ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (NEFT) ಎಂಬುದು ಎಲೆಕ್ಟ್ರಾನಿಕ್ ರೂಪದಲ್ಲಿ ಹಣ ವರ್ಗಾವಣೆ ಮಾಡುವ ವಿಧಾನ. ಸದ್ಯಕ್ಕೆ ಹಣ ಸ್ವೀಕಾರ ಮತ್ತು ಕಳುಹಿಸುವುದಕ್ಕೆ ಅತ್ಯಂತ ಜನಪ್ರಿಯ ಬಗೆ ಇದು. ಈಗಂತೂ ಚೆಕ್ ಪಾವತಿ ಬದಲಿಗೆ NEFT ಮೂಲಕ ಹಣ ಪಾವತಿಸುವುದೇ ಹೆಚ್ಚಾಗಿದೆ.
ಈ ಹಿಂದೆ ಸೋಮವಾರದಿಂದ ಶನಿವಾರದ ತನಕ ಮಾತ್ರ NEFT ಮೂಲಕ ವರ್ಗಾವಣೆ ಸಾಧ್ಯವಿತ್ತು. ಆದರೆ ಈಗ ಬ್ಯಾಂಕ್ ರಜಾ ದಿನಗಳು, ಭಾನುವಾರವೂ ಸೇರಿದಂತೆ ವಾರದ ಎಲ್ಲ ದಿನವೂ ವರ್ಗಾವಣೆ ಮಾಡಬಹುದು. ಈ ಬಗೆಯ ಹಣ ವರ್ಗಾವಣೆಯು ವಿಶ್ವಾಸಾರ್ಹ ಕೂಡ ಹೌದು.
NEFT ಮೂಲಕ ವರ್ಗಾವಣೆಗೆ 6 ಮುಖ್ಯ ಸಂಗತಿಗಳು ಇಲ್ಲಿವೆ:
* ಫಲಾನುಭವಿ ಹೆಸರು
* ಆತ ಅಥವಾ ಆಕೆಯ ಬ್ಯಾಂಕ್ ಖಾತೆ ಶಾಖೆ
* ಆತ ಅಥವಾ ಆಕೆಯ ಬ್ಯಾಕ್ ಖಾತೆಯ ಹೆಸರು
* ಆತ ಅಥವಾ ಆಕೆಯ ಬ್ಯಾಕ್ ಖಾತೆಯ ಸಂಖ್ಯೆ
* ಆತ ಅಥವಾ ಆಕೆಯ ಬ್ಯಾಕ್ ಐಎಫ್ ಎಸ್ ಸಿ ಕೋಡ್
* ವರ್ಗಾವಣೆ ಮಾಡಬೇಕಿರುವ ಮೊತ್ತ

NEFT ವರ್ಗಾವಣೆ ಪ್ರಕ್ರಿಯೆ ಹೇಗೆ?
ಹಣ ವರ್ಗಾವಣೆಗೂ ಮುಂಚೆ ಫಲಾನುಭವಿ ಹೆಸರನ್ನು ಸೇರ್ಪಡೆ ಮಾಡಲು ಸ್ವತಃ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ಅಥವಾ ಖಾತೆದಾರರೇ ಸೇರಿಸಬಹುದು. ನೆಟ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆಗುವ ಮೂಲಕ ಈ ಪ್ರಕ್ರಿಯೆ ಶುರುವಾಗುತ್ತದೆ. ಆ ನಂತರ "ಫಂಡ್ಸ್ ಟ್ರಾನ್ಸ್ ಫರ್" ಎಂಬುವಲ್ಲಿಗೆ ತೆರಳಿ, ಅದರ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಫಲಾನುಭವಿ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಆ ಎಲ್ಲವೂ ಸರಿಯಾಗಿದೆಯಾ ಎಂಬುದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಈ ಎಲ್ಲವೂ ಆದ ಮೇಲೆ ಫಲಾನುಭವಿಯನ್ನು ಸೇರ್ಪಡೆ ಮಾಡಲು ಬ್ಯಾಂಕ್ ನಿಂದ ಮೂವತ್ತು ನಿಮಿಷ ಸಮಯ ತೆಗೆದುಕೊಳ್ಳಲಾಗುತ್ತದೆ. ಆ ನಂತರ ಹಣ ಕಳುಹಿಸಲು ಆರಂಭ ಮಾಡಬಹುದು.
ಫಲಾನುಭವಿಗಳ ಹ್ಸರು ಸೇರಿಸಲು ಒಂದೊಂದು ಬ್ಯಾಂಕ್ ನಿಂದ ಒಂದೊಂದು ಸಮಯ ತೆಗೆದುಕೊಳ್ಳಲಾಗುತ್ತದೆ. ಕೆಲವು ಬ್ಯಾಂಕ್ ಇಪ್ಪತ್ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ.
ಹಣ ವರ್ಗಾವಣೆಗೂ ಮುನ್ನ ಖಾತೆ ಸಂಖ್ಯೆ, ಹೆಸರು, ಐಎಫ್ ಎಸ್ ಸಿ ಕೋಡ್ ಇತ್ಯಾದಿಗಳನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿ. ಮಾಹಿತಿ ತಪ್ಪಾಗಿದ್ದಲ್ಲಿ ಹಣ ವಾಪಸ್ ಆಗುತ್ತದೆ. ಆದ್ದರಿಂದ ಮೊದಲ ಸಲಕ್ಕೆ ತಪ್ಪಿಲ್ಲದಂತೆ ಮಾಹಿತಿ ಒದಗಿಸುವುದು ಅತ್ಯುತ್ತಮ.


Click it and Unblock the Notifications