ತಿಂಗಳಿಗೆ 5000 ಉಳಿಸಿ 8 ಲಕ್ಷ ಠೇವಣಿ ಇಡಬಹುದು; ಹೇಗೆ, ಎಲ್ಲಿ ಗೊತ್ತಾ?

ಪ್ರತಿಯೊಬ್ಬರೂ ಜೀವನದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಏನನ್ನಾದರೂ ಮಾಡಿ ಕೂಡಿ ಇಡಬೇಕೆಂಬ ಆಸೆಯಂತೂ ಇದ್ದೇ ಇರುತ್ತದೆ. ಅಂತವರು ತಮ್ಮ ಹಣವನ್ನು ಸುರಕ್ಷಿತವಾಗಿಯಿಡಲು ಯಾವ ಸ್ಥಳಗಳು ಬೆಸ್ಟ್? ಯಾವುದರಲ್ಲಿ ಹೆಚ್ಚಿನ ಆದಾಯ ಬರುತ್ತದೆ ಎಂದು ಯೋಚಿಸುವವರಿಗೆ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ ಉತ್ತಮ ಆಯ್ಕೆ ಎಂದು ಹೇಳಬಹುದು. ಹಾಗಿದ್ರೆ ಈ ಯೋಜನೆಯಿಂದ ಎಷ್ಟು ಬಡ್ಡಿ ಸಿಗುತ್ತೆ..? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು, ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳು ಬಹಳ ಜನಪ್ರಿಯವಾದ ಯೋಜನೆಯಾಗಿದೆ. ಇವುಗಳಲ್ಲಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಅಂದರೆ ಪೋಸ್ಟ್ ಆಫೀಸ್ ಆರ್‌ಡಿ ಕೂಡ ಸೇರಿಕೊಂಡಿದೆ. ಇದರಲ್ಲಿ ನೀವು ಪ್ರತಿ ತಿಂಗಳು 5000 ರೂ ಹೂಡಿಕೆ ಮಾಡುವ ಮೂಲಕ 8 ಲಕ್ಷದ ದೊಡ್ಡ ಮೊತ್ತದ ಆದಾಯವನ್ನು ಗಳಿಸಬಹದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ದರೆ ಸಾಲವು ಸಹ ಸುಲಭವಾಗಿ ಸಿಗುತ್ತೆ.

 ತಿಂಗಳಿಗೆ 5000 ಉಳಿಸಿ 8 ಲಕ್ಷ ಠೇವಣಿ ಇಡಬಹುದು!

ಈ ಯೋಜನೆಯಲ್ಲಿ ಎಷ್ಟು ಬಡ್ಡಿ ಸಿಗುತ್ತೆ?

ಕಳೆದ ವರ್ಷ ಅಂದ್ರೆ 2023 ರಲ್ಲಿ ಸರ್ಕಾರವು ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಹೂಡಿಕೆದಾರರಿಗೆ ಗಿಫ್ಟ್ ಕೊಟ್ಟಿತ್ತು.ಈ ಯೋಜನೆಯಲ್ಲಿ ಹೂಡಿಕೆಯ ಮೇಲಿನ ಬಡ್ಡಿದರ ಶೇ.6.7ರಷ್ಟು ಸಿಗಲಿದೆ.ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಈ ಯೋಜನೆಯಲ್ಲಿ ಕೊನೆಯ ಪರಿಷ್ಕರಣೆ 29 ಸೆಪ್ಟೆಂಬರ್ 2023 ರಂದು ಮಾಡಲಾಗಿದೆ.

ಈ ರೀತಿ ನೀವು 8 ಲಕ್ಷ ರೂಪಾಯಿ ಆದಾಯ ಗಳಿಸಬಹುದು?

