For Quick Alerts
ALLOW NOTIFICATIONS  
For Daily Alerts

ದಿನಕ್ಕೆ 10 ರು.ಗಿಂತ ಕಮ್ಮಿ ದುಡ್ಡು ಉಳಿಸಿದರೂ ತಿಂಗಳಿಗೆ 5 ಸಾವಿರ ಪೆನ್ಷನ್

|

ಒಂದೊಳ್ಳೆ ಪೆನ್ಷನ್ ಪ್ಲ್ಯಾನ್ ಹುಡುಕುತ್ತಿದ್ದೀರಾ? ಹೌದು, ಸರಿಯಾದ ಪೆನ್ಷನ್ ಪ್ಲ್ಯಾನ್ ಹುಡುಕುವುದು ಕೂಡ ಬಹಳ ಮುಖ್ಯ. ಅಸಂಘಟಿತ ವಲಯವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಅಟಲ್ ಪೆನ್ಷನ್ ಯೋಜನಾ (ಎಪಿವೈ) ಇದೆ. ಇದರ ದೇಖರೇಕಿ ಮಾಡುತ್ತಿರುವುದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ ಮೆಂಟ್ ಅಥಾರಿಟಿ (ಪಿಎಫ್ ಆರ್ ಡಿಎ).

ಈ ಪೆನ್ಷನ್ ಯೋಜನೆ ಆರಂಭವಾದದ್ದು 2015ರಲ್ಲಿ. ತಮ್ಮ ನಿವೃತ್ತಿ ಜೀವನಕ್ಕೆ ಉಳಿತಾಯ ಮಾಡುವುದಕ್ಕೆ ಅಸಂಘಟಿತ ವಲಯದವರನ್ನು ಉತ್ತೇಜಿಸುವುದು ಈ ಸ್ಕೀಂ ಉದ್ದೇಶ. ತಜ್ಞರು ಹೇಳುವ ಪ್ರಕಾರ, ಈ ಯೋಜನೆಯಿಂದ ಗರಿಷ್ಠ ಅನುಕೂಲಗಳನ್ನು ಪಡೆಯಬಹುದು. ಆದರೆ ಸಣ್ಣ ಪ್ರಾಯದಲ್ಲೇ ಉಳಿತಾಯ ಆರಂಭಿಸಬೇಕು.

ತಿಂಗಳಿಗೆ 42 ರು.ಯಿಂದ 1318 ರು. ತನಕ

ತಿಂಗಳಿಗೆ 42 ರು.ಯಿಂದ 1318 ರು. ತನಕ

ಹಾಗೆ ಮಾಡುವುದರರಿಂದ ಕನಿಷ್ಠ ಉಳಿತಾಯ ಮಾಡಿ, ನಿರ್ದಿಷ್ಟ ಗುರಿಯನ್ನು ತಲುಪಬಹುದು. ಈ ಯೋಜನೆ ಅಡಿಯಲ್ಲಿ ನಿಶ್ಚಿತವಾದ ಪಿಂಚಣಿ 1ರಿಂದ 5 ಸಾವಿರ ರುಪಾಯಿ ತನಕ ಪಡೆಯಬಹುದು. ಅದು 60 ವರ್ಷದ ನಂತರ. ಇಷ್ಟೇ ಎಂದು ಮೊತ್ತ ನಿರ್ಧರಿಸುವುದಕ್ಕೆ ಸಾಧ್ಯವಾಗುವುದು ಉಳಿತಾಯ ಆರಂಭ ಮಾಡುವವರ ವಯಸ್ಸು ಹಾಗೂ ಎಷ್ಟು ಮೊತ್ತದ ಪಿಂಚಣಿ ಬೇಕು ಎಂಬುದರ ಆಧಾರದಲ್ಲಿ. ಒಂದು ತಿಂಗಳಿಗೆ 42 ರುಪಾಯಿಯಿಂದ ಶುರುವಾಗಿ 1318 ರುಪಾಯಿ ತನಕ ಆ ಮೊತ್ತ ಏರಿಳಿತ ಆಗುತ್ತದೆ.

