ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಯ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಪ್ರಸ್ತುತ ಆಕ್ಸಿಸ್ ಬ್ಯಾಂಕ್‌ನ ಉಳಿತಾಯ ಖಾತೆ ಬಡ್ಡಿದರವು ಶೇಕಡ 3ರಿಂದ ಶೇಕಡ 3.5ರ ನಡುವೆ ಇದೆ. ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದರ ಆಧಾರದಲ್ಲಿ ಬಡ್ಡಿದರ ಲಭ್ಯವಾಗಲಿದೆ. ಆಕ್ಸಿಸ್ ಬ್ಯಾಂಕ್‌ನಲ್ಲಿ ಈ ಹಿಂದೆ ಎಫ್‌ಡಿ ಬಡ್ಡಿದರವನ್ನು ಕೂಡಾ ಪರಿಷ್ಕರಣೆ ಮಾಡಲಾಗಿದೆ.
ಆಕ್ಸಿಸ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯ ಬಡ್ಡಿದರವನ್ನು ದೈನಂದಿನ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ತ್ರೈಮಾಸಿಕವಾಗಿ ನಿಮ್ಮ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. ಇನ್ನು ಬ್ಯಾಂಕ್ ಏಪ್ರಿಲ್ ಕೊನೆಯ ವಾರದಲ್ಲಿ ತನ್ನ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕಡಿತಗೊಳಿಸಿದೆ. ಅದಕ್ಕೂ ಮುನ್ನ ಹಲವಾರು ಬಾರಿ ದರ ಹೆಚ್ಚಳ ಮಾಡಲಾಗಿದೆ. ಇನ್ನು ಆಕ್ಸಿಸ್ ಬ್ಯಾಂಕ್‌ನ ಉಳಿತಾಯ ಖಾತೆಯ ಬಡ್ಡಿದರದ ಬಗ್ಗೆ ಅಧಿಕ ಮಾಹಿತಿ ತಿಳಿಯೋಣ ಮುಂದೆ ಓದಿ....

ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿದರ
"ಜುಲೈ 1, 2023ರಿಂದ ಜಾರಿಗೆ ಬರುವಂತೆ ಆಕ್ಸಿಸ್ ಬ್ಯಾಂಕ್‌ನ ಉಳಿತಾಯ ಖಾತೆಯ ಬಡ್ಡಿದರವನ್ನು ಪರಿಷ್ಕರಣೆ ಮಾಡಲಾಗುತ್ತದೆ," ಎಂದು ಆಕ್ಸಿಸ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಮುಖ್ಯವಾಗಿ ನಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇರುತ್ತದೆಯೋ ಅದರ ಆಧಾರದಲ್ಲಿ ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್‌ನಲ್ಲಿ ನೀಡಲಾಗುತ್ತದೆ.
ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿರುವ ಮಾಹಿತಿಯ ಪ್ರಕಾರ ಆಕ್ಸಿಸ್ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 50 ಲಕ್ಷ ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಶೇಕಡ 3ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. 50 ಲಕ್ಷ ರೂಪಾಯಿಗಿಂತ ಹೆಚ್ಚು ಆದರೆ 2000 ಕೋಟಿ ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಆಕ್ಸಿಸ್ ಬ್ಯಾಂಕ್‌ನಲ್ಲಿ ಶೇಕಡ 3.50ರಷ್ಟು ಬಡ್ಡಿದರವನ್ನು ತ್ರೈಮಾಸಿಕ ಆಧಾರದಲ್ಲಿ ಜಮೆ ಮಾಡಲಾಗುತ್ತದೆ.