ನಾವು ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹೂಡಿಕೆ ಮತ್ತು ಬಡ್ಡಿಯನ್ನು ಲೆಕ್ಕಾಚಾರ ಮಾಡುವುದು ತುಂಬಾ ಸುಲಭ ಮತ್ತು ತಿಂಗಳಿಗೆ ಕೇವಲ 5000 ರೂಪಾಯಿಗಳನ್ನು ಉಳಿಸುವ ಮೂಲಕ ಈ ಯೋಜನೆಯಡಿಯಲ್ಲಿ ನೀವು ರೂ 8 ಲಕ್ಷದವರಿಗೂ ಹಣವನ್ನು ನಾವು ಕೂಡಿ ಇಡಬಹುದು.ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಪ್ರತಿ ತಿಂಗಳು 5,000, ನಂತರ ಅದರ ಮುಕ್ತಾಯದ ಅವಧಿಯಲ್ಲಿ ಅಂದರೆ ಐದು ವರ್ಷಗಳಲ್ಲಿ ನೀವು ಒಟ್ಟು 3 ಲಕ್ಷವನ್ನು ಠೇವಣಿ ಮಾಡುತ್ತೀದ್ದರೆ 56,830 ರೂ ಅನ್ನು ಬಡ್ಡಿಗೆ ಸೇರಿಸಲಾಗುತ್ತದೆ. ಅದರ ಮೇಲೆ ಶೇ. 6.7 ರಷ್ಟು ಇದೆ. ಅಂದರೆ ಒಟ್ಟು ಐದು ವರ್ಷಗಳಲ್ಲಿ ನಿಮ್ಮ ಫಂಡ್ 3,56,830 ರೂ ಗಳಷ್ಟು ಸಿಗುತ್ತೆ.

ನೀವು ನಿಮ್ಮ RD ಖಾತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.ಅಂದರೆ ನೀವು ಅದನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಿದರೆ, 10 ವರ್ಷಗಳಲ್ಲಿ ನೀವು ಠೇವಣಿ ಮಾಡಿದ ಮೊತ್ತವು 6,00,000 ರೂಪಾಯಿ ಸಿಗುತ್ತೆ.ಈ ಠೇವಣಿಯ ಮೇಲಿನ ಬಡ್ಡಿ ಮೊತ್ತವು ಶೇ.6.7 ರ ದರದಲ್ಲಿ 2,54,272 ರೂ ಆಗಿರುತ್ತದೆ. 10 ವರ್ಷಗಳ ಅವಧಿಯಲ್ಲಿ ನಿಮ್ಮ ಒಟ್ಟು ಹಣ 8,54,272 ರೂ ಇರುತ್ತದೆ.

ನೀವು ಶೇ 50ರಷ್ಟು ಸಾಲವನ್ನು ತೆಗೆದುಕೊಳ್ಳಬಹುದು.

ನೀವು ಹತ್ತಿರದ ಯಾವುದೇ ಅಂಚೆ ಕಚೇರಿಗೆ ಹೋಗಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು.ಈ ಖಾತೆಯನ್ನು ನೀವು 100 ರೂಗಳಿಂದ ಹೂಡಿಕೆಯನ್ನು ಶುರುಮಾಡಬಹುದು.ಪೋಸ್ಟ್ ಆಫೀಸ್ ಆರ್‌ಡಿ ಮುಕ್ತಾಯದ ಅವಧಿ ಐದು ವರ್ಷಗಳು. ಆದರೆ ಈ ಅವಧಿ ಪೂರ್ಣಗೊಳ್ಳುವ ಮೊದಲು ನೀವು ಖಾತೆಯನ್ನು ಮುಚ್ಚಲು ಬಯಸಿದರೆ ಈ ಸೌಲಭ್ಯವು ಈ ಉಳಿತಾಯ ಯೋಜನೆಯಲ್ಲಿ ಅವಕಾಶವನ್ನು ನೀಡಲಾಗಿದೆ.

ಅಂಚೆ ಕಚೇರಿಯಲ್ಲಿ ಹೂಡಿಕೆದಾರರು 3 ವರ್ಷಗಳ ನಂತರ ಪ್ರೀ-ಮೆಚ್ಯೂರ್ ಮುಚ್ಚುವಿಕೆಯನ್ನು ಪಡೆಯಬಹುದು.ಇದರಲ್ಲಿ ಸಾಲ ಸೌಲಭ್ಯವನ್ನೂ ನೀಡಲಾಗಿದೆ. ಖಾತೆಯು ಒಂದು ವರ್ಷದವರೆಗೆ ಸಕ್ರಿಯವಾದ ನಂತರ, ಠೇವಣಿ ಮಾಡಿದ ಮೊತ್ತದ 50 ಪ್ರತಿಶತದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.ಸಾಲದ ಮೇಲಿನ ಬಡ್ಡಿ ದರವು ಬಡ್ಡಿ ದರಕ್ಕಿಂತ 2 ಶೇಕಡಾ ಹೆಚ್ಚಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+