Beer Price in Karnataka: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್, ರಾಜ್ಯದಲ್ಲಿ ಮತ್ತೆ ಹೆಚ್ಚಾಗಲಿದೆ ಬಿಯರ್ ಬೆಲೆ

ಈಗಾಗಲೇ ಕರ್ನಾಟಕದಲ್ಲಿ ಮದ್ಯಮ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮದ್ಯ ಪ್ರಿಯರು ಬೇಸರ ಪಟ್ಟಿರುವಾಗ ಈಗ ಮತ್ತೆ ದರ ಹೆಚ್ಚಳದ ಸುದ್ದಿಯಿದೆ. ಹೌದು, ರಾಜ್ಯ ಸರ್ಕಾರವು ಮತ್ತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಕರ್ನಾಟಕ ಸರ್ಕಾರವು ಮತ್ತೆ ಹೆಚ್ಚಳ ಮಾಡಲು ಮುಂದಾಗಿದೆ.

ಈ ಸುಂಕ ಹೆಚ್ಚಳದಿಂದಾಗಿ ಕರ್ನಾಟಕ ರಾಜ್ಯದಲ್ಲಿ 650 ಮಿ.ಲೀ ಬಿಯರ್ ಬಾಟಲ್ ದರವು ಸುಮಾರು 8ರಿಂದ 10 ರೂಪಾಯಿವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968 ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಹೆಚ್ಚಳವನ್ನು ಸರ್ಕಾರ ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.

 ಮದ್ಯಪ್ರಿಯರಿಗೆ ಕಹಿಸುದ್ದಿ, ರಾಜ್ಯದಲ್ಲಿ ಮತ್ತೆ ಬಿಯರ್ ಬೆಲೆ ಹೆಚ್ಚಳ

ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳು ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿರುವ ಕಾರಣದಿಂದಾಗಿ ಸರ್ಕಾರವು ಬಿಯರ್ ಮೇಲಿನ ಸುಂಕವನ್ನು ಹೆಚ್ಚಳ ಮಾಡಲು ಮುಂದಾಗಿದೆ ಎಂಬ ಮಾಹಿತಿಯಿದೆ.

ಇನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಮಾಹಿತಿ ಪ್ರಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಳ ಮಾಡುವ ಕಾರಣದಿಂದಾಗಿ ರಾಜ್ಯದಲ್ಲಿ ಆಮದು ಮಾಡಿದ ಅಥವಾ ತಯಾರಿಸಿದ ಒಂದು ಬಾಟಲಿ ಬಿಯರ್ ಬೆಲೆಯು ಸುಮಾರು ಶೇಕಡ 10 ರಷ್ಟು ಏರಿಕೆಯಾಗಿದೆ.

ಈ ದರ ಏರಿಕೆಯಿಂದಾಗಿ ಬಿಯರ್ ಸುಂಕವು ಶೇಕಡ 185 ರಿಂದ ಶೇಕಡ 195 ರಷ್ಟು ಪಾಯಿಂಟ್ ಹೆಚ್ಚಳವಾಗಿದೆ. ಕಳೆದ ಆರು ತಿಂಗಳಲ್ಲಿ ಇದು ಎರಡನೇ ಬಾರಿ ಬೆಲೆ ಹೆಚ್ಚಳವಾಗುತ್ತಿರುವುದು. ಇನ್ನು ಕಳೆದ ಬಾರಿ ಜುಲೈನಲ್ಲಿ ಕರ್ನಾಟಕದಲ್ಲಿ ಭಾರತದಲ್ಲಿ ತಯಾರಿಸಲಾದ ಮದ್ಯದ ಮೇಲೆ ಶೇಕಡ 20 ರಷ್ಟು ಸುಂಕವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಬಿಯರ್ ಸುಂಕವು ಶೇಕಡ 175ರಿಂದ ಶೇಕಡ 185 ಕ್ಕೆ ತಲುಪಿದೆ.

ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಅಬಕಾರಿ ಸುಂಕವು ಅತೀ ಮುಖ್ಯವಾಗಿದೆ. ಹಣಕಾಸು ವರ್ಷ 2023-24 ರಲ್ಲಿ ಕರ್ನಾಟಕವು ಸುಂಕದಿಂದಲ್ಲೇ ಸುಮಾರು 36,000 ಕೋಟಿ ರೂಪಾಯಿ ಪಡೆಯುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+