"2000 ಕೋಟಿ ರೂಪಾಯಿವರೆಗೆ ಮೊತ್ತಕ್ಕೆ ಬ್ಯಾಲೆನ್ಸ್ ಸ್ಲ್ಯಾಬ್ ಲೆಕ್ಕಾಚಾರದಲ್ಲಿ ಬಡ್ಡಿದರವನ್ನು ಜಮೆ ಮಾಡಲಾಗುತ್ತದೆ, ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ 2000 ಕೋಟಿ ರೂಪಾಯಿಗಿಂತ ಅಧಿಕ ಬ್ಯಾಲೆನ್ಸ್‌ಗೆ ಒಟ್ಟು ಮೊತ್ತ ಎಷ್ಟಿದೆ ಎಂದು ನೋಡಿಕೊಂಡು ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ," ಎಂದು ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಹಲವಾರು ರೀತಿಯ ಉಳಿತಾಯ ಖಾತೆ
ಆಕ್ಸಿಸ್ ಬ್ಯಾಂಕ್‌ನಲ್ಲಿ ಹಲವಾರು ರೀತಿಯ ಉಳಿತಾಯ ಖಾತೆಗಳುನ್ನು ತೆರೆಯುವ ಆಯ್ಕೆ ನಮಗಿದೆ. ಬೇಸಿಕ್ ಸೇವಿಂಗ್ಸ್ ಅಕೌಂಟ್, ಡಿಜಿಟಲ್ ಸೇವಿಂಗ್ಸ್ ಅಕೌಂಟ್, ಈ ರೀತಿ ಬೇರೆ ಬೇರೆ ವಿಧದ ಉಳಿತಾಯ ಖಾತೆಗಳ ಆಯ್ಕೆ ನಮಗೆ ಆಕ್ಸಿಸ್ ಬ್ಯಾಂಕ್‌ನಲ್ಲಿದೆ. ಸಾಮಾನ್ಯ ಉಳಿತಾಯ ಖಾತೆ, ಸ್ಯಾಲರಿ ಅಕೌಂಟ್, ಹಿರಿಯ ನಾಗರಿಕರ ಉಳಿತಾಯ ಖಾತೆ, ಜಿರೋ ಬ್ಯಾಲೆನ್ಸ್ ಉಳಿತಾಯ ಖಾತೆ ಎಂಬ ಮೊದಲಾದ ಉಳಿತಾಯ ಖಾತೆಗಳ ಆಯ್ಕೆ ಆಕ್ಸಿಸ್ ಬ್ಯಾಂಕ್‌ನಲ್ಲಿದೆ.
"ನಿಮ್ಮ ಉಳಿತಾಯ ಖಾತೆಯಿಂದ ನೀವು ಪಡೆಯುವ ಬಡ್ಡಿದರವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಬ್ಯಾಂಕ್ ನೀಡುವ ಉಳಿತಾಯ ಖಾತೆ ಬಡ್ಡಿ ದರ ಮತ್ತು ನಿಮ್ಮ ಮಾಸಿಕ ಬ್ಯಾಲೆನ್ಸ್ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ ನಿಮ್ಮ ಉಳಿತಾಯ ಖಾತೆಯಲ್ಲಿ 20000 ರೂಪಾಯಿ ಇದೆ ಎಂದಾದರೆ, ವಾರ್ಷಿಕವಾಗಿ ಶೇಕಡ 3ರಷ್ಟು ಬಡ್ಡಿದರ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ 600 ರೂಪಾಯಿ ಬಡ್ಡಿದದರವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ."
ಪ್ರಧಾನ ಮಂತ್ರಿ ಜನ- ಧನ ಯೋಜನೆಯ ಭಾಗವಾಗಿ ಆಕ್ಸಿಸ್ ಬ್ಯಾಂಕ್ ಜಿರೋ ಬ್ಯಾಲೆನ್ಸ್ ಸೇವಿಂಗ್ಸ್ ಅಕೌಂಟ್ ಅನ್ನು ನೀಡುತ್ತದೆ. ಇದನ್ನು ಬೇಸಿಕ್ ಸೇವಿಂಗ್ಸ್ ಅಕೌಂಟ್ ಎಂದು ಕೂಡಾ ಕರೆಯಲಾಗುತ್ತದೆ. ಈ ಖಾತೆಯಲ್ಲಿರುವ ಯಾವುದೇ ಮೊತ್ತಕ್ಕೂ ಪ್ರತಿ ದಿನ ಶೇಕಡ 3-4ರಷ್ಟು ಬಡ್ಡಿದರ ನೀಡಲಾಗುತ್ತದೆ. ತ್ರೈಮಾಸಿಕ ಆಧಾರದಲ್ಲಿ ಅದನ್ನು ಜಮೆ ಮಾಡಲಾಗುತ್ತದೆ.


Click it and Unblock the Notifications