ಈಗಿನ ದುಡಿಮೆ, ಖರ್ಚು-ವೆಚ್ಚಗಳನ್ನು ಹೋಲಿಸಿದರೆ ನಿವೃತ್ತಿ ಬದುಕಿನಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರುವುದು ದೊಡ್ಡ ಕನಸೆನ್ನಬಹುದು. ಯಾಕಂದ್ರೆ ಕಡಿಮೆ ಆದಾಯ ಹೆಚ್ಚು ಖರ್ಚು ಎನ್ನುವ ಈ ಕಾಲದಲ್ಲಿ, ಬದುಕುವುದೇ ಒಂದು ದೊಡ್ಡ ಸವಾಲು. ಹೀಗಿರುವಾಗ ವಯಸ್ಸಾದ ಕಾಲದಲ್ಲಿ ಜೀವನ ಸಾಗಿಸಲು, ಉಳಿತಾಯ ಮಾಡೋದು ಹೇಗೆ ಅಂತೀರಾ? ನಿಮ್ಮ ನಿವೃತ್ತಿ ಬದುಕನ್ನು ಭದ್ರವಾಗಿಸುವ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ಪೂರ್ತಿ ಓದಿ.

ಉಳಿತಾಯ ಎನ್ನುವುದು ಅತಿಮುಖ್ಯವಾದ ಅಂಶ.. ಮಾಸಿಕ ವೇತನ ಅಥವಾ ಇತರೆ ಆದಾಯದ ಮೂಲ ಕಡಿಮೆಯಾಗುವಂತಹ ಕಾಲದಲ್ಲಿ ಈ ಉಳಿತಾಯ ಎನ್ನುವುದು ಜೊತೆಗಿರುತ್ತದೆ. ಆದರೆ ಉಳಿತಾಯ ಎಂದರೆ ಹಣ ಸ್ವತಃ ಕೂಡಿಡುವುದಲ್ಲ. ಹಣದ ಉಳಿತಾಯಕ್ಕೆಂದೇ ಇರುವ ಪ್ರಮುಖ ಯೋಜನೆಗಳನ್ನು ಆಯ್ದುಕೊಳ್ಳಬೇಕು. ಅದು ಕೂಡ ಉತ್ತಮವಾಗಿರಬೇಕು. ಅಂದರೆ ಎಫ್‌ಡಿ, ಎಸ್‌ಐಪಿ ಈ ತರಹದ ಯೋಜನೆಗಳು ಭವಿಷ್ಯದಲ್ಲಿ ಭದ್ರತೆ ನೀಡುತ್ತವೆ. ಹಾಗಾದ್ರೆ ಯಾವ ಬ್ಯಾಂಕುಗಳಲ್ಲಿ ಉತ್ತಮ ಯೋಜನೆ ಪಡೆಯಬಹುದು ಎಂದು ಇಲ್ಲಿ ತಿಳಿಯಿರಿ.
ಐಸಿಐಸಿಐ ಬ್ಯಾಂಕ್:
ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ ಅತ್ಯಂತ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿದೆ. 1 ವರ್ಷದ ಎಫ್‌ಡಿಗೆ ಸುಮಾರು 7.20% ಬಡ್ಡಿ ನೀಡುವುದಲ್ಲದೇ, 3 ವರ್ಷ ಮತ್ತು 5 ವರ್ಷದ ಎಫ್‌ಡಿಗೂ ಅದೇ ಶೇಕಡಾ 7.20% ಮತ್ತು 7.15% ಬಡ್ಡಿದರಗಳನ್ನು ನೀಡುತ್ತಿದೆ. ಇದರಿಂದ ಹಣದ ಉಳಿತಾಯ ಸಾಕಷ್ಟಾಗುತ್ತದೆ. ಈಗ ₹5 ಲಕ್ಷ ಹೂಡಿಕೆಯಿಂದ, ಎಷ್ಟು ವರ್ಷಗಳಲ್ಲಿ ಬಡ್ಡಿ ಸಮೇತ ಹಿಂತಿರುಗುತ್ತದೆ. ಹಿಂತಿರುವ ಹಣವೆಷ್ಟು, ಲಾಭವೆಷ್ಟು ಎಂದು ಇಲ್ಲಿ ತಿಳಿಯಿರಿ
1 ವರ್ಷದ FD ಆದಾಯ: ₹5,35,930
3 ವರ್ಷದ FD ಆದಾಯ: ₹6,19,360
5 ವರ್ಷದ FD ಆದಾಯ: ₹7,12,622
ಎಚ್‌ಡಿಎಫ್‌ಸಿ ಬ್ಯಾಂಕ್:
ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ FD ಯೋಜನೆಗಳು ಉತ್ತಮ ಆಯ್ಕೆಯಾಗಿದೆ. ಇಲ್ಲಿ 1 ವರ್ಷದ FDಗೆ ಶೇಕಡಾ 7%, 3 ವರ್ಷದ FDಗೆ 7.20%, ಹಾಗೂ 5 ವರ್ಷದ FDಗೆ 7.15% ಬಡ್ಡಿದರ ನೀಡಲಾಗುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ನ ಸುರಕ್ಷತೆ, ಸೇವೆ ಮತ್ತು ಡಿಜಿಟಲ್ ಸೌಲಭ್ಯಗಳು ಇದನ್ನು ಹೆಚ್ಚು ಜನಪ್ರಿಯ FD ಆಯ್ಕೆಗೊಳಿಸುತ್ತವೆ.
