ಶುಕ್ರವಾರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದೇ ಆಗಿದ್ದರೂ, ದೀಪಾವಳಿ ಹಬ್ಬದಂದು ಇಂಧನ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಈ ತಿಂಗಳ ಆರಂಭದಲ್ಲಿ ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬೆಲೆಗಳನ್ನು ಕಡಿತಗೊಳಿಸಿದ ನಂತರ ಈಗ ದೀಪಾವಳಿ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತ ಮಾಡುವ ನಿರೀಕ್ಷೆಯಿದೆ.
ನವೆಂಬರ್-ಡಿಸೆಂಬರ್ 2023ರಲ್ಲಿ ಪ್ರಮುಖ ರಾಜ್ಯ ಚುನಾವಣೆಗಳು ಪ್ರಾರಂಭವಾಗಲಿದೆ, ಈ ನಡುವೆ ಕೇಂದ್ರ ಸರ್ಕಾರವು ಎಲ್‌ಪಿಜಿ ಬೆಲೆಯಲ್ಲಿ 200 ರೂಪಾಯಿ ಕಡಿತ ಮಾಡಿದೆ. ಚುನಾವಣೆ ದೃಷ್ಟಿಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವು ದೀಪಾವಳಿಯ ಆಸುಪಾಸಿನಲ್ಲಿ ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ ಲೀಟರ್‌ಗೆ 3-5 ರೂಪಾಯಿಯಷ್ಟು ಕಡಿತಗೊಳಿಸಬಹುದು.

ದೇಶೀಯ ಬ್ರೋಕರೇಜ್ ಸಂಸ್ಥೆ ಜೆಎಂ ಫೈನಾನ್ಶಿಯಲ್ಸ್ ಪ್ರಕಾರ, ಕೇಂದ್ರ ಸರ್ಕಾರವು ಅಬಕಾರಿ ಸುಂಕ ಅಥವಾ ವ್ಯಾಟ್ ಕಡಿತ ಮಾಡಬಹುದು. ಈ ಮೂಲಕವಾಗಿ ಇಂಧನ ಬೆಲೆಗಳಲ್ಲಿ ಕಡಿತವಾಗುವ ಸಾಧ್ಯತೆಯಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಇಂಧನ ಬೆಲೆಯನ್ನು ಕಡಿತ ಮಾಡುವ ನಿರೀಕ್ಷೆಯಿಲ್ಲ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ತಮ್ಮ ಸ್ವಯಂಪ್ರೇರಿತ ತೈಲ ಉತ್ಪಾದನೆಯ ಕಡಿತವನ್ನು ವರ್ಷದ ಅಂತ್ಯದವರೆಗೆ ವಿಸ್ತರಿಸಿದೆ. ಈ ನಡುವೆ ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಕಚ್ಚಾ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಈ ನಡುವೆಯೂ ಕೇಂದ್ರ ಸರ್ಕಾರವು ಕೊಂಚ ದರ ಇಳಿಕೆಯನ್ನು ಮಾಡಿದೆ.
ಆಗಸ್ಟ್ 30 ರಿಂದ ಪ್ರಾರಂಭವಾಗುವ ಎಲ್ಲಾ 330 ಮಿಲಿಯನ್ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರವು ಕಳೆದ ವಾರ ದೇಶೀಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂಪಾಯಿ ಕಡಿತ ಮಾಡಿದೆ. ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ನಡುವೆ ಜನರಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
"ಈ ಎಲ್‌ಪಿಜಿ ಬೆಲೆ ಕಡಿತದ ಹೊರೆಯನ್ನು ಸರ್ಕಾರವು ಭರಿಸಲಿದೆ. ಆದರೂ ಇದು ಸರ್ಕಾರಿ ಪರಿಹಾರದಲ್ಲಿ ಸಾಮಾನ್ಯ ವಿಳಂಬವಾದರೂ ಒಎಂಸಿಗಳ ವರ್ಕಿಂಗ್ ಕ್ಯಾಪಿಟಲ್ ಅನ್ನು ಹೆಚ್ಚಿಸಬಹುದು," ಎಂದು ಜೆಎಂ ಫೈನಾನ್ಶಿಯಲ್ಸ್ ಮಿಂಟ್‌ಗೆ ತಿಳಿಸಿದೆ. "ನವೆಂಬರ್-ಡಿಸೆಂಬರ್ 2023 ರಿಂದ ಪ್ರಮುಖ ರಾಜ್ಯ ಚುನಾವಣೆಗಳು ಪ್ರಾರಂಭವಾಗುವುದರಿಂದ ದೀಪಾವಳಿಯ ಸಂದರ್ಭದಲ್ಲಿ ಸರ್ಕಾರವು ಪೆಟ್ರೋಲ್ / ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3-5 ರೂಪಾಯಿ ಕಡಿತ ಮಾಡುವ ನಿರೀಕ್ಷೆಯಿದೆ," ಎಂದು ಬ್ರೋಕರೇಜ್ ಸೇರಿಸಿದೆ.
ಇದಲ್ಲದೆ, ಸೌದಿ ಅರೇಬಿಯಾ ಮತ್ತು ರಷ್ಯಾ ಅಕ್ಟೋಬರ್‌ನಲ್ಲಿ ಸ್ವಯಂಪ್ರೇರಿತವಾಗಿ ಕಡಿತವನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಹೂಡಿಕೆದಾರರು ಅಂದಾಜಿಸಿದ್ದಾರೆ. ಆದರೆ ಮೂರು ತಿಂಗಳ ವಿಸ್ತರಣೆಯು ಅನಿರೀಕ್ಷಿತವಾಗಿದೆ. ಈ ಮಧ್ಯೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಫ್ಯೂಚರ್ಸ್ ಮಂಗಳವಾರ 1.14 ಡಾಲರ್ ಅಥವಾ ಶೇಕಡ 1.3ರಷ್ಟು ಗಳಿಸಿ ಬ್ಯಾರೆಲ್‌ಗೆ 86.69 ಡಾಲರ್‌ನಂತೆ ಸ್ಥಿರವಾಗಿದೆ.
ಇದು 10 ತಿಂಗಳ ಗರಿಷ್ಠ ಮಟ್ಟವಾಗಿದೆ. ನಂತರ, ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಸುಮಾರು ಶೇಕಡ 0.2ರಷ್ಟು ಕಡಿಮೆಯಾಗಿ ಬ್ಯಾರೆಲ್‌ಗೆ 90.41 ಡಾಲರ್‌ಗೆ ವಹಿವಾಟು ನಡೆಸುತ್ತದೆ. ಆದರೆ ಯುಎಸ್ ಡಬ್ಲ್ಯೂಟಿಐ ಫ್ಯೂಚರ್ಸ್ ಶೇಕಡ 0.2ರಷ್ಟು ಕಡಿಮೆಯಾಗಿ, 87.36 ಡಾಲರ್‌ನಷ್ಟಿದೆ.
ಆದಾಗ್ಯೂ, ಮಾರ್ಚ್ 2022 ರಲ್ಲಿ ಕಚ್ಚಾ ತೈಲವು ಬ್ಯಾರೆಲ್‌ಗೆ 140 ಡಾಲರ್‌ನ ಗರಿಷ್ಠ ಮಟ್ಟವನ್ನು ತಲುಪಿದೆ. ಅದಾದ ನಂತರವು ಒಎಂಸಿಗಳು ಕಳೆದ ವರ್ಷ ರಿಟೇಲ್ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಲಿಲ್ಲ. ಈ ಕಾರಣದಿಂದಾಗಿ ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾಗದೆ ಇರುವುದರಿಂದ ತೈಲ ಸಂಸ್ಕರಣಾಗಾರರು ನಷ್ಟವನ್ನು ಕಂಡಿದ್ದಾರೆ. ಆದರೂ ಕೇಂದ್ರ ಸರ್ಕಾರವು ಒಎಂಸಿಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಬಹುದು.


Click it and Unblock the Notifications