ಸ್ಥಿರ ಠೇವಣಿಗಳು..ಅಂದರೆ ಫಿಕ್ಸಡ್ ಡೆಪಾಸಿಟ್. ಅಲ್ಪಾವಧಿಯಲ್ಲೇ ಆರ್ಥಿಕ ಗುರಿ ಸಾಧಿಸಬೇಕು ಎಂದರೆ, ಒಂದು ಅಚ್ಚುಕಟ್ಟಾದ ಸ್ಥಿರ ಠೇವಣಿ ಇರಬೇಖು. ಹೀಗಾಗಿಯೇ ಎಫ್‌ಡಿ ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್‌ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಆಗಿವೆ. ಆದರೆ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದರೆ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ಪ್ರಮುಖ ಪ್ರಶ್ನೆ.

ಇಂಡಸ್ ಲ್ಯಾಂಡ್ ಬ್ಯಾಂಕ್:
ಆಗಸ್ಟ್ 8ರ ವೇಳೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ, ಪ್ರಮುಖ ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ನೀಡುತ್ತಿರುವ ಬಡ್ಡಿದರಗಳನ್ನು ಹೋಲಿಸಿದಾಗ ಇಂಡಸ್ ಲ್ಯಾಂಡ್ ಬ್ಯಾಂಕ್ ಅಗ್ರ ಸ್ಥಾನದಲ್ಲಿದೆ. ಈ ಬ್ಯಾಂಕ್ ಒಂದು ವರ್ಷದ ಎಫ್‌ಡಿಗೆ ಶೇಕಡಾ 7 ರಷ್ಟು ಬಡ್ಡಿ ನೀಡುತ್ತಿದ್ದು, ರೂ.1 ಲಕ್ಷ ಹೂಡಿಕೆ ಮಾಡಿದರೆ ಅವಧಿ ಮುಗಿದಾಗ ಅದು ರೂ.1.07 ಲಕ್ಷವಾಗುತ್ತದೆ.
ಆಕ್ಸಿಸ್, ಎಚ್‌ಡಿಎಫ್‌ಸಿ, ಕೋಟಕ್ ಮಹಿಂದ್ರಾ ಬ್ಯಾಂಕ್:
ಖಾಸಗಿ ವಲಯದಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 6.60 ರಷ್ಟು ಬಡ್ಡಿ ನೀಡುತ್ತಿವೆ. ಇವುಗಳಲ್ಲಿ 1 ಲಕ್ಷ ರೂ. ಎಫ್‌ಡಿ ಮಾಡಿದರೆ ಒಂದು ವರ್ಷದ ನಂತರ ರೂ.1,06,600 ಆಗುತ್ತದೆ. ಅದೇ ಐಸಿಐಸಿಐ ಬ್ಯಾಂಕ್ ಶೇಕಡಾ 6.40 ಬಡ್ಡಿ ನೀಡುತ್ತಿದ್ದು, ಇಲ್ಲಿ ರೂ.1 ಲಕ್ಷ ಹೂಡಿಕೆಯು ರೂ.1,06,000ಕ್ಕೆ ಏರುತ್ತದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ...
ಸಾರ್ವಜನಿಕ ವಲಯದಲ್ಲಿ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಶೇಕಡಾ 6.60 ಬಡ್ಡಿ ನೀಡುತ್ತಿವೆ. ಈ ಬ್ಯಾಂಕುಗಳಲ್ಲಿ ಒಂದು ವರ್ಷದ ಎಫ್‌ಡಿಗೆ ರೂ.1 ಲಕ್ಷ ಹೂಡಿಸಿದರೆ, ಪಕ್ವಾವಧಿ ಮುಗಿದಾಗ ರೂ.1,06,600 ಸಿಗುತ್ತದೆ.
ಕೆನರಾ ಬ್ಯಾಂಕ್:
ಕೆನರಾ ಬ್ಯಾಂಕ್ ಶೇಕಡಾ 6.50 ಬಡ್ಡಿ ನೀಡುತ್ತಿದ್ದು, ರೂ.1 ಲಕ್ಷ ಠೇವಣಿ ಒಂದು ವರ್ಷದಲ್ಲಿ ರೂ.1,06,500ಕ್ಕೆ ಏರುತ್ತದೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಂದು ವರ್ಷದ ಎಫ್‌ಡಿಗೆ ಶೇಕಡಾ 6.45 ಬಡ್ಡಿ ನೀಡುತ್ತಿದ್ದು, ಹೂಡಿಕೆಯು ರೂ.1,06,450 ಕ್ಕೆ ಬೆಳೆಯುತ್ತದೆ.
ಹೂಡಿಕೆದಾರರ ಸುರಕ್ಷತೆಗೆ ಸಂಬಂಧಿಸಿದಂತೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಗ ಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಪ್ರತಿ ಗ್ರಾಹಕರ ಠೇವಣಿಯನ್ನು ರೂ.5 ಲಕ್ಷದವರೆಗೆ ಭದ್ರತೆ ಒದಗಿಸುತ್ತದೆ. ಇದರಿಂದ ಚಿಕ್ಕ ಹೂಡಿಕೆದಾರರು ಸಹ ಆತಂಕವಿಲ್ಲದೆ ಎಫ್‌ಡಿಯಲ್ಲಿ ಹಣ ಇಡಬಹುದು.
ಒಟ್ಟಿನಲ್ಲಿ, ಹೆಚ್ಚು ಬಡ್ಡಿ ಬೇಕಾದರೆ ಇಂಡಸ್‌ಇಂಡ್ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಸಾರ್ವಜನಿಕ ವಲಯದಲ್ಲೂ ಪಿಎನ್‌ಬಿ, ಯೂನಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಉತ್ತಮ ದರ ನೀಡುತ್ತಿವೆ. ಹೀಗಾಗಿ ಹೂಡಿಕೆ ಮಾಡುವ ಮೊದಲು ಪ್ರತಿಯೊಬ್ಬರೂ ಬ್ಯಾಂಕುಗಳ ಬಡ್ಡಿದರಗಳನ್ನು ಹೋಲಿಸಿ ತಕ್ಕ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.


Click it and Unblock the Notifications