ಇದೇ ಮೊದಲ ಬಾರಿಗೆ ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆಗಳನ್ನು ಪ್ರಾರಂಭಿಸಿದೆ. ಹಾಗಿದ್ರೆ ಯಾವೆಲ್ಲಾ ಪಾಲಿಸಿಗಳನ್ನು ಒಳಗೊಂಡಿದೆ. ಇದರ ಅನುಕೂಲಗಳೇನು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಭಾರತದಲ್ಲಿ ಬಜಾಜ್ ಅಲಿಯಾನ್ಸ್ ವಿಮೆ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ.ಇದು ಬಜಾಜ್ ಫಿನ್‌ಸರ್ವ್ ಮತ್ತು ಅಲಿಯಾನ್ಸ್ ಎಸ್ಇ ಗಳ ಜಂಟಿ ಉದ್ಯಮವಾಗಿ ಕಾರ್ಯವನ್ನು ನಿರ್ವಗಿಸುತ್ತದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಸೇವೆಗಳನ್ನು ಸಾರ್ವಕನಿಕರಿಗೆ ನೀಡುತ್ತದೆ. ಆದರೆ ಇದೀಗ ಮೊದಲ ಬಾರಿಗೆ ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆಗಳನ್ನು ಆರಂಭ ಮಾಡಿದೆ.

ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಜನರಿಗೆ ವೈದ್ಯಕೀಯ ಅಗತ್ಯತೆಗಳು, ಚಿಕಿತ್ಸಾ ವೆಚ್ಚಗಳು ಮತ್ತು ಮೂಲಸೌಕರ್ಯಗಳಿಗೆ ಅನುಗುಣವಾಗಿ ಆರೋಗ್ಯ ರಕ್ಷಣೆಯನ್ನು ನೀಡುವ ಸಲುವಾಗಿ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಮೂಲಕ "ರಾಜ್ಯವಾರು ಆರೋಗ್ಯ ವಿಮಾ ಪಾಲಿಸಿ"ಯನ್ನು ಬಿಡುಗಡೆ ಮಾಡಿದೆ.
ವಿಮಾದಾರರ ಪ್ರಕಾರ, ಈ ಯೋಜನೆಗಳು ಆರೋಗ್ಯ ವಿಮೆಯನ್ನು ಎಲ್ಲಾ ಪ್ರದೇಶಗಳ ನಾಗರಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ವಿಮಾದಾರರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ವಿಮಾ ಪಾಲಿಸಿಯ ಯೋಜನೆಗಳು ಬಹುಬೇಗನೆ ತಲುಪುವಂತಹ ಗುರಿಯನ್ನು ಹೊಂದಿವೆ ಎಂದು ಹೇಳಿದ್ಧಾರೆ.
ಬಜಾಜ್ ಅಲಿಯಾನ್ಸ್ ಆರೋಗ್ಯ ವಿಮೆ ಯೋಜನೆಯು ತನ್ನ ಪಾಲಿಸಿಯ ವಿಮಾದಾರರಿಗೆ ಅನುಕೂಲವಾಗುವಂತೆ ವಿಭಿನ್ನ ಯೋಜನೆಗಳನ್ನು ಪರಿಚಯಿಸಿದೆ.ಪ್ರಸ್ತುತ ಆರೋಗ್ಯ ಪರಿಸ್ಥಿತಿಗಳು, ಆಸ್ಪತ್ರೆಗಳ ವ್ಯವಸ್ಥೆ ಮತ್ತು ಚಿಕಿತ್ಸೆಯ ವೆಚ್ಚಗಳನ್ನು ಸೇವೆಗಳನ್ನು ಒದಗಿಸುತ್ತದೆ.
ವಿವಿಧ ರಾಜ್ಯಗಳಿಗಾಗಿ ಕಸ್ಟಮೈಸ್ಡ್ ಯೋಜನೆಗಳು
ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆ ಅಡಿಯಲ್ಲಿ 25 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವಿಶೇಷ ಯೋಜನೆಗಳನ್ನು ಆರಂಭಿಸಿದೆ. ಹಿಂದಿ ಭಾಷೆ ಮಾತನಾಡುವ ರಾಗ್ಯಗಳಿಗೆ "ಆಪ್ಕೆ ಲಿಯೆ" ಮತ್ತು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ "ಮೀ ಕೋಸಮ್" ಎಂಬ ಹೆಸರುಗಳೊಂದಿಗೆ ವಿಮಾ ಯೋಜನೆಗಳು ಸೇವೆಯನ್ನು ಬಜಾಜ್ ಅಲಿಯಾನ್ಸ್ ಒದಗಿಸಲಿದೆ.
