7th Pay Commission: ನಿರೀಕ್ಷೆಗಿಂತ ಅಧಿಕ ಡಿಎ ಏರಿಕೆಯಾಗುತ್ತಾ, ಹಾಗಾದ್ರೆ ಎಷ್ಟು?

ಪ್ರಸಕ್ತ ವರ್ಷ 2023 ರ ಎರಡನೇ ಸುತ್ತಿನ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಈ ಬಾರಿ ಡಿಎ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಅಧಿಕ ಏರಿಕೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.

ವರದಿಗಳ ಪ್ರಕಾರ, ನವರಾತ್ರಿ ಮತ್ತು ದೀಪಾವಳಿ ನಡುವೆ ಡಿಎ ಹೆಚ್ಚಳದ ಬಗ್ಗೆ ಘೋಷಣೆಯನ್ನು ಮಾಡುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಡಿಎಯನ್ನು ಶೇಕಡ 3 ರಷ್ಟು ಹೆಚ್ಚಿಸಬಹುದು ಎಂದು ಈ ಹಿಂದೆ ವರದಿ ಆಗಿದೆ. ಆದರೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಅಧಿಕ ಡಿಎ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

 ನಿರೀಕ್ಷೆಗಿಂತ ಅಧಿಕ ಡಿಎ ಏರಿಕೆಯಾಗುತ್ತಾ, ಹಾಗಾದ್ರೆ ಎಷ್ಟು?

ಇಂಡಸ್ಟ್ರಿಯಲ್ ವರ್ಕರ್ಸ್ (ಸಿಪಿಐ-ಐಡಬ್ಲ್ಯು) ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಡಿಎ ಲೆಕ್ಕಾಚಾರದ ಸೂತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ನೌಕರರ ಡಿಎ ಶೇಕಡ 3 ರಷ್ಟು ಹೆಚ್ಚಳವಾಗಬಹುದು ಎಂದು ಈ ಹಿಂದೆ ವರದಿಯಾಗಿದೆ. ಹೀಗೆ ಹೆಚ್ಚಳವಾದರೆ ಶೇಕಡ 45 ರಷ್ಟು ಏರಿಕೆಯಾಗುತ್ತದೆ.

ಆದರೆ ನಿರೀಕ್ಷೆಗಿಂತ ಅಧಿಕವಾಗಿ ತುಟ್ಟಿಭತ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯು ಹೇಳಿದೆ. ಇದರ ಪ್ರಕಾರವಾಗಿ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎಯು ಶೇಕಡ 46 ರಷ್ಟು ಏರಿಕೆಯಾಗುತ್ತದೆ.

ಇನ್ನು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಪ್ರಕಾರ, ತುಟ್ಟಿಭತ್ಯೆಯು ಶೇಕಡ 3 ರಷ್ಟು ಏರಿಕೆಯಾಗುತ್ತದೆ. "ನಾವು ಶೇಕಡ 4 ರಷ್ಟು ಡಿಎ ಏರಿಸಲು ಒತ್ತಾಯ ಮಾಡುತ್ತೇವೆ. ಆದರೆ ಶೇಕಡ 3ರಷ್ಟು ಡಿಎ ಹೆಚ್ಚಾಗಬಹುದು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ 2023ರ ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರವು ಡಿಎ/ ಡಿಆರ್ ದರವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ," ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ 2023 ರ ಎರಡನೇ ಡಿಎ ಹೆಚ್ಚಳ, ಯಾವಾಗ ಘೋಷಿಸಿದರೂ, 7 ನೇ ವೇತನ ಆಯೋಗದ ನಿಯಮಗಳ ಅಡಿಯಲ್ಲಿ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಪ್ರತಿ ವರ್ಷವೂ ಎರಡು ಬಾರಿ ಡಿಎ ಹೆಚ್ಚಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+