ಈ ಹಣಕಾಸು ವರ್ಷವು ಅಂತ್ಯವಾಗಲು ಇನ್ನು ಎರಡೇ ವಾರಗಳು ಉಳಿದಿದೆ. ಹೊಸ ತಿಂಗಳು ಮತ್ತು ಹೊಸ ಹಣಕಾಸು ವರ್ಷವನ್ನು ನಾವು ಸ್ವಾಗತಿಸುವುದಕ್ಕೂ ಮುನ್ನ ಹಲವಾರು ಕಾರ್ಯಗಳನ್ನು ನಾವು ಮಾಡಬೇಕಾಗಿದೆ. ಪ್ರಸ್ತುತ ನಾವು ಮಾರ್ಚ್ ತಿಂಗಳ 15 ದಿನಗಳನ್ನು ಕಳೆದಿದ್ದಾರೆ. ಹೊಸ ತಿಂಗಳ ಆರಂಭವಾಗುವುದಕ್ಕೂ ಮುನ್ನ ನೀವು ಹಲವಾರು ಕಾರ್ಯಗಳನ್ನು ಮುಗಿಸಬೇಕಾಗುತ್ತದೆ. ಹೊಸ ತಿಂಗಳಿನಲ್ಲಾಗುವ ಬದಲಾವಣೆ ಕೂಡಾ ತಿಳಿದಿರಬೇಕಾಗುತ್ತದೆ.
ಮಾರ್ಚ್ 31ಕ್ಕೂ ಮುನ್ನ ನೀವು ಹಲವಾರು ಹಣಕಾಸು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಕಾರ್ಯಗಳನ್ನು ನೀವು ಮಾಡಬೇಕಾದರೆ, ಅದರ ಬಗ್ಗೆ ತಿಳಿದಿರುವುದು ಮುಖ್ಯವಾಗುತ್ತದೆ. ಹಾಗೆಯೇ ಈ ಹಣಕಾಸು ಕಾರ್ಯಗಳನ್ನು ನೀವು ಮಾಡದಿದ್ದರೆ, ನಿಮಗೆ ಹಲವಾರು ತೊಂದರೆಗಳು ಉಂಟಾಗಲಿದೆ. ಅದರಲ್ಲೂ ಮುಖ್ಯವಾಗಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಆಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ..
ಆಧಾರ್-ಪ್ಯಾನ್ ಲಿಂಕ್ ಮಾಡಿ
ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಮಾರ್ಚ್ 31, 2023ಕ್ಕೆ ಈ ಹಿಂದೆ ವಿಸ್ತರಿಸಿದೆ. ಈ ಗಡುವು ಅಂತ್ಯವಾಗುವುದಕ್ಕೂ ಮುನ್ನ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಮುಖ್ಯವಾಗುತ್ತದೆ. ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ತೆರಿಗೆ ಉಳಿತಾಯ ಮಾಡಲು ಹೂಡಿಕೆ
ಪ್ರಸ್ತುತ ಹಣಕಾಸು ವರ್ಷ 2021-2022 ರಿಂದ ನಿಮ್ಮ ಎಲ್ಲಾ ತೆರಿಗೆ-ಉಳಿತಾಯ ಹೂಡಿಕೆಗಳನ್ನು ಒಂದೇ ಕಡೆಯಲ್ಲಿ ಸಂಗ್ರಹ ಮಾಡಿ ಇಡಿ. ನೀವು ಉಳಿತಾಯ ಯೋಜನೆಗಳಿಗೆ ಇನ್ನು ಕೂಡಾ ಹೂಡಿಕೆ ಮಾಡದಿದ್ದರೆ, ಹೂಡಿಕೆ ಮಾಡಲು ನಿಮಗೆ ಈ ತಿಂಗಳು ಮಾತ್ರ ಬಾಕಿ ಉಳಿದಿದೆ. ಯಾಕೆಂದರೆ ಈ ಹೂಡಿಕೆಯು ನಿಮಗೆ ತೆರಿಗೆ ಉಳಿತಾಯ ಮಾಡಲು ಸಹಾಯಕವಾಗಿದೆ. ವೇತನ ಪಡೆಯುವ ವರ್ಗವು ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. 1.5 ಲಕ್ಷ ರೂಪಾಯಿ ಕಡಿತವನ್ನು ಪಡೆಯಬಹುದು.