ವಿಮಾ ಮೊತ್ತ
ರಾಜ್ಯವಾರು ಆರೋಗ್ಯ ವಿಮಾ ಯೋಜನೆ ವೈಯಕ್ತಿಕ ಮತ್ತು ಫ್ಲೋಟರ್ ಆಯ್ಕೆಗಳ ಮೂಲಕ ಲಭ್ಯವಿದೆ 5 ಲಕ್ಷದಿಂದ 20 ಲಕ್ಷದವರೆಗಿನ ವಿಮಾ ಮೊತ್ತವನ್ನು ಹೊಂದಿದೆ. ಒಳರೋಗಿಗಳಾಗಿ ಆಸ್ಪತ್ರೆಗೆ ದಾಖಲಾದಾಗ, ಡೇ ಕೇರ್ ಚಿಕಿತ್ಸೆಗಳು, ಅಂಗಾಂಗ ದಾನದ ಖರ್ಚುಗಳು, ರೋಬೋಟಿಕ್ ಶಸ್ತ್ರಚಿಕಿತ್ಸೆಗಳು ಮತ್ತು ಸ್ಟೆಮ್ ಸೆಲ್ ಚಿಕಿತ್ಸೆಗಳಂತಹ ಆಧುನಿಕ ಚಿಕಿತ್ಸೆಗಳ ವೆಚ್ಚವನ್ನೂ ಸಹ ಒಳಗೊಂಡಿದೆ.
ವಿಮಾಪಾಲಿಸಿ ನವೀಕರಣ
ನೀವು ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆ ಆಯ್ಕೆ ಮಾಡಿಕೊಂಡರೆ, ಪಾಲಿಸಿಗಳು ಜೀವಮಾನವಿಡೀ ಅಪ್ಡೇಟ್ಸ್ ಮಾಡುವಂತಹ ಸೌಲಭ್ಯವನ್ನು ಹೊಂದಿದೆ. ವಿಮಾ ಪಾಲಿಸಿಯನನದನು ಮಾಡಿಸಲು ಯಾವುದೇ ವಯಸ್ಸಿನ ಮಿತಿಯಂತೂ ಇರುವುದಿಲ್ಲ. ಅನಿಯಮಿತ ವಿಮಾ ಮೊತ್ತದ ಮರುಸ್ಥಾಪನೆ ಸೌಲಭ್ಯವಿದೆ. ಅಂದರೆ, ಒಂದೇ ಪಾಲಿಸಿ ವರ್ಷದಲ್ಲಿ ವಿಮಾ ಮೊತ್ತವನ್ನು ಅನೇಕ ಬಾರಿ ರೀಚಾರ್ಜ್ ಮಾಡಿಸಿಕೊಳ್ಳವಂತಹ ರಿಯಾತಿಗಳನ್ನು ಸಹ ನೀಡಲಾಗಿದೆ.
ಆರೋಗ್ಯ ವಿಮಾ ಪಾಲಿಸಿಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:
ಅನಿಯಮಿತ ವಿಮಾ ಮೊತ್ತ: ಒಂದು ಪಾಲಿಸಿ ವರ್ಷದಲ್ಲಿ ವಿಮಾ ಮೊತ್ತವನ್ನು ಹಲವು ಬಾರಿ ರೀಚಾರ್ಜ್ ಮಾಡಬಹುದು.
ಸೂಪರ್ ಕ್ಯುಮುಲೇಟಿವ್ ಬೋನಸ್: ಕ್ಲೈಮ್ ರಹಿತ ವರ್ಷಗಳಲ್ಲಿ ಶೇ. 200 ವರೆಗೆ ಹೆಚ್ಚುವರಿ ರಕ್ಷಣೆಗಳಂತಹ ಸೌಲಭ್ಯಗಳು ಲಭ್ಯ.
ನಗದುರಹಿತ ರಿಯಾಯಿತಿ: ನಗದುರಹಿತ ಆಸ್ಪತ್ರೆಗೆ ದಾಖಲಾತಿಗಾಗಿ ಕಡಿಮೆ ಪ್ರೀಮಿಯಂ ಅನ್ನು ವಿಧಿಸಲಾಗುತ್ತದೆ.