ಲೆಕ್ಕಾಚಾರಕ್ಕಾಗಿ ಉದಾಹರಣೆ ಇಲ್ಲಿದೆ

ಲೆಕ್ಕಾಚಾರಕ್ಕಾಗಿ ಉದಾಹರಣೆ ಇಲ್ಲಿದೆ

ಒಂದು ಉದಾಹರಣೆ ನೋಡಿ. 22ನೇ ವಯಸ್ಸಿಗೆ ಒಬ್ಬ ವ್ಯಕ್ತಿ ತನಗೆ 60 ವರ್ಷದ ನಂತರ 1,000 ರುಪಾಯಿ ಪೆನ್ಷನ್ ಬರಬೇಕು ಎಂದು ಗುರಿ ಇರಿಸಿಕೊಂಡರೆ, ಈಗಿಂದ ತಿಂಗಳಿಗೆ 59 ರುಪಾಯಿ ಪಾವತಿಸಬೇಕು. ಅದೇ ಠೇವಣಿದಾರರು 5000 ರುಪಾಯಿಯನ್ನು ತಿಂಗಳ ಪೆನ್ಷನ್ ಪಡೆಯಬೇಕು ಅಂದರೆ ಈಗಿಂದ ತಿಂಗಳಿಗೆ 292 ರುಪಾಯಿ ಕಟ್ಟಬೇಕು. ಅದು ದಿನಕ್ಕೆ 10 ರುಪಾಯಿಗಿಂತ ಕಮ್ಮಿ ಆಗುತ್ತದೆ. ಒಬ್ಬ ವ್ಯಕ್ತಿ 18ನೇ ವಯಸ್ಸಿಗೆ ಈ ಸ್ಕೀಂನಲ್ಲಿ ಹಣ ತೊಡಗಿಸಲು ಆರಂಭಿಸಬಹುದು. ಅದು 39ನೇ ವಯಸ್ಸಿನ ತನಕ ಕಟ್ಟಬೇಕಾಗುತ್ತದೆ. ಆದರೆ ಆ ವ್ಯಕ್ತಿಗೆ 60 ವರ್ಷ ತುಂಬಿದ ಮೇಲೆ ಪೆನ್ಷನ್ ನೀಡಲಾಗುತ್ತದೆ.

ಠೇವಣಿದಾರರ ಸಾವು ಸಂಭವಿಸಿದಲ್ಲಿ ಮುಂದೇನು?

ಠೇವಣಿದಾರರ ಸಾವು ಸಂಭವಿಸಿದಲ್ಲಿ ಮುಂದೇನು?

ಒಂದು ವೇಳೆ ಠೇವಣಿದಾರರ ಸಾವು ಸಂಭವಿಸಿದಲ್ಲಿ ಪತಿ/ಪತ್ನಿ ಅಥವಾ ನಾಮಿನಿ (ಒಂದು ವೇಳೆ ಠೇವಣಿದಾರರು ಹಾಗೂ ಸಂಗಾತಿ ಇಬ್ಬರೂ ಮೃತಪಟ್ಟಲ್ಲಿ) ಪೆನ್ಷನ್ ಕ್ಲೇಮ್ ಮಾಡಬಹುದು. ಪಂದು ವೇಳೆ ಠೇವಣಿದಾರರಿಗೆ 60 ವಯಸ್ಸು ತುಂಬುವ ಮುನ್ನವೇ ಸಾವು ಬಂದಲ್ಲಿ ಸಂಗಾತಿಯು ಆ ಯೋಜನೆ ಮುಂದುವರಿಸಬಹುದು. ಅಥವಾ ಈಗಿನ ಸ್ಕೀಮ್ ನ ಒಟ್ಟು ಮೊತ್ತ ಕ್ಲೇಮ್ ಮಾಡಬಹುದು. ಆದ್ದರಿಂದ ಅವಧಿಪೂರ್ವವಾಗಿಯೇ ಈ ಸ್ಕೀಂನಿಂದ ಹೊರಬರುವುದಕ್ಕೆ ಇಂಥ ಸಂದರ್ಭದಲ್ಲಿ ಅವಕಾಶಗಳಿವೆ.

ಎಲ್ಲಿ ಖಾತೆ ತೆರೆಯಬಹುದು, ಅರ್ಜಿ ಸಲ್ಲಿಸುವುದು ಹೇಗೆ?

ಎಲ್ಲಿ ಖಾತೆ ತೆರೆಯಬಹುದು, ಅರ್ಜಿ ಸಲ್ಲಿಸುವುದು ಹೇಗೆ?

ಅಟಲ್ ಪೆನ್ಷನ್ ಯೋಜನಾಗೆ ಅಪ್ಲೈ ಮಾಡಲು ಯಾವುದೇ ಬ್ಯಾಂಕ್ ಗೆ ಭೇಟಿ ನೀಡಿ, ಎಪಿವೈ ಖಾತೆ ಆರಂಭಿಸಬಹುದು. ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಈ ಯೋಜನೆ ಖಾತೆ ತೆರೆಯಬಹುದು. ಈ ಸ್ಕೀಂ ಅರ್ಜಿಗಳು ಆನ್ ಲೈನ್ ನಲ್ಲಿ ದೊರೆಯುತ್ತವೆ. ಬ್ಯಾಂಕ್ ಗಳ ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಬಹುದು. ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ, ಮರಾಠಿ, ಒಡಿಯಾ ಹಾಗೂ ಬೆಂಗಾಲಿ ಭಾಷೆಗಳಲ್ಲೂ ಅರ್ಜಿ ಲಭ್ಯ ಇವೆ. ಅರ್ಜಿ ತುಂಬಿ ಆಯಾ ಬ್ಯಾಂಕ್ ಗೆ ಸಲ್ಲಿಸಬೇಕು. ಇದಕ್ಕಾಗಿ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನ ನಕಲು ಪ್ರತಿ ನೀಡಬೇಕಾಗುತ್ತದೆ. ಅರ್ಜಿ ಮಂಜೂರಾದ ಮೇಲೆ ಈ ಸಂಬಂಧವಾಗಿ ಖಾತ್ರಿ ಮೆಸೇಜ್ ಬರುತ್ತದೆ.

English summary

Atal Pension Scheme: Save Less Than 10 Rupees Per Day And Get 5000 Monthly Pension

Atal Pension Scheme will provide 5000 monthly pension for depositor who saves less than 10 rupees per day. Here is the calculation based on age.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X