ಭಾರತದಲ್ಲಿ ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ನಾವು ಎಲ್ಲ ಹಣಕಾಸು ಕಾರ್ಯಕ್ಕೂ, ಇತರೆ ಕಾರ್ಯಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಬೇಕಾಗುತ್ತದೆ. ಈ ದಾಖಲೆಯನ್ನು, ಆದಾಯ ಪುರಾವೆ, ವಿಳಾಸ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ. ಆದರೆ ನೀವು 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಮುಖ್ಯವಾಗಿದೆ. ಇದಕ್ಕಾಗಿ ಯುಐಡಿಎಐ ನಿಮಗೆ ಮತ್ತೆ ಉಚಿತ ಸೇವೆಯನ್ನು ನೀಡಲು ಆರಂಭಿಸಿದೆ.
ಆಧಾರ್ ಕಾರ್ಡ್ ಬಳಸಿ ಮಾಡಲಾಗುವ ಯಾವುದೇ ಕಾರ್ಯದಲ್ಲೂ ಅಡೆತಡೆ ಉಂಟಾಗಬಾರದು ಎಂದಾದರೆ ನೀವು ಆಧಾರ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜನರು ನೀಡುವ ಡೇಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಸಂಖ್ಯೆಯನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ದಾಖಲಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ದಾಖಲೆಗಳನ್ನು ಅಪ್‌ಡೇಟ್ ಮಾಡಲು ತಿಳಿಸಿದೆ.

ಹೆಚ್ಚುವರಿಯಾಗಿ, ಯುಐಡಿಎಐ ಇದಕ್ಕಾಗಿ ಇಂಟರ್‌ನೆಟ್ ಬಳಕೆದಾರರು ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಯುಐಡಿಎಐ ಈ ಉಚಿತ ಸೇವೆಯನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಈ ಉಚಿತ ಸೇವೆ ಪಡೆಯಲು ಕೊನೆಯ ದಿನಾಂಕ ಜೂನ್ 14 ಆಗಿತ್ತು. ಆದರೆ ಈಗ ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ.
ಆದರೆ ನೆನಪಿರಲಿ ನೀವು ಮೈಆಧಾರ್ ಮೂಲಕ ಮಾತ್ರ ಈ ಉಚಿತ ಸೇವೆಯನ್ನು ಪಡೆಯಲು ಸಾಧ್ಯವಿದೆ. ನೀವು ಬೇರೆ ಆಧಾರ್ ಕೇಂದ್ರಗಳಲ್ಲಿ ಹೋಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸಿಕೊಳ್ಳುವುದಾದರೆ ಅದಕ್ಕಾಗಿ ನೀವು 50 ರೂಪಾಯಿಯನ್ನು ಶುಲ್ಕವಾಗಿ ಪಾವತಿ ಮಾಡಬೇಕಾಗುತ್ತದೆ. ನೀವಾಗಿಯೇ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ....
ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://myaadhaar.uidai.gov.in/)
ಹಂತ 2: 'My Aadhaar' ಮೇಲೆ ಕ್ಲಿಕ್ ಮಾಡಿ
ಹಂತ 3: 'Update Your Aadhaar' ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: 'Update demographics data online' ಮೇಲೆ ಕ್ಲಿಕ್ ಮಾಡಿ
ಹಂತ 5: 'Proceed to update Aadhaar' ಅನ್ನು ಬಳಿಕ ಆಯ್ಕೆ ಮಾಡಿ
ಹಂತ 6: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 7: ಕ್ಯಾಪ್ಚಾ ವೆರಿಫಿಕೇಷನ್ ಅನ್ನು ಮಾಡಿ
ಹಂತ 8: Send OTP ಮೇಲೆ ಕ್ಲಿಕ್ ಮಾಡಿ, ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ ಅದನ್ನು ನಮೂದಿಸಿ
ಹಂತ 9: 'Update Demographics Data' ಮೇಲೆ ಕ್ಲಿಕ್ ಮಾಡಿ
ಹಂತ 10: ನವೀಕರಿಸಲು ವಿವರಗಳ ಆಯ್ಕೆಯನ್ನು ಆಯ್ಕೆಮಾಡಿ
ಹಂತ 11: ಹೊಸ ವಿವರಗಳನ್ನು ನಮೂದಿಸಿ
ಹಂತ 12: ದಾಖಲೆಗಳ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ Proceed ಕ್ಲಿಕ್ ಮಾಡಿ
ಹಂತ 13: ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.
ವೆಬ್‌ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: uidai.gov.in ಗೆ ಭೇಟಿ ನೀಡಿ, ನೀವು ನವೀಕರಿಸಲು ಬಯಸುವ ಫೋನ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಟೈಪ್ ಮಾಡಿ.
ಹಂತ
ಹಂತ 2: "Send OTP" ಕ್ಲಿಕ್ ಮಾಡಿ, ಬಂದ ಒಟಿಪಿಯನ್ನು ನಮೂದಿಸಿ, Submit OTP and Proceed ಕ್ಲಿಕ್ ಮಾಡಿ
ಹಂತ 3: ಕೆಳಗಿನ ಪರದೆಯಲ್ಲಿ "Online Aadhaar Services" ಎಂಬ ಡ್ರಾಪ್-ಡೌನ್ ಆಯ್ಕೆ ಕಾಣುತ್ತದೆ, ನೀವು ಯಾವುದನ್ನು ಅಪ್‌ಡೇಟ್ ಮಾಡಲು ಬಯಸುತ್ತೀರಿ ಅದನ್ನು ಕ್ಲಿಕ್ ಮಾಡಿ. ಮಾಹಿತಿಯನ್ನು ನಮೂದಿಸಿ
ಹಂತ 4: ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಹೊಸ ಪುಟ ತೆರೆಯುತ್ತದೆ. ಈಗ ಕ್ಯಾಪ್ಚಾವನ್ನು ನಮೂದಿಸಬೇಕು. ಒಟಿಪಿ ಬರಲಿದೆ, ಅದನ್ನು ನಮೂದಿಸಿ "Save and Proceed" ಕ್ಲಿಕ್ ಮಾಡಿ
ಹಂತ 5: ಆನ್‌ಲೈನ್ ಅಪಾಯಿಂಟ್‌ಮೆಂಟ್ ಮಾಡಿಕೊಂಡು ಆಧಾರ್ ಸೆಂಟರ್‌ಗೆ ಹೋಗಿ
ಹಂತ 6: 90 ದಿನಗಳಲ್ಲಿ ನಿಮ್ಮ ಡೇಟಾ ಅಪ್‌ಡೇಟ್ ಆಗಲಿದೆ.


Click it and Unblock the Notifications