ಅಪಘಾತ ಮರಣ ಕವರ್: ಆಕಸ್ಮಿಕವಾಗಿ ಸಂಭವಿಸುವ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವನ್ನು ಒದಗಿಸುತ್ತದೆ
ಹಬ್ಬದ ಬೋನಸ್: ಹಬ್ಬದ ಸಂದರ್ಭದಲ್ಲಿ ತುರ್ತು ಆಸ್ಪತ್ರೆಗೆ ದಾಖಲಾದರೆ, ದಿನಕ್ಕೆ ಹೆಚ್ಚುವರಿಯಾಗಿ 1,000 ದೊರೆಯುತ್ತದೆ. ಇದು ವರ್ಷಕ್ಕೆ 10 ದಿನಗಳವರೆಗೆ ಲಭ್ಯವಿರುತ್ತದೆ.
ಆರೋಗ್ಯಕರ ಜೀವನಕ್ಕೆ ಪ್ರೋತ್ಸಾಹ ಮತ್ತು ರಿಯಾಯಿತಿ
ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸುವ ಸಲುವಾಗಿ, ಪಾಲಿಸಿಯನ್ನು ನವೀಕರಿಸುವ ಸಮಯದಲ್ಲಿ ಯೋಗಕ್ಷೇಮಕ್ಕೆ ಸಂಬಂಧಿಸಿದ ಪ್ರೀಮಿಯಂ ರಿಯಾಯಿತಿಗಳನ್ನು ನೀಡಲಾಗುತ್ತದೆ. ಗ್ರಾಹಕರು 9 ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 24 ದಿನಗಳವರೆಗೆ ದಿನಕ್ಕೆ 7,500 ಹೆಜ್ಜೆಗಳನ್ನು ನಡೆಯುವ ಮೂಲಕ ಅಥವಾ ಪ್ರತಿದಿನ 10,000 ಹೆಜ್ಜೆಗಳನ್ನು ಹಾಕುವ ಮೂಲಕ ಪ್ರೀಮಿಯಂನಲ್ಲಿ ಶೇ. 10 ರಿಯಾಯಿತಿಯನ್ನು ಪಡೆಯಬಹುದು.
ಜನರಲ್ ಇನ್ಶುರೆನ್ಸ್‌ನ ಎಂಡಿ ಮತ್ತು ಸಿಇಒ ತಪನ್ ಸಿಂಘೆಲ್, "ಆರೋಗ್ಯ ರಕ್ಷಣೆಯ ಅಗತ್ಯಗಳು ಭಾರತದಾದ್ಯಂತ ವ್ಯಾಪಕವಾಗಿ ಬದಲಾಗುತ್ತವೆ. ನಮ್ಮ ರಾಜ್ಯವಾರು ಪಾಲಿಸಿ ನೀತಿಗಳು ಈ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ, ನಿಮಗಾಗಿ ಕೈಗೆಟುಕುವ ಮತ್ತು ವೈಶಿಷ್ಟ್ಯ-ಭರಿತ ರಕ್ಷಣೆಯನ್ನು ಈ ವಿಮಾ ಪಾಲಿಸಿ ನೀಡುತ್ತವೆ ಎಂದು ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆ ಬಿಡುಗಡೆಯ ಸಮಯದಲ್ಲಿ ಮಾತನಾಡಿದರು
ಒಟ್ಟಾರೆಯಾಗಿ, ಈ ವಿಮಾ ಯೋಜನೆಯು ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.ಆರೋಗ್ಯ ವಿಮಾ ಯೋಜನೆಗಳು ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಹಾಯ ಮಾಡುವ ವಿಮಾ ಪಾಲಿಸಿಗಳಾಗಿವೆ.
ಬಜಾಜ್ ಅಲಿಯಾನ್ಸ್ ರಾಜ್ಯವಾರು ಆರೋಗ್ಯ ವಿಮಾ ಯೋಜನೆಗಳು ಬಜಾಜ್ ಅಲಿಯಾನ್ಸ್‌ನ ಶಾಖೆಗಳು, ಪಾಲುದಾರ ಬ್ಯಾಂಕ್‌ಗಳು, ಏಜೆಂಟ್‌ಗಳು ಮತ್ತು www.bajajallianz.com ಮತ್ತು 'Caringly Yours' ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications