ಭಾರತದ ಅತೀ ದೊಡ್ಡ ಖಾಸಗಿ ಆಸ್ಪತ್ರೆ ಸಂಸ್ಥೆಯಾದ ಅಪೋಲೋ ಆಸ್ಪತ್ರೆ ಎಂಟರ್‌ಪ್ರೈಸ್ ಹಾಗೂ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಹೊಸ ಡೀಲಿಂಗ್‌ನಲ್ಲಿ ಜೊತೆಯಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅದಾನಿ ತನ್ನ ವ್ಯಾಪಾರ ವಲಯವನ್ನು ಆರೋಗ್ಯ ಸೇವೆಗೂ ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ಮೆಟ್ರಾಪಾಲಿಸ್ ಹೆಲ್ತ್‌ಕೇರ್‌ನ ಷೇರನ್ನು ಅಪೋಲೋ ಹಾಗೂ ಅದಾನಿ ಗ್ರೂಪ್ ಖರೀದಿ ಮಾಡಲಿದೆ ಎಂದು ತಿಳಿದು ಬಂದಿದೆ.
ಈ ಡೀಲ್ ಸುಮಾರು ಒಂದು ಬಿಲಿಯನ್ ಡಾಲರ್ ಮೌಲ್ಯದ್ದು ಆಗಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ. ಅದಾನಿ ಗ್ರೂಪ್ ಆರೋಗ್ಯ ಕ್ಷೇತ್ರದಲ್ಲಿಯೂ ಈ ಮೂಲಕ ಎಂಟ್ರಿ ನೀಡುವ ಸಾಧ್ಯತೆ ಇದೆ. ಇದಕ್ಕಾಗಿ ಸುಮಾರು ನಾಲ್ಕು ಬಿಲಿಯನ್ ಡಾಲರ್ ಅನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಆದರೆ ಈ ಬಗ್ಗೆ ಮೆಟ್ರಾಪಾಲಿಸ್, ಅದಾನಿ ಗ್ರೂಪ್ ಹಾಗೂ ಅಪೋಲೋ ಆಸ್ಪತ್ರೆ ಈವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಮೆಟ್ರಾಪಾಲಿಸ್ 1980 ರ ದಶಕದಲ್ಲಿ ಒಂದೇ ಪ್ರಯೋಗಾಲಯದೊಂದಿಗೆ ಆರಂಭವಾಗಿದೆ. ಆದರೆ ಈಗ ತನ್ನ ಕಬಂಧ ಬಾಹುವನ್ನು ವಿಸ್ತಾರ ಮಾಡಿದೆ. 19 ರಾಜ್ಯಗಳಲ್ಲಿ ಅಸ್ತಿತ್ವವನ್ನು ಹೊಂದಿದೆ.

ಆರೋಗ್ಯ ಕ್ಷೇತ್ರಕ್ಕೆ ಎಂಟ್ರಿ ಘೋಷಿಸಿದ್ದ ಅದಾನಿ ಗ್ರೂಪ್
ಆರೋಗ್ಯ ಕ್ಷೇತ್ರಕ್ಕೆ ತನ್ನ ಎಂಟ್ರಿಯನ್ನು ಮೇ 19 ರಂದು ಅದಾನಿ ಗ್ರೂಪ್ ಘೋಷಣೆ ಮಾಡಿದೆ. "ನಮ್ಮ ಸಂಸ್ಥೆ ಆರೋಗ್ಯ-ಸಂಬಂಧಿತ ಸೇವೆಗಳಿಗಾಗಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು ಹೊಂದಲಿದೆ," ಎಂದು ಹೇಳುವ ಮೂಲಕ ಎಂಟ್ರಿಯ ಸುಳಿವು ನೀಡಿದೆ.
ಅದಾನಿ ಹೆಲ್ತ್ ವೆಂಚರ್ಸ್ (AHVL), ವೈದ್ಯಕೀಯ ಸೌಲಭ್ಯಗಳ ಸ್ಥಾಪನೆ ಸೇರಿದಂತೆ ಆರೋಗ್ಯ ಸಂಬಂಧಿತ ಚಟುವಟಿಕೆಗಳ ವ್ಯವಹಾರವನ್ನು ನಿರ್ವಹಿಸುತ್ತದೆ ಎಂದು ಕಂಪನಿಯು ಈ ಸಂದರ್ಭದಲ್ಲೇ ಮಾಹಿತಿ ನೀಡಿದೆ.
"ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಅದಾನಿ ಹೆಲ್ತ್ ವೆಂಚರ್ಸ್ ಲಿಮಿಟೆಡ್ ಅನ್ನು 17 ಮೇ 2022 ರಂದು ಸ್ಥಾಪಿಸಿದೆ. ಈ ಮೂಲಕ ಆರೋಗ್ಯ ಸಂಬಂಧಿತ ಚಟುವಟಿಕೆಗಳ ವ್ಯವಹಾರವನ್ನು ಕೈಗೊಳ್ಳಲು ತಲಾ ರೂ 1,00,000 ಷೇರು ಬಂಡವಾಳ ಹೂಡಿಕೆ ಮಾಡಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಘಟಕ ಸ್ಥಾಪನೆ, ನಿರ್ವಹಣೆ, ವೈದ್ಯಕೀಯ ಮತ್ತು ರೋಗನಿರ್ಣಯ ಸೌಲಭ್ಯಗಳು, ಆರೋಗ್ಯ ಸಹಾಯಗಳು, ಆರೋಗ್ಯ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು, ಸಂಶೋಧನಾ ಕೇಂದ್ರಗಳ ಸ್ಥಾಪನೆ ನಿಟ್ಟಿನಲ್ಲಿ ಈ ಬಂಡವಾಳ ನಿಗದಿ ಮಾಡಿದೆ. 2014ರಿಂದ ಈವರೆಗೆ 30 ಸ್ವಾಧೀನ ಪ್ರಕ್ರಿಯೆಯನ್ನು ನಡೆಸಿದೆ.


Click it and Unblock the Notifications