ಮಿಚಾಂಗ್ ಚಂಡಮಾರುತವು ಚೆನ್ನೈನಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ಸುಮಾರು 70-80 ವರ್ಷಗಳ ಇತಿಹಾಸದಲ್ಲೇ ಚೆನ್ನೈನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿದೆ. ಈಗಾಗಲೇ ಆಂಧ್ರ ಪ್ರದೇಶದ ಬಾಪಟ್ಲಾಗೆ ಮಿಚಾಂಗ್ ಚಂಡಮಾರುತ ಅಪ್ಪಳಿಸಿದೆ. ಚೆನ್ನೈನಲ್ಲಿ 5 ಮಂದಿ ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.
ಮಿಚಾಂಗ್ ಚಂಡಮಾರುತದಿಂದಾಗಿ ಪ್ರವಾಹ ಉಂಟಾಗಿದ್ದು, ನಿರಂತರ ಮಳೆಯಿಂದಾಗಿ ಸೋಮವಾರ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಚಂಡಮಾರುತವು ಚೆನ್ನೈ ಮತ್ತು ಪುದುಚೇರಿ ಬಳಿ ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಕರಾವಳಿಯ ಪಟ್ಟಣವು ಮಳೆಯಿಂದ ಅಸ್ತವ್ಯಸ್ತವಾಗಿದ್ದು, ಬೆಂಗಳೂರಿನಲ್ಲಿ ಶೀತ ವಾತಾವರಣ ಕಂಡುಬಂದಿದೆ.

ಬೆಂಗಳೂರಿನಲ್ಲಿ ಹೇಗಿದೆ ಹವಾಮಾನ?
ಈ ಬಗ್ಗೆ ಬೆಂಗಳೂರು ಮಿರರ್‌ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್, "ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ನಡುವೆ ಏರಿಳಿತಗೊಳ್ಳುತ್ತದೆ. ಆದರೆ ಗಾಳಿ ಅಧಿಕವಾಗಿವ ನಿರೀಕ್ಷೆಯಿದೆ. 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಇರಬಹುದು. ಒಂದು ಅಥವಾ ಎರಡು ದಿನಗಳವರೆಗೆ ಶೀತ ಅಲೆ ಕಾಣಿಸಲಿದೆ," ಎಂದು ಹೇಳಿದರು.
ಭಾನುವಾರ ಸಂಜೆ ಬೆಂಗಳೂರಿನಲ್ಲಿ ತಾಪಮಾನ ಇಳಿಕೆಯಾಗಿದೆ ಎಂದು ವರುಣ ಮಿತ್ರ ಪೋರ್ಟಲ್ ವರದಿ ಮಾಡಿದೆ. ಮಹದೇವಪುರದಲ್ಲಿ ಭಾನುವಾರ 19 ಡಿಗ್ರಿ ಸೆಲ್ಸಿಯಸ್ ಮತ್ತು 23.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಯಲಹಂಕದಲ್ಲಿ 19.6 ರಿಂದ 24.4 ಡಿಗ್ರಿ ಸೆಲ್ಸಿಯಸ್, ದಾಸರಹಳ್ಳಿಯಲ್ಲಿ 20 ರಿಂದ 24.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮಿಚಾಂಗ್ ಚಂಡಮಾರುತದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಾ?
ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಲಘು ಮಳೆ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 24 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ," ಎಂದು ದೈನಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚಂಡಮಾರುತದ ಪ್ರಭಾವದಿಂದ ನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಸೋಮವಾರವೂ ಭಾರೀ ಮಳೆ ಮುಂದುವರೆದಿದೆ. ಇದು ಡಿಸೆಂಬರ್ 5 ರಂದು ಆಂಧ್ರಪ್ರದೇಶದಲ್ಲಿ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ತಗ್ಗು ಪ್ರದೇಶಗಳು ಮತ್ತು ಅನೇಕ ಜನವಸತಿ ಭಾಗಗಳು ಜಲಾವೃತಗೊಂಡಿದೆ. ನಾಗರಿಕ ಸಂಸ್ಥೆ ಸಿಬ್ಬಂದಿಗಳು ನೀರು ನಿಂತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮಾಡುವಲ್ಲಿ ತೊಡಗಿದ್ದಾರೆ.


Click it and Unblock the Notifications