ಡಿಸೆಂಬರ್‌ನಲ್ಲಿ ಬ್ಯಾಂಕ್ ಉದ್ಯೋಗಿಗಳ ಸಂಬಳ ಹೆಚ್ಚಳ, 5 ದಿನಗಳ ಕೆಲಸ?

ಬ್ಯಾಂಕ್ ಯೂನಿಯನ್ಸ್ ಆಂಡ್ ಅಸೋಸಿಯೇಷನ್ಸ್ ಮತ್ತು ಇಂಡಿಯನ್ ಬ್ಯಾಂಕ್‌ಗಳ ನಡುವಿನ 12 ನೇ ದ್ವಿಪಕ್ಷೀಯ ಮಾತುಕತೆಯಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬ್ಯಾಂಕ್ ಉದ್ಯೋಗಿಗಳು ಶೇಕಡ 15 ರಿಂದ ಶೇಕಡ 20 ರಷ್ಟು ವೇತನ ಹೆಚ್ಚಳ ಪಡೆಯುವ ನಿರೀಕ್ಷೆಯಿದೆ. ಡಿಸೆಂಬರ್ ಮಧ್ಯದ ವೇಳೆಗೆ ವಾರದಲ್ಲಿ ಐದು ದಿನಗಳು ಮಾತ್ರ ಕೆಲಸವು ಜಾರಿಗೆ ಬರುವ ನಿರೀಕ್ಷೆಯಿದೆ.

ಈ ಬಗ್ಗೆಗಿನ ಮಾತುಕತೆ ಕೊನೆಯ ಹಂತವನ್ನು ತಲುಪಿದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯು ನಾಲ್ಕು ಜನರನ್ನು ಉಲ್ಲೇಖಿಸಿ ಹೇಳಿದೆ. "ವೇತನ ಹೆಚ್ಚಳಕ್ಕಾಗಿ ನಡೆದ ಮಾತುಕತೆಗಳ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಶೇಕಡ 15 ರಷ್ಟು ವೇತನ ಪಡೆಯದ ಬೇಡಿಕೆಯಿದೆ. ವೇತನ ಹೆಚ್ಚಳವು ಶೇಕಡ 15 ರಿಂದ ಶೇಕಡ 20 ರ ನಡುವೆ ಆಗಲಿದೆ," ಎಂದು ವರದಿ ಹೇಳಿದೆ.

ಡಿಸೆಂಬರ್‌ನಲ್ಲಿ ಬ್ಯಾಂಕ್ ಉದ್ಯೋಗಿಗಳ ಸಂಬಳ ಹೆಚ್ಚಳ, 5 ದಿನಗಳ ಕೆಲಸ?

ಐದು ದಿನಗಳ ಕೆಲಸದ ವಾರದ ಘೋಷಣೆಯು ವೇತನ ಹೆಚ್ಚಳದ ಅಧಿಸೂಚನೆಯೊಂದಿಗೆ ಅಥವಾ ಶೀಘ್ರದಲ್ಲೇ ಸರ್ಕಾರ ಅಥವಾ ಐಬಿಎ ಮೂಲಕ ಮಾಡಲಾಗುತ್ತದೆ ಎಂದು ಕೂಡಾ ವರದಿ ಉಲ್ಲೇಖಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳಿಗೆ ಪ್ರಸ್ತುತ ವೇತನ ಒಪ್ಪಂದವು ನವೆಂಬರ್ 1, 2022 ರಂದು ಕೊನೆಗೊಂಡಿದೆ.

ಅಂದಿನಿಂದ ಐಬಿಎ ಮತ್ತು ಬ್ಯಾಂಕ್ ಉದ್ಯೋಗಿಗಳನ್ನು ಪ್ರತಿನಿಧಿಸುವ ಒಕ್ಕೂಟಗಳು ಹೊಸ ವೇತನ ಒಪ್ಪಂದದ ಮಾತುಕತೆ ನಡೆಸುತ್ತಿವೆ. ಈ ನಡುವೆ ಹಣಕಾಸು ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಆದ ವರದಿ ಪ್ರಕಾರ ವೇತನದಲ್ಲಿನ ಪರಿಷ್ಕರಣೆ ಮತ್ತು ಕೆಲಸದ ದಿನಗಳಲ್ಲಿ ಬದಲಾವಣೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ.

ಇದಕ್ಕೂ ಮೊದಲು, ಜುಲೈ 2020 ರಲ್ಲಿ, 800,000 ಕ್ಕೂ ಹೆಚ್ಚು ಬ್ಯಾಂಕ್ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಶೇಕಡ 15 ರಷ್ಟು ಹೆಚ್ಚಳವನ್ನು ಪಡೆದಿದ್ದಾರೆ. ಐಬಿಎ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮೂರು ವರ್ಷಗಳ ವಿವಾದಾತ್ಮಕ ವೇತನ ಪರಿಷ್ಕರಣೆ ಸಮಸ್ಯೆಯನ್ನು ಪರಿಹರಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಐಬಿಎ ಮತ್ತು ಬ್ಯಾಂಕ್ ಯೂನಿಯನ್‌ಗಳು ಶೀಘ್ರದಲ್ಲೇ ಅಂತಿಮ ಸಭೆಯನ್ನು ನಡೆಸಲಿದೆ. ಅಲ್ಲಿ ಎರಡು ಕಡೆಯವರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಸಂಧಾನ ಪ್ರಕ್ರಿಯೆಯ ಭಾಗವಾಗಿರುವವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ. ನಂತರ ಅದನ್ನು ಕೊನೆಯ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.

"ಸುಮಾರು ಶೇಕಡ 15 ರಷ್ಟು ವೇತನವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಪಿಎಸ್‌ಯು ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್‌ಗಳನಮೇಲೆ ಪ್ರಭಾವ ಬೀರುವ ಕಾರಣದಿಂದಾಗಿ ನಾವು ಈ ನಿರ್ಧಾರದ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಸುತ್ತಾ ಬರುತ್ತಿದ್ದೇವೆ," ಎಂದು ವರದಿ ಹೇಳಿದೆ. ಹಣಕಾಸು ಸಚಿವಾಲಯವು ಆರಂಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಡಿಸೆಂಬರ್ 1 ರೊಳಗೆ ಮಾತುಕತೆಗಳನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+