ನಮ್ಮ ಎಲ್ಲ ವಹಿವಾಟುಗಳಿಗೆ ಪ್ರಸ್ತುತ ಆಧಾರ್ ಕಾರ್ಡ್ ಅತೀ ಪ್ರಮುಖವಾಗಿದೆ. ಎಲ್ಲ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದೆ. ಈ ನಡುವೆ ಹತ್ತು ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಆದರೆ ನಿಮಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಅವಕಾಶವಿದೆ.
ಹೌದು, ಸಾಮಾನ್ಯವಾಗಿ ನೀವು ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕಾದರೆ ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಮಗೆ ಅವಕಾಶವಾಗಿದೆ. ಈ ಅವಕಾಶದ ಅವಧಿಯು ಕೊನೆಯಾಗುತ್ತಿದೆ. ನೀವು ಆಧಾರ್ ಕಾರ್ಡ್ ಅನ್ನು ಯಾವುದೇ ಪಾವತಿ ಮಾಡದೆ ಉಚಿತವಾಗಿ ಅಪ್‌ಡೇಟ್ ಮಾಡಲು ಜೂನ್ 14ರವರೆಗೆ ಮಾತ್ರ ಅವಕಾಶವಿದೆ. ಅಂದರೆ ನಾಳೆವರೆಗೆ ಮಾತ್ರ ಅವಕಾಶವಿರುತ್ತದೆ.

ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಕಡ್ಡಾಯ
ಆಧಾರ್ ಕಾರ್ಡ್ ಅನ್ನು ಮಾಡಿ ಹತ್ತು ವರ್ಷಗಳಾಗಿದ್ದರೆ, ಕೂಡಲೇ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕು ಎಂದು ಯುಐಡಿಎಐ ಇತ್ತೀಚೆಗೆ ತಿಳಿಸಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ ಹಾಗೂ ಇತರೆ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡುವುದು ಮುಖ್ಯವಾಗಿದೆ. ಇದನ್ನು ಶೀಘ್ರವೇ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಇಲಾಖೆ ತಿಳಿಸಿದೆ. ನೀವು ಉಚಿತವಾಗಿ ಅಪ್‌ಡೇಟ್ ಮಾಡಲು ಒಂದು ದಿನಗಳ ಅವಕಾಶ ಮಾತ್ರ ಇದೆ.
ಆಧಾರ್ ಕಾರ್ಡ್ ಅಪ್‌ಡೇಟ್ ಅನ್ನು ನೀವು ಆಲ್‌ಲೈನ್ ಮೂಲಕ ಅತೀ ತ್ವರಿತವಾಗಿ ಮತ್ತು ಉಚಿತವಾಗಿ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಮಾನ್ಯತೆಯನ್ನು ಹೊಂದಬೇಕಾದರೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅತೀ ಮುಖ್ಯವಾಗಿದೆ ಎಂದು ಯುಐಡಿಎಐ ಹೇಳಿದೆ. ಕಳೆದ ಹತ್ತು ವರ್ಷದಲ್ಲಿ ಒಮ್ಮೆಯು ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಲ್ಲದಿದ್ದರೆ ಅಪ್‌ಡೇಟ್ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಯುಐಡಿಎಐ ಮಾರ್ಚ್‌ನಲ್ಲಿ ಈ ಉಚಿತ ವ್ಯವಸ್ಥೆಯ ನಿರ್ಧಾರವನ್ನು ತೆಗೆದುಕೊಂಡಿದೆ. ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಲಾಭವನ್ನು ಜನರು ಪಡೆಯಬಹುದಾಗಿದೆ. ಮಾರ್ಚ್ 15, 2023ರಿಂದ ಜೂನ್ 14, 2023ರವರೆಗೆ ಈ ಯುಐಡಿಎಐನ ಉಚಿತ ಸೇವೆಯು ಲಭ್ಯವಿದೆ. ಉಚಿತ ಸೇವೆಯನ್ನು ಪಡೆಯುವುದು ಹೇಗೆ ಎಂಬ ವಿವರವನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: 'My Aadhaar' ಮೇಲೆ ಕ್ಲಿಕ್ ಮಾಡಿ
ಹಂತ 3: 'Update Your Aadhaar' ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: 'Update demographics data online' ಮೇಲೆ ಕ್ಲಿಕ್ ಮಾಡಿ
ಹಂತ 5: 'Proceed to update Aadhaar' ಅನ್ನು ಬಳಿಕ ಆಯ್ಕೆ ಮಾಡಿ
ಹಂತ 6: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 7: ಕ್ಯಾಪ್ಚಾ ವೆರಿಫಿಕೇಷನ್ ಅನ್ನು ಮಾಡಿ
ಹಂತ 8: Send OTP ಮೇಲೆ ಕ್ಲಿಕ್ ಮಾಡಿ
ಹಂತ 9: 'Update Demographics Data' ಮೇಲೆ ಕ್ಲಿಕ್ ಮಾಡಿ
ಹಂತ 10: ನವೀಕರಿಸಲು ವಿವರಗಳ ಆಯ್ಕೆಯನ್ನು ಆಯ್ಕೆಮಾಡಿ
ಹಂತ 11: ಹೊಸ ವಿವರಗಳನ್ನು ನಮೂದಿಸಿ
ಹಂತ 12: ದಾಖಲೆಗಳ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
ಹಂತ 13: ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.
ಈ ಸೇವೆಯು ಮೈಆಧಾರ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಉಚಿತವಾಗಿ ಲಭ್ಯವಾಗುತ್ತದೆ ಎಂಬುವುದು ತಿಳಿದಿರಿ. ಈ ಹಿಂದೆ ಇರುವಂತೆಯೇ ನೀವು ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದಾದರೆ 50 ರೂಪಾಯಿಯನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications