ಭಾರತದಲ್ಲಿನ ಸಿಟಿ ಬ್ಯಾಂಕ್ ಗ್ರಾಹಕರ ವಹಿವಾಟು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಮಾರ್ಚ್ 1ರಿಂದ ಅನ್ವಯವಾಗುವಂತೆ ವಿಲೀನವಾಗಿದೆ. ಭಾರತದ ಮೂರನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ಕೊನೆಗೂ ಸಿಟಿಬ್ಯಾಂಕ್ ಅನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಸಿಟಿಬ್ಯಾಂಕ್‌ನ ಹಣಕಾಸೇತರ ಸಂಸ್ಥೆ ಸಿಟಿಕಾರ್ಪ್ ಫೈನಾನ್ಸ್ (ಇಂಡಿಯಾ) ಲಿಮಿಟೆಡ್ ಕೂಡಾ ವಿಲೀನವಾಗಿದೆ. ಈ ವಿಲೀನ ಪ್ರಕ್ರಿಯೆಯು ಸುಮಾರು 11,603 ಕೋಟಿ ರೂಪಾಯಿದ್ದಾಗಿದೆ.
ಸಿಟಿಬ್ಯಾಂಕ್‌ನ ಸೇವೆಯನ್ನು ಇನ್ನು ಮುಂದೆ ಆಕ್ಸಿಸ್ ಬ್ಯಾಂಕ್ ನೀಡುತ್ತದೆ ಎಂದು ಸಿಟಿಬ್ಯಾಂಕ್ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಕ್ರೆಡಿಟ್ ಕಾರ್ಡ್, ಗೃಹ ಸಾಲ, ಸಾಲ, ಬ್ಯಾಂಕಿಂಗ್ ಮೊದಲಾದವುಗಳಲ್ಲಿ ಬದಲಾವಣೆಯಾಗಲಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್ ವಿಲೀನವಾದ ಬಳಿಕ ಸಿಟಿಬ್ಯಾಂಕ್ ಗ್ರಾಹಕರಲ್ಲಿ ಹಲವಾರು ಗೊಂದಲಗಳಿದೆ. ನಮ್ಮ ಸಿಟಿ ಕ್ರೆಡಿಟ್ ಕಾರ್ಡ್, ಸಿಟಿ ಡೆಬಿಟ್ ಕಾರ್ಡ್, ಉಳಿತಾಯ, ಎನ್‌ಆರ್‌ಇ ಖಾತೆ, ಗೃಹ ಸಾಲದ ಗತಿಯೇನು ಅಂದುಕೊಂಡಿದ್ದಾರೆ. ಇದಕ್ಕೆ ಇಲ್ಲಿದೆ ಉತ್ತರ... ಮುಂದೆ ಓದಿ...
ಖಾತೆ ವಿವರ ಅದೇ ಇರಲಿದೆಯೇ?
ಸಿಟಿ ಬ್ಯಾಂಕ್ ಅನ್ನು ಆಕ್ಸಿಸ್ ಬ್ಯಾಂಕ್ ಜೊತೆ ವಿಲೀನಗೊಳಿಸಿದ ಬಳಿಕವೂ ಸಿಟಿ ಬ್ಯಾಂಕ್ ಖಾತೆ ಅದೇ ಆಗಿರುತ್ತದೆ. ಯಾವುದೇ ಬದಲಾವಣೆಯಿಲ್ಲದೇ ಖಾತೆ, ಡೆಬಿಟ್ ಕಾರ್ಡ್, ಚೆಕ್ ಬಳಸಬಹುದಾಗಿದೆ. ಆದರೆ ಕೆಲವು ಬದಲಾವಣೆಗಳ ಸಾಧ್ಯತೆಯಿದೆ. ಆಕ್ಸಿಸ್ ಬ್ಯಾಂಕ್ ದರದ ಆಧಾರದಲ್ಲಿ ಉಳಿತಾಯ ಖಾತೆಯ ಮೇಲೆ ಅಧಿಕ ಬಡ್ಡಿದರ ಜಮೆಯಾಗಬಹುದು. SWIFT ಕೋಡ್ ಪರಿಷ್ಕರಣೆಯಾಗಲಿದೆ. AXISINBB ಆಗಿರಲಿದೆ.
ಎಟಿಎಂ ಶುಲ್ಕ ಬದಲಾಗುತ್ತಾ?
ಯಾವುದೇ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ಸಿಟಿಬ್ಯಾಂಕ್ ಹೇಳಿದೆ. ನಿಮ್ಮ ಸಿಟಿಬ್ಯಾಂಕ್ ಎಟಿಎಂನಲ್ಲಿನ ಉಚಿತ ವಹಿವಾಟು ಸಂಖ್ಯೆಯನ್ನು ಆಕ್ಸಿಸ್ ಬ್ಯಾಂಕ್ ಎಟಿಎಂಗೂ ವಿಸ್ತರಣೆ ಮಾಡಲಾಗುತ್ತದೆ. ಉಚಿತ ವಹಿವಾಟಿಗಿಂತ ಅಧಿಕ ನಡೆಸಲಾಗುವ ವಹಿವಾಟಿಗೆ ಸಿಟಿಬ್ಯಾಂಕ್ ಎಟಿಎಂನಲ್ಲಿ ಈ ಹಿಂದೆ ಇದ್ದ ಶುಲ್ಕವು ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿಯೂ ಇರಲಿದೆ. ಹಾಗೆಯೇ ಡೆಬಿಟ್ ಕಾರ್ಡ್, ವಿತ್‌ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ.
ರಿವಾರ್ಡ್ ಪಾಯಿಂಟ್ ಹಾಗೆಯೇ ಇರಲಿದೆಯೇ?
ಸಿಟಿ ಬ್ಯಾಂಕ್ ಡೆಬಿಟ್ ಕಾರ್ಡ್‌ನಲ್ಲಿ ಲಭ್ಯವಾಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳು ಎಂದಿಗೂ ಕೂಡಾ ಹಾಗೆಯೇ ಇರಲಿದೆ. ಅದರಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಹಾಗೆಯೇ ಕ್ರೆಡಿಟ್ ಮಿತಿ ಕೂಡಾ ಅದೇ ಆಗಿರಲಿದೆ. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಬಿಲ್ಲಿಂಗ್ ಪ್ರಕ್ರಿಯೆ ಮತ್ತು ಸ್ಟೇಟ್‌ಮೆಂಟ್ ಜನರೇಷನ್‌ನಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ಹಾಗೆಯೇ ಬಡ್ಡಿದರವಾಗಲಿ, ಬೇರೆ ಶುಲ್ಕವಾಗಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.


Click it and Unblock the Notifications