ದೇಶದಲ್ಲಿ ಈಗ 4ಜಿ ಯುಗ ಹೋಗಿ 5ಜಿ ಯುಗ ಆರಂಭವಾಗಿದೆ. 5ಜಿ ನೆಟ್‌ವರ್ಕ್ ಬಳಕೆಗೆ ಜನರು ಮುಂದಾಗುತ್ತಿದ್ದಾರೆ. ಈ ನಡುವೆ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ತಮ್ಮ ಗ್ರಾಹಕರಿಗೆ ಅನ್‌ಲಿಮಿಟೆಡ್ 5ಜಿ ಡೇಟಾ ಪ್ಲ್ಯಾನ್‌ಗಳನ್ನು ಆರಂಭ ಮಾಡಿದೆ. ದೇಶದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಹೊಸ ಪ್ಲ್ಯಾನ್ ಬಿಡುಗಡೆಗೊಳಿಸಿದ ಬಳಿಕ ಏರ್‌ಟೆಲ್ ತನ್ನ ನೂತನ ಪ್ಲ್ಯಾನ್ ಅನ್ನು ಜಾರಿ ಮಾಡಿದೆ.
ಇತ್ತೀಚೆಗೆ ಟೆಲಿಕಾಂ ಸಂಸ್ಥೆಯು 5 ಡೇಟಾ ಬಳಕೆಗೆ ಮಿತಿಯನ್ನು ವಿಧಿಸುತ್ತಿದೆ ಎಂದು ಏರ್‌ಟೆಲ್ ಗ್ರಾಹಕರು ಆರೋಪ ಮಾಡಿದ್ದರು. ಈಗ ಏರ್‌ಟೆಲ್ ಅನ್‌ಲಿಮಿಟೆಡ್ 5ಜಿ ಡೇಟಾ ಸೌಲಭ್ಯವನ್ನು ಆರಂಭ ಮಾಡಿದೆ. ದೈನಂದಿನ ಡೇಟಾ ಲಿಮಿಟ್‌ನ ತಲೆ ಬಿಸಿಯನ್ನು ಮಾಡದೆಯೇ ಈಗ ಏರ್‌ಟೆಲ್ ಗ್ರಾಹಕರು ಅನ್‌ಲಿಮಿಟೆಡ್ 5ಜಿ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಈ 5ಜಿ ಸೇವೆಯು ಕೆಲವೊಂದು ನಿಗದಿತ ಪ್ಲ್ಯಾನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಏರ್‌ಟೆಲ್ ಈಗ ಕೆಲವು ಪ್ಲ್ಯಾನ್‌ನಲ್ಲಿ 5ಜಿ ಸೇವೆಯನ್ನು ಸೇರ್ಪಡೆ ಮಾಡಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.....

1 ತಿಂಗಳವರೆಗಿನ ಪ್ಲ್ಯಾನ್
* 239 ರೂಪಾಯಿ, 24 ದಿನಗಳು, ದಿನಕ್ಕೆ 1 ಜಿಬಿ
* 265 ರೂಪಾಯಿ, 28 ದಿನಗಳು, ದಿನಕ್ಕೆ 1 ಜಿಬಿ
* 296 ರೂಪಾಯಿ, 30 ದಿನಗಳು, ಒಟ್ಟು 25 ಜಿಬಿ
* 299 ರೂಪಾಯಿ, 28 ದಿನಗಳು, ದಿನಕ್ಕೆ 1.5 ಜಿಬಿ
* 319 ರೂಪಾಯಿ, 1 ತಿಂಗಳು, ದಿನಕ್ಕೆ 2ಜಿಬಿ
* 359 ರೂಪಾಯಿ,1 ತಿಂಗಳು, ದಿನಕ್ಕೆ 2ಜಿಬಿ
* 399 ರೂಪಾಯಿ, 28 ದಿನಗಳು, ದಿನಕ್ಕೆ 2.5 ಜಿಬಿ
* 489 ರೂಪಾಯಿ, 30 ದಿನಗಳು, ಒಟ್ಟು 50 ಜಿಬಿ
* 499 ರೂಪಾಯಿ, 28 ದಿನಗಳು, ದಿನಕ್ಕೆ 3ಜಿಬಿ
* 509 ರೂಪಾಯಿ, 1 ತಿಂಗಳು, ಒಟ್ಟು 60 ಜಿಬಿ
3 ತಿಂಗಳವರೆಗಿನ ಪ್ಲ್ಯಾನ್
* 479 ರೂಪಾಯಿ, 56 ದಿನಗಳು, ದಿನಕ್ಕೆ 1.5 ಜಿಬಿ
* 519 ರೂಪಾಯಿ, 60 ದಿನಗಳು, ದಿನಕ್ಕೆ 1.5 ಜಿಬಿ
* 549 ರೂಪಾಯಿ, 56 ದಿನಗಳು, ದಿನಕ್ಕೆ 2 ಜಿಬಿ
* 666 ರೂಪಾಯಿ, 77 ದಿನಗಳು, ದಿನಕ್ಕೆ1.5 ಜಿಬಿ
* 699 ರೂಪಾಯಿ, 56 ದಿನಗಳು, ದಿನಕ್ಕೆ 3 ಜಿಬಿ
* 779 ರೂಪಾಯಿ, 90 ದಿನಗಳು, ದಿನಕ್ಕೆ 1.5 ಜಿಬಿ
* 839 ರೂಪಾಯಿ, 84 ದಿನಗಳು, ದಿನಕ್ಕೆ 2 ಜಿಬಿ
* 999 ರೂಪಾಯಿ, 84 ದಿನಗಳು, ದಿನಕ್ಕೆ 2.5 ಜಿಬಿ
ವಾರ್ಷಿಕ ಪ್ಲ್ಯಾನ್ ಹೀಗಿದೆ
* 2999 ರೂಪಾಯಿ, 365 ದಿನಗಳು, ದಿನಕ್ಕೆ 2 ಜಿಬಿ
* 3359 ರೂಪಾಯಿ, 365 ದಿನಗಳು ದಿನಕ್ಕೆ 2.5 ಜಿಬಿ
ಭಾರ್ತಿ ಏರ್‌ಟೆಲ್ ದೇಶದ 125 ನಗರದಲ್ಲಿ ಅಲ್ಟ್ರಾ - ಫಾಸ್ಟ್ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಈ ಹಿಂದೆ ಘೋಷಣೆ ಮಾಡಿದೆ. ಏರ್‌ಟೆಲ್ 5G ಪ್ಲಸ್ ಸೇವೆಯೂ ಒಟ್ಟಾರೆ ದೇಶದ 265 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಸೇರಿದಂತೆ ಏರ್‌ಟೆಲ್ 5ಜಿ ಸೇವೆಯು ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ನಾಗಾಲ್ಯಾಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ನಗರಗಳಲ್ಲಿ ಆರಂಭ ಮಾಡಲಾಗಿದೆ.


Click it and Unblock the Notifications