1 ವರ್ಷದ FD ಆದಾಯ: ₹5,35,930
3 ವರ್ಷದ FD ಆದಾಯ: ₹6,19,360
5 ವರ್ಷದ FD ಆದಾಯ: ₹7,12,622
ಬಂಧನ್ ಬ್ಯಾಂಕ್:
ಅಧಿಕ ಬಡ್ಡಿದರ ಬಯಸುವ ಹಿರಿಯ ನಾಗರಿಕರಿಗಾಗಿ ಬಂಧನ್ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ. ಈ ಬ್ಯಾಂಕ್ 1 ವರ್ಷದ FDಗೆ ಶೇಕಡಾ 8.25% ಎಂಬ ಅತ್ಯುನ್ನತ ಬಡ್ಡಿದರ ನೀಡುತ್ತದೆ. ಇದರ ಜೊತೆಗೆ 3 ವರ್ಷದ FDಗೆ 7.75% ಮತ್ತು 5 ವರ್ಷದ FDಗೆ 6.60% ಬಡ್ಡಿ ನೀಡುತ್ತಿದೆ.
1 ವರ್ಷದ FD ಆದಾಯ: ₹5,35,930
3 ವರ್ಷದ FD ಆದಾಯ: ₹6,20,273
5 ವರ್ಷದ FD ಆದಾಯ: ₹7,16,130
ಫೆಡರಲ್ ಬ್ಯಾಂಕ್: ಮಿತವ್ಯಯಿ ಮತ್ತು ಭದ್ರವಾದ ಆಯ್ಕೆ:
ಫೆಡರಲ್ ಬ್ಯಾಂಕ್ ಕೂಡ ಹಿರಿಯ ನಾಗರಿಕರಿಗೆ ಆಕರ್ಷಕ FD ಬಡ್ಡಿದರಗಳನ್ನು ನೀಡುತ್ತಿದೆ. ಇಲ್ಲಿ 1 ವರ್ಷದ FDಗೆ ಶೇಕಡಾ 7.25%, 3 ಮತ್ತು 5 ವರ್ಷಗಳ FDಗಳಿಗೆ ಶೇಕಡಾ 7.40% ಬಡ್ಡಿ ಲಭ್ಯವಿದೆ.
1 ವರ್ಷದ FD ಆದಾಯ: ₹5,37,248
3 ವರ್ಷದ FD ಆದಾಯ: ₹6,23,021
5 ವರ್ಷದ FD ಆದಾಯ: ₹7,21,424
FD ಆಯ್ಕೆ ಮಾಡುವ ಮೊದಲು ಈ ಅಂಶಗಳನ್ನು ಗಮನಿಸಿ:
ಬ್ಯಾಂಕಿನ ವಿಶ್ವಾಸಾರ್ಹತೆ: ಪ್ರತಿಷ್ಠಿತ ಬ್ಯಾಂಕುಗಳನ್ನು ಆಯ್ಕೆಮಾಡುವುದು ಮುಖ್ಯ.
ಬಡ್ಡಿದರ ಪರಿಶೀಲನೆ: ಹೆಚ್ಚು ಬಡ್ಡಿದರ ನೀಡುವ FD ಯೋಜನೆ ಆಯ್ಕೆಮಾಡಿ.
ಲವಚಿಕತೆ: ಹಣ ಮರುಪಾವತಿ ಮಾಡಬಹುದಾದ ಸುಲಭ ಆಯ್ಕೆಗಳಿರುವ FD ಆಯ್ಕೆಮಾಡಿ.
ಆರ್ಥಿಕ ಗುರಿ: ನಿಮ್ಮ ನಿವೃತ್ತಿ ಯೋಜನೆ ಮತ್ತು ಖರ್ಚುಗಳು ಎಷ್ಟು ಇದೆ ಎನ್ನುವುದರ ಆಧಾರದಲ್ಲಿ FD ಆಯ್ಕೆ ಮಾಡಿ.
ಹಿರಿಯ ನಾಗರಿಕರಿಗೆ FD ಹೂಡಿಕೆ ಎಂದರೆ ಭದ್ರತೆ, ನಿಗದಿತ ಆದಾಯ ಮತ್ತು ನೆಮ್ಮದಿಯ ಬದುಕು. ಖಾಸಗಿ ಬ್ಯಾಂಕುಗಳು ನೀಡುತ್ತಿರುವ FD ಬಡ್ಡಿದರಗಳಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ, ಬಡ್ಡಿದರಗಳ ತಾಳೆ ಮತ್ತು ಖಾತರಿಯ ಮಾಹಿತಿಯನ್ನು ಪರಿಶೀಲಿಸಿ, ಜಾಣ್ಮೆಯಿಂದ ಉತ್ತಮ ಯೋಜನೆಯನ್ನು ಆಯ್ಕೆಮಾಡಿ.


Click it and Unblock the Notifications