Atal Pension Yojana: ವಯಸ್ಸಾದ ನಂತರ ಮುಂದೇನು ಮಾಡವುದು ಎಮದು ಯೋಜನೆ ಮಾಡುತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿ ನಿಮಗಾಗಿ.. ಹೌದು,ಕೇಂದ್ರ ಸರ್ಕಾರ ವಿವಿಧ ವರ್ಗಗಳಿಗೆ ಸಹಾಯವಾಗಲಿ ಎಂದು ಹಲವಾರು ಯೋಜನೆಗಳನನ್ನು ಜಾರಿಗೆ ತಂದಿದೆ. ಅಂತಹ ಜನಪ್ರಿಯ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಒಂದಾಗಿದೆ. ಇದು ಒಂದು ಉಳಿತಾಯ ಯೋಜನೆಯಾಗಿದೆ. ವಿಶೇಷವಾಗಿ ವೃದ್ಧಾಪ್ಯದ ಜೀವನವ್ನನು ಸುಗಮವಾಗಿ ಕಳೆಯಲು ಈ ಯೋಜನೆ ಬೆಸ್ಟ್ ಎಂದೇ ಹೇಳಬಹುದು.

ಕಡಿಮೆ ಆದಾಯದಿಂದ ವೃದ್ಧಾಪ್ಯವರೆಗೆ ಏನನ್ನಾದರೂ ಉಳಿಸಲು ಬಯಸುವವರಿಗೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) ಹೆಚ್ಚಿನ ಬಡ್ಡಿದರವನ್ನು ನೀಡಿ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗುತ್ತದೆ. 18 ರಿಂದ 40 ವರ್ಷ ವಯಸ್ಸಿನವರು ಇದರ ಲಾಭ ಪಡೆಯಬಹುದು. ನಿಮ್ಮ ವಯಸ್ಸು 18 ವರ್ಷದಿಂದ 40 ವರ್ಷ ವಯಸ್ಸಿನವರಾಗಿದ್ದು, ನೀವು ಆದಾಯ ತೆರಿಗೆ ಪಾವತಿಸದಿದ್ದರೆ, ನೀವು ಈ ಯೋಜನೆಗೆ ಅರ್ಹತೆಯನ್ನು ಹೊಂದುವಿರಿ. ಈ ಯೋಜನೆಯ ದೊಡ್ಡ ಪ್ರಯೋಜನವೆಂದರೆ ನೀವು ನಿಮ್ಮ ವಯಸ್ಸಿಗೆ ಅನುಗುಣವಾಗಿ ಸಣ್ಣ ಮೊತ್ತವನ್ನು ಕಂತುಗಳಲ್ಲಿ ಹೂಡಿಕೆ ಮಾಡಬಹುದು ಮತ್ತು 60 ವರ್ಷದ ನಂತರ ಪ್ರತಿ ತಿಂಗಳು 1,000 ರಿಂದ 5,000 ವರೆಗೆ ನಿವೃತ್ತಿ ಪಿಂಚಣಿಯನ್ನು ಪಡೆಯಲು ಸಹಾಯಕವಾಗುತ್ತದೆ.
ನೀವು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಬ್ಯಾಂಕ್ ಖಾತೆಯಿಂದ ನೇರವಾಗಿ ಕೊಡುಗೆ ಆಯ್ಕೆ ಲಭ್ಯವಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನಿಮಗೆ ಬ್ಯಾಂಕ್ ಖಾತೆಯ ಅಗತ್ಯವಿದೆ. ಕೊಡುಗೆ ಮೊತ್ತವನ್ನು ನಿಮ್ಮ ಖಾತೆಯಿಂದ ಪ್ರತಿ ತಿಂಗಳು, ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ ಪ್ರತಿ ಆರು ತಿಂಗಳಿಗೊಮ್ಮೆ ಕಡಿತಗೊಳಿಸಬೇಕೆ ಎಂದು ನೀವು ನಿರ್ಧರಿಸಬಹುದು. ನೀವು ನೋಂದಾಯಿಸಿದ ನಂತರ, ನೀವು 60 ವರ್ಷ ವಯಸ್ಸಿನವರೆಗೆ ನಿಯಮಿತವಾಗಿ ನಿಮ್ಮಗೆ ಈ ಯೋಜನೆಯ ಬಡ್ಡಿ ದರ ಸಿಗುತ್ತದೆ.
ನೀವು 5000 ರೂಪಾಯಿ ಪಿಂಚಣಿ ಪಡೆಯಲು ಎಷ್ಟು ಹೂಡಿಕೆ ಬೇಕು?
ಈ ಯೋಜನೆಗೆ ನೀವು ಸೇರುವ ವಯಸ್ಸನ್ನು ಅವಲಂಬಿಸಿ ಹೂಡಿಕೆಯ ಮೊತ್ತ ಬದಲಾಗುತ್ತದೆ. ಕೆಲವು ಉದಾಹರಣೆಗಳನ್ನು ತಿಲೀದುಕೊಳ್ಳೋಣ ಬನ್ನಿ.
ನೀವು 18 ನೇ ವಯಸ್ಸಿನಲ್ಲಿ ಪ್ರಾರಂಭಿಸಿದರೆ, ನೀವು ಪ್ರತಿ ತಿಂಗಳು 210 ಮಾತ್ರ ಪಾವತಿಯನ್ನು ಮಾಡಬೇಕಾಗುತ್ತದೆ.
25 ನೇ ವಯಸ್ಸಿನಲ್ಲಿ, ಆರಂಬಿಸಿದ್ದರೆ ನೀವು ತಿಂಗಳಿಗೆ 376, ಮೂರು ತಿಂಗಳಿಗೆ 1121 ಅಥವಾ ಅರ್ಧ ವರ್ಷಕ್ಕೆ 2219 ಪಾವತಿಸಬೇಕಾಗುತ್ತದೆ.
30 ನೇ ವಯಸ್ಸಿನಲ್ಲಿ, ನೀವು ತಿಂಗಳಿಗೆ 577 ರೂ, ಮೂರು ತಿಂಗಳಿಗೆ 1720 ಅಥವಾ ಅರ್ಧ ವರ್ಷಕ್ಕೆ 3405 ಕೊಡುಗೆ ನೀಡಬೇಕಾಗುತ್ತದೆ.
35 ನೇ ವಯಸ್ಸಿನಲ್ಲಿ, ಈ ಮೊತ್ತವು ತಿಂಗಳಿಗೆ 902 ಹೂಡಿಕೆಯನ್ನು ಮಾಡಬೇಕಾಗುತ್ತದೆ.
ನೀವು 40 ನೇ ವಯಸ್ಸಿನಲ್ಲಿ ಪ್ರಾರಂಭಿಸಿದರೆ, ನೀವು ಪ್ರತಿ ತಿಂಗಳು ಸುಮಾರು1454 ರೂ ಠೇವಣಿ ಇಡಬೇಕಾಗುತ್ತದೆ.
ಸುಲಭ ನೋಂದಣಿ ಪ್ರಕ್ರಿಯೆ
ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಅಗತ್ಯ. ನೀವು ಈಗಾಗಲೇ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಅದನ್ನು APY ಗೆ ಲಿಂಕ್ ಮಾಡಬೇಕು. ಇದರಲ್ಲಿ ನೀವು ತಿಂಗಳು, ಮೂರು ತಿಂಗಳು ಅರ್ಧ ವರ್ಷದ ಆಯ್ಕೆಯನ್ನು ಆಯ್ಕೆ ಮಾಡಬಹುದು.
ಅಟಲ್ ಪಿಂಚಣಿ ಯೋಜನೆಯ ಪ್ರಯೋಜನ?
- ಅಟಲ್ ಪಿಂಚಣಿ ಯೋಜನೆಯು ಸುಲಭ ಮತ್ತು ವಿಶ್ವಾಸಾರ್ಹ ಯೋಜನೆಯಾಗಿದೆ
- ವೃದ್ಧಾಪ್ಯದಲ್ಲಿ ಸ್ಥಿರ ಪಿಂಚಣಿ ಸೌಲಭ್ಯ ನಿಮ್ಮಗೆ ಸಿಗುತ್ತದೆ.
- ಸರ್ಕಾರವು ಹೆಚ್ಚಿನ ಬಡ್ಡಿ ದರವನ್ನು ಕೊಡುತ್ತದೆ.
- ನೋಂದಣಿ ಮತ್ತು ಪಾವತಿ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ.
- ಕಡಿಮೆ ಆದಾಯದಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದು.
ನೀವು ಚಿಕ್ಕ ಮಯಸ್ಸಿನಿಂದಲ್ಲೇ ಮುಂದಿನ ಭವಿಷ್ಯಕ್ಕಾಗಿ ಏನನ್ನಾದರೂ ಉಳಿತಾಯವನ್ನು ಮಾಡಲು ಬಯಸಿದ್ದರೆ
ಅಟಲ್ ಪಿಂಚಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಸಣ್ಣ ಪ್ರಮಾಣದ ಹಣವನ್ನು ಉಳಿಸುವ ಮೂಲಕ, ನೀವು 60 ವರ್ಷದ ನಂತರ ಪ್ರತಿತಿಂಗಳು ನಿರಂತರವಾದ ಆದಾಯವನ್ನು ಪಡೆಯಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications