ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಹಲವಾರು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಏರಿಕೆ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆದರೂ ಕೂಡಾ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರವನ್ನು 10 ಮೂಲಾಂಕ ಹೆಚ್ಚಿಸಿದೆ.
ಎಂಸಿಎಲ್‌ಆರ್ ಎನ್ನುವುದು ಬ್ಯಾಂಕ್‌ಗಳು ಸಾಲಗಳ ಮೇಲೆ ವಿಧಿಸಬಹುದಾದ ಕನಿಷ್ಠ ಸಾಲದ ದರವಾಗಿದೆ. ಎಂಸಿಎಲ್‌ಆರ್ ಅನ್ನು ಏರಿಸಿದರೆ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರಕ್ಕೆ ಸಾಲವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಗೃಹ ಸಾಲ ಮತ್ತು ಕಾರು ಸಾಲಗಳಂತಹ ಸಾಲಗಳ ಮೇಲಿನ ಬಡ್ಡಿದರವು ಹೆಚ್ಚಳವಾಗುತ್ತದೆ.

ಎಂಸಿಎಲ್‌ಆರ್ ದರದ ಮಾಹಿತಿ
ಆರ್‌ಬಿಐನ ಇತ್ತೀಚಿನ ಮಾಹಿತಿ ಪ್ರಕಾರ ಬ್ಯಾಂಕುಗಳು ಈಗ ಆಗಸ್ಟ್ 12, 2023 ರಿಂದ ತಮ್ಮ ಹೆಚ್ಚುತ್ತಿರುವ ಡೆಪಾಸಿಟ್‌ಗಳ ಶೇಕಡ 10ರಷ್ಟು ನಗದು ಮೀಸಲು ಅನುಪಾತವಾಗಿ (ಸಿಆರ್‌ಆರ್) ಆಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಇದು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಕನಿಷ್ಠ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ 5 ಮೂಲಾಂಕ ದರ ಹೆಚ್ಚಿಸಿದೆ.
ಎರಡೂ ಬ್ಯಾಂಕ್‌ಗಳಿಗೆ ಹೊಸ ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.70 ಆಗಿರುತ್ತದೆ. ಇದು ಆಗಸ್ಟ್ 12 ರಿಂದ ಜಾರಿಗೆ ಬರುತ್ತದೆ. ಇದರಿಂದಾಗಿ ಎಂಸಿಎಲ್‌ಆರ್ ಆಧಾರದಲ್ಲಿ ಸಾಲವನ್ನು ಪಡೆದಿರುವ ಸಾಲಗಾರರಿಗೆ ಮಾಸಿಕ ಇಎಂಐ ಮೊತ್ತವು ಅಧಿಕವಾಗುವ ಸಾಧ್ಯತೆಯಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) 10 ಮೂಲಾಂಕ ಹೆಚ್ಚಿಸಿದೆ. ಇದರಿಂದಾಗಿ ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.50 ರಿಂದ ಶೇಕಡ 8.60 ಕ್ಕೆ ಏರಿದೆ. ಬ್ಯಾಂಕ್‌ನಲ್ಲಿ ಹಲವಾರು ಸಾಲಗಳಿಗೆ ಒಂದು ವರ್ಷದ ಎಂಸಿಎಲ್‌ಆರ್ ಆಧಾರವಾಗಿದೆ. ಈ ನೂತನ ಪರಿಷ್ಕೃತ ದರವು ಆಗಸ್ಟ್ 10, 2023 ರಿಂದ ಜಾರಿಗೆ ಬರುತ್ತದೆ.
ಎಂಸಿಎಲ್‌ಆರ್ ದರ ಹೆಚ್ಚಳದಿಂದ ಇಎಂಐ ಮೊತ್ತ ಜಿಗಿತ
ಎಂಸಿಎಲ್‌ಆರ್ ಆಧಾರಿತ ಬಡ್ಡಿದರದಲ್ಲಿ ಸಾಲವನ್ನು ಪಡೆದಿರುವ ಸಾಲಗಾರರು ಎಂಸಿಎಲ್‌ಆರ್ ದರಗಳ ಹೆಚ್ಚಳದ ಪರಿಣಾಮವನ್ನು ಅನುಭವಿಸುವ ಸಾಧ್ಯತೆಯಿದೆ. ಈ ಸಾಲಗಾರರ ಇಎಂಐ ಮೊತ್ತ ಅಧಿಕವಾಗಲಿದೆ. ಇದು ಅವರ ಬಜೆಟ್ ಮೇಲೆ ಪ್ರಭಾವ ಬೀರಲಿದೆ. ಇನ್ನು ಅಗತ್ಯ ವಸ್ತುಗಳು ದುಬಾರಿಯಾಗಿರುವಾಗ ಬ್ಯಾಂಕ್‌ನಿಂದ ಸಾಲ ಪಡೆಯುವುದು ಕೂಡಾ ದುಬಾರಿಯಾಗುತ್ತಿದೆ.
ಎಂಸಿಎಲ್‌ಆರ್ ಎಂದರೇನು, ಪ್ರಭಾವವೇನು?
ಎಂಸಿಎಲ್‌ಆರ್ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ ಎಂದರೆ ಬ್ಯಾಂಕುಗಳು ಸಾಲಗಳ ಮೇಲೆ ವಿಧಿಸಬಹುದಾದ ಕನಿಷ್ಠ ಸಾಲದ ದರವಾಗಿದೆ. 2016 ರಲ್ಲಿ ಮೂಲ ದರ ವ್ಯವಸ್ಥೆಯನ್ನು ಆರ್‌ಬಿಐ ಬದಲಾಯಿಸಿ ಈ ಮಾನದಂಡದ ಬಡ್ಡಿದರವನ್ನು ಪರಿಚಯಿಸಿದೆ. ಎಂಸಿಎಲ್‌ಆರ್ ರೆಪೋ ದರದ ಮೇಲೆ ಪ್ರಭಾವಿತವಾಗಿರುತ್ತದೆ.
ಬ್ಯಾಂಕ್‌ಗಳು ವಿತ್ತೀಯ ನೀತಿಯ ಪ್ರಯೋಜನಗಳನ್ನು ಸಾಲಗಾರರಿಗೆ ರವಾನಿಸಲು ಎಂಸಿಎಲ್‌ಆರ್ ಸಹಾಯ ಮಾಡುತ್ತದೆ. ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಿದಾಗ, ಬ್ಯಾಂಕ್‌ಗಳು ತಮ್ಮ ಎಂಸಿಎಲ್‌ಆರ್ ದರಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಇದರಿಂದ ಸಾಲದ ಹೊರೆ ಕಡಿಮೆಯಾಗಲಿದೆ.


Click it and Unblock the Notifications