ಸಾಮಾನ್ಯವಾಗಿ ನೀವು ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕಾದರೆ ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಮಗೆ ಅವಕಾಶ ನೀಡಿದೆ. ಇದಕ್ಕಾಗಿ ಯುಐಡಿಎಐ ಜೂನ್ 14ರವರೆಗೆ ಉಚಿತ ಅಪ್‌ಡೇಟ್‌ಗೆ ಅವಕಾಶ ನೀಡಿತ್ತು. ಆದರೆ ಗಡುವನ್ನು ಈಗ ಮತ್ತೆ ವಿಸ್ತರಣೆ ಮಾಡಲಾಗಿದೆ.
ನಮ್ಮ ಎಲ್ಲ ವಹಿವಾಟುಗಳಿಗೆ ಪ್ರಸ್ತುತ ಆಧಾರ್ ಕಾರ್ಡ್ ಅತೀ ಪ್ರಮುಖವಾಗಿದೆ. ಎಲ್ಲ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದೆ. ಈ ನಡುವೆ ಹತ್ತು ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಆದರೆ ನಿಮಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಅವಕಾಶವಿದೆ.

ಈ ಅವಕಾಶದ ಅವಧಿಯನ್ನು ಯುಐಡಿಎಐ ಸೆಪ್ಟೆಂಬರ್ 14, 2023ರವರೆಗೆ ವಿಸ್ತರಣೆ ಮಾಡಿದೆ. ಅಂದರೆ ನೀವು ಸೆಪ್ಟೆಂಬರ್ 14ರವರೆಗೆ ಉಚಿತವಾಗಿ ಆನ್‌ಲೈನ್ ಮೂಲಕ ಆಧಾರ್ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ. ಯುಐಡಿಎಐ ತನ್ನ ಹೇಳಿಕೆಯಲ್ಲಿ, "ಜನಸಂಖ್ಯಾ ಮಾಹಿತಿಯ ನಿರಂತರ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ," ಎಂದು ಹೇಳಿದೆ.
ನಿಮ್ಮ ಜನಸಂಖ್ಯಾ ವಿವರಗಳನ್ನು ನೀವು ಯಾವಾಗ ನವೀಕರಿಸಬೇಕು?
ಯುಐಡಿಎಐ ಪ್ರಕಾರ, "ಮದುವೆಯಂತಹ ಜೀವನದ ಘಟನೆಗಳಲ್ಲಿನ ಬದಲಾವಣೆಗಳ ಸಂದರ್ಭದಲ್ಲಿ ನಿಮ್ಮ ಜನಸಂಖ್ಯಾ ವಿವರಗಳಾದ ಹೆಸರು ಮತ್ತು ವಿಳಾಸವನ್ನು ಬದಲಾಯಿಸಬೇಕಾಗಬಹುದು. ವಿವಾಹವಾದ ಬಳಿಕ ಹೆಣ್ಣು ಪತಿಯ ಮನೆಯಲ್ಲಿರುವುದಾದರೆ ವಿಳಾಸ ಬದಲಾವಣೆಯಾಗುತ್ತದೆ. ಹೊಸ ಸ್ಥಳಗಳಿಗೆ ವಲಸೆ ಹೋಗುವುದರಿಂದ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳು ಸಹ ಬದಲಾಗಬಹುದು," ಎಂದು ಉಲ್ಲೇಖಿಸಿದೆ.
"ವಿವಾಹ ಕಾರಣದಿಂದಾಗಿ, ಸಂಬಂಧಿಕರ ಮರಣ ಮೊದಲಾದ ಕಾರಣದಿಂದಾಗಿ ವಿಳಾಸವನ್ನು ಬದಲಾವಣೆ ಮಾಡಬೇಕಾಗಬಹುದು. ಹೆಚ್ಚುವರಿಯಾಗಿ, ನಿವಾಸಿಗಳು ತಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಬದಲಾಯಿಸಲು ಇತರ ವೈಯಕ್ತಿಕ ಕಾರಣಗಳನ್ನು ಹೊಂದಿರಬಹುದು," ಎಂದು ಕೂಡಾ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: 'My Aadhaar' ಮೇಲೆ ಕ್ಲಿಕ್ ಮಾಡಿ
ಹಂತ 3: 'Update Your Aadhaar' ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: 'Update demographics data online' ಮೇಲೆ ಕ್ಲಿಕ್ ಮಾಡಿ
ಹಂತ 5: 'Proceed to update Aadhaar' ಅನ್ನು ಬಳಿಕ ಆಯ್ಕೆ ಮಾಡಿ
ಹಂತ 6: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಹಂತ 7: ಕ್ಯಾಪ್ಚಾ ವೆರಿಫಿಕೇಷನ್ ಅನ್ನು ಮಾಡಿ
ಹಂತ 8: Send OTP ಮೇಲೆ ಕ್ಲಿಕ್ ಮಾಡಿ
ಹಂತ 9: 'Update Demographics Data' ಮೇಲೆ ಕ್ಲಿಕ್ ಮಾಡಿ
ಹಂತ 10: ನವೀಕರಿಸಲು ವಿವರಗಳ ಆಯ್ಕೆಯನ್ನು ಆಯ್ಕೆಮಾಡಿ
ಹಂತ 11: ಹೊಸ ವಿವರಗಳನ್ನು ನಮೂದಿಸಿ
ಹಂತ 12: ದಾಖಲೆಗಳ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
ಹಂತ 13: ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.
ಈ ಸೇವೆಯು ಮೈಆಧಾರ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಉಚಿತವಾಗಿ ಲಭ್ಯವಾಗುತ್ತದೆ ಎಂಬುವುದು ತಿಳಿದಿರಿ. ಈ ಹಿಂದೆ ಇರುವಂತೆಯೇ ನೀವು ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದಾದರೆ 50 ರೂಪಾಯಿಯನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications