ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕ ಹಾಗೂ ಯುಎಸ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟುಗಳು ಈಗ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತಿರುವ ಪ್ರಮುಖ ಅಂಶಗಳು ಆಗಿದೆ. ಈ ನಡುವೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಚಿನ್ನದ ಬೆಲೆಯು ನವೆಂಬರ್ 2022ರ ಬಳಿಕ ಈವರೆಗೂ ಒಟ್ಟಾಗಿ ಶೇಕಡ 23ರಷ್ಟು ಏರಿಕೆಯನ್ನು ಕಂಡಿದೆ. ಪ್ರಸ್ತುತ ಅಕ್ಷಯ ತೃತೀಯವು ಬಂದಿದೆ.
ಈ ಅನಿಶ್ಚಿತ ಸಂದರ್ಭದಲ್ಲಿ ಜನರು ಚಿನ್ನವನ್ನೇ ಒಂದು ಅಸ್ತ್ರವಾಗಿ ಬಳಸಬಹುದಾಗಿದೆ. ಈ ನಡುವೆ ಚಿನ್ನವನ್ನು ನಾವು ಖರೀದಿ ಮಾಡುವ ವಿಚಾರಕ್ಕೆ ಬಂದಾಗ ಸವರನ್ ಗೋಲ್ಡ್ ಬಾಂಡ್ ಅನ್ನು ಖರೀದಿಸುವುದು ಉತ್ತಮ ಎನ್ನಬಹುದು. ಯಾಕೆಂದರೆ ಎಸ್‌ಜಿಬಿಯಿಂದ ನಮಗೆ ತೆರಿಗೆ ವಿನಾಯಿತಿಯು ಲಭ್ಯವಾಗುತ್ತದೆ. ಹಾಗೆಯೇ ಇದು ಸರ್ಕಾರ ಬೆಂಬಲಿತ ಯೋಜನೆಯಾಗಿದೆ.

ಈ ಯೋಜನೆ ಅಡಿಯಲ್ಲಿ ನಾವು ಶೇಕಡ 2.5ರಷ್ಟು ಬಡ್ಡಿದರವನ್ನು ಪಡೆಯಬಹುದು. ಇನ್ನು ಚಿನ್ನದ ಇಟಿಎಫ್‌ಗಳು ಮತ್ತು ಭೌತಿಕ ಚಿನ್ನವನ್ನು ಖರೀದಿಸಲು ಸಂಬಂಧಿಸಿದ ವೆಚ್ಚಗಳಿಗೆ ನಾವು ಹೋಲಿಕೆ ಮಾಡಿದಾಗ ಎಸ್‌ಜಿಬಿಗಳು ಎಂದಿಗೂ ಕೂಡಾ ಅಂತಹ ಹೆಚ್ಚುವರಿ ವೆಚ್ಚವನ್ನು ಹೊಂದಿಲ್ಲ. ಈ ನಡುವೆ ಏಪ್ರಿಲ್ 22ರಂದು ಅಕ್ಷಯ ತೃತೀಯ ಬರುತ್ತದೆ. ಈ ದಿನ ಚಿನ್ನ ಖರೀದಿ ಬದಲಾಗಿ ನಾವು ಸವರನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡಬಹುದೇ?
ಚಿನ್ನ ಖರೀದಿ ಉತ್ತಮವೇ?
ಚಿನ್ನದ ಬೆಲೆಯು ಪ್ರಸ್ತುತ ಭಾರೀ ಏರಿಕೆಯಾಗಿದೆ. ಆದ್ದರಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಇದು ಉತ್ತಮ ಸಮಯವಲ್ಲ ಎನ್ನುತ್ತಾರೆ ತಜ್ಞರು. ಮಾರ್ಚ್ 2023ರಲ್ಲಿ ಸವರನ್ ಗೋಲ್ಡ್ ಬಾಂಡ್‌ನ ದರವು ಪ್ರತಿ ಬಾಂಡ್‌ಗೆ 5,611 ರೂಪಾಯಿ ಆಗಿತ್ತು. ಸವರನ್ ಗೋಲ್ಡ್ ಬಾಂಡ್ 2015ರಲ್ಲಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ದರ ಏರಿಕೆಯಾಗಿದೆ.
ಜನವರಿ 2016ರಲ್ಲಿ ಸವರನ್ ಗೋಲ್ಡ್ ಬಾಂಡ್ ದರವು ಅತೀ ಕಡಿಮೆಯಾಗಿತ್ತು, ಆಗ ದರವು ಪ್ರತಿ ಬಾಂಡ್‌ಗೆ 2,600 ರೂಪಾಯಿ ಆಗಿತ್ತು. ಒಂದು ಗ್ರಾಂ ಚಿನ್ನದ ಬೆಲೆಗೆ ಸಮನಾಗಿ ಎಸ್‌ಜಿಬಿ ಬೆಲೆಯು ಇರುತ್ತದೆ. ಚಂದಾದಾರಿಕೆಯ ಅವಧಿಯ ಹಿಂದಿನ ಕೊನೆಯ ಮೂರು ವ್ಯವಹಾರದ ದಿನಗಳಲ್ಲಿ ಚಿನ್ನದ ಬೆಲೆಯ (999 ಶುದ್ಧತೆ) ಸರಳ ಸರಾಸರಿ ಬೆಲೆಯಾಗಿದೆ. ಇದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಟಿಸಿದ ಡೇಟಾವನ್ನು ಆಧರಿಸಿದೆ.
ಎಸ್‌ಜಿಬಿ ಹೂಡಿಕೆ ಮಾಡುವುದೇ?
ನಿರ್ದಿಷ್ಟ ಚಂದಾದಾರಿಕೆ ಅವಧಿಯಲ್ಲಿ ಸರ್ಕಾರದ ಪರವಾಗಿ ಎಸ್‌ಜಿಬಿಗಳನ್ನು ಆರ್‌ಬಿಐ ನೀಡುತ್ತದೆ. ಪ್ರತಿ ಎಸ್‌ಜಿಬಿ ಒಂದು ಗ್ರಾಂ ಚಿನ್ನದ ಮೌಲ್ಯವನ್ನು ಪ್ರತಿನಿಧಿಸುತ್ತದೆ. ನವೆಂಬರ್ 2015 ರಲ್ಲಿ ಪ್ರಾರಂಭವಾದಾಗಿನಿಂದ, ಎಸ್‌ಜಿಬಿಗಳು 63 ಭಾಗಗಳಿವೆ. ಬ್ಯಾಂಕ್‌ಗಳು, ಅಂಚೆ ಕಚೇರಿ, ಬ್ರೋಕರ್ ಸಹಾಯದಿಂದ ನೀವು ಎಸ್‌ಜಿಬಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಮ್ಮೆ ನೀವು ಎಸ್‌ಜಿಬಿಯನ್ನು ಪಡೆದ ಬಳಿಕ ನೀವು ಅದನ್ನು ಮಾರಾಟ ಮಾಡಬಹುದು ಅಥವಾ ಖರೀದಿ ಮಾಡಬಹುದಾಗಿದೆ. ನೀವು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಆಯ್ಕೆ ಹೊಂದಿರುತ್ತೀರಿ. ನೀವು ಒಂದು ಹಣಕಾಸು ವರ್ಷದಲ್ಲಿ ಕನಿಷ್ಠವೆಂದರೆ ಒಂದು ಗ್ರಾಂ ಮೌಲ್ಯದ ಎಸ್‌ಜಿಬಿ, ಗರಿಷ್ಠವೆಂದರೆ 4 ಕಿಲೋ ಗ್ರಾಂ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು.
ಈ ನಡುವೆ ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡುವುದು ಉತ್ತಮವೇ, ಸವರನ್ ಗೋಲ್ಡ್ ಬಾಂಡ್ ಖರೀದಿ ಉತ್ತಮವೇ ಎಂದು ನೋಡಿದಾಗ ನಮ್ಮ ಮುಂದೆ ಬರುವ ಆಯ್ಕೆ ಸವರನ್ ಗೋಲ್ಡ್ ಬಾಂಡ್ ಎಂದು ತಜ್ಞರು ಹೇಳುತ್ತಾರೆ. ಚಿನ್ನದ ಬೆಲೆಯು ಈ ಭಾರೀ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿ ಉತ್ತಮ ಆಯ್ಕೆ ಅಲ್ಲ ಎನ್ನುವುದಿದೆ.


Click it and Unblock the Notifications