ಉದ್ಯೋಗ ಬದಲಾಯಿಸಿರುವವರ ಗಮನಕ್ಕೆ
ವರ್ಷದ ಮಧ್ಯದಲ್ಲಿ ಯಾವುದೇ ಹೊಸ ಬೇರೆ ಸಂಸ್ಥೆಗೆ ಸೇರ್ಪಡೆಯಾಗಿದ್ದರೆ, ವೇತನ ಪಡೆಯುವ ವ್ಯಕ್ತಿಯು ಫಾರ್ಮ್ 12B ಆದಾಯ ತೆರಿಗೆ ಫಾರ್ಮ್ ಅನ್ನು ನೀಡಬೇಕಾಗುತ್ತದೆ. 2021-2022 ರ ಆರ್ಥಿಕ ವರ್ಷದಲ್ಲಿ ನೀವು ಉದ್ಯೋಗವನ್ನು ಬದಲಾಯಿಸಿದ್ದರೆ, ನಿಮ್ಮ ಹೊಸ ಆದಾಯವನ್ನು ವರದಿ ಮಾಡಲು ಫಾರ್ಮ್ 12B ಅನ್ನು ಬಳಸಬೇಕಾಗುತ್ತದೆ. ಮಾರ್ಚ್ 31 ರ ಮೊದಲು ಫಾರ್ಮ್ 12B ನಲ್ಲಿ ನೀಡಲಾದ ಮಾಹಿತಿಯ ಆಧಾರದ ಮೇಲೆ, ನಿಮ್ಮ ಹೊಸ ಸಂಸ್ಥೆಯು ನಿಖರವಾದ ಟಿಡಿಎಸ್ ಕಡಿತಗೊಳಿಸಲು ಸಾಧ್ಯವಾಗುತ್ತದೆ.
ಐಟಿಆರ್ ಫೈಲ್ ಮಾಡಿರಿ
ಹಣಕಾಸು ವರ್ಷ 2021-22 ಐಟಿಆರ್ ಅನ್ನು ಫೈಲ್ ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ನೀವು ಕೆಲವು ಕಾರಣಗಳಿಂದಾಗಿ ಐಟಿಆರ್ ಅನ್ನು ಫೈಲ್ ಮಾಡಲು ಸಾಧ್ಯವಾಗದಿದ್ದರೆ, ಈ ತಿಂಗಳ ಕೊನೆಯವರೆಗೆ ಮಾತ್ರ ಅವಕಾಶವಿದೆ. ಆದರೆ ಈ ತಿಂಗಳು ಕೊನೆಯಾಗಲು ಕೆಲವೇ ದಿನಗಳು ಇದೆ. ಹಣಕಾಸು ವರ್ಷ 2020-2021ರ ರಿಟರ್ನ್ ಅನ್ನು ಮಾರ್ಚ್ 31, 2024ರ ಒಳಗೆ ಫೈಲ್ ಮಾಡಬೇಕಾಗಿದೆ.
ವಿಶೇಷ ಎಫ್‌ಡಿ ಯೋಜನೆ ಆರಂಭಿಸಿದ ಬ್ಯಾಂಕುಗಳು
ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಪಂಜಾಬ್ & ಸಿಂದ್ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆಯನ್ನು ಆರಂಭಿಸಿದೆ. ಈ ವಿಶೇಷ ಯೋಜನೆ ಮಾರ್ಚ್ 31, 2023ಕ್ಕೆ ಕೊನೆಯಾಗಲಿದೆ. ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆ, ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರ ಎಫ್‌ಡಿ, ಇಂಡಿಯನ್ ಬ್ಯಾಂಕ್ ಎಫ್‌ಡಿ, ಪಂಜಾಬ್ & ಸಿಂಧ್ ಬ್ಯಾಂಕ್ ಎಫ್‌ಡಿ, ಮೊದಲಾದವುಗಳನ್ನು ಬ್ಯಾಂಕುಗಳು ಜಾರಿ ಮಾಡಿದೆ.
ಬ್ಯಾಂಕ್ ಖಾತೆ ಕೆವೈಸಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್ ಖಾತೆಯ ಕೆವೈಸಿ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2023ರವರೆಗೆ ವಿಸ್ತರಣೆ ಮಾಡಿದೆ. ನೀವು ಈವರೆಗೂ ಬ್ಯಾಂಕ್‌ನ ಕೆವೈಸಿ ಮಾಡದಿದ್ದರೆ, ಕೆವೈಸಿ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಆರ್‌ಬಿಐನ ನಿಯಮದ ಪ್ರಕಾರ ಕೆವೈಸಿ ಮಾಡಸಿದ್ದರೆ ಖಾತೆಯನ್ನು ಮುಚ್ಚುವ ಅನುಮತಿಯನ್ನು ಬ್ಯಾಂಕ್ ಹೊಂದಿದೆ. ಕೆವೈಸಿ ಮಾಡಬೇಕಾದರೆ ನೀವು ಪಾಸ್‌ಪೋರ್ಟ್, ವೋಟರ್ ಐಡೆಂಟಿಟಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಲೆಟರ್/ಕಾರ್ಡ್, ಎನ್‌ಆರ್‌ಇಜಿಎ ಕಾರ್ಡ್, ಪ್ಯಾನ್ ಕಾರ್ಡ್ ಮುಖ್ಯವಾಗಿದೆ.


Click it and Unblock the Notifications