ಭಾರತದ ಪ್ರಮುಖ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ತನ್ನ ಕನಿಷ್ಠ ವೆಚ್ಚದ ಸಾಲದ ದರವನ್ನು (MCLR) ಹೆಚ್ಚಿಸಿದೆ. ಈ ಬಗ್ಗೆ ಬ್ಯಾಂಕ್ ಮೇ 18ರ ಬುಧವಾರದಂದು ಅಧಿಸೂಚನೆಯಲ್ಲಿ ತಿಳಿಸಿದೆ. ಸಾಲದ ದರದ ಕನಿಷ್ಠ ವೆಚ್ಚ ಅಥವಾ ಎಂಸಿಎಲ್ಆರ್ ವಿವಿಧ ಸಾಲದ ಬಡ್ಡಿದರವನ್ನು ನಿರ್ಧಾರ ಮಾಡುವಲ್ಲಿ ಪ್ರಮುಖ ಅಂಶವಾಗಿದೆ.
ಸಾಲದ ದರವನ್ನು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಹೊಸ ದರಗಳು ಇಂದಿನಿಂದ ಅಂದರೆ ಮೇ 18 ರಿಂದ ಜಾರಿಗೆ ಬರಲಿವೆ ಎಂದು ಕೂಡಾ ಬ್ಯಾಂಕ್ ಮಾಹಿತಿ ನೀಡಿದೆ. ಅಂದರೆ ಎಂಸಿಎಲ್ಆರ್ ಹೆಚ್ಚಳದೊಂದಿಗೆ ಸಾಲದ ಬಡ್ಡಿದರವು ಕೂಡಾ ಏರಿಕೆಯಾಗುತ್ತದೆ.
ಎಂಸಿಎಲ್ಆರ್ ಏರಿಕೆ ಬಳಿಕ ಆಕ್ಸಿಸ್ ಬ್ಯಾಂಕ್‌ನ ಒಂದು ತಿಂಗಳ ಎಂಸಿಎಲ್ಆರ್ ದರವು ಈಗ ಶೇಕಡಾ 7.55 ರಷ್ಟಿದೆ. ಈ ಮೊದಲು ಶೇ.7.20 ಇತ್ತು. ಮೂರು ತಿಂಗಳಿಗೆ ಎಂಸಿಎಲ್ಆರ್ ಅನ್ನು ಶೇ 7.30 ರಿಂದ ಶೇ 7.65 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಆರು ತಿಂಗಳವರೆಗೆ ಆಕ್ಸಿಸ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇ 7.35 ರಿಂದ ಶೇ 7.70 ಕ್ಕೆ ಹೆಚ್ಚಿಸಲಾಗಿದೆ.

ಅದೇ ರೀತಿ, ಒಂದು ವರ್ಷದ ಎಂಸಿಎಲ್ಆರ್ ಅನ್ನು ಶೇಕಡಾ 7.40 ರಿಂದ ಶೇಕಡಾ 7.75 ಕ್ಕೆ ಏರಿಸಲಾಗಿದೆ. ಎರಡು ವರ್ಷಗಳ ಎಂಸಿಎಲ್ಆರ್ ಶೇ.7.50ರಿಂದ ಶೇ.7.85ಕ್ಕೆ ಜಿಗಿದಿದೆ. ಮೂರು ವರ್ಷಗಳ ಅವಧಿಯ ಪ್ರಮುಖ ಸಾಲದ ದರವನ್ನು ಶೇಕಡಾ 7.55 ರಿಂದ ಶೇಕಡಾ 7.90 ಕ್ಕೆ ಏರಿಸಲಾಗಿದೆ. ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್‌ನ ಪ್ರಕಾರ, 2022 ರ ಮೇ 18 ರಿಂದ ಅನ್ವಯವಾಗುವ ಅವಧಿ-ವಾರು ಎಂಸಿಎಲ್ಆರ್ ಇಲ್ಲಿದೆ:
ನೂತನ ಎಂಸಿಎಲ್ಆರ್ ಎಷ್ಟು?
* ಒಂದು ರಾತ್ರಿ ಸಮಯ: ಹಳೆಯ ದರ - 7.20 ಶೇಕಡಾ; ಹೊಸ ದರ - 7.55 ಶೇಕಡಾ
* ಒಂದು ತಿಂಗಳು: ಹಳೆಯ ದರ - 7.20 ಶೇಕಡಾ; ಹೊಸ ದರ - 7.55 ಶೇಕಡಾ
* ಮೂರು ತಿಂಗಳು: ಹಳೆಯ ದರ - 7.30 ಪ್ರತಿಶತ; ಹೊಸ ದರ - 7.65 ಶೇಕಡಾ
* ಆರು ತಿಂಗಳು: ಹಳೆಯ ದರ - ಶೇಕಡಾ 7.35; ಹೊಸ ದರ 7.70 ಶೇಕಡಾ
* ಒಂದು ವರ್ಷ: ಹಳೆಯ ದರ - 7.40 ಶೇಕಡಾ; ಹೊಸ ದರ ಶೇಕಡಾ 7.75
* ಎರಡು ವರ್ಷಗಳು: ಹಳೆಯ ದರ - 7.50 ಪ್ರತಿಶತ; ಹೊಸ ದರ ಶೇಕಡಾ 7.85
* ಮೂರು ವರ್ಷಗಳು: ಹಳೆಯ ದರ - 7.55 ಶೇಕಡಾ; ಹೊಸ ದರ 7.90 ಶೇಕಡಾ
ಮೇ 4 ರಂದು ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳು ಅಥವಾ ಶೇಕಡಾ 4.40 ರಷ್ಟು ಹೆಚ್ಚಿಸಿದೆ. ಇದಾದ ಎರಡು ವಾರಗಳ ನಂತರ ಆಕ್ಸಿಸ್ ಬ್ಯಾಂಕ್ ಎಂಸಿಎಲ್ಆರ್ ದರ ಏರಿಕೆ ಮಾಡಿದೆ. ಇನ್ನು ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಸಿಎಲ್ಆರ್ ದರವನ್ನು ಏರಿಕೆ ಮಾಡಿದೆ.


Click it and Unblock the Notifications