For Quick Alerts
ALLOW NOTIFICATIONS  
For Daily Alerts

ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಷೂರೆನ್ಸ್ ಏಪ್ರಿಲ್ 1ರಿಂದ ಜಾರಿ; ಏನೆಲ್ಲ ಅನುಕೂಲ?

|

ಎಲ್ಲ ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳಿಗೆ IRDAIನಿಂದ ಬೇಸಿಕ್ ಹೆಲ್ತ್ ಕವರೇಜ್ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1, 2020ರಿಂದ ಜಾರಿಗೆ ಬಂದಿದ್ದು, ಇದಕ್ಕೆ ಆರೋಗ್ಯ ಸಂಜೀವಿನಿ ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಆರೋಗ್ಯ ವಿಮೆ ದುಬಾರಿ ಎಂಬ ಅಭಿಪ್ರಾಯವಿದ್ದು, ಇದಕ್ಕೆ ನಿದರ್ಶನ ಎಂಬಂತೆ ಶೇಕಡಾ 55ಕ್ಕೂ ಹೆಚ್ಚು ಮಂದಿ ಇನ್ಷೂರೆನ್ಸ್ ಕವರ್ ಗೆ ಒಳಪಟ್ಟಿಲ್ಲ. ಹಲವರಿಗೆ ಇನ್ಷೂರೆನ್ಸ್ ಆಯ್ಕೆಯಲ್ಲೇ ಗೊಂದಲ ಕೂಡ ಇದೆ.

ಆದ್ದರಿಂದ ಆರೋಗ್ಯ ಸಂಜೀವಿನಿ ಯೋಜನೆ ಪರಿಚಯಿಸಲಾಗಿದೆ. ಒಂದು ವರ್ಷಕ್ಕೆ 1ರಿಂದ 5 ಲಕ್ಷ ತನಕ ಕವರೇಜ್ ಇರುತ್ತದೆ. 50 ಸಾವಿರ ರುಪಾಯಿ ಗುಣಕದಂತೆ ಇನ್ಷೂರೆನ್ಸ್ ಕವರೇಜ್ ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಉದಾಹರಣೆಗೆ: 1 ಲಕ್ಷ, 1.5 ಲಕ್ಷ, 2 ಲಕ್ಷ ಹಾಗೂ 2.5 ಲಕ್ಷ ಹೀಗೆ. ವೈಯಕ್ತಿಕವಾಗಿಯೂ ಇಡೀ ಕುಟುಂಬಕ್ಕೆ ಅನ್ವಯ ಆಗುವಂತೆಯೂ ಇನ್ಷೂರೆನ್ಸ್ ಲಭ್ಯವಿದೆ.

ಯಾವ ವಯಸ್ಸಿನವರು ಇನ್ಷೂರೆನ್ಸ್ ಖರೀದಿಸಬಹುದು?

ಯಾವ ವಯಸ್ಸಿನವರು ಇನ್ಷೂರೆನ್ಸ್ ಖರೀದಿಸಬಹುದು?

18ರಿಂದ 65 ವರ್ಷ ಮಧ್ಯದ ವಯೋಮಾನದವರು ಈ ಇನ್ಷೂರೆನ್ಸ್ ಖರೀದಿಸಬಹುದು. ಆರ್ಥಿಕವಾಗಿ ಸ್ವಾವಲಂಬಿಗಳಾದ ಕುಟುಂಬ ಸದಸ್ಯರು, ಹದಿನೆಂಟು ವರ್ಷದೊಳಗಿನವರನ್ನು ಇದರಲ್ಲಿ ಸೇರಿಸಲು ಸಾಧ್ಯವಿಲ್ಲ. ಎಲ್ಲ ಕಂಪೆನಿಗಳಿಗೂ ಪ್ರೀಮಿಯಂ ದೇಶಾದ್ಯಂತ ಒಂದೇ ಇರುತ್ತದೆ. ಅದನ್ನು ಪ್ರತಿ ತಿಂಗಳು, ಮೂರು ತಿಂಗಳೊಮ್ಮೆ, ಆರು ತಿಂಗಳೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಾವತಿಸಬಹುದು.

ಯಾವ ಚಿಕಿತ್ಸೆ ಒಳಗೊಂಡಿರುತ್ತದೆ?

ಯಾವ ಚಿಕಿತ್ಸೆ ಒಳಗೊಂಡಿರುತ್ತದೆ?

ಈ ಪಾಲಿಸಿಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಹಲ್ಲಿನ ಚಿಕಿತ್ಸೆ ಕೂಡ ಒಳಗೊಂಡಿರುತ್ತದೆ. ಜತೆಗೆ ಕ್ಯಾಟ್ರಾಕ್ಟ್ ಆಪರೇಷನ್ ಗೆ 25 ಪರ್ಸೆಂಟ್ ನಷ್ಟು ವೆಚ್ಚ ಅಥವಾ 40 ಸಾವಿರ ರುಪಾಯಿ ಯಾವುದು ಕಡಿಮೆ ಮೊತ್ತವೋ ಅದು ಪಾವತಿಸಲಾಗುತ್ತದೆ. ಆಸ್ಪತ್ರೆಗೆ ದಾಖಲಾದರೆ ರೂಮ್ ಬಾಡಿಗೆ ದರವು ಒಟ್ಟು ಇನ್ಷೂರೆನ್ಸ್ ಮಾಡಿಸಿದ ಮೊತ್ತದ 2 ಪರ್ಸೆಂಟ್ ಅಥವಾ 5000 ಯಾವುದು ಕಡಿಮೆಯೋ ಆ ಮೊತ್ತ ಸಿಗುತ್ತದೆ.

ಬೇರೆ ಇನ್ಷೂರೆನ್ಸ್ ಕಂಪೆನಿಗೆ ಬದಲಾಗಬಹುದೇ?

ಬೇರೆ ಇನ್ಷೂರೆನ್ಸ್ ಕಂಪೆನಿಗೆ ಬದಲಾಗಬಹುದೇ?

ಅಂದ ಹಾಗೆ ಈ ಇನ್ಷೂರೆನ್ಸ್ ಪಾಲಿಸಿಯನ್ನು ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ 'ಪೋರ್ಟ್' ಮಾಡಿಕೊಳ್ಳುವ ಅವಕಾಶವೂ ಇರುತ್ತದೆ. ಒಟ್ಟಾರೆ ಇನ್ಷೂರೆನ್ಸ್ ಮೊತ್ತ ಪ್ರತಿ ವರ್ಷ 5 ಪರ್ಸೆಂಟ್ ಏರಿಕೆ ಆಗುತ್ತದೆ. ಅದು ಒಟ್ಟು ಇನ್ಷೂರ್ಡ್ ಮೊತ್ತದ 50 ಪರ್ಸೆಂಟ್ ತನಕ ಆಗುತ್ತದೆ. ಈ ಅನುಕೂಲ ಸಿಗಬೇಕು ಅಂದರೆ ಯಾವುದೇ ವರ್ಷ ನಿಲ್ಲಿಸದೆ ಪಾಲಿಸಿ ರಿನೀವ್ ಮಾಡಬೇಕು.

ಆರೋಗ್ಯ ಸಂಜೀವಿನಿ ಯಾರಿಗೆ ಸೂಕ್ತ?

ಆರೋಗ್ಯ ಸಂಜೀವಿನಿ ಯಾರಿಗೆ ಸೂಕ್ತ?

ಮೊದಲ ಬಾರಿಗೆ ಹೆಲ್ತ್ ಇನ್ಷೂರೆನ್ಸ್ ಮಾಡಿಸುವವರಿಗೆ ಈ ಆರೋಗ್ಯ ಸಂಜೀವಿನಿ ಯೋಜನೆ. ಆರೋಗ್ಯ ವಿಮೆ 5 ಲಕ್ಷದೊಳಗಿನ ಮೊತ್ತದ ಸಾಲುವುದಿಲ್ಲ ಅಂದುಕೊಳ್ಳುವವರಿಗೆ ಈ ವಿಮೆ ಅಲ್ಲ. ಸಣ್ಣ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಕಡಿಮೆ ಆದಾಯ- ಜೀವನ ಮಟ್ಟ ಇರುವವರಿಗೆ ಆರೋಗ್ಯ ಸಂಜೀವಿನಿಯು ಅತ್ಯುತ್ತಮ ಆಯ್ಕೆ. ಈ ಆರೋಗ್ಯ ವಿಮೆ ಅರ್ಥ ಮಾಡಿಕೊಳ್ಳುವುದು ಸಲೀಸು. ಜತೆಗೆ ಪ್ರೀಮಿಯಂ ಕೂಡ ಕಡಿಮೆ. ಯಾವುದೇ ಇನ್ಷೂರೆನ್ಸ್ ಕವರ್ ಇಲ್ಲದಿರುವುದಕ್ಕಿಂತ ಹೀಗೊಂದು ಪಾಲಿಸಿ ಮಾಡಿಸುವುದು ಉತ್ತಮ.

English summary

Arogya Sanjeevini Health Insurance Scheme: Must Know Details

Here is the must know details about Arogya Sanjeevini health insurance scheme, which rolled from April 1st, 2020.
Story first published: Friday, April 10, 2020, 20:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X