ಈ ಮೂಲಕ ನಿಮ್ಮ ಹಣವನ್ನು ಕೂಡಾ ಸುರಕ್ಷಿತವಾಗಿರಿಸಿ.
ವೈದ್ಯಕೀಯ ವಿಮೆ ತಪ್ಪದೇ ಖರೀದಿ ಮಾಡಿ
ಕೊರೊನಾ ವೈರಸ್ ಸೋಂಕಿನಿಂದ ನಿಮ್ಮನ್ನು ರಕ್ಷಣೆ ಮಾಡಲು ನಿಮಗೆ ಕೊರೊನಾ ವೈರಸ್ ವಿರುದ್ದ ನೀಡಲಾಗುವ ಲಸಿಕೆ ಅತ್ಯಗತ್ಯ. ಆದರೆ ನೀವು ಆತಂಕಕ್ಕೆ ಒಳಗಾದ ವಿಷಯ ಕೋವಿಡ್ ಒಂದೇ ಅಲ್ಲ. ಹಲವಾರು ಇದೆ. ಜೀವನದಲ್ಲಿ ಯಾವುದೇ ಅನಿರೀಕ್ಷಿತ ವೈದ್ಯಕೀಯ ಅಪಾಯಗಳನ್ನು ಉಂಟಾಗಬಹುದು. ಈ ಅನಿರೀಕ್ಷಿತ ಅನಾರೋಗ್ಯಗಳು ನಿಮಗೆ ಹಣಕಾಸು ಸಮಸ್ಯೆಯನ್ನು ಕೂಡಾ ಉಂಟು ಮಾಡಬಹುದು. ಆದ್ದರಿಂದ ನೀವು ಹಾಗೂ ನಿಮ್ಮ ಕುಟುಂಬಕ್ಕೆ ವೈದ್ಯಕೀಯ ವಿಮೆಯನ್ನು ಮಾಡಿಕೊಳ್ಳಿ. ನೀವು ಬರಿಯೇ ನಿಮ್ಮ ಕಾರ್ಯ ನಿರ್ವಹಿಸುವ ಕಂಪೆನಿಯಲ್ಲಿ ಮಾಡಲಾಗುವ ವಿಮೆಯ ಮೇಲೆ ಅವಲಂಬಿತರಾಗಿ ಇರಬೇಡಿ. ನೀವು ನಿಮ್ಮ ಉದ್ಯೋಗವನ್ನು ಬದಲಾವಣೆ ಮಾಡುವ ಸಾಧ್ಯತೆಗಳು ಇರುತ್ತದೆ. ಈ ಸಂದರ್ಭದಲ್ಲಿ ವಿಮೆಯು ಮುಕ್ತಾಯಾಗಬಹುದು. ಆದ್ದರಿಂದ ನೀವಾಗಿಯೇ ವಿಮೆ ಮಾಡಿಕೊಂಡು ಜೀವನವನ್ನು ಸುರಕ್ಷಿತವಾಗಿರಿಸಿ.
ಸಾರ್ವಜನಿಕ ಭವಿಷ್ಯ ನಿಧಿ ಮಾಡಿಕೊಳ್ಳಿ
ನೀವು ಎಲ್ಲವುದಕ್ಕಿಂತ ಮೊದಲು ಸಾರ್ವಜನಿಕ ಭವಿಷ್ಯ ನಿಧಿಯನ್ನು ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಶೇಕಡ 7.1 ರಷ್ಟು ಬಡ್ಡಿಯನ್ನು ನೀಡುತ್ತದೆ ಹಾಗೂ ನಿಮ್ಮ ಹಣದ ಉಳಿತಾಯವನ್ನು ಕೂಡಾ ಮಾಡಲು ಸಾಧ್ಯವಾಗುತ್ತದೆ. ವರ್ಷಕ್ಕೆ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿಯ ಸಾರ್ವಜನಿಕ ಭವಿಷ್ಯ ನಿಧಿಯನ್ನು ಮಾಡಿಕೊಳ್ಳಬಹುದು. ಸಾರ್ವಜನಿಕ ಭವಿಷ್ಯ ನಿಧಿಯು 15 ವರ್ಷಗಳ ಅವಧಿಯ ಭವಿಷ್ಯ ನಿಧಿ ಯೋಜನೆಯಾಗಿದೆ. ಈ ಕಾಲಾವಧಿ ಮುಗಿದ ಬಳಿಕ ನೀವು ಸಂಪೂರ್ಣ ಹಣವನ್ನು ವಾಪಾಸ್ ಪಡೆಯಬಹುದು ಅಥವಾ ಈ ಕಾಲಾವಧಿಯನ್ನು ಐದು ವರ್ಷಗಳ ಕಾಲ ವಿಸ್ತರಣೆ ಮಾಡಿಕೊಳ್ಳಬಹುದು.
ಮನೆಯನ್ನು ಖರೀದಿ ಮಾಡಿ: ಅದು ನಿಮ್ಮ ಖಾಯಂ ಸಂಪತ್ತು
ನಾವು ಒಂದು ಮನೆಯ ಬಾಡಿಗೆಗೆ ಪಡೆದು ಹೆಚ್ಚು ಲಾಭದಾಯಕ ಕೊಡುಗೆಗಳು ಮತ್ತು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಬಾರದೇ?. ಹೌದು ನೀವು ಮಾಡಬಹುದು. ಅದಕ್ಕಾಗಿ ನೀವು ಮೊದಲು ಮನೆಯಲ್ಲಿ ಖರೀದಿ ಮಾಡುವುದು ಅಥವಾ ಕಟ್ಟಿಸುವುದು ಮುಖ್ಯ. ನೀವು ಈ ಮನೆಯಲ್ಲಿ ಉಳಿದುಕೊಳ್ಳ ಬಹುದು ಅಥವಾ ಈ ಮನೆಯನ್ನು ಬಾಡಿಗೆಗೆ ನೀಡಬಹುದು. ಇದು ನಿಮ್ಮ ಭವಿಷ್ಯದ ಒಂದು ಸುರಕ್ಷಿತ ಸಂಪತ್ತು ಆಗಿ ಉಳಿಯುತ್ತದೆ. ಇದು ಸಾಂಪ್ರದಾಯಿಕವಾಗಿ ನಿಮಗೆ ಕಾಣಬಹುದು, ಹಾಗೆಯೇ ತಜ್ಞರು ನೀಡದ ಸಲಹೆಯಂತೆ ಕಾಣಬಹುದು, ಆದರೆ ನಾವು ಮನೆಯನ್ನು ಖರೀದಿ ಮಾಡಿದರೆ, ನಮ್ಮ ಭವಿಷ್ಯ ಸುರಕ್ಷಿತ ಖಂಡಿತ. ಅದಕ್ಕಾಗಿ ನೀವು ಪಿಎಂ ಆವಾಸ್ ಯೋಜನೆಯನ್ನು ಒಮ್ಮೆ ನೋಡಿಕೊಳ್ಳುವುದು ಉತ್ತಮ.
ಹಣವಿದೆಯೇ, ಲಾಭ ಗಳಿಸುವಲ್ಲಿ ಹೂಡಿಕೆ ಮಾಡಿ
ನೀವು ಹಣವನ್ನು ಹೊಂದಿದ್ದರೆ ಅದನ್ನು ಹೂಡಿಕೆ ಕೂಡಾ ಮಾಡಿಕೊಳ್ಳಬಹುದು. ನೀವು ನಿಮ್ಮಲ್ಲಿ ಇರುವ ಸ್ವಲ್ಪ ಹಣವನ್ನೇ ಹೂಡಿಕೆ ಮಾಡಬಹುದು. ಸುಮಾರು ಎರಡು ಸಾವಿರವಾದರೂ ಹೂಡಿಕೆ ಮಾಡಿ, ಆರು ತಿಂಗಳ ಅವಧಿಗಾದರೂ ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಿ. ಹಾಗೆಯೇ ಹೂಡಿಕೆ ಮಾಡುವ ಸಂದರ್ಭದಲ್ಲು ಜಾಗರೂಕರಾಗಿರಿ, ಮಾರುಕಟ್ಟೆಯ ಪರಿಸ್ಥಿತಿ ಹೇಗೆ ಇದೆ ಎಂದು ನೋಡಿಕೊಂಡು ಹೂಡಿಕೆ ಮಾಡಿ. ಹೆಚ್ಚಾಗಿ ಷೇರುಗಳ ಬಗ್ಗೆ ತಿಳಿದುಕೊಳ್ಳಿ. ಇನ್ನು ನೀವು ಹೂಡಿಕೆ ಮಾಡಿದ ಸಂದರ್ಭದಲ್ಲಿ ಹೆಚ್ಚು ಲಾಭ ಬರದಿದ್ದರೆ ತೀರಾ ನಿರಾಶೆಗೆ ಒಳಗಾಗಬೇಡಿ. ಆದರೆ ಹೂಡಿಕೆ ಮಾಡುವಾಗ ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡಿ.
More From GoodReturns

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಯಾವುದು ಬೆಸ್ಟ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಬ್ಯಾಂಕ್ ರಜೆ ಇದ್ದರೂ ನಿಮ್ಮ ಹಣಕಾಸಿನ ವ್ಯವಹಾರ ಸುಗಮವಾಗಿ ನಡೆಸುವುದು ಹೇಗೆ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಹೂಡಿಕೆದಾರರೇ ಎಚ್ಚರ! ನಿಮ್ಮ ಹಣಕ್ಕೆ ಯಾವುದು ಬೆಸ್ಟ್ ಆಯ್ಕೆ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ, ಈಗ ಎಲ್ಲಿ ಹೂಡಿಕೆ ಮಾಡಬೇಕು?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆಯಲ್ಲಿ ಲಾಭ ಗಳಿಸುವುದು ಹೇಗೆ?

ಚಿನ್ನದ ಹೂಡಿಕೆ: ಗೊಂದಲ ಬಿಡಿ, ಈ ದಾರಿ ಬೆಸ್ಟ್!

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆಯ ನಿರೀಕ್ಷೆ: ಹೂಡಿಕೆದಾರರೇ ಎಚ್ಚರ!



Click it and Unblock the Notifications