ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಏರಿಕೆ ಮಾಡಿದೆ. ಆಕ್ಸಿಸ್ ಬ್ಯಾಂಕ್ 10 ಬಿಪಿಎಸ್‌ನಷ್ಟು ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ರೆಪೋ ದರವನ್ನು 10 ಮೂಲಾಂಕ ಅಥವಾ ಬೇಸಿಕ್ ಪಾಯಿಂಟ್ ಹೆಚ್ಚಳ ಮಾಡಿದೆ.
ನೂತನ ಎಂಸಿಎಲ್‌ಆರ್ ಪರಿಷ್ಕರಣೆಯು ಫೆಬ್ರವರಿ 19, 2023ರಿಂದ ಜಾರಿಗೆ ಬರಲಿದೆ. ಈ ಎಂಸಿಎಲ್‌ಆರ್ ಏರಿಕೆಯು ಪ್ರಮುಖವಾಗಿ ಗೃಹ, ಕಾರು, ಶಿಕ್ಷಣ, ವೈಯಕ್ತಿಕ ಸಾಲ, ಇತರೆ ಬಡ್ಡಿದರವು ಏರಿಕೆಯಾಗಿ, ಸಾಲವನ್ನು ಪಡೆದವರ ಮೇಲೆ ಪ್ರಭಾವ ಉಂಟು ಮಾಡಲಿದೆ. ಅಂದರೆ ಪ್ರತಿ ತಿಂಗಳು ಪಾವತಿ ಮಾಡುವ ಇಎಂಐ ಹೊರೆ ಅಧಿಕವಾಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಸತತ 6 ಬಾರಿ ಏರಿಕೆ ಮಾಡಿದೆ. ಸತತ ಹತ್ತು ತಿಂಗಳ ಕಾಲ ರೆಪೋ ದರವನ್ನು ಸ್ಥಿರವನ್ನಾಗಿಸಿದ್ದ ಆರ್‌ಬಿಐ ಕಳೆದ ವರ್ಷ 2022ರ ಮೇ ತಿಂಗಳಿನಿಂದ ರೆಪೋ ದರವನ್ನು ಹೆಚ್ಚಿಸುತ್ತಾ ಬಂದಿದೆ. ಮೇ ತಿಂಗಳಿನಲ್ಲಿ 40 ಬಿಪಿಎಸ್ ಏರಿಸಿದ್ದರೆ, ಅದಾದ ಬಳಿಕ ಸತತ ಐದು ಬಾರಿ ಆರ್‌ಬಿಐ ತನ್ನ ರೆಪೋ ದರವನ್ನು ಏರಿಸಿದೆ. ಅದಾದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ, ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಆಕ್ಸಿಸ್ ಬ್ಯಾಂಕ್ ಎಂಸಿಎಲ್‌ಆರ್ ಬಗ್ಗೆ ಮಾಹಿತಿ
ಆಕ್ಸಿಸ್ ಬ್ಯಾಂಕ್‌ನ ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 8.60ರಿಂದ ಶೇಕಡ 8.70ಕ್ಕೆ ಏರಿಕೆಯಾಗಿದೆ. 3 ತಿಂಗಳ ಎಂಸಿಎಲ್‌ಆರ್ ಶೇಕಡ 8.70ರಿಂದ ಶೇಕಡ 8.80ಕ್ಕೆ ಏರಿಕೆಯಾಗಿದೆ. ಆರು ತಿಂಗಳ ಅವಧಿಯ ಎಂಸಿಎಲ್‌ಆರ್ ಶೇಕಡ 8.75ರಿಂದ ಶೇಕಡ 8.85ಕ್ಕೆ ಹೆಚ್ಚಳವಾಗಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.80ರಿಂದ ಶೇಕಡ 8.90ಕ್ಕೆ ಏರಿಸಿದೆ. ಇನ್ನು 2 ವರ್ಷದ ಎಂಸಿಎಲ್‌ಆರ್ ಶೇಕಡ 8.90ರಿಂದ ಶೇಕಡ 9.00ಕ್ಕೆ ಹೆಚ್ಚಳವಾಗಿದೆ. ಹಾಗೆಯೇ 3 ವರ್ಷದ ಎಂಸಿಎಲ್‌ಆರ್ ಶೇಕಡ 8.95ರಿಂದ ಶೇಕಡ 9.05ಕ್ಕೆ ಹೆಚ್ಚಳ ಮಾಡಲಾಗಿದೆ.
ಸಾಲದ ಬಡ್ಡಿದರ, ಎಫ್‌ಡಿ ಏರಿಸಿದ ಹಲವು ಬ್ಯಾಂಕುಗಳು
ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಏರಿಸುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಆಕ್ಸಿಸ್ ಬ್ಯಾಂಕ್ ಎಂಸಿಎಲ್‌ಆರ್ ಏರಿಕೆಯ ಬಗ್ಗೆ ನಿರ್ಧಾರ ಮಾಡಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ 5 ಮೂಲಾಂಕ ಎಂಸಿಎಲ್‌ಆರ್ ಅನ್ನು ಏರಿಸಿದೆ. ಫೆಬ್ರವರಿ 16, 2023ರಿಂದ ಜಾರಿಗೆ ಬರುವಂತೆ ಈ ಮೂಲಾಂಕ ಏರಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಬಾರಿ ಫೆಬ್ರವರಿ 8, 2023ರಂದು 25 ಮೂಲಾಂಕ ಬಡ್ಡಿದರವನ್ನು ಏರಿಸಿದೆ. ಇನ್ನು ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಾಲದ ಬಡ್ಡಿದರ ಮತ್ತು ಎಫ್‌ಡಿ ಬಡ್ಡಿದರವನ್ನು ಏರಿಸಿದೆ.
ಎಂಸಿಎಲ್‌ಆರ್ ಏರಿಸಿದರೆ ಗ್ರಾಹಕರ ಮೇಲೆ ಪ್ರಭಾವವೇನು?
ಯಾವುದೇ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಏರಿಸಿದರೆ ಅದರ ನೇರ ಪ್ರಭಾವ ಜನರ ಮೇಲೆ ಉಂಟಾಗಲಿದೆ. ಪ್ರಮುಖವಾಗಿ ಇಎಂಐ ಹೊರೆ ಹೆಚ್ಚಳವಾಗಲಿದೆ. ಎಂಸಿಎಲ್‌ಆರ್ ಎಂಬುವುದು ಗ್ರಾಹಕರು ಸಾಲವನ್ನು ಪಡೆಯುವ ಬಡ್ಡಿದರವಾಗಿದೆ. ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಏರಿಸಿದರೆ, ಸಾಲದ ಬಡ್ಡಿದರ ಸ್ವಯಂ ಏರಿಕೆಯಾಗುತ್ತದೆ. ಅಂದರೆ ಮಾಸಿಕವಾಗಿ ಅಧಿಕ ಸಾಲದ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.


Click it and Unblock the Notifications