ಜನವರಿಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಇದಾದ ಬಳಿಕ ಅದಾನಿ ಸ್ಟಾಕ್‌ಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗೆಯೇ ಗೌತಮ್ ಅದಾನಿ ಆದಾಯವು ಕೂಡಾ ಇಳಿದಿದೆ.
ಆದರೆ ಈಗ ಗೌತಮ್ ಅದಾನಿ ಅವರ ಸಂಪತ್ತು ಕಳೆದ ವಾರದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗುತ್ತಿದೆ. ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆಯು ಏರಿಕೆಯಾದ ಕಾರಣ ಈ ಬೆಲೆ ಏರಿಕೆಯಾಗಿದೆ. ಗೌತಮ್ ಅದಾನಿ ನಿವ್ವಳ ಆದಾಯವು 82.5 ಬಿಲಿಯನ್ ಡಾಲರ್ ಆಗಿದೆ.

ಭಾರತೀಯ ಬಿಲಿಯನೇರ್‌ನ ಸಂಪತ್ತು ಕಳೆದ ಪಟ್ಟಿಯಿಂದ 12.3 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. 82.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಗೌತಮ್ ಅದಾನಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ವಿಶ್ವದ 15 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದಾಯದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಬ್ಲ್ಯೂಬರ್ಗ್‌ನಲ್ಲಿ ಗೌತಮ್ ಜಿಗಿತ
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ $ 91.4 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಹದಿಮೂರನೇ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗಿಂತ ಗೌತಮ್ ಅದಾನಿ ಕೇವಲ ಎರಡು ಸ್ಥಾನಗಳ ಹಿಂದೆ ಇದ್ದಾರೆ ಎಂಬುದನ್ನು ಒಬ್ಬರು ಗಮನಿಸಬೇಕು.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ 91.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಹದಿಮೂರನೇ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗಿಂತ ಗೌತಮ್ ಅದಾನಿ ಕೇವಲ ಎರಡು ಸ್ಥಾನಗಳ ಹಿಂದೆ ಇದ್ದಾರೆ ಎಂಬುವುದು ಗಮನಾರ್ಹವಾಗಿದೆ. ಈ ವರ್ಷದಲ್ಲಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ 38 ಬಿಲಿಯನ್ ಡಾಲರ್‌ಗೆ ಕುಸಿದಿದೆ.
ಹಿಂಡನ್‌ಬರ್ಗ್ ವರದಿಯು ಅದಾನಿಯವರ ವೈಯಕ್ತಿಕ ಸಂಪತ್ತಿನಲ್ಲಿ ಸುಮಾರು ಶೇಕಡ 60 ರಷ್ಟು ನಷ್ಟವನ್ನು ಉಂಟು ಮಾಡಿದೆ. ಸುಮಾರು ಶೇಕಡ 69 ಬಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿದೆ. ಆದರೆ ಈಗ ಸ್ಟಾಕ್ ಏರಿಕೆಯಾಗುತ್ತಿದ್ದಂತೆ ಗೌತಮ್ ಅದಾನಿ ಆದಾಯವು ಕೂಡಾ ಏರಿಕೆಯಾಗಿದೆ.
ಅದಾನಿ ಎಂಟರ್‌ಪ್ರೈಸಸ್ ಶೇಕಡ 68 ರಷ್ಟು, ಅದಾನಿ ಪವರ್ ಶೇಕಡ 67, ಅದಾನಿ ಟೋಟಲ್ ಗ್ಯಾಸ್ ಶೇಕಡ 37 ರಷ್ಟು, ಅದಾನಿ ಟ್ರಾನ್ಸ್‌ಮಿಷನ್ ಶೇಕಡ 68 ರಷ್ಟು, ಅದಾನಿ ಪೋರ್ಟ್ಸ್ ಶೇಕಡ 63 ರಷ್ಟು ಮತ್ತು ಅದಾನಿ ಗ್ರೀನ್ ಎನರ್ಜಿ ಶೇಕಡ 56 ರಷ್ಟು ಏರಿಕೆಯಾಗಿದೆ.


Click it and Unblock the